ಇತ್ತೀಚೆಗೆ ಮುಂಬೈನಲ್ಲಿ ನಡೆದ `ಕೋತೂರ್‌ ಫ್ಯಾಷನ್‌ ವೀಕ್‌’ನಲ್ಲಿ ಹಲವಾರು ಬಾಲಿವುಡ್‌ ಸೆಲಿಬ್ರಿಟೀಸ್‌ ಕ್ಯಾಟ್‌ ವಾಕ್‌ ನಲ್ಲಿ ಮೆರೆದರು. ಇಲ್ಲಿನ ತಾರೆಯರ ಬೆಡಗು ಬಿನ್ನಾಣ ಹೇಳತೀರದು. ಸ್ಟೈಲಿಶ್‌, ಗ್ಲಾಮರಸ್‌ ನ ಬಾಲಿವುಡ್‌ ನ ತಾರೆಯರ ಬೆಡಗನ್ನು ನೋಡಿಯೇ ತಣಿಯಬೇಕು! ಜಾಹ್ನವಿ, ಖುಷಿಯರ ಡ್ರೆಸೆಸ್‌ ಪಾರ್ಟಿ ಪರ್ಫೆಕ್ಟ್ ಎನಿಸಿದರೆ, ತಮನ್ನಾಳ ಡ್ರೆಸ್‌ ನ ಮೋಡಿಗೆ ಮರುಳಾಗದವರಿಲ್ಲ! ಭೂಮೀ ಪೆಡ್ನೇಕರ್‌ ತನ್ನ ಫಿಗರ್‌ ಮೇಂಟೆನೆನ್ಸ್  ಡ್ರೆಸ್‌ ಸೆನ್ಸಿಂಗ್‌ ನಿಂದ ಗಮನಸೆಳೆದರೆ, ಇತರ ತಾರೆಯರ ರೋಮಾಂಚಕ ಸೌಂದರ್ಯವನ್ನು ನೋಡಿ ತಿಳಿಯಿರಿ!

Filmose-Aug-llnd-2025

ಅದೇ ತರಹ ಬಾಲಿವುಡ್‌ ನ ಹ್ಯಾಂಡ್‌ ಸಮ್ ಹಂಕ್ಸ್ ಸಹ ಫ್ಯಾಷನ್‌ ನಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಪ್ರಮುಖವಾಗಿ ರಾಶಾ ಮಿಂಚಿದರೆಂದೇ ಹೇಳಬೇಕು. ಆಕೆಯ ಕಶೀದಾಕಾರಿ ಲೆಹಂಗಾ ಚೋಲಿ ನೆರೆದಿದ್ದ ಎಲ್ಲಾ ಪ್ರೇಕ್ಷಕರ ಹೃದಯ ಸೂರೆಗೊಂಡಿತು. ಆಕೆಯ ಗ್ಲಿಟರಿಂಗ್‌ ಮೇಕಪ್‌ ಇದಕ್ಕೆ ಪೂರಕವಾಗಿತ್ತು. ಅರ್ಜುನ್‌ ರಾಮ್ ಪಾಲ್‌, ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸಿದರು. ಇವರ ಫಿಟ್‌ ನೆಸ್‌ಡ್ರೆಸ್‌ ಸೆನ್ಸ್ ಅನುಕರಣೀಯ! ಛೋಟೆ ನಾಬ್‌ ಇಬ್ರಾಹಿಂ ಸಹ ಈ ನಿಟ್ಟಿನಲ್ಲಿ ಹಿಂದುಳಿಯಲಿಲ್ಲ. ಈತನ ಸ್ಟೈಲ್‌ಗ್ಲಾಮರ್‌ ಕಣ್‌ ಕುಕ್ಕುವಂತಿತ್ತು. ರಾಹುಲ್ ಮುಗ್ಧಾರ ಜೋಡಿ ಬಿಂದಾಸ್‌ ಎನಿಸಿತು. ಒಟ್ಟಾರೆ ಬಾಲಿವುಡ್‌ ತಾರೆಯರ ಬೆಡಗನ್ನು ನೋಡಿಯೇ ತಣಿಯಬೇಕು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ