ಕಾಸ್ಮೆಟಿಕ್ಸ್ ನಲ್ಲಿ ಗೋಲ್ಡ್ ಫೇಶಿಯಲ್ ಕೇವಲ ಒಂದು ಲಗ್ಶುರಿ ಟ್ರೀಟ್‌ ಮೆಂಟ್‌ ಮಾತ್ರವಲ್ಲ, ಇದು ನಮ್ಮ ಚರ್ಮ ಸೌಂದರ್ಯಕ್ಕೆ ಅತಿ ಅಗತ್ಯ ಕೂಡ…….

ಬ್ಯೂಟಿ ಲೋಕದಲ್ಲಿ ಕಾಸ್ಮೆಟಿಕ್‌ ಟ್ರೀಟ್‌ ಮೆಂಟ್ಸ್ ದಿನದಿನ ನಡೆಯುತ್ತಿರುತ್ತದೆ. ಫ್ರೂಟ್‌ ಬೇಸ್‌, ಡೈಮಂಡ್‌ ಫೇಶಿಯಲ್, ಆಕ್ಸಿಜನ್ ಥೆರಪಿ ಇತ್ಯಾದಿ ಹಲವು ತೆರನಾಗಿವೆ. ಆದರೆ ಕೆಲವು ಟ್ರೀಟ್‌ ಮೆಂಟ್ಸ್ ಮಾತ್ರ, ಕಾಲ ಎಷ್ಟೇ ಮುಂದುವರಿದರೂ ಅದು ಎವರ್‌ ಗ್ರೀನ್‌ ಆಗಿಯೇ ಇರುತ್ತದೆ. ಇಂಥವುಗಳಲ್ಲಿ `ಗೋಲ್ಡ್ ಫೇಶಿಯಲ್’ ಬಲು ಉನ್ನತ ಖ್ಯಾತಿ ಹೊಂದಿದೆ. 90ರ ದಶಕದಲ್ಲಿ ಮೊದಲ ಸಲ ಗೋಲ್ಡ್ ಫೇಶಿಯಲ್ ಚಾಲ್ತಿಗೆ ಬಂದಾಗ, ಜನರಿಗೆ ಇದು ಕೇವಲ ಲಗ್ಶುರಿ ಮಾತ್ರವಲ್ಲ, ಚರ್ಮಕ್ಕೆ ಬೇಕಾದ ಅತ್ಯುತ್ತಮ ಅನುಭವ ಎಂದೂ ಅನಿಸಿತು. ಆಗ ಇದಕ್ಕೆ ಬೇಡಿಕೆ ಎಷ್ಟಿತ್ತು ಎಂದರೆ, ಇದು ಪ್ರತಿ ಹೆಣ್ಣಿನ ಆಸೆಯೇ ಆಗಿಹೋಗಿತ್ತು. ಕಾಲ ಕಳೆದಂತೆ ಇನ್ನಷ್ಟು ಫೇಶಿಯಲ್ಸ್ ಚಾಲ್ತಿಗೆ ಬಂದವು. ಆದರೆ ಗೋಲ್ಡ್ ಫೇಶಿಯಲ್ ನ ಚಾರ್ಮ್ ಎಂದೂ ಕುಗ್ಗಲಿಲ್ಲ.

ಗೋಲ್ಡ್ ಎಂಬುದು ಸದಾ ರಿಚ್‌ ನೆಸ್‌, ಗ್ಲೋ ಹಾಗೂ ಪ್ರತಿಷ್ಠೆಯ ಪ್ರತೀಕ ಎನಿಸಲ್ಪಟ್ಟಿದೆ. ಹಿಂದೆಲ್ಲ ಗೋಲ್ಡ್ ಬೇಸ್ಡ್ ಕ್ರೀಂ ಪ್ಯಾಕ್ ಅಳವಡಿಸುವುದಾಗಿತ್ತು. ಮುಖದ ಮೇಲೆ ಲೈಟ್‌ ಆದ ಮಸಾಜ್‌ ನಡೆಯುತ್ತದೆ, ಅದರಿಂದ ಅತ್ಯುತ್ತಮ ಕಾಂತಿ ಹೊರಹೊಮ್ಮುತ್ತದೆ ಎಂಬುದಾಗಿತ್ತು. ಆದರೆ ಪ್ರಸ್ತುತದಲ್ಲಿ ಗೋಲ್ಡ್ ಫೇಶಿಯಲ್ ಹಿಂದಿಗಿಂತ ಹೆಚ್ಚು ಅಡ್ವಾನ್ಸ್ಡ್ ಆಗಿದೆ. ಇದರಲ್ಲಿ ಈಗ 24 ಕ್ಯಾರೆಟ್ ಗೋಲ್ಡ್ ನಷ್ಟೇ ನಾಜೂಕಾದ ಲೀಫ್‌ ನ್ನು ನೇರವಾಗಿ ಮುಖದ ಮೇಲೆ ಇರಿಸಲಾಗುತ್ತದೆ. ಅಲ್ಟ್ರಾಸೌಂಡ್‌ ಮೆಶಿನ್‌ ನೆರವಿನಿಂದ, ಇದನ್ನು ಚರ್ಮದಲ್ಲಿ ಡೀಪಾಗಿ ತೆಗೆದುಕೊಂಡು ಹೋಗಲಾಗುತ್ತದೆ.

ಈ ಪ್ರಕ್ರಿಯೆ ಮುಖದಲ್ಲಿನ ಸುಕ್ಕುಗಳ ವಿಝಿಬಲಿಟಿ ತಗ್ಗಿಸುವುದಲ್ಲದೆ, ಡಲ್ ನೆಸ್‌ಸುಸ್ತನ್ನೂ ದೂರಗೊಳಿಸುತ್ತದೆ. ಗೋಲ್ಡ್ ಕಣಗಳು ಈ ರೀತಿ ಚರ್ಮದಲ್ಲಿ ಆಳವಾಗಿ ವಿಲೀನಗೊಂಡಾಗ, ಅಲ್ಲಿನ ರಕ್ತ ಸಂಚಾರ ಎಷ್ಟೋ ಸುಗಮಗೊಳ್ಳುತ್ತದೆ. ಇದರಿಂದಾಗಿ ನೈಸರ್ಗಿಕ ಕಾಂತಿ ದೀರ್ಘ ಕಾಲದವರೆಗೆ ಉಳಿದುಕೊಳ್ಳುತ್ತದೆ. ಹೀಗೆ ಚರ್ಮ ಟೈಟ್‌ಫರ್ಮ್ ಆಗಿ ಕಂಗೊಳಿಸುತ್ತದೆ. ಈ ಕಾರಣದಿಂದಲೇ, ಇವತ್ತಿಗೂ ವಿಶೇಷ ಸಂದರ್ಭಗಳಲ್ಲಿ ಮಹಿಳೆಯರು ಗೋಲ್ಡ್ ಫೇಸ್‌ ನೀವು ಬಯಸಿ ಆರಿಸಿಕೊಳ್ಳುತ್ತಾರೆ.

ಇದರ ವೈಶಿಷ್ಟ್ಯಗಳು : ಇದರ ಅತಿ ದೊಡ್ಡ ವೈಶಿಷ್ಟ್ಯ ಎಂದರೆ, ಇದು ಎಲ್ಲಾ ವಯಸ್ಸಿನ ಹೆಂಗಸರ ಚರ್ಮಕ್ಕೂ ಒಂದೇ ರೀತಿಯ ಪರಿಣಾಮ ತೋರಿಸುತ್ತದೆ. ಯುವತಿಯರಿಗೆ ಇದು ಇನ್‌ ಸ್ಟೆಂಟ್‌ ಗ್ಲೋ ನೀಡಿದರೆ, ತುಸು ಪ್ರೌಢ ಮಹಿಳೆಯರ ಮುಖದಲ್ಲಿ ಏಜಿಂಗ್‌ ಲಕ್ಷಣ ಕಾಣಿಸಿದ್ದರೆ, ಅಂಥವರಿಗೆ ಇದು ರಿಂಕಲ್ಸ್ ಸ್ಯಾಗಿಂಗ್‌ ಎರಡನ್ನೂ ತಗ್ಗಿಸಿ ತೋರಿಸುವ ಅತ್ಯುತ್ತಮ ಪರಿಣಾಮವಾಗಿದೆ. ಈ ಕಾರಣದಿಂದಲೇ, ಮದುವೆಯಂಥ ತಯಾರಿಗಳಲ್ಲಿ, ದೊಡ್ಡ ಹಬ್ಬದ ಸಂದರ್ಭದಲ್ಲಿ, ಶುಭ ಸಮಾರಂಭಗಳಲ್ಲಿ ಈ ಗೋಲ್ಡ್ ಫೇಶಿಯಲ್ ಅನಿವಾರ್ಯ ಎನಿಸಿದೆ.

ಕೇವಲ ಈ ಫೇಶಿಯಲ್ ಮಾಡಿಸಿಕೊಂಡರಷ್ಟೇ ಸಾಲದು, ಈ ಗ್ಲೋ ಹಾಗೂ ಫ್ರೆಶ್‌ ನೆಸ್‌ ದೀರ್ಘ ಕಾಲ ಉಳಿಯಬೇಕೆಂದರೆ, ಮನೆಯಲ್ಲೂ ಇದರತ್ತ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇದೀಗ ಮಾರುಕಟ್ಟೆಯಲ್ಲಿ ಗೋಲ್ಡ್ ಲೀಫ್‌ ಸ್ಪೆಷಲ್ ಆಯಿಲ್ ‌ಲಭ್ಯ. ಇದರಲ್ಲೂ ಸಹ 24 ಗೋಲ್ಡ್ ಕ್ಯಾರೆಟ್‌ ಡಸ್ಟ್ ಹಾಗೂ ಲೀಫ್‌ ಬಳಸಲಾಗುತ್ತದೆ. ಇದನ್ನು ಬಳಸಿ ನೀವು ಪ್ರತಿದಿನ ಲೈಟಾಗಿ ಕೈಗಳಿಂದ ಮುಖಕ್ಕೆ ಮಸಾಜ್‌ ಮಾಡಿಕೊಂಡರೆ, ಗೋಲ್ಡ್ ಡಸ್ಟ್ ನಿಧಾನವಾಗಿ ಚರ್ಮದಲ್ಲಿ ವಿಲೀನವಾಗುತ್ತದೆ. ಹಾಗೆ ಅದು ಚರ್ಮವನ್ನು ಪೋಷಿಸುತ್ತದೆ. ಪಾರ್ಲರ್‌ ನಲ್ಲಿ ಗೋಲ್ಡ್ ಲೀಫ್‌ ನ್ನು ಚರ್ಮಕ್ಕೆ ಲೇಪಿಸಿದಾಗ, ಮೆಶೀನಿನ ನೆರವಿನಿಂದ, ಡೀಪ್ ಪೆನೆಂಟ್ರೇಶನ್‌ ಆಗಿ, ಇದು ಚರ್ಮದ ಆಳ ತಲುಪುತ್ತದೆ. ಮನೆಯಲ್ಲಿ ರೆಗ್ಯುಲರ್‌ ಆರೈಕೆಗಾಗಿ, ಈ ಆಯಿಲ್ ‌ಎಲ್ಲಕ್ಕಿಂತ ಪರ್ಫೆಕ್ಟ್! ಇದು ಪ್ರತಿದಿನ ನಿಮ್ಮ ಚರ್ಮವನ್ನು ರೀಚಾರ್ಜ್‌ ಮಾಡುತ್ತದೆ, ಹೀಗಾಗಿ ಈ ಫೇಶಿಯಲ್ ನ ಪರಿಣಾಮ ಇತರ ಫೇಶಿಯಲ್ ಗಳಿಗಿಂತ ಎಷ್ಟೋ ಪಟ್ಟು ಹೆಚ್ಚು.

ಲಗ್ಶುರಿ ಟ್ರೀಟ್‌ ಮೆಂಟ್‌ : ಈ ಫೇಶಿಯಲ್ ನ ಜನಪ್ರಿಯತೆಗೆ ಮತ್ತೊಂದು ಕಾರಣವೆಂದರೆ, ಇದರ ಹೋಲಿಸ್ಟಿಕ್‌ ಎಫೆಕ್ಟ್. ಈ ಆರೈಕೆ ಕೇವಲ ನಿಮ್ಮ ಮುಖವನ್ನು ಸುಂದರ ಮಾಡುವುದಷ್ಟೇ ಅಲ್ಲ, ಬದಲಿಗೆ ಸ್ಟ್ರೆಸ್‌, ಸುಸ್ತುಗಳನ್ನೂ ಎಷ್ಟೋ ತಗ್ಗಿಸುತ್ತದೆ. ಮುಖದ ಮೇಲೆ ಗೋಲ್ಡ್ ಲೀಫ್‌ ಇರಿಸಿ, ನಿಧಾನವಾಗಿ ಮೆಶೀನ್‌ ನಿಂದ ಒತ್ತಿದಾಗ, ತಾಂತ್ರಿಕ ತರಂಗಗಳ ಕಾರಣ ಚರ್ಮಕ್ಕೆ ಅದು ಹಿತಾನುಭವ ನೀಡುತ್ತದೆ, ಚರ್ಮ ರಿಲ್ಯಾಕ್ಸ್ ಆಗುತ್ತದೆ. ಹೀಗಾಗಿ ಈ ಥೆರಪಿ ಸ್ಕಿನ್‌ಸೋಲ್ ‌ಎರಡಕ್ಕೂ ಗ್ಲೋ ನೀಡುತ್ತದೆ. ಅಸಲಿ ವಿಷಯ ಅಂದ್ರೆ, ಇಂದಿನ ಈ ಗೋಲ್ಡ್ ಫೇಶಿಯಲ್ ಕೇವಲ ಒಂದು ಲಗ್ಶುರಿ ಟ್ರೀಟ್‌ ಮೆಂಟ್‌ ಮಾತ್ರವಲ್ಲದೆ, ಚರ್ಮಕ್ಕೆ ಅತ್ಯಗತ್ಯ ಆರೈಕೆ ಆಗಿದೆ. ಇಂದಿನ ಮಾಲಿನ್ಯ, ಸ್ಟ್ರೆಸ್‌, ಹೆಚ್ಚುತ್ತಿರುವ ವಯಸ್ಸು ಮುಖದಲ್ಲಿನ ಕಳೆ ಕುಂದಿಸುತ್ತದೆ. ಆದರೆ ಈ ಗೋಲ್ಡ್ ಲೀಫ್‌ ಸ್ಪೆಷಲ್ ಆಯಿಲ್ ‌ನ್ನು ಬಳಸುವುದರಿಂದ, ಅದರ ಪರಿಣಾಮ ತುಂಬಾ ಗಾಢವಾಗಿ, ದೀರ್ಘಾವಧಿಗೆ ಉಳಿಯುತ್ತದೆ.

ಬ್ಯೂಟಿಯ ಅಸಲಿ ಚಾರ್ಮ್ ಮೇಕಪ್‌ ನಿಂದ ಅಲ್ಲ, ಗ್ಲೋಯಿಂಗ್‌ನ್ಯಾಚುರಲ್ ಸ್ಕಿನ್‌ ನಿಂದ ಮೂಡುತ್ತದೆ. ಅದರಲ್ಲೂ ಚರ್ಮದ ಈ ಕಾಂತಿ, ಪರಿಶುದ್ಧ ಗೋಲ್ಡ್ ಲೀಫ್‌ ನಿಂದ ಮೂಡಿದ್ದರೆ, ಅದರ ಆಕರ್ಷಣೆ, ಇತರ ಎಲ್ಲಕ್ಕಿಂತ ಎಷ್ಟೋ ಪಾಲು ಹೆಚ್ಚಾಗಿರುತ್ತದೆ. ಈ ಒಂದು ಮುಖ್ಯ ಕಾರಣದಿಂದಲೇ, ಈ ಫೇಶಿಯಲ್ ಬಲು ಸ್ಪೆಷಲ್ ಎನಿಸಿದೆ. ಟ್ರೆಂಡ್ಸ್ ಹೇಗೇ ಇರಲಿ, ಗೋಲ್ಡ್ ನ ಗ್ಲೋ ಎಂದೂ ಹಳೆಯದಾಗುವುದಿಲ್ಲ. ಇನ್ನೇಕೆ ತಡ? ಹಬ್ಬಗಳಿಗೆ ಅಗತ್ಯವಾಗಿ ಗೋಲ್ಡ್ ಫೇಶಿಯಲ್ ಮಾಡಿಸಿಕೊಳ್ಳಲು ಸಿದ್ಧರಾಗಿ….

ಹ್ಯಾಪಿ ಫೇಶಿಯಲ್!

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ