ಬಾರ್ಬಿ ಹಾಂಡಾ ರೂಪದಲ್ಲಿ ಪ್ರಸಿದ್ಧಳಾದ ಮನ್ನಾರಾ, ತನ್ನ ಲೈಫ್‌ ಸ್ಟೈಲ್ ‌ಹಾಗೂ ನಟನೆಯಲ್ಲಿ ಮಿಂಚುತ್ತಿದ್ದಾಳೆ. ಈ ಬ್ಯೂಟಿಫುಲ್ ನಟಿ ಸಿನಿಮಾ ಹಾಗೂ ರಿಯಾಲಿಟಿ ಶೋಗಳ ಮೂಲಕ ತೆಲುಗು ಸಿನಿಮಾದಿಂದ ಬಾಲಿವುಡ್‌ ನಲ್ಲಿ ಇಂಥ ಉನ್ನತ ಸ್ಥಾನಕ್ಕೆ ಏರಿದ್ದು ಹೇಗೆ ಎಂದು ವಿವರವಾಗಿ ತಿಳಿಯೋಣವೇ…..?

ಹರಿಯಾಣಾ ರಾಜ್ಯದ ಅಂಬಾಲ ಮೂಲದ ಈ ಹುಡುಗಿ ಹದಿ ಹರೆಯದಿಂದಲೇ ಆಕಾಶ ಮುಟ್ಟುವ ಕನಸು ಕಾಣುತ್ತಿದ್ದಳು. ಇಂದು ಅದನ್ನು ನನಸಾಗಿಸಿಕೊಳ್ಳುತ್ತಾ ಮುಂಬೈನ ಮನ್ನಾರಾ ಎನಿಸಿದ್ದಾಳೆ. ಆಕೆಯ ಈ ಜರ್ನಿ ಸುಲಭದ್ದಲ್ಲ. ಪ್ರತಿ ಹೆಜ್ಜೆಯಲ್ಲೂ ತನ್ನ ಐಡೆಂಟಿಟ ಮೂಡಿಸಲು ಹರಸಾಹಸ ಪಡಬೇಕಿತ್ತು. ಆಡಿಶನ್‌, ರಿಜೆಕ್ಷನ್‌ ಹಾಗೂ ಹಲವು ನಿರೀಕ್ಷಣೆಯ ರಾತ್ರಿಗಳಲ್ಲಿ ಕಷ್ಟಕರ ಸಮಯ ಕಳೆದಿದ್ದೇ ಹೆಚ್ಚು. ಆದರೆ ಎಲ್ಲಿಯೂ ಕಾಂಪ್ರಮೈಸ್‌ ಆಗದ, ಸೋಲೊಪ್ಪದ ಈಕೆ, ಇಂದು ಬಾಲಿವುಡ್‌ ನಲ್ಲಿ ತನ್ನದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ಈ ಕಥೆ ಮನ್ನಾರಾ ತನ್ನ ಬಗ್ಗೆ ಇರಿಸಿಕೊಂಡಿದ್ದ ನಂಬಿಕೆಯದ್ದಾಗಿದೆ. ತನ್ನ ಸ್ವಾಭಿಮಾನ ಬಿಟ್ಟುಕೊಡದೆ ಆತ್ಮವಿಶ್ವಾಸದಿಂದ ಇಂದು ಈ ಹಂತಕ್ಕೇರಿದ್ದಾಳೆ. ಮನ್ನಾರಾ ತನ್ನನ್ನು ತಾನು ಒಂದು ಲೇಬಲ್ ಗೆ ಸೀಮಿತಗೊಳಿಸಿ ಕೊಳ್ಳಲಿಲ್ಲ. ಬೋಲ್ಡ್ ಆದರೂ ಸುಸಂಸ್ಕಾರಿ. ತನ್ನನ್ನು ತಾನು ಬೇರೆ ಬೇರೆ ರೂಪದಲ್ಲಿ ಎಕ್ಸ್ ಪ್ರೆಸ್‌ ಮಾಡಿಕೊಳ್ಳಬಲ್ಲಳು. ಮನ್ನಾರಾ ಚೋಪ್ರಾ ಸದಾ ತನ್ನನ್ನು ತಾನು ಬಬ್ಲಿ ಹುಡುಗಿ, ಸಶಕ್ತ ವ್ಯಕ್ತಿತ್ವದವಳಾಗಿ ಬಿಂಬಿಸಿಕೊಂಡಿದ್ದಾಳೆ.

`ಝಿದ್‌’ ಚಿತ್ರದಿಂದ ಈಕೆ ಬಾಲಿವುಡ್‌ ನಲ್ಲಿ ಎಂಟ್ರಿ ಪಡೆದಳು. ಈಕೆ ತೆಲುಗು ಚಿತ್ರಗಳಿಂದ ತನ್ನ ಕೆರಿಯರ್‌ ಆರಂಭಿಸಿ, `ಪ್ರೇಮ ಗೀಮ ಜಾನ್ತಾ ನೈ, ಥಿಕ್ಕಾ, ರೋಗ್‌’ ಚಿತ್ರಗಳಿಂದ ದ. ಭಾರತದಲ್ಲಿ ಹೆಸರು ಗಳಿಸಿದಳು. 7ಕ್ಕೂ ಹೆಚ್ಚು ತೆಲುಗು ಚಿತ್ರಗಳು ಅಪಾರ ಜನಪ್ರಿಯತೆ ತಂದುಕೊಟ್ಟ. ಹಿಂದಿಯ `ಬಿಗ್‌ ಬಾಸ್‌’ ಕಂಟೆಸ್ಟೆಂಟ್‌ ಆಗಿ ಗಮನ ಸೆಳೆದಳು. 140 ಕ್ಯಾಮೆರಾಗಳನ್ನು ಒಮ್ಮೆಲೇ ಎದುರಿಸುತ್ತಾ ನಕ್ಕು, ಅತ್ತು, ಜಗಳವಾಡಿ ಎಲ್ಲರ ಮನಗೆದ್ದು, 4.5 ಮಿಲಿಯನ್‌ ಪ್ರೇಕ್ಷಕರ ಮನದಲ್ಲಿ ನೆರೆಮನೆಯ ಹುಡುಗಿಯಾದಳು. ಎಲ್ಲೆಲ್ಲೂ ಈಕೆಯದೆ ಚರ್ಚೆ ನಡೆಯಿತು. ಸೆಕೆಂಡ್‌ ರನ್ನರ್‌ ಅಪ್‌ ವಿಜೇತಳಾಗಿ, ಎಲ್ಲರ ಮನದಲ್ಲಿ ಚಿರಸ್ಥಾಯಿಯಾದಳು.

ಬಿಗ್‌ ಬಾಸ್‌ ನಂತರ ಈಕೆ ತಿರುಗಿ ನೋಡಿದ್ದೇ ಇಲ್ಲ. `ಲಾಫ್ಟರ್‌ ಶೆಫ್ಸ್-2′ ಶೋನಲ್ಲಿ ಕಿಚನ್‌ ನಲ್ಲಿ ಕಾಮಿಡಿಯಿಂದ ಮಿಂಚಿ, `ಸಾಂರೆ, ಧೀರೆ ಧೀರೆ… ತೇರಾ ಕಸೂರ್‌…..’ ಮುಂತಾದ ಹಾಡುಗಳಲ್ಲಿ ಯೂಟ್ಯೂಬ್‌ ನಲ್ಲಿ ಪಡ್ಡೆಗಳ ನಿದ್ದೆ ಕೆಡಿಸಿದಳು.

PHOTO-2026-07-11-19-44-53

ಕಳೆದ ವರ್ಷ ತೆಲುಗಿನ `ತಿರಗಭದ್ರಾ ಸಾಮಿ’ OTT ಚಿತ್ರದಿಂದ ಲವ್ ಸ್ಟೋರಿಯಲ್ಲಿ ಗೆಸ್ಟ್ ಆಗಿ ಮಿಂಚಿದ್ದರೆ, ತಮಿಳಿನ `ಹೈ ಲೈಟ್ಸ್’ ಚಿತ್ರದಲ್ಲಿ ಲೀಡ್‌ ಹೀರೋಯಿನ್‌ ಆಗಿ ಗಮನ ಸೆಳೆದಳು. ಇಲ್ಲಿ ಬದಲ್ಗಾ ಆದಿವಾಸಿ ಹುಡುಗಿಯ ಪಾತ್ರದಿಂದ ಪ್ಯಾನ್ ಇಂಡಿಯಾ ಲೆವೆಲ್ ‌ಗೆ ಏರಿದ್ದಾಳೆ.

ಇಷ್ಟು ಮಾತ್ರವಲ್ಲದೆ, `ಅಜೀಬ್‌ ದಾಸ್ತಾ ಹೈ…..’ ಹಾಡುವುದರ ಮೂಲಕ ಹಾಡುಗಾರಿಕೆಗೂ ಹೆಜ್ಜೆ ಇರಿಸಿದ್ದಾಯಿತು. ನ್ಯೂಯಾರ್ಕ್ ನ ಬೀದಿಗಳಲ್ಲಿ ನಡುರಾತ್ರಿ ಶೂಟಿಂಗ್‌ ನಡೆಸಿ, ತನ್ನದೇ ಮ್ಯೂಸಿಕ್‌ ಆಲ್ಬಂ ಡೈರೆಕ್ಟ್ ಮಾಡಿದ್ದಾಳೆ. ಈಕೆಗೆ ಇನ್‌ ಸ್ಟಾದಲ್ಲಿ 4.5 ಮಿಲಿಯನ್‌ ಗೂ ಹೆಚ್ಚಿನ ಫಾಲೋಯರ್ಸ್‌ ಇದ್ದಾರೆ. ಅಷ್ಟು ಜನರನ್ನು ಡೇಲಿ ಮೋಟಿವೇಟ್‌ ಮಾಡುವುದು ಸಣ್ಣ ವಿಷಯವಲ್ಲ. ಸಣ್ಣ ನಗರದಿಂದ ಮುಂಬೈನಂಥ ಮಹಾನಗರಿಗೆ ಲಗ್ಗೆಯಿಟ್ಟ ಈಕೆ ಕನಸು ಕಾಣುವ ಪ್ರತಿ ಹುಡುಗಿಯ ಪ್ರತೀಕವಾಗಿದ್ದಾಳೆ, ಕನಸನ್ನು ನನಸಾಗಿಸಿಕೊಂಡಿದ್ದಾಳೆ.

ಫ್ಯಾಷನೆಬೆಲ್‌ಸ್ಟೈಲಿಶ್‌

ಮನ್ನಾರಾ, ಸೌಂದರ್ಯ ಸ್ಪರ್ಧೆಗಳ ರಾಂಪ್‌ ನಲ್ಲೂ ಬೇಕಾದಷ್ಟು ಕ್ಯಾಟ್‌ ವಾಕ್‌ ಮಾಡಿದ್ದಾಳೆ. ಮಾರ್ಚ್‌ 2026ರಲ್ಲಿ ಮೈಸೂರು ಫ್ಯಾಷನ್‌ ವೀಕ್‌ ನಲ್ಲಿ ಶೋಸ್ಟಾಪರ್‌ ಆಗಿ ಇಡೀ ಕಾರ್ಯಕ್ರಮದಲ್ಲಿ ವಿಜೃಂಭಿಸಿದಳು. ಬಾಂಬೆ ಟೈಮ್ಸ್ ಫ್ಯಾಷನ್‌ ವೀಕ್‌ ನಲ್ಲಿ ಎಲ್ಲರ ದೃಷ್ಟಿಯೂ ಇವಳ ಮೇಲೇ ಇತ್ತು. ಮ್ಯಾಕ್ಸ್ ಫ್ಯಾಕ್ಟರ್‌ ನ ಇಂಡಿಯಾ ಲಾಂಚ್‌ ನಲ್ಲಿ ಬ್ಲೂ ವೆಲ್ವೆಟ್‌ ಡ್ರೆಸ್‌ಗ್ಲಿಟರಿಂಗ್‌ ಫ್ಯಾಷನ್‌ ಶೋ ಸಹ ಮಾಡಿದಳು.

ಮನ್ನಾರಾ ದೊಡ್ಡ ದೊಡ್ಡ ಡ್ಯಾನ್ಸ್ ಶೋಗಳಲ್ಲಿ ಪಾಲ್ಗೊಳ್ಳುತ್ತಾಳೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಡ್ಯಾನ್ಸ್ ಪ್ರದರ್ಶನ ನೀಡುತ್ತಾಳೆ. ಇತ್ತೀಚೆಗೆ ದೆಹಲಿಯ ಜವಾಹರ್‌ ಲಾಲ್ ‌ಸ್ಟೇಡಿಯಂನಲ್ಲಿ ನಡೆಸಿಕೊಟ್ಟ ಶೋ ದೊಡ್ಡ ಹಿಟ್‌ ಎನಿಸಿತು.

ಬಾಲಿವುಡ್‌ದ. ಭಾರತದ ಚಿತ್ರಗಳಲ್ಲಿನ ವ್ಯತ್ಯಾಸ : ಮನ್ನಾರಾಳ ಪ್ರಕಾರ, ಸೌತ್‌ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವುದು ಎಂದರೆ ಅವಳಿಗೆ ಬಹಳ ಖುಷಿ, ಸಂಭ್ರಮ, ಸಡಗರ! ಏಕೆಂದರೆ ಇಲ್ಲಿ ಪ್ರೊಫೆಶನಲಿಸಮ್ ಟೀಂವರ್ಕ್‌ ಒಟ್ಟೊಟ್ಟಿಗೆ ಆಧಾರವಾಗಿವೆ, ಸಶಕ್ತ ಎಂದೇ ಹೇಳಬಹುದು. ಆದರೆ ಬಾಲಿವುಡ್‌ ನಲ್ಲಿ ಹಾಗಲ್ಲ, ಬಿಗ್‌ ಬಾಸ್‌ ನಂತರ ತನಗೆ ಅಲ್ಲಿ ವಿಭಿನ್ನ ಬಗೆಯ ಪ್ರೀತಿ ದೊರಕಿದೆ ಅಂತಾಳೆ. ಇಲ್ಲಿ ಹಿಂದಿಯಲ್ಲೇ ಸಂಭಾಷಣೆ ಒಪ್ಪಿಸಬೇಕಿರುವುದರಿಂದ ತುಸು ಸಲೀಸು ಎನಿಸುತ್ತದೆ. ನನ್ನ ಖಾಸಗಿ ಜೀವನದ ಮಗ್ಗುಲುಗಳನ್ನು ತುಸು ಓಪನ್‌ ಆಗಿ ಶೇರ್‌ ಮಾಡಿಕೊಳ್ಳುವುದು ನನಗೆ ಸುಲಭ ಎನಿಸುತ್ತದೆ. ಈ ಸ್ವಾತಂತ್ರ್ಯ ನನಗೆ ಇನ್ನಷ್ಟು ಹೆಚ್ಚಿನ ಕನೆಕ್ಷನ್‌ ಒದಗಿಸುವಲ್ಲಿ ನೆರವಾಗಿದೆ, ಇದೇ ನನ್ನ ಅಸಲಿ ತಾಕತ್ತು ಅಂತಾಳೆ.

ಬಿಗ್‌ ಬಾಸ್‌ ರ ಅನುಭವ : `ಬಿಗ್‌ ಬಾಸ್‌’ ನಿಜಕ್ಕೂ ನನ್ನ ಜೀವನ ಬದಲಿಸಿತು. ಅಲ್ಲಿ ನಾನು ಯಾವಾಗ ಸ್ಟ್ರಾಂಗ್‌ ಎನಿಸಿದ್ದು ಅಂದ್ರೆ, ಮಿರ್ಚಿ ಟಾಸ್ಕ್ ನಲ್ಲಿ ಪಾಲ್ಗೊಂಡಾಗ. ಆಗ ನನ್ನ ಫ್ರೆಂಡ್ಸ್ ನನ್ನಿಂದ ದೂರ ಸರಿಯುತ್ತಿರುವುದನ್ನು ಕಂಡೆ, ನಾನು ಮೊಸಕ್ಕೆ ಒಳಗಾಗಿದ್ದೇನೆ ಎಂಬುದನ್ನು ಮನಗಂಡೆ. ಆ ಪ್ರತಿಯೊಂದು ಹಂತ, ಆ ನೋವು, ಅಂಥ ಮೋಸ, ಎಲ್ಲ ಜೀವನದ ನೈಜಪಾಠ ಕಲಿಸಿದವು.

ಆದರೆ ಎಲ್ಲಕ್ಕಿಂತಲೂ ಅತಿ ದುರ್ಬಲ ಕ್ಷಣ ಅಂದ್ರೆ, ನನ್ನ ಕ್ಲೋಸ್‌ ಫ್ರೆಂಡ್ಸ್ ಸಹ ನನ್ನಿಂದ ದೂರಾಗ ತೊಡಗಿದ್ದರು. ನಂತರ ನಾನು ಆ ಸ್ಥಿತಿಯನ್ನು ಅರಿತುಕೊಂಡೆ. ಇಲ್ಲಿ ಯಾರೂ ನಿಜವಾದ ಫ್ರೆಂಡ್ಸ್ ಇಲ್ಲ ಎಂಬುದನ್ನು ಮನಗಂಡೆ. ಎಲ್ಲರೂ ಅವರವರ ಸ್ವಾರ್ಥಕ್ಕಾಗಿ ಬಂದರು. ಆಗ ನಾನು ಆಳಾಗಿ ಯೋಚಿಸಿ ಎಚ್ಚೆತ್ತುಕೊಂಡೆ, ನನ್ನ ಅಸಲಿ ಶಕ್ತಿ ಏನು ಎಂದು ಗುರುತಿಸಿದ. ಅದೇ ತಾಕತ್ತು ನನಗೆ ಮುಂದುವರಿಯಲು ಆಧಾರವಾಯ್ತು.

ಬಿಗ್‌ ಬಾಸ್‌ ನಲ್ಲಿ ಮಿತ್ರ, ಶತ್ರು ಎಂಬ ಭೇದವಿಲ್ಲ. ಆದರೆ ಅಸಲಿ ಸಂಬಂಧದ ಅರಿವು ಅಲ್ಲಿಯೇ ಆಗಿದ್ದು, ಅದು ಭರವಸೆ ಇದ್ದಾಗ ಮಾತ್ರ ಸಾಧ್ಯ. ಕೆಲವರು ಹೊರಗೆ ಬಂದ ನಂತರ ಅಪರಿಚತರೇ ಆಗಿಬಿಟ್ಟರು, ಕ್ಯಾಮೆರಾ ನೆನೆದು, ಕೃತಕ ನಗು, ಮುಖವಾಡ ಧರಿಸಿ ಮಾತನಾಡುತ್ತಿದ್ದರು. ಇವರೆಲ್ಲ ಎಂಥ ಕೃತಘ್ನರು ಎಂಬುದನ್ನು ಆಗ ನಾನು ಅರಿತೆ.

ಇಂಥವರಿಂದ ನನಗೇನೂ ಆಗಬೇಕಿಲ್ಲ ಎಂದು ಅವರನ್ನೆಲ್ಲ ಕೊಡವಿಕೊಂಡೆ. ನಾನೂ ಸಹ ಇದೇ ಇಂಡಸ್ಟ್ರಿ ಸದಸ್ಯೆ ಆಗಿದ್ದರೂ, ನಾನು ಕೇವಲ ನನ್ನ ಕೆಲಸದ ಮೇಲೆ ಮಾತ್ರ ಭರವಸೆ ಇಡುವಳು, ಬೂಟಾಟಿಕೆ ನನಗೇನೂ ಆಗಬೇಕಿಲ್ಲ!

ಕಿಚನ್‌ಕಾಮಿಡಿ ಒಟ್ಟೊಟ್ಟಿಗೆ : ಮನ್ನಾರಾ ಹೇಳುತ್ತಾಳೆ, ನಾನು ಮನೆಯಲ್ಲಿದ್ದಾಗ ಕಿಚನ್‌ ಗೆ ಹೋಗುತ್ತೇನೆ, ಬೇಸಿಕ್ಸ್ ಕಲಿತಿದ್ದೇನೆ ಅಷ್ಟೆ. ಲಾಫ್ಟರ್‌ ಶೆಫ್ಸ್ ನನಗೆ ಅಡುಗೆ ಕಡೆ ಒಲವು ಹೆಚ್ಚಿಸಿತು. ಈಗ ಒಂದಷ್ಟು ಕಲಿತಿದ್ದೇನೆ. ಆನ್‌ ಸ್ಕ್ರೀನ್‌ ನಲ್ಲಿ ಬೇಕೆಂದೇ ತಮಾಷೆಗೆ ಎಡವಟ್ಟು ಮಾಡಿಕೊಳ್ಳುತ್ತಿದ್ದೆ, ಅದಕ್ಕೆ ಪೂರಕ ನಟನೆ ಇರಬೇಕಷ್ಟೆ. ಈ ಶೋನಿಂದ ನಾನು ಅಡುಗೆ ಬಗ್ಗೆ ಬೇಕಾದಷ್ಟು ಕಲಿಯುವಂತಾಯಿತು.

ನನಗೆ ಅನ್ಸುತ್ತೆ ಈ ಪ್ರಪಂಚದಲ್ಲಿ ಮುಖ್ಯ 2 ತರಹದ ಜನ ಇರುತ್ತಾರೆ ಅಂತ. ಒಬ್ಬರು ತಮ್ಮ ಮಾತು, ತಮ್ಮ ಸ್ವಶಕ್ತಿ, ತಮ್ಮ ಸ್ವಭಾವಗಳಿಂದ ಜನರನ್ನು ನಗಿಸುತ್ತಾರೆ. ಉಳಿದವರು, ಬೇಕೆಂದೇ ಇನ್ನೊಬ್ಬರನ್ನು ಗೇಲಿಗೆ, ಲೇವಡಿಗೆ ಗುರಿ ಮಾಡಿ, ಅದರಿಂದ ತಾವೇನೋ ಕಾಮಿಡಿ ಕ್ರಿಯೇಟ್‌ ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿರುತ್ತಾರೆ. ನಾನಂತೂ ಸದಾ ಮೊದಲ ಗುಂಪಿಗೆ ಸೇರುವವಳು. ನನ್ನ ಪಾಲಿಗೆ ಹವ್ಯಾಸ ಅಂದ್ರೆ, ಜನ ಮನಸಾರೆ ಮಂದಹಾಸ ಬೀರುವಂತೆ ಮಾಡುವುದು. ಇನ್ನೊಬ್ಬರನ್ನು ಕೀಳಾಗಿ ತೋರಿಸಿ, ಆ ಮಾತಿನ ಮೂಲಕ ನಗು ತರಿಸುವುದಲ್ಲ. ನಾನು ರಸ್ತೆಯಲ್ಲಿ ಓಡಾಡುವಾಗ ಜನ ಕೇಳುತ್ತಾರೆ, ಮನ್ನಾರಾ…. ನೀವು ಮತ್ತೆ ಯಾವಾಗ ಈ ಶೋಗೆ ವಾಪಸ್‌ ಬರ್ತೀರಿ? ಅಂತ. ಆಗಂತೂ ನನಗೆ ಬಹಳ ಖುಷಿ ಅನಿಸುತ್ತದೆ. ನಟನೆಯ ನಂತರ ಮ್ಯೂಸಿಕ್‌ಡೈರೆಕ್ಷನ್‌ : ನನ್ನ ಪಾಲಿಗೆ ಇದು ಹೊಸ ಹವ್ಯಾಸವಲ್ಲ. ಇದನ್ನು ಸುದೀರ್ಘ ಕಾಲದಿಂದ ಪ್ಲಾನಿಂಗ್ ಮಾಡುತ್ತಿದ್ದೆ. ನಟನೆ ನನ್ನ ಮೊದಲ ಆಯ್ಕೆ, ಅದೇ ನನ್ನ ಹೆಗ್ಗುರುತು. ಮ್ಯೂಸಿಕ್‌, ಡ್ಯಾನ್ಸ್, ಡೈರೆಕ್ಷನ್‌ ಎಲ್ಲವೂ ನನ್ನ ಮನಸ್ಸಿಗೆ ಬಲು ಹತ್ತಿರ. ನಾನು ನ್ಯೂಯಾರ್ಕ್‌ ನಲ್ಲಿ ಡೈರೆಕ್ಟ್ ಮಾಡಿದಂಥ `ಅಜೀಬ್‌ ದಾಸ್ತಾನ್‌’ ನಲ್ಲಿ ನಾನೇ ಹಾಡಿ, ಡ್ಯಾನ್ಸ್ ಮಾಡಿದೆ. ನೋಡೋಣ, ಅವಕಾಶವಾದಾಗ ಒಂದು ಸಿನಿಮಾ ಡೈರೆಕ್ಟ್ ಮಾಡುವೆ. ನನ್ನ ಪಾಲಿಗೆ ಪ್ರತಿಯೊಂದು ರೂಪದಲ್ಲೂ ನನ್ನನ್ನು ನಾನು ಎಕ್ಸ್ ಪ್ರೆಸ್‌ ಮಾಡಿಕೊಳ್ಳುವುದು, ಒಂದು ಪ್ಲಾನಿನ ಭಾಗವೇ ಸರಿ. ಆ ಮೂಲಕ ನಾನು ಪ್ರತಿ ಇಂಡಸ್ಟ್ರಿಯಲ್ಲೂ ನನ್ನದೇ ಛಾಪು ಮೂಡಿಸಲು ಬಯಸುವೆ.

ಜೀವನದ ಕುರಿತು ದೃಷ್ಟಿಕೋನ : ನನ್ನ ತಂದೆ ತೀರಿಕೊಂಡ ನಂತರ, ಜೀವನದ ಕುರಿತಾದ ನನ್ನ ದೃಷ್ಟಿಕೋನವೇ ಬದಲಾಯಿತು. ಅವರು ನನಗೆ ಕಲಿಸಿದ ಒಂದು ಮಾತು, ಈಗ ನಾನು ತೆಗೆದುಕೊಳ್ಳುವ ಪ್ರತಿ ನಿರ್ಧಾರದ ಆಧಾರವಾಗಿದೆ. ಸದಾ ಪ್ರೀತಿ, ಪ್ರಾಮಾಣಿಕತೆಗಳಿಂದ ನಡೆದುಕೋ ಎನ್ನುತ್ತಿದ್ದರು, ನಾನು ಹಾಗೇ ಮಾಡುತ್ತಿದ್ದೇನೆ. ಅವರು ಹೇಳುತ್ತಿದ್ದರು, ಪರಿಸ್ಥಿತಿ ಹೇಗೆ ಇರಲಿ, ಜನರಿಗೆ ಸದಾ ಗೌರವಾದರ ನೀಡುವ, ಮನಬಿಚ್ಚಿ ಮಾತನಾಡುವ, ಅವರ ಈ ಮಾತು, ಮಾರ್ಗದರ್ಶನ, ನನಗೆ ಜೀವನದಲ್ಲಿ ಮೇಲೇರುವಂತೆ ಮಾಡಿತು.

ನನ್ನನ್ನು ನಾನು ಎಲ್ಲಿ ಗುರುತಿಸಲಿ? : ನಾನು OTT ಚಿತ್ರಗಳು, ಮ್ಯೂಸಿಕ್‌, ರಿಯಾಲಿಟಿ ಶೋಗಳು ಎಲ್ಲನ್ನೂ ಎಕ್ಸ್ ಪ್ಲೋರ್ ಮಾಡಿದ್ದೇನೆ. ಇದುವೇ ನನ್ನ ಅಸಲಿ ಜರ್ನಿ, ಸತತ ಏನಾದರೂ ಹೊಸತನ್ನು ಮಾಡುವ ತವಕವಿದೆ. ಮುಂದಿನ 5 ವರ್ಷಗಳಲ್ಲಿ ನಾನು ನನ್ನನ್ನು ಒಂದು ದೊಡ್ಡ ಪ್ರೊಡಕ್ಷನ್‌ ಹೌಸ್‌ ಹೆಡ್‌ ಆಗಿ ಗುರುತಿಸಲು ಬಯಸುವೆ! ಅಲ್ಲಿಗೆ ಬರುವ ವಿಭಿನ್ನ ಬಗೆಯ ಪ್ರತಿಭೆಯುಳ್ಳವರಿಗೆ ಸದವಕಾಶ ನೀಡಬಯಸುವೆ.

ಮುಂದೆ ಹಾಲಿವುಡ್‌ ಗೆ ಹಾರಬೇಕೆಂಬುದು ನನ್ನ ಮಹತ್ವಾಕಾಂಕ್ಷೆ! ಆದರೆ ಅದರತ್ತ ನಾನು ಪ್ರತಿ ಹೆಜ್ಜೆಯನ್ನೂ ಆತ್ಮವಿಶ್ವಾಸದಿಂದ, ನನ್ನ ಐಡೆಂಟಿಟಿ ಜೊತೆಗೆ ತಲುಪ ಬಯಸುತ್ತೇನೆ, ಯಾರ ಹಂಗಿನಿಂದಲೂ ಅಲ್ಲ!

ಅಡಗಿರುವ ಪ್ರತಿಭೆ : ಒಂದು ದಿನ ನಾನು ಕ್ಯಾಮೆರಾ, ಫೋನ್‌, ಮೇಕಪ್‌ ನಿಂದ ದೂರ ಇದ್ದರೆ, ಅಂದು ನಾನು ಒಂದು ಶಾಂತ ಸ್ಥಳದಲ್ಲಿ ಪೇಂಟಿಂಗ್‌ ಮಾಡುತ್ತಿರುತ್ತೇನೆ. ಫ್ಯಾಷನ್‌ ಡಿಸೈನಿಂಗ್‌ ನನ್ನ ಎಂದಿನ ಪ್ಯಾಶನ್‌. ಶಾಲಾ ಕಾಲೇಜುಗಳಲ್ಲಿ ಕಮರ್ಷಿಯಲ್ ಆರ್ಟ್‌ ಸಹ ನನ್ನ ಒಂದು ಸಬ್ಜೆಕ್ಟ್ ಆಗಿತ್ತು. ಹೀಗಾಗಿ ಪೇಂಟಿಂಗ್‌ ಅಂದ್ರೆ ನನಗೆ ಪಂಚಪ್ರಾಣ! ನನ್ನ ರಚನಾತ್ಮಕ ಕ್ರಿಯೇಟಿವಿಟಿಗೆ ಅದು ಹೊಸ ದಾರಿ. ಯಾವುದೇ ಮುಖವಾಡ ಧರಿಸದೆ ನಾನು ಸದಾ ನನ್ನ ಮನಸ್ಸಿಗೆ ತಕ್ಕಂತೆ ನಡೆದುಕೊಳ್ಳ ಬಯಸುವೆ.

ವೆಸ್ಟರ್ನ್‌ ಯಾ ಎಥ್ನಿಕ್‌ : ನನಗೆ ವೆಸ್ಟರ್ನ್‌ ನಲ್ಲಿ ಕ್ಯಾಶ್ಯುಯೆಲ್ ಡ್ರೆಸೆಸ್‌ ಅಂದ್ರೆ ತುಂಬಾ ಇಷ್ಟ. ಹೈ ಬೂಟ್ಸ್, ಜೀನ್ಸ್, ಒಂದು ಲೂಸ್‌ ಆದ ಟಾಪ್‌….. ಇಂಥವುಗಳಲ್ಲಿ ನನಗೆ ನಿಜವಾದ ಆರಾಮ ಸಿಗುತ್ತದೆ. ಆದರೆ ನಾನು ಇಂಡಿಯನ್‌ ಧರಿಸಿದರೆ, ಸೀರೆ ನನ್ನ ಆಲ್ ಟೈಂ ಫೇವರಿಟ್‌, ಡಿಸೈನರ್‌ ಬ್ಲೌಸಸ್‌ ಜೊತೆ ಇದನ್ನು ಫ್ಲಾಂಟ್‌ ಮಾಡಿ ನನ್ನ ಗ್ರೇಸ್‌ ಹೆಚ್ಚಿಸಿಕೊಳ್ಳ ಬಯಸುತ್ತೇನೆ. ಫ್ಯಾಷನ್‌ ಕುರಿತಾಗಿ ನನ್ನನ್ನು ಕೇಳಿದರೆ, ಯಾವುದರಲ್ಲಿ ನೀವು ಕಂಫರ್ಟೆಬಲ್ ಅನಿಸುತ್ತದೋ ಅದನ್ನೇ ಧರಿಸಿರಿ, ಮನಸ್ಸಿಗೆ ಆನಂದ ನೀಡುವಂಥದ್ದನ್ನೇ ಧರಿಸಿರಿ. ಇನ್ನೊಬ್ಬರನ್ನು ಖುಷಿಪಡಿಸಿ ನಮಗೇನೂ ಆಗಬೇಕಿಲ್ಲ.

ಎಲ್ಲಕ್ಕಿಂತ ದೊಡ್ಡ ವ್ಯತ್ಯಾಸ : ದೆಹಲಿಯಲ್ಲಿ ಬೆಳೆದ ಈ ಬಬ್ಲಿ ಗರ್ಲ್ ಬಾರ್ಬಿಗೂ, ಮುಂಬೈನ ಗ್ಲಾಮರಸ್‌ ಮನ್ನಾರಾಳಿಗೂ ಏನು ವ್ಯತ್ಯಾಸ? ದೆಹಲಿ ಇವಳನ್ನು ನೇಟಿವಿಟಿಗೆ ಅಂಟಿಕೊಳ್ಳುವಂತೆ ಮಾಡಿದರೆ, ಮುಂಬೈ ಕನಸುಗಳನ್ನು ನನಸಾಗಿಸಲು ನೆರವು ನೀಡಿತು. ಆದರೆ ಎಲ್ಲಕ್ಕಿಂತ ಮಜವಾದ ಅಭ್ಯಾಸವೆಂದರೆ, ಇಂದಿಗೂ ಜನ ನನ್ನನ್ನು `ದೆಹಲಿಯ ಹುಡುಗಿ’ ಅಂತಲೇ ಗುರುತಿಸುತ್ತಾರೆ. ಹಾಗಾಗಿ ಆ ಹುಡುಗಿ ಸದಾ ಎಲ್ಲರ ಜೊತೆ ನಕ್ಕು ನಗಿಸುತ್ತಾ, ಜನರೊಂದಿಗೆ ಬೆರೆತಿರುವಂಥ, ಸದಾ ಲೈಟ್ ಮೈಂಡೆಡ್‌ ಹುಡುಗಿ ಆಗಿರುತ್ತಾಳೆ.

ನಟನೆಯ ರಿಸ್ಕ್ : ನಾನು ವಕೀಲೆ ಆಗಲು ಬಯಸಿದ್ದೆ. ಡಿಗ್ರಿಯಲ್ಲಿ ಪೊಲಿಟಿಕ್‌ ಸೈನ್ಸ್ ಕಲಿತಿದ್ದೆ. ಮುಂದೆ ಲಾ ಮಾಡಬೇಕೆಂದಿದ್ದೆ, ಆದರೆ ನನ್ನ ತಂದೆ ತೀರಿಕೊಂಡ ನಂತರ ಅದು ಕೈಗೂಡಲಿಲ್ಲ. ಬಾಲ್ಯದಿಂದಲೇ ಜ್ಯೂವೆಲರಿ ಡಿಸೈನಿಂಗ್‌ ನಲ್ಲಿ ಅಮ್ಮನಿಗೆ ಬಹಳ ನೆರವಾಗುತ್ತಿದ್ದೆ. ನನ್ನ ಪೇಂಟಿಂಗ್ಸ್ ಸಹ ಉತ್ತಮ ಮಟ್ಟದ್ದು. ಹೀಗಾಗಿ ಫ್ಯಾಷನ್‌ ಡಿಸೈನಿಂಗ್‌ ಮುಂದುವರಿಸಿದೆ. ಇಂದು ನಟನೆ ಮಾಡುತ್ತಾ ಡ್ಯಾನ್ಸ್, ಮ್ಯೂಸಿಕ್‌, ಫ್ಯಾಷನ್‌ ಮುಖಾಂತರ ನನ್ನನ್ನು ನಾನು ಎಕ್ಸ್ ಪ್ರೆಸ್‌ ಮಾಡಿಕೊಳ್ಳ ಬಯಸುತ್ತೇನೆ.

ಪಾಲಿಟಿಕ್ಸ್ ಕೈಗೂಡಲಿಲ್ಲ ಅಂತ ಬೇಸರ ಇದೆ. ಅದು ನನ್ನ ನಟನೆಯಲ್ಲಿ ಡೈಲಾಗ್‌ ಮೂಲಕ ಇಣುಕುತ್ತಿರುತ್ತದೆ.

ಕ್ಯಾಮೆರಾ ಲೋಕ : ಪೀರಿಯಡ್ಸ್, ಮೂಡ್‌ ಸ್ವಿಂಗ್‌, ಬ್ರೇಕ್‌ ಅಪ್‌ ನಂಥ ಪರಿಸ್ಥಿತಿಗಳಲ್ಲಿ ಶೂಟಿಂಗ್‌ ನಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಕಷ್ಟವೇ ಸರಿ. ಆಗೆಲ್ಲ ನನ್ನ ಬಾಡಿ ಬಲು ಬ್ಲೋಟೆಡ್‌ ಅನಿಸುತ್ತಿರುತ್ತದೆ.

ಆರಂಭದಲ್ಲಿ ಶೂಟಿಂಗ್‌ ನಲ್ಲಿ ತೊಡಗಿಕೊಂಡಾಗ, ಇದು ನನಗೆ ಅತಿ ಕಷ್ಟಕರ ಎಂದೇ ಅನಿಸುತ್ತಿತ್ತು. ಒಬ್ಬ ಹೆಣ್ಣಾಗಿ, ಇಂಥ ಆಂತರಿಕ ತೊಂದರೆ ಅನುಭವಿಸುತ್ತಾ ನಟನೆಯಲ್ಲಿ ಸಂತಸ ತೋರ್ಪಡಿಸುವುದು ಹಿಂಸೆ ಅನಿಸುತ್ತದೆ. ಆದರೆ ಒಮ್ಮೆ ಶೂಟಿಂಗ್ ಶುರುವಾದರೆ ಒಮ್ಮೆಲೇ ನೂರಾರು ಜನರೊಂದಿಗೆ ಹೊಂದಿಕೊಂಡು ಕೆಲಸ ಮಾಡಬೇಕಾಗುತ್ತದೆ. ಹೇರ್‌, ಮೇಕಪ್‌, ಸ್ಪಾಟ್ ಬಾಯ್‌, ಎಡಿಸ್‌ ಇತ್ಯಾದಿ ನಿಭಾಯಿಸುತ್ತಲೇ ನನ್ನ ಪಾತ್ರಕ್ಕೆ ನ್ಯಾಯ ಒದಗಿಸಬೇಕಾಗುತ್ತದೆ. ಹ್ಞಾಂ, ಆ ದಿನಗಳಲ್ಲಿ ನಾನು ಬಹಳ ಭಾವುಕಳಾಗುತ್ತೇನೆ. ಇನ್ನೇನು ಅವಳು ಬಂದೇಬಿಡುತ್ತದೆ ಎನ್ನುವ ಹಾಗಿರುತ್ತದೆ, ಆದರೆ ನಿಧಾನವಾಗಿ ಎಲ್ಲದಕ್ಕೂ ಅಡ್ಜಸ್ಟ್ ಆಗಿಹೋದೆ.

ರೋಲ್ ಮಾಡೆಲ್ ‌: ಎಲ್ಲಕ್ಕೂ ಮೊದಲು ನಾನು ಆ ಕುರಿತು ಹೇಳ ಬಯಸುವುದೆಂದರೆ, ನಾನು ಒಬ್ಬ ಸೋಶಿಯಲ್ ಮೀಡಿಯಾ ಇನ್‌ ಫ್ಲೂಯೆನ್ಸರ್‌ ಅಲ್ಲ. ಆದರೂ 4.5 ಮಿಲಿಯನ್‌ ಜನ ನನ್ನ ಫಾಲೋಯೆರ್ಸ್‌! ಅವರಿಗೆ ನನ್ನ ಮೇಲೆ ಭರವಸೆ ಇರುವುದೇ ಇದಕ್ಕೆ ಕಾರಣ. ನನ್ನನ್ನು ತಮ್ಮ ನೆರೆಮನೆ ಹುಡುಗಿ ಎಂದೇ ಭಾವಿಸುತ್ತಾರೆ. ನನಗೆ ನನ್ನ ಅಭಿಮಾನಿಗಳು, ನನ್ನ ಕ್ಲಬ್ಬುಗಳು ಅಂದ್ರೆ ಪ್ರೇರಣೆ ನೀಡುವರು ಅನಿಸುತ್ತದೆ. ನನ್ನ ಒಳ್ಳೆಯ, ಕೆಟ್ಟ ಪರಿಸ್ಥಿತಿಗಳಲ್ಲಿ ಇವರು ನನಗೆ ಸದಾ ಜೊತೆಯಾಗಿದ್ದಾರೆ. ಸೋಶಿಯಲ್ ಮೀಡಿಯಾ ಅಂದ್ರೆ ನನಗೆ ಪಂಚಪ್ರಾಣ! ಆದರೆ ಇದೊಂದು ದೊಡ್ಡ ಜವಾಬ್ದಾರಿಯೇ ಸರಿ. ಏಕೆಂದರೆ 70% ಆಡಿಯನ್ಸ್ ಹೆಂಗಸರು, ಅವರಿಗೆ ನಾನೇ ರೋಲ್ ಮಾಡೆಲ್‌! ಹೀಗಾಗಿ ನಾನು ಸದಾ ಬಯಸುವುದೆಂದರೆ, ಅವರಿಗಾಗಿ ನಾನು ಏನಾದರೂ ಒಳ್ಳೆಯನ್ನು ಮಾಡಬೇಕೆನಿಸುತ್ತದೆ, ತುಸು ಎಚ್ಚರಿಕೆಯಿಂದ ಮುಂದುವರಿಯಬೇಕು ಎನಿಸುತ್ತದೆ. ಆಗ ಮಾತ್ರ ನಿಜ ಅರ್ಥದಲ್ಲಿ ನಾನು ಅವರಿಗೆ ರೋಲ್ ‌ಮಾಡೆಲ್ ‌ಆಗಬಬಲ್ಲೇ, ಒಂದು ಪಾಸಿಟಿವ್ ‌ಬದಲಾವಣೆ ತರಬಲ್ಲೇ!

ಮನ್ನಾರಾ ತನ್ನ ತಾಯಿ ಕಾಮಿನಿ ಚೋಪ್ರಾ ಹಾಂಡಾ ಹಾಗೂ ತಂಗಿ ಮಿತಾಲೀ ಜೊತೆ ನಾನಂತೂ ಸದಾ ಮೊದಲ ಗುಂಪಿಗೆ ಸೇರುವವಳು. ನನ್ನ ಪಾಲಿಗೆ ಹವ್ಯಾಸ ಅಂದ್ರೆ, ಜನ ಮನಸಾರೆ ಮಂದಹಾಸ ಬೀರುವಂತೆ ಮಾಡುವುದು. ಇನ್ನೊಬ್ಬರನ್ನು ಕೀಳಾಗಿ ತೋರಿಸಿ, ಆ ಮಾತಿನ ಮೂಲಕ ನಗು ತರಿಸುವುದಲ್ಲ…..ನನ್ನ ತಂದೆ ಸದಾ ಪ್ರೀತಿ, ಪ್ರಾಮಾಣಿಕತೆಗಳಿಂದ ನಡೆದುಕೋ ಎನ್ನುತ್ತಿದ್ದರು, ನಾನು ಹಾಗೇ ಮಾಡುತ್ತಿದ್ದೇನೆ. ಅವರು ಹೇಳುತ್ತಿದ್ದರು, ಪರಿಸ್ಥಿತಿ ಹೇಗೆ ಇರಲಿ, ಜನರಿಗೆ ಸದಾ ಗೌರವಾದರ ನೀಡುವ, ಮನಬಿಚ್ಚಿ ಮಾತನಾಡುವ, ಅವರ ಈ ಮಾತು, ಮಾರ್ಗದರ್ಶನ, ನನಗೆ ಜೀವನದಲ್ಲಿ ಮೇಲೇರುವಂತೆ ಮಾಡಿತು….

– ಗಿರಿಜಾ ಪಂಕಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ