ಇಂದಿನ ಸುಭಾಷಿತ : ಊಟ ಮಾಡುವಾಗ ಗಂಡ ಉಪ್ಪಿನಕಾಯಿ ಬೇಕೆಂದು ಕೇಳಿದರೆ, ಪಲ್ಯದಲ್ಲಿ ದಂ ಇಲ್ಲ ಅಂತ ಅರ್ಥ. ಅದನ್ನು ಆತನಿಗೆ ಹೇಳಲಿಕ್ಕೂ ದಂ ಇಲ್ಲ ಅಂತ….

ಟೀಚರ್‌ : ಕಿಟ್ಟಿ…. ಮಾನವರಿಗೂ ಮೊಬೈಲ್ ‌ಗೂ ಇವರು ವ್ಯತ್ಯಾಸವೇನು?

ಕಿಟ್ಟಿ : ಬ್ಯಾಲೆನ್ಸ್ ಇಲ್ಲದಿದ್ದರೆ ಮಾನವರು ಸರಿಯಾಗಿ ಕಾಲು ಎತ್ತಿಟ್ಟು ನಡೆಯಲಾರರು ಅದೇ ಬ್ಯಾಲೆನ್ಸ್ ಇಲ್ಲದಿದ್ದರೆ ಮೊಬೈಲ್ ನಿಂದ ಕಾಲೇ ಹೋಗೋದಿಲ್ಲ….!

ವಿದೇಶಿ : ನಿಮ್ಮ ದೇಶದಲ್ಲಿ ನೀವು ಕಾರನ್ನು ರಸ್ತೆಯ ಎಡಬದಿಗೆ ಚಲಿಸುತ್ತೀರೋ ಬಲ ಬದಿಗೋ?

ಸ್ವದೇಶಿ : ನಮ್ಮ ದೇಶದ ರಸ್ತೆಗಳಲ್ಲಿ ಗುಂಡಿ, ಹಳ್ಳ ಬಿಟ್ಟು ಯಾವ ಭಾಗ ಅಳಿದುಳಿದಿರುತ್ತದೋ ಆ ಭಾಗದಲ್ಲಿ ನಾವು ಗಾಡಿ ಚಲಾಯಿಸುತ್ತೇವೆ!

ಜಡ್ಜ್ : ನಿಮ್ಮ ವಿಚ್ಛೇದನಕ್ಕೆ ನೆಲೆಯಾದರೂ ಏನು?

ಮಾಧವಿ : ನೆಲೆ ಏನು ಬಂತು? ಕೋರಮಂಗ್ಲಾ ಬಳಿ ಇರುವ ದೊಡ್ಡ ಬಂಗಲೆ, ಅದಕ್ಕೆ ಸಂಬಂಧಿಸಿದ ನೆಲದ್ದೇ ಈಗ ತಕರಾರು….

ಜಡ್ಜ್ : ಅಲ್ಲ….. ಅಲ್ಲಮ್ಮ…… ನಾನು ಕೇಳಿದ್ದು ನಿಮ್ಮ ಡೈವೋರ್ಸ್‌ ಗೆ ಗ್ರೌಂಡ್ಸ್ ಏನು ಅಂತ?

ಮಾಧವಿ : ಅದೇ ನಾನು ಹೇಳಿದ್ದು, ಗ್ರೌಂಡು ಬಂಗಲೆಯ ಜೊತೆಯಲ್ಲೇ ಇದೆ, ತುಂಬಾ ದೊಡ್ಡದೇನಲ್ಲ ಅದರದೇ ತಕರಾರು.

ಜಡ್ಜ್ : ಅಯ್ಯೋ… ನಿನಗೆ ಅರ್ಥ ಆಗ್ತಿಲ್ಲಮ್ಮ…. ನಾನು ವಿಚ್ಛೇದನಕ್ಕೆ ಆಧಾರ ಏನು ಅಂತ ಕೇಳಿದ್ದು?

ಮಾಧವಿ : ಆಧಾರ್‌ ಬಗ್ಗೆ ಕೇಳಿದ್ರಾ? ಅದ್ರಲ್ಲಿ ನನ್ನ ಫೋಟೋ ಚೆನ್ನಾಗಿ ಬರ್ಲಿಲ್ಲ ಅಂತ ಎಲ್ಲೂ ತೋರಿಸೋಲ್ಲ ಬಿಡಿ.

ಜಡ್ಜ್ : ಅದಲ್ಲಾ…..! ವಿಚ್ಛೇದನಕ್ಕೆ ತಳಹದಿ ಏನು ಅಂತ?

ಮಾಧವಿ : ಆ ಬಂಗಲೆಗೆ ತಳಹದಿ ಭದ್ರವಾಗಿದೆ, ಆ ಬಗ್ಗೆ ಯೋಚನೆ ಇಲ್ಲ ಬಿಡಿ.

ಜಡ್ಜ್ : ಅಯ್ಯೋ! ವಿಷಯ ಅದಲ್ಲ…. ನೀವು ಡೈವೋರ್ಸ್‌ ತಗೊಳ್ತಿರೋದು ಯಾಕೆ ಅಂತ?

ಮಾಧವಿ : ಡೈವೋರ್ಸಾ….? ಅದು ನನಗೆ ಬೇಡ, ನನ್ನ ಗಂಡಂಗೆ ಬೇಕಂತೆ.

ಜಡ್ಜ್  : ರೀ ಸ್ವಾಮಿ, ಯಾಕ್ರಿ ಬೇಕು ನಿಮಗೆ ಡೈವೋರ್ಸ್‌?

ಮದನ್‌ : ಮಹಾಸ್ವಾಮಿ, ನಿಮ್ಮ ಒಂದೊಂದು ಪ್ರಶ್ನೆಗೂ ಹಲವು ಉತ್ತರ ಬಂತಲ್ಲವೇ, 15 ವರ್ಷದಿಂದ ನಾನು ಎಷ್ಟು ಪ್ರಶ್ನೆ ಕೇಳಿರಬಹುದು ಅಂತ ಲೆಕ್ಕ ಹಾಕಿ….

ಜಡ್ಜ್ ಸಾಹೇಬರ ಕಣ್ಣಲ್ಲಿ ಗಳಗಳ ನೀರಿಳಿದಿತ್ತು……

ಹುಡುಗಿ : ಹಾಯ್‌

ಹುಡುಗ : ಹಲೋ

ಹುಡುಗಿ : ಹೌ ಆರ್‌ ಯೂ?

ಹುಡುಗ : ವೆರಿ ಫೈನ್‌

ಹುಡುಗಿ : ವೇರ್‌ ಆರ್‌ ಯೂ ಫ್ರಂ?

ಹುಡುಗ : ಬ್ಯಾಂಗಲೂರ್‌….

ಹುಡುಗಿ : ನೀವೆಷ್ಟು ಓದಿದ್ದೀರಿ….?

ಹುಡುಗ : ನಿಮ್ಮಷ್ಟೇ ಓದಿದ್ದೀನಿ….

ಹುಡುಗಿ : ನನ್ನಷ್ಟೇ…..? ಏನ್ರಿ ಹಾಗಂದ್ರೆ….?

ಹುಡುಗ : ಅಷ್ಟೇ…. ಇನ್ನೇನು ಮತ್ತೆ? ನೀವೆಲ್ಲಿಗೆ ನಿಲ್ಲಿಸಿದ್ರೋ ನನಗೂ ಅಷ್ಟೇ ಇಂಗ್ಲಿಷ್‌ ಬರೋದು….. ಅಲ್ಲಿಂದ ಸೀದಾ ಕನ್ನಡದಲ್ಲೇ ಮಾತನಾಡೋದು!

ಮಗ : ಅಮ್ಮ….. ನಾನು ಹೇಗೆ ಕಾಣ್ತೀದ್ದೀನಮ್ಮ?

ತಾಯಿ : ಅದನ್ನು ನಿನ್ನ ಗರ್ಲ್ ಫ್ರೆಂಡ್‌ ನ್ನೇ ಕೇಳಬೇಕಪ್ಪ.

ಮಗ : ಆದರೆ….. ನನಗೆ ಯಾರೂ ಗರ್ಲ್ ಫ್ರೆಂಡೇ ಇಲ್ಲವಲ್ಲಮ್ಮ…..?

ತಾಯಿ : ಹಾಗಿದ್ದರೆ ಈ ಪ್ರಶ್ನೆಯನ್ನು ನಿನಗೆ ನೀನೇ ಕೇಳಿಕೋ…. ಅದರಲ್ಲೇ ಅರ್ಥ ಮಾಡಿಕೋ!

ಒಂದು ಸ್ಪರ್ಧೆ ನಡೆಯುತ್ತಿತ್ತು. ಅಲ್ಲಿಗೆ ಬಂದಿದ್ದ ಗಂಡಂದಿರಿಗೆಲ್ಲ, `ಸಂತೋಷವನ್ನು 3 ಶಬ್ದಗಳಲ್ಲಿ ವ್ಯಾಖ್ಯಾನಿಸಿ’ ಎಂದು ಹೇಳಲಾಯಿತು. ಎಲ್ಲರೂ ಬಾಯಿಗೆ ಬಂದದ್ದು ಬರೆದರು. ಗುಂಡನ ಉತ್ತರ, `ಹೆಂಡತಿ ತವರಿಗೆ ಹೋದಳು!’ ಎಂದಿತ್ತು. ಇತರ ಎಲ್ಲಾ ಉತ್ತರಗಳನ್ನೂ ತಿರಸ್ಕರಿಸಿ, ಗಂಡನ ಉತ್ತರಕ್ಕೆ ಪ್ರಥಮ ಬಹುಮಾನದ ಜೊತೆ ದ್ವಿತೀಯ ಹಾಗೂ ತೃತೀಯವನ್ನೂ ಸೇರಿಸಿ 5 + 3 + 2 = 10 ಸಾವಿರ ರೂ. ನೀಡಿ ಕಳುಹಿಸಿದರು! ಗುಂಡ ಮನೆಗೆ ಬಂದು ಬಾಗಿಲು ಬಡೀತಾನೆ, ಗುಂಡಿ ಬಾಗಿಲು ತೆರೆದರೆ ಕೇಳಿ!

ರಾಮಣ್ಣ : ಅಂತೂ ನಮ್ಮ ಬೆಂಗಳೂರಿನಲ್ಲಿ ಬಿಸ್‌ ನೆಸ್‌ ಜೋರಾಗಿ ನಡೀತಿದೆ ಅಂತ ಆಯ್ತು.

ಶ್ಯಾಮಣ್ಣ : ಹಾಗಂತ ಯಾರು ನಿಮಗೆ ಹೇಳಿದ್ದು? ಅದಕ್ಕಿಂತಲೂ ಪೇಯಿಂಗ್‌ ಗೆಸ್ಟ್ ಬಿಸ್‌ ನೆಸ್‌ ಬಲು ಹೈಕ್ಲಾಸಾಗಿ ನಡೀತಿದೆ ಅಂತೀನಿ!

ಪತ್ನಿ ಬೇಸಿಗೆಯಲ್ಲಿ ಮಕ್ಕಳನ್ನು ತವರಿಗೆ ಕರೆದುಕೊಂಡು ಹೋಗಿಬಂದಳು. ಮನೆಗೆ ಬಂದು ನೋಡುತ್ತಾಳೆ….. ಇಡೀ ಮನೆ ಥಳಥಳ ಹೊಳೆಯುತ್ತಿದೆ. ಅಡುಗೆಮನೆಯ ಪಾತ್ರೆಪಡಗ ನೀಟಾಗಿ ಕೂತಿವೆ…. ಬಟ್ಟೆಗಳು ಮಡಿಸಲ್ಪಟ್ಟು ವಾರ್ಡ್‌ ರೋಬ್ ಸೇರಿವೆ…. ಒಟ್ಟಾರೆ ಮನೆಯಲ್ಲಿ ಹುಡುಕಿದರೂ ಕಸ ಕೊಳೆ ಇಲ್ಲ…. ತನ್ನ ಹೆಗಲಿನ ಮೇಲೆ ನೀರಿನ ಹನಿಗಳು ಬಿದ್ದಿದ್ದು ಗಮನಿಸಿ, ಪತಿ ಮಹಾಶಯ ತಿರುಗಿ ಪತ್ನಿಗೆ ಹೇಳಿದ, “ಏನಾಯ್ತು? ಪ್ರಯಾಣ ಸುಖಕರವಾಗಿತ್ತು ತಾನೇ? ನಿನ್ನ ತವರಿನಲ್ಲಿ ಎಲ್ಲರೂ ಕ್ಷೇಮ ತಾನೇ?”

ಪತ್ನಿ ಮುಗುಳ್ನಗುತ್ತಾ ಹೇಳಿದಳು, “ಹಾಗೇನಿಲ್ಲ ಬಿಡಿ. ಎಲ್ಲಾ ಚೆನ್ನಾಗಿದ್ದಾರೆ. ನನ್ನ ಕಂಗಳಿಂದ ಉದುರಿದ್ದು ಕಣ್ಣಿರಲ್ಲಾರೀ….. ಆನಂದಬಾಷ್ಪ! ನಿಮಗೆ ಇಷ್ಟೆಲ್ಲ ಮನೆಗೆಲಸ ಬರುತ್ತೆ ಅಂತ ಗೊತ್ತಿಲ್ಲದೆ ರಂಗಿ, ನಿಂಗಿ ಅಂತ ಕೆಲಸದವರ ಜೊತೆ ಹೋರಾಡ್ತಿದ್ದೆ. ಇನ್ನು ಮುಂದೆ ಯಾವ ರಂಗಿಯೂ ಬೇಡ. ನಿಂಗಿಯೂ ಬೇಡ! ಎಲ್ಲಾ ಕೆಲಸ ನೀವೇ ಮಾಡಿ…….”

ನೀತಿ : ಹೆಂಡತಿಯನ್ನು ಇಂಪ್ರೆಸ್‌ ಮಾಡಲು ಆಕೆ ಇಲ್ಲದಾಗ ಹೆಚ್ಚಿನ ಮನೆಗೆಲಸ ಮಾಡೀರಿ, ಜೋಕೆ!

ಎಂದಿನಂತೆ ಗಂಡ ಹೆಂಡಿರ ಮಧ್ಯೆ ಜಗಳ ನಡೆದಿತ್ತು.

ಪತ್ನಿ : ನಾನು ಇಡೀ ಮನೆ ಸಂಭಾಳಿಸುತ್ತೇನೆ! ಅಡುಗೆಮನೆ, ಹೊರಗಿನ ಕೆಲಸ, ಮನೆಗೆಲಸ, ಮಕ್ಕಳ ಆಟಪಾಠ…. ಮತ್ತೆ ತಾವೇನು ಮಾಡ್ತೀರಿ?

ಪತಿ : ನಾನು ನನ್ನನ್ನು ಹೇಗೋ ಸಂಭಾಳಿಸುತ್ತೇನೆ…. ನಿನ್ನ ಮತ್ತೇರಿದ ಕಂಗಳನ್ನು ದಿಟ್ಟಿಸುತ್ತಲೇ….

ಪತ್ನಿ : ಛೀ…. ಹೋಗೀಪ್ಪ…. ಈಗಲೂ ನನ್ನ ಸೌಂದರ್ಯ ವರ್ಣಿಸ್ತೀರ…. ರಾತ್ರಿ ಅಡುಗೆಗೆ ನಿಮ್ಮ ನೆಚ್ಚಿನ ಐಟಂ ಏನು ಮಾಡಲಿ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ