– ರಾಘವೇಂದ್ರ ಅಡಿಗ ಎಚ್ಚೆನ್.

ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಂಗವಾಗಿ 25 ನೇ ಸಾಂಸ್ಕೃತಿಕ ಸಿಂಚನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಅದ್ದೂರಿಯಾಗಿ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿನ ನಯನ ಸಭಾಂಗಣದಲ್ಲಿ ನಡೆಸಲಾಯಿತು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಂತ್ರಾಲಯದ ಅರ್ಚಕರಾದ ಶ್ರೀ ವಾದಿಂದ್ರ ತೀರ್ಥರು, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಮಹಾಬಲೇಶ್ವರ್ ವಿ ಭಟ್, MAS TV ಚೆರ್ಮನ್ ಡಾ. ಕರ್ಣ, ಕಲಾವಿದರು ಹಾಗೂ ನಿರೂಪಕರಾದ ಧನಂಜಯ್, ಸಾಮಾಜಿಕ ಮಾಧ್ಯಮ ಪ್ರಭಾವಿ ನಟರಾದ ಚೇತನ್ ದುರ್ಗಾ, KGF ಖ್ಯಾತಿಯ ನಟ ಅನ್ಮೋಲ್ ವಿಜಯ್ ಭಟ್ಕಳ್, ಹಾಗೂ ಇವೆಂಟ್ ಸಂಯೋಜಕರಾದ ಶ್ರೀಮತಿ ಚಂದ್ರಿಕಾ ಭಾಗವಹಿಸಿದ್ದರು.


ಸಂಜೆ 6ಕ್ಕೆ ಸಭಾ ಕಾರ್ಯಕ್ರಮವನ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಿಕ್ಕಬಳ್ಳಾಪುರದ ಕೃಷ್ಣೆಗೌಡ, ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ, ವಿವಿಐಪಿ ಸೆಕ್ಯೂರಿಟಿ ಸರ್ವಿಸ್ ಡಿಸಿಪಿ ಮಂಜುನಾಥ್ ಬಾಬು, ಹೈ ಕೋರ್ಟ್ ಆಫ್ ಕರ್ನಾಟಕ – ಓ ಎಸ್ ಡಿ ಪ್ರೋಟೋಕಾಲ್ ಕನಕ ರಾಜು ಟಿ ಎನ್, ಅವರು ಉದ್ಘಾಟನೆ ಮಾಡಿದರು


ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇನ್ನು ಕಾರ್ಯಕ್ರಮದ ಆಯೋಜಕರಾದ ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಅವರು ಮಾತನಾಡಿ ನಾಡಿನ ಹೆಮ್ಮೆಯ ಕನ್ನಡಿಗರನ್ನ ಜೊತೆಗೆ ಕರುನಾಡಿನ ಸಾಧಕರನ ಗುರುತಿಸಿ ಗೌರವಿಸಿರುವುದು ಹೆಮ್ಮೆ ತಂದಿದೆ ಅಲ್ಲದೆ
ಹಲವಾರು ಜನ ಪ್ರತಿಭಾನ್ವಿತರಿಗೆ ವೇದಿಕೆಯನ್ನು ನೀಡಿ ಕಲಾಪ್ರೊತ್ಸವವನ್ನು ಮಾಡಿರುವುದು ತೃಪ್ತಿ ತಂದಿದೆ ಮುಂದಿನ ದಿನದಲ್ಲಿ ಗುರುತಿಸುವ ಕೆಲಸ ಸಂಸ್ಥೆಯ ವತಿಯಿಂದ ನಡೆಯಲಿದೆ ಎಂದು ತಿಳಿಸಿದರು.





