ನಿಮ್ಮ ಬಳಿಯೂ ಕ್ರೆಡಿಟ್‌ ಕಾರ್ಡ್‌ ಇದ್ದರೆ, ಈ ವಿಷಯ ತಿಳಿದುಕೊಳ್ಳುವುದು ನಿಮಗೆ ಬಲು ಲಾಭಕರ……!

ಹಬ್ಬದ ಸೀಸನ್‌ ಎಂದ ಮೇಲೆ ಎಲ್ಲಾ ಶಾಪಿಂಗ್‌ ಪ್ಲಾಟ್‌ ಫಾರ್ಮ್ಸ್ ಗಳ ಮೂಲಕ ಹೊಸ ಹೊಸ ಸಾಮಗ್ರಿ ಖರೀದಿಸಲು ಆಫರ್‌ ಗಳ ಕೋಡಿ ಹರಿಯುತ್ತವೆ. ಆದರೆ ಇದಕ್ಕೆ ತಕ್ಷಣ ಮರುಳಾಗಬೇಡಿ! ಮಹೇಶನಿಗಾದಂತೆ ನಿಮ್ಮ ಜೇಬಿಗೂ ಇದು ಭಾರಿ ಆಗಿಬಿಡಬಾರದು. 28ರ ಹರೆಯದ ಮಹೇಶ್‌ ಒಬ್ಬ ಪ್ರೊಫೆಶನ್‌. ಹೊಸ ಕೆಲಸ, ಕೈತುಂಬಾ ಸಂಬಳ, ಕನಸುಗಳ ಮಹಾಪೂರ! ಕೆಲಸಕ್ಕೆ ಸೇರಿದ ಕೆಲವೇ ತಿಂಗಳಲ್ಲಿ ಅವನು ಒಂದು ಬ್ರಾಂಡೆಡ್‌ ಲ್ಯಾಪ್‌ ಟಾಪ್‌, ಐಫೋನ್‌, ಸ್ಮಾರ್ಟ್‌ ಟಿವಿ, ವಾಶಿಂಗ್‌ ಮೆಶೀನ್‌…. ಎಲ್ಲಾ ಕೊಂಡುಕೊಂಡ. ಪ್ರತಿ ಸಲದ ಖರೀದಿಯ ನಂತರ ಆತನ ಮೊಬೈಲ್ ‌ಗೆ `ಕನ್ವರ್ಟ್‌ ದಿಸ್‌ ಇನ್‌ ಟು ‘ ಎಂಬ ಮೆಸೇಜ್‌ಬರುತ್ತಿತ್ತು.

`ಆಹಾ…. ಇದಲ್ಲವೇ ಭಾಗ್ಯ!’ ಎಂದುಕೊಂಡು ಅವನು ಪ್ರತಿಯೊದನ್ನೂ EMI ಗೆ ಪರಿವರ್ತಿಸಿಕೊಳ್ಳುತ್ತಿದ್ದ. ದುಬಾರಿ ಉಪಕರಣಗಳೂ ಸಹ ಪ್ರತಿ ತಿಂಗಳು 2-3 ಸಾವಿರ ಪೇ ಮಾಡುವುದರಿಂದ ಸಿಗುತ್ತದೆ, ಎಂದು ಖುಷಿಪಟ್ಟ. ನಿಧಾನವಾಗಿ ಅವನ ಕ್ರೆಡಿಟ್‌ ಕಾರ್ಡಿನಲ್ಲಿ 5-6 ಕಂತುಗಳು ನಡೆಯತೊಡಗಿತು. ಸಂಬಳ ಬಂದ ತಕ್ಷಣವೇ ಮುಕ್ಕಾಲು ಭಾಗ ಹಾಗೂ ಕ್ರೆಡಿಟ್‌ ಕಾರ್ಡ್ ಪಾವತಿಗೇ ಹೋಗಿಬಿಡುತ್ತಿತ್ತು. ಹೀಗೇ ಒಮ್ಮೆ ಅವನಿಗೆ ಕಾರು ಕೊಳ್ಳಬೇಕೆಂಬ ಐಡಿಯಾ ಹೊಳೆಯಿತು. ಆದರೆ ಬ್ಯಾಂಕ್‌ ಇವನ ಲೋನ್‌ ರಿಜೆಕ್ಟ್ ಮಾಡಿತು. ಏಕೆಂದರೆ ಅವನ ಕ್ರೆಡಿಟ್‌ ಯೂಟಿಲೈಸೇಶನ್‌ ಮಿತಿ ಮೀರಿತ್ತು.

ತಾನು ಮಾಡಿದ ತಪ್ಪಾದರೂ ಏನು ಎಂದು ಮಹೇಶ ಹತಾಶನಾದ. `ನಾನು ಸೌಲಭ್ಯ ಪಡೆಯುತ್ತಿದ್ದೆ, ಆದರೂ ನನ್ನ ಆರ್ಥಿಕ ಪರಿಸ್ಥಿತಿ ಇಷ್ಟೇಕೆ ಹದಗೆಟ್ಟಿತು?’

ಇದೇ ಪ್ರಶ್ನೆಯನ್ನು ನಾವೆಲ್ಲರೂ ನಮ್ಮನ್ನು ಕೇಳಲೇಬೇಕು. ಈ ಕ್ರೆಡಿಟ್‌ ಕಾರ್ಡ್‌ ಕಂಪನಿಗಳು ಮತ್ತೆ ಮತ್ತೆ ಮೆಸೇಜ್‌ ನ್ನು ಕಳುಹಿಸುವುದಾದರೂ ಏಕೆ? EMI ನ್ನು ಬಲು `ಸೌಲಭ್ಯಕರ’ ಎಂದು ಬಣ್ಣಿಸುವುದೇಕೆ? ಕುರಿತು ಒತ್ತಾಯ?: ಇಂದಿನ ಲೈಫ್‌ ಸ್ಟೈಲ್ ‌ನಲ್ಲಿ ಕ್ರೆಡಿಟ್‌ ಕಾರ್ಡ್‌ ಕೇವಲ ಪೇಮೆಂಟ್‌ ಸಾಧನ ಮಾತ್ರವಾಗಿರದೆ, ಬ್ಯಾಂಕ್‌/ಫೈನಾನ್ಸ್ ಕಂಪನಿಗಳು ಎಲ್ಲಾ ಗ್ರಾಹಕರಿಂದ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿವೆ. ನೀವು ಆನ್‌ ಲೈನ್‌ ನಲ್ಲಿ ಏನೇ ಖರೀದಿಸಿ, ತಕ್ಷಣ ನಿಮ್ಮ ಮೊಬೈಲ್ ‌ಗೆ ಮೆಸೇಜ್‌ ಬರುತ್ತದೆ :`ಕನ್ವರ್ಟ್‌ ದಿಸ್‌ ಇಂಟು .’ ನೆಟ್‌ ಬ್ಯಾಂಕಿಂಗ್‌ ನಲ್ಲಿ ಪಾಪ್‌ ಅಪ್‌ ಓಪನ್‌ ಆಗುತ್ತದೆ, ಕಾಲ್ ‌ಸೆಂಟರ್‌ ಗಳಿಂದ ಕರೆಗಳ ಸುರಿಮಳೆ.

ಇಲ್ಲಿನ ಪ್ರಮುಖ ಪ್ರಶ್ನೆ ಎಂದರೆ, ಈ ಕಂಪನಿಗಳು ಮತ್ತೆ ಮತ್ತೆ EMI ಇಷ್ಟು ಒತ್ತಾಯ ಹೇರುವುದೇಕೆ? ಅಸಲಿ ಕಾರಣ ಕೇವಲ ಗ್ರಾಹಕರ ಸೌಲಭ್ಯಕ್ಕಾಗಿ ಸೇವೆಗೀವೆ ಅಂತ ಏನಲ್ಲ….. ಇದರ ಹಿಂದೆ ಈ ಕಂಪನಿಗಳ ದೊಡ್ಡ ಬಿಸ್‌ ನೆಸ್‌ ಸೀಕ್ರೆಟ್‌ ಅಡಗಿದೆ. ಇದನ್ನು ಸರಳ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳೋಣ.

ಕಂಪನಿಗಳ ಅತಿ ದೊಡ್ಡ ಬಿಸ್‌ ನೆಸ್‌ ಮಾಡೆಲ್ ‌:  ಅಂದ್ರೆ ಈಕ್ವೇಟೆಡ್‌ ಮಂತ್ಲಿ ಇನ್‌ ಸ್ಟಾಲ್ ಮೆಂಟ್‌. ಇದನ್ನು ಸರಳ ಮಾತುಗಳಲ್ಲಿ ದೊಡ್ಡ ಮೊತ್ತವನ್ನು ಸಣ್ಣ ಸಣ್ಣದಾಗಿ, ಪ್ರತಿ ತಿಂಗಳೂ ಇಂತಿಷ್ಟು ಕಟ್ಟಬೇಕು ಎಂಬುದು. ಕಂಪನಿಗಳು ಇವನ್ನು  `ಸೌಲಭ್ಯ’ ಎನ್ನುವ ಹೆಸರಲ್ಲಿ ಮಾರುತ್ತವೆ, ಆದರೆ ಅಸಲಿಗೆ ಇದು ಗ್ರಾಹಕರಿಂದ ಅವರಿಗೆ ದೊಡ್ಡ ಲಾಭದ ವ್ಯವಹಾರ. ಜೊತೆಗೆ ಬಡ್ಡಿ ಹಾಗೂ ಪ್ರೋಸೆಸಿಂಗ್‌ ಫೀಸ್‌ ಸೇರಿಕೊಳ್ಳುತ್ತದೆ, ಇದರಿಂದ ಆ ಕಂಪನಿಗಳಿಗೆ ದೊಡ್ಡ ಮೊತ್ತದ ಲಾಭ ಸಿಗುತ್ತದೆ.

ಗ್ರಾಹಕರನ್ನು ಹೆಚ್ಚು ಖರ್ಚು ಮಾಡಿಸಲು ಇದೊಂದು ಪ್ರೇರಣೆ : ವಾಶಿಂಗ್‌ ಮೆಶೀನ್‌ ಕೊಳ್ಳಬೇಕು, ಬಲು ಅರ್ಜೆಂಟ್‌. ಆದರೆ ಒಂದೇ ಸಲ 40 ಸಾವಿರ ತೆರುವಷ್ಟು ದುಡ್ಡಿಲ್ಲ ಅಂದುಕೊಳ್ಳಿ. ಅದನ್ನೇ ಹೆಸರಿನಲ್ಲಿ ತಿಂಗಳಿಗೆ ಕೇವಲ 3,500/ ಕಟ್ಟಿದರೆ ಸಾಕು ಎಂದು ಆಮಿಷ ಒಡ್ಡಿದರೆ ಯಾರಿಗೆ ತಾನೇ ಆಸೆ ಕೆರಳದು? ಅಂದ್ರೆ ಮೂಲಕ ಗ್ರಾಹಕರನ್ನು ತಮ್ಮ ಭವಿಷ್ಯದ ಆದಾಯವನ್ನು ಇಂದೇ ಖರ್ಚು ಮಾಡಿಸಲು ಹೇರುವ ಒತ್ತಾಯ. ಇದರಿಂದ ಗ್ರಾಹಕರ ಖರೀದಿ ಜೋರಾಗುತ್ತದೆ ಹಾಗೂ ಕಂಪನಿಗಳ ಟ್ರಾನ್ಸಾಕ್ಷನ್ ವ್ಯಾಲ್ಯೂ ಸಹ.

ಬಡ್ಡಿ ಮತ್ತು ಚಾರ್ಜಸ್‌/ಅಸಲಿ ಗಳಿಕೆ : `ನೋ ಕಾಸ್ಟ್ ‘ ಎಂಬುದನ್ನು ಕೇಳಿದೊಡನೆ ಎಲ್ಲವೂ ಉಚಿತವೇನೋ ಎಂದೆನಿಸಿಬಿಡುತ್ತದೆ. ಆದರೆ ಅಸಲಿ ವಿಷಯ ಅಂದ್ರೆ, ಬಡ್ಡಿಯನ್ನು ಪ್ರಾಡಕ್ಟ್ ನ ಬೆಲೆಯೊಂದಿಗೇ ಸೇರಿಸಿರಲಾಗಿರುತ್ತದೆ. ಸಾಧಾರಣ EMI 12% 18% ವಾರ್ಷಿಕ ಬಡ್ಡಿ ಅನ್ವಯಿಸುತ್ತದೆ. ಇದರ ಮೇಲೆ ಪ್ರೋಸೆಸಿಂಗ್‌ ಫೀಸ್‌, GST ಹಾಗೂ ಲೇಟ್‌ ಪೇಮೆಂಟ್‌ ಚಾರ್ಜಸ್‌ ಸಹ ಅನ್ವಯ. ಯಾರಾದರೂ ಗ್ರಾಹಕರು ಪೇಮೆಂಟ್‌ ಮಿಸ್‌ ಮಾಡಿಕೊಂಡರೆ, ಪೆನಾಲ್ಟಿಗಳಿಂದ ಇಂಥ ಕಂಪನಿಗಳ ಆದಾಯ ದುಪ್ಪಟ್ಟು ಹೆಚ್ಚುತ್ತದೆ.

ಗ್ರಾಹಕರು ದೀರ್ಘಾವಧಿಯವರೆಗೂ ಇಂಥ ಕಂಪನಿಗೆ ಅಂಟಿಕೊಂಡಿರಲು :  ಕೊಂಡ ನಂತರ ಗ್ರಾಹಕರು ಅದರ ಮುಂದಿನ 6,9,12 ತಿಂಗಳವರೆಗೂ ಈ ಕಂಪನಿಯ ಜೊತೆಗೇ ಅಂಟಿಕೊಳ್ಳಬೇಕಾಗುತ್ತದೆ. ಎಲ್ಲಿಯವರೆಗೂ ಕಂತುಗಳು ಪೂರ್ತಿ ಆಗುವುದಿಲ್ಲವೇ, ಗ್ರಾಹಕರು ತಮ್ಮ ಕಾರ್ಡ್‌ ಕ್ಲೋಸ್‌ ಮಾಡುವ ಹಾಗಿಲ್ಲ. ಈ ರೀತಿ ಗ್ರಾಹಕರು ಆ ಕಾರ್ಡ್‌ ನ್ನು ಬಳಸುತ್ತಲೇ ಇರುತ್ತಾರೆ, ಮತ್ತಷ್ಟು ಸಾಲದ ಶೂಲಕ್ಕೆ ಸಿಲುಕುತ್ತಲೇ ಇರುತ್ತಾರೆ. ಇತ್ತ ಕಂಪನಿಗೆ ಸತತ ಲಾಭ!

ಅಂದ್ರೆ ಅಗ್ಗ ಎಂದು ತೋರಿಸುವ ಹುನ್ನಾರ : ಮಾರ್ಕೆಟಿಂಗ್‌ ನವರ ಒಂದು ದೊಡ್ಡ ಟ್ರಿಕ್‌ ಅಂದ್ರೆ, ದೊಡ್ಡ ಮೊತ್ತವನ್ನು ಸಣ್ಣ ಕಂತುಗಳಾಗಿ ವಿಂಗಡಿಸಿ, ಆ ಮೂಲಕ ಹೆಚ್ಚಿನ ಬಡ್ಡಿ ಸೆಳೆಯುವುದು. 50 ಸಾವಿರ ಬೆಲೆ ಎಂದೊಡನೆ ಗ್ರಾಹಕರು ಹೆದರುತ್ತಾರೆ. ಅದರ ಬದಲು ತಿಂಗಳಿಗೆ 4500/ ಮಾತ್ರ ಕಟ್ಟಿದರೆ ಸಾಕು ಎಂದು ಸಂಭ್ರಮಿಸುತ್ತಾರೆ. ಈ ಚಪಲಕ್ಕೆ ಆಸೆಬಿದ್ದು, ಜನ ನಾನಾ ಬಗೆಯ EMI ಶರಣಾಗುತ್ತಾರೆ, 2-3 ಪಟ್ಟು ಹೆಚ್ಚು ಬಡ್ಡಿ ದರ ಕಟ್ಟುತ್ತಾ ಸಂಕಟ ಪಡುತ್ತಾರೆ. ಕ್ರಮೇಣ ಸಾಲದ ಹೊರೆ ಹೆಚ್ಚುತ್ತಾ ಹೋಗುತ್ತದೆ.

ಮರ್ಚೆಂಟ್‌ ಹಾಗೂ ಕಂಪನಿಯ ಪಾರ್ಟ್‌ ನರ್‌ ಶಿಪ್‌ : ಅಮೆಝಾನ್‌, ಫ್ಲಿಪ್‌ ಕಾರ್ಟ್‌ ಮುಂತಾದವು ನೀಡುವುದಾದರೂ ಏಕೆ? ಏಕೆಂದರೆ ಇದರಿಂದ ಮರ್ಚೆಂಟ್‌ ವ್ಯಾಪಾರ ಸಲೀಸಾಗಿ ನಡೆಯುತ್ತದೆ, ಕಂಪನಿಗೆ ಧಾರಾಳ ಬಡ್ಡಿ, ಫೀಸ್‌ ದೊರಕುತ್ತದೆ. ಇದು ಇವರಿಬ್ಬರಿಗೂ ಒಂದು ಬಗೆಯಲ್ಲಿ ವಿನ್‌ ವಿನ್‌ ಮಾಡೆಲ್‌, ಇದಕ್ಕೆ ಮೂಕಬಲಿ ಮಾತ್ರ ಗ್ರಾಹಕ!

ರಿವಾಲ್ವಿಂಗ್‌ ಕ್ರೆಡಿಟ್‌ ಅಭ್ಯಾಸ ರೂಢಿ : ಕ್ರೆಡಿಟ್‌ ಕಾರ್ಡ್‌ನ ಡೇಂಜರಸ್‌ ಘಟ್ಟ ಎಂದರೆ, ಇದು ಗ್ರಾಹಕರನ್ನು `ರಿವಾಲ್ವಿಂಗ್‌ ಕ್ರೆಡಿಟ್’ನ ಅಭ್ಯಾಸ ರೂಢಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ಗ್ರಾಹಕರು ಪೂರ್ತಿ ಕಂತು ಕಟ್ಟಲಾಗದು, ಮಿನಿಮವ್‌ ಅಮೌಂಟ್‌ಕಟ್ಟುತ್ತಾರಷ್ಟೆ. ಬಾಕಿ ಹಣ ಕ್ಯಾರಿ ಫಾರ್ವರ್ಡ್ ಆಗುತ್ತದೆ, ಅದಕ್ಕೆ ಭಾರಿ ಬಡ್ಡಿಯೂ ಕಟ್ಟಬೇಕು. ಈ ಅಭ್ಯಾಸವನ್ನು ಇನ್ನಷ್ಟು ಗಾಢಗೊಳಿಸುತ್ತದೆ.

ರಿಸ್ಕ್ ತಗ್ಗಿಸುವ ಕಂಪನಿಗಳು : ದೊಡ್ಡ ಮೊತ್ತವನ್ನು ಕಂತುಗಳಲ್ಲಿ ವಿಂಗಡಿಸುವುದರಿಂದ, ಬೈ ಡೀ ಫ್ಲಾಟ್‌ ರಿಸ್ಕ್ ತಗ್ಗುತ್ತದೆ. ಗ್ರಾಹಕರು ಅಕಸ್ಮಾತ್‌ 12 ತಿಂಗಳು ಕಂತು ಕಟ್ಟಾಗದಿದ್ದರೆ, ಲೇಟ್‌ ಫೀಸ್‌, ಬಡ್ಡಿ, ಪೆನಾಲ್ಟಿಗಳಿಂದ ಕಂಪನಿಗೆ ಹೆಚ್ಚಿನ ಲಾಭ. ಅಂದ್ರೆ ರಿಸ್ಕ್ ಏನೋ ಕಡಿಮೆ ಆಯ್ತು, ಭಾರಿ ಬಡ್ಡಿ ತೆರಬೇಕಾಯ್ತು!

ಡೇಟಾ ಕಲೆಕ್ಷನ್‌ಮಾರ್ಕೆಟಿಂಗ್‌ : ನೀವು ತೆಗೆದುಕೊಂಡ ಮೇಲೆ, ನಿಮ್ಮ ಖರ್ಚಿನ ಪೂರ್ತಿ ಡೇಟಾ ಆಯಾ ಕಂಪನಿಗೆ ಹೋಗುತ್ತದೆ. ನೀವು ಏನು ಖರೀದಿಸಿದಿರಿ, ಎಷ್ಟು ಖರೀದಿಸಿದಿರಿ, ಸಕಾಲಕ್ಕೆ ಪೇಮೆಂಟ್‌ ಆಯ್ತೋ ಇಲ್ಲವೋ, ಎಲ್ಲವೂ ರೆಕಾರ್ಡ್‌ ಆಗಿರುತ್ತದೆ. ಈ ಡೇಟಾ ಆಧಾರದಿಂದ ನಿಮಗೆ ಹೊಸ ಆಫರ್‌, ಲೋನ್‌ ಹಾಗೂ ಪ್ರಾಡಕ್ಟ್ಸ ನ್ನು ಟಾರ್ಗೆಟ್‌ ಮಾಡಿಕೊಳ್ಳುತ್ತಾರೆ.

`ಲಗ್ಶುರಿ ಲೈಫ್‌ ಸ್ಟೈಲ್‌’ ನಿಮ್ಮ ಗುರಿಯಾದಾಗ : ಗ್ರಾಹಕರು ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಲಿ ಎಂದೇ ಕಂಪನಿಗಳು ಬಯಸುತ್ತವೆ. ಕಂತು ನೋಡಿ ಜನ ತಕ್ಷಣ ಲಗ್ಶುರಿ ಲೈಫ್‌ ಸ್ಟೈಲ್ ‌ತಮ್ಮದಾಗಿಸಿಕೊಳ್ಳಲು ಧಾವಿಸುತ್ತಾರೆ. ಹಿಂದೆಲ್ಲ ಇಡೀ ವರ್ಷ ಮಾಡಿದ ಉಳಿತಾಯದಿಂದ ಮರುವರ್ಷ ಇಂಥ ದೊಡ್ಡ ಪ್ರಾಡಕ್ಟ್ ಕೊಳ್ಳುತ್ತಿದ್ದರು. ಇಂದು EMI ದೆಸೆಯಿಂದ 2-3 ಪ್ರಾಡಕ್ಟ್ಸ್ ನ್ನು ಒಟ್ಟಿಗೇ ಕೊಳ್ಳುವಂತಾಗಿದೆ! ಈ ವಿಧಾನದಿಂದ ಗ್ರಾಹಕರು ಸದಾ ಸರ್ವದಾ ಸಾಲಗಾರರಾಗಿಯೇ ಉಳಿಯುವಂತೆ ಈ ಕಂಪನಿಗಳು ಮಾಡುತ್ತವೆ.

ಗ್ರಾಹಕರು ಕಲಿಯಬೇಕಾದ ಪಾಠ :  ಪ್ರತಿ ಸಲ ಹಾನಿಕಾರಕ ಅಂತೇನಲ್ಲ. ಎಮರ್ಜೆನ್ಸಿ ಸಂದರ್ಭ, ಅತ್ಯಗತ್ಯದ ಖರ್ಚು ಎದುರಾದರೆ, ಆಗ EMIನ ಮೊರೆ ಹೋಗಬಹುದು. ಆದರೆ ಇದನ್ನು ಬಹು ಎಚ್ಚರಿಕೆಯಿಂದ ಬಳಸಬೇಕು!

– ಮೋನಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ