ಜೆನ್‌ Z ನವರ ಮೊದಲ ಆಯ್ಕೆ ಆಗುತ್ತಿರುವ ಡೆನಿಮ್ ಸೀರೆಗಳ ವೈಶಿಷ್ಟ್ಯದ ಬಗ್ಗೆ ನಿಮಗೆ ಗೊತ್ತೇ…..?

ಜೀನ್ಸ್ ಡೆನಿಮ್ ಎರಡೂ ಒಂದೇ ನಾಣ್ಯದ 2 ಮುಖ ಎಂದರೆ ಉತ್ಪ್ರೇಕ್ಷೆಯಲ್ಲ, ಏಕೆಂದರೆ ಜೀನ್ಸ್ ನ್ನು ಡೆನಿಮ್ ಫ್ಯಾಬ್ರಿಕ್‌ ನಿಂದಲೇ ತಯಾರಿಸಲಾಗುತ್ತದೆ. ಜೀನ್ಸ್ ಮಾತ್ರವಲ್ಲದೆ, ಡೆನಿಮ್ ಸ್ಕರ್ಟ್‌, ಶಾರ್ಟ್ಸ್, ಟಾಪ್‌ ಗಳು ಸಹ ಫ್ಯಾಷನ್‌ ಲೋಕದ ಮಹತ್ವಪೂರ್ಣ ಭಾಗವಾಗಿವೆ. ಇಂದಿನ ಆಧುನಿಕ ಕಾಲದಲ್ಲಿ ಆಬಾಲವೃದ್ಧರಾದಿ ಎಲ್ಲರೂ ಇದನ್ನು ಅತಿಯಾಗಿ ಮೆಚ್ಚುತ್ತಾರೆ. ಇದರ ಸ್ಟೈಲಿಶ್‌ ಲುಕ್ಸ್ ಫ್ಯಾಷನ್‌ ಎಲ್ಲರಿಗೂ ಅಚ್ಚುಮೆಚ್ಚು! ಹೀಗಾಗಿಯೇ ಇಂದಿನ ಫ್ಯಾಷನ್‌ ಲೋಕಕ್ಕೆ ಡೆನಿಮ್ ಸೀರೆಯ ಎಂಟ್ರಿ ಆಗಿದೆ. ಇಂದಿನ ಆಧುನಿಕ ಜೆನ್‌ Z ತರುಣಿಯರು ಇದಕ್ಕೆ ಸಂಪೂರ್ಣ ಮನಸೋತಿದ್ದಾರೆ. ಇತರ ಸಾಂಪ್ರದಾಯಿಕ ಸೀರೆಗಳಿಗೆ ಬದಲಾಗಿ ಮಾಡ್‌ ಲುಕ್ಸ್ ವುಳ್ಳ ಇದಕ್ಕೇ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಬನ್ನಿ, ಈ ಡೆನಿಮ್ ಸೀರೆಗಳ ವೈಶಿಷ್ಟ್ಯದ ಬಗ್ಗೆ ತಿಳಿಯೋಣ :

ರೆಡಿ ಟು ವೇರ್‌ : ಸೀರೆ ಪ್ರತಿ ಹೆಣ್ಣಿನ ವ್ಯಕ್ತಿತ್ವವನ್ನೂ ಸ್ಪೆಷಲ್ ಆಗಿಸುತ್ತದೆ. ಇತ್ತೀಚಿನ ಜೆನ್‌ Z ತರುಣಿಯರು ಸಹ ಮತ್ತೆ ಮತ್ತೆ ಈ ಸೀರೆ ಉಡಲು ಬಯಸುತ್ತಾರೆ. ಮಾಮೂಲಿ ಸೀರೆ ಉಡಲು ಹೆಚ್ಚಿನ ಸಮಯ ಬೇಕು, ಇಂದಿನವರಿಗೆ ಅದು ಕಷ್ಟದ ಕೆಲಸ ಎನಿಸುತ್ತದೆ. ಹೀಗಾಗಿ ಆಧುನಿಕರಿಗೆ ಅದು ಬೇಡ. ಆದರೆ ಈ ಸೀರೆ ರೆಡಿ ಟು ವೇರ್‌ (ಸ್ಟಿಚ್ಡ್) ಆಗಿರುವುದರಿಂದ, ಇದನ್ನು ಆರಾಮವಾಗಿ ಧರಿಸಬಹುದು.

ಪರಂಪರೆ ಹಾಗೂ ಆಧುನಿಕತೆಯ ಸಂಗಮ : ಡೆನಿಮ್ ನಂಥ ಆಧುನಿಕ ಫ್ಯಾಬ್ರಿಕ್‌ ಮೇಲೂ ಪಾರಂಪರಿಕ ಕಸೂತಿ, ಬ್ಲಾಕ್‌ ಪ್ರಿಂಟ್‌, ಕಲಮ್ ಕಾರಿ, ಬಾಂಧನಿ ಇತ್ಯಾದಿ ಪಾರಂಪರಿಕ ಪ್ರಿಂಟ್‌ ನಿಂದ ಪ್ಯಾಚ್‌ ವರ್ಕ್‌ ವರೆಗೂ ಡೆಕೋರೇಟ್‌ ಮಾಡಲಾಗುತ್ತದೆ. ಹೀಗಾಗಿ ಈ ಡೆನಿಮ್ ಸೀರೆಗಳು ಪರಂಪರೆ ಹಾಗೂ ಆಧುನಿಕತೆಯ ಪರ್ಫೆಕ್ಟ್ ಸಂಗಮವಾಗಿದೆ. ಇದರ ಈ ಗೆಟಪ್‌ ಆಧುನಿಕರಿಗೆ ಬಲು ಇಷ್ಟವಾಗುತ್ತಿದೆ. ಇದರಿಂದ ಅವರಿಗೆ ಮಾಡ್‌ಟ್ರೆಡಿಷನಲ್ ಎರಡೂ ಬಗೆಯ ಲುಕ್‌ ಸಿಗುವುದು ಪ್ಲಸ್‌ ಪಾಯಿಂಟ್‌.

ಫ್ಯಾಬ್ರಿಕ್‌ ನ ವೈಶಿಷ್ಟ್ಯ : ಸಾಂಪ್ರದಾಯಿಕ ಸೀರೆಗಳು ಬಲು ನಾಜೂಕಾಗಿರುತ್ತವೆ. ಇದರಿಂದ ಅವಕ್ಕೆ ಎಕ್ಸ್ ಟ್ರಾ ಕೇರ್ ತೆಗೆದುಕೊಳ್ಳಬೇಕಾಗುತ್ತದೆ. ಶಿಫಾನ್‌, ಬನಾರಸಿಯಂಥ ಸೀರೆಗಳನ್ನು ತುಸು ನಿರ್ಲಕ್ಷಿಸಿದರೂ ಕೆಟ್ಟು ಹಾಳಾಗುತ್ತವೆ. ಅದೇ ಡೆನಿಮ್ ಸೀರೆ ಆದರೆ, ರಫ್‌ಟಫ್‌ ಫ್ಯಾಬ್ರಿಕ್‌ ನದಾದ್ದರಿಂದ ಸೂಕ್ಷ್ಮವಾಗಿ ವರ್ತಿಸುವುದಿಲ್ಲ. ಹೀಗಾಗಿ ಇಕ್ಕೆ ವಿಶೇಷ ಮುತುವರ್ಜಿಯ ಆರೈಕೆ ಏನೂ ಬೇಕಾಗಿಲ್ಲ. ಡೆನಿಮ್ ಒಂದು ಸಸ್ಟೇನೆಬಲ್ ಲಾಂಗ್‌ ಲಾಸ್ಟಿಂಗ್‌, ರೀಸೈಕಲ್ ಗೆ ಒಳಪಡುವ ಹಾಗೂ ಆಧುನಿಕತೆಯನ್ನು ಪ್ರತಿನಿಧಿಸುವ ಫ್ಯಾಬ್ರಿಕ್‌ ಆಗಿದ್ದು, ಇಂದಿನ ಹೊಸ ಪೀಳಿಗೆಯರನ್ನು ಗಾಢವಾಗಿ ಆಕರ್ಷಿಸುತ್ತಿದೆ.

ನಿಮ್ಮ ವ್ಯಕ್ತಿತ್ವಕ್ಕೆ ಒಂದು ಹೊಸ ಲುಕ್‌ ನೀಡಿ : ಈ ಸೀರೆ ರಫ್‌ಟಫ್‌ಆಗಿರುವುದರಿಂದ, ಇದನ್ನು ಉಡುವವರಿಗೆ ಇದು ಎಷ್ಟು ಸ್ಟ್ರೀಟ್‌ ಫ್ರೆಂಡ್ಲಿ, ಸ್ಟೈಲಿಶ್‌ ಹಾಗೂ ಯೂನಿಕ್‌ ಲುಕ್‌ ನೀಡುತ್ತದೆ ಎಂಬುದನ್ನು ಉಟ್ಟೇ ತಿಳಿಯಬೇಕು. ಇದರಿಂದಾಗಿ ಗುಂಪಿನ ನಾಲ್ವರಲ್ಲಿ ಎದ್ದು ಕಾಣುತ್ತಾರೆ.

ಪೇರಿಂಗ್‌ ಬಲು ಸುಲಭ : ಡೆನಿಮ್ ಸೀರೆಗಳನ್ನು ಸ್ನೀಕರ್ಸ್‌, ಶೂಸ್‌, ಬೂಟ್ಸ್, ಸ್ಯಾಂಡಲ್ಸ್ ಇತ್ಯಾದಿ ಯಾವುದೇ ಫುಟ್‌ ವೇರ್ ಹಾಗೂ ಕ್ರಾಪ್‌ ಟಾಪ್‌, ಬ್ಲೌಸ್‌, ಜ್ಯಾಕೆಟ್ಸ್ ಜೊತೆಗೂ ಬಲು ಸುಲಭವಾಗಿ ಧರಿಸಬಹುದು. ಸಾಂಪ್ರದಾಯಿಕ ಚಿನ್ನದ ಆಭರಣಗಳಿಗೆ ಬದಲಾಗಿ ಇಂದಿನವರು ಡೈಮಂಡ್‌ಆಕ್ಸಿಡೈಸ್ಡ್ ನಂಥ ಲೈಟ್‌ ಜ್ಯೂವೆಲರಿ ಧರಿಸಲು ಬಯಸುತ್ತಾರೆ. ಇವು ಡೆನಿಮ್ ಸೀರೆಗೆ ಚೆನ್ನಾಗಿ ಒಪ್ಪುತ್ತವೆ.

ಗಮನಿಸಬೇಕಾದ ಕಿವಿಮಾತು : ದಪ್ಪ ಹೊಲಿಗೆಯ ಫ್ಯಾಬ್ರಿಕ್ಸ್ ಗೆ ಬದಲಾಗಿ ತೆಳುವಾದ ಹೊಲಿಗೆಯುಳ್ಳ ಫ್ಯಾಬ್ರಿಕ್‌ ನ ಸೀರೆಯನ್ನೇ ಕೊಳ್ಳಿರಿ. ಏಕೆಂದರೆ ದಪ್ಪ ಹೊಲಿಗೆಯ ಡೆನಿಮ್, ತೂಕದಲ್ಲಿ ಭಾರಿ ಇರುತ್ತದೆ ಹಾಗೂ ತೆಳು ಹೊಲಿಗೆಯ ಡೆನಿಮ್ ತೂಕವಿಲ್ಲದೆ ಲೈಟ್‌ ಆಗಿರುತ್ತದೆ. ಹೀಗಾಗಿ ಇದನ್ನು ಕ್ಯಾರಿ ಮಾಡುವುದು ಸುಲಭ ಎನಿಸುತ್ತದೆ.

ನೀವು ರೆಡಿ ಟು ವೇರ್‌ ಸೀರೆ ಖರೀದಿಸಿದ್ದರೆ, ಬ್ಲೌಸ್‌ ನ ಫಿಟಿಂಗ್‌ ಕಡೆ ವಿಶೇಷ ಗಮನಹರಿಸಿ. ಏಕೆಂದರೆ ನಿಮ್ಮ ವ್ಯಕ್ತಿತ್ವ ಎದ್ದು ಕಾಣಿಸಬೇಕೆಂದರೆ, ಸೀರೆಯಷ್ಟೇ ಮಹತ್ವ ಬ್ಲೌಸ್‌ ನ ಫಿಟ್ಟಿಂಗ್‌ ಗೂ ನೀಡಬೇಕಾಗುತ್ತದೆ. ಗಾಢ ಬಣ್ಣಗಳಲ್ಲಿ ನೀವು ತೆಳುವಾಗಿ ಹಾಗೂ ಲೈಟ್‌ ಬಣ್ಣಗಳಲ್ಲಿ ನೀವು ತುಸು ದಪ್ಪಕ್ಕೆ ಕಂಡುಬರುವಿರಿ. ಹೀಗಾಗಿ ಸೀರೆ ಕೊಳ್ಳುವಾಗ ನಿಮ್ಮ ಪರ್ಸನಲ್ ವ್ಯಕ್ತಿತ್ವದ ಕಡೆ ಗಮನವಿರಲಿ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಕಸೂತಿ ಯಾ ಪ್ಯಾಚ್‌ ವರ್ಕ್‌, ಕ್ಲಾಸಿಕ್‌, ಬಾಂಬರ್‌ ಹಾಗೂ ವೆಸ್ಟರ್ನ್‌ ಸೀರೆಗಳು ಲಭ್ಯ. ನೀವು ನಿಮ್ಮ ಇಷ್ಟದ ಪ್ರಕಾರ ಆರಿಸಬಹುದು.

ಸಾಮಾನ್ಯಾಗಿ ಈ ಸೀರೆಗಳ ಫ್ಯಾಬ್ರಿಕ್‌ ದಪ್ಪ ಇರುವುದರಿಂದ, ನಿಮಗೆ ಹೆವಿ ಲುಕ್‌ ನೀಡುತ್ತದೆ. ಹೀಗಾಗಿ ಯಾವುದೇ ಹೆವಿ ಆ್ಯಕ್ಸೆಸರೀಸ್‌ ಧರಿಸಬೇಡಿ. ಹೈಹೀಲ್‌, ಬೂಡ್ಸ್ ಯಾ ಪೆನ್ಸಿಲ್ ‌ಹೀಲ್ ‌ನ ಫುಟ್‌ ವೇರ್‌ ನಿಮಗೆ ಡೆನಿಮ್ ಸೀರೆ ಜೊತೆ ಉತ್ತಮ ಸ್ಟೈಲಿಶ್‌ ಲುಕ್‌ ನೀಡಬಲ್ಲದು.

ಇನ್ನು ಒಮ್ಮೆ ಉಟ್ಟ ನಂತರ, ಶುಭ್ರ ಕಾಟನ್‌ ಬಟ್ಟೆಯಿಂದ ನೀಟಾಗಿ ಒರೆಸಿ, ಹ್ಯಾಂಗರ್‌ ನಲ್ಲಿ ನೇತು ಹಾಕಿಡಿ ಹಾಗೂ ತುಸು ಕೊಳೆ ಆಗಿದೆ ಎನಿಸಿದರೆ, ಮನೆಯಲ್ಲಿ ಒಗೆಯುವ ಬದಲು ಡ್ರೈ ಕ್ಲೀನ್‌ ಮಾಡಿಸಿ. ಹಾಗೇಂತ ಪ್ರತಿ ಸಲ ಉಟ್ಟು ಬಿಚ್ಚಿಟ್ಟಾಗಲೂ, ಡ್ರೈ ಕ್ಲೀನಿಂಗ್‌ ಗೆ ಕೊಡಬೇಕಿಲ್ಲ. ಹೆಚ್ಚು ಕೊಳೆಯಾಗಿದೆ ಎಂದು ಅನಿಸಿದಾಗ ಮಾತ್ರ ಹಾಗೆ ಮಾಡಿ.

– ಜಿ. ಪ್ರತಿಭಾ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ