ನಿಮ್ಮ ಬಳಿಯೂ ಕ್ರೆಡಿಟ್‌ ಕಾರ್ಡ್‌ ಇದ್ದರೆ, ಈ ವಿಷಯ ತಿಳಿದುಕೊಳ್ಳುವುದು ನಿಮಗೆ ಬಲು ಲಾಭಕರ......!

ಹಬ್ಬದ ಸೀಸನ್‌ ಎಂದ ಮೇಲೆ ಎಲ್ಲಾ ಶಾಪಿಂಗ್‌ ಪ್ಲಾಟ್‌ ಫಾರ್ಮ್ಸ್ ಗಳ ಮೂಲಕ ಹೊಸ ಹೊಸ ಸಾಮಗ್ರಿ ಖರೀದಿಸಲು ಆಫರ್‌ ಗಳ ಕೋಡಿ ಹರಿಯುತ್ತವೆ. ಆದರೆ ಇದಕ್ಕೆ ತಕ್ಷಣ ಮರುಳಾಗಬೇಡಿ! ಮಹೇಶನಿಗಾದಂತೆ ನಿಮ್ಮ ಜೇಬಿಗೂ ಇದು ಭಾರಿ ಆಗಿಬಿಡಬಾರದು. 28ರ ಹರೆಯದ ಮಹೇಶ್‌ ಒಬ್ಬ ಪ್ರೊಫೆಶನ್‌. ಹೊಸ ಕೆಲಸ, ಕೈತುಂಬಾ ಸಂಬಳ, ಕನಸುಗಳ ಮಹಾಪೂರ! ಕೆಲಸಕ್ಕೆ ಸೇರಿದ ಕೆಲವೇ ತಿಂಗಳಲ್ಲಿ ಅವನು ಒಂದು ಬ್ರಾಂಡೆಡ್‌ ಲ್ಯಾಪ್‌ ಟಾಪ್‌, ಐಫೋನ್‌, ಸ್ಮಾರ್ಟ್‌ ಟಿವಿ, ವಾಶಿಂಗ್‌ ಮೆಶೀನ್‌.... ಎಲ್ಲಾ ಕೊಂಡುಕೊಂಡ. ಪ್ರತಿ ಸಲದ ಖರೀದಿಯ ನಂತರ ಆತನ ಮೊಬೈಲ್ ‌ಗೆ `ಕನ್ವರ್ಟ್‌ ದಿಸ್‌ ಇನ್‌ ಟು ' ಎಂಬ ಮೆಸೇಜ್‌ಬರುತ್ತಿತ್ತು.

`ಆಹಾ.... ಇದಲ್ಲವೇ ಭಾಗ್ಯ!' ಎಂದುಕೊಂಡು ಅವನು ಪ್ರತಿಯೊದನ್ನೂ EMI ಗೆ ಪರಿವರ್ತಿಸಿಕೊಳ್ಳುತ್ತಿದ್ದ. ದುಬಾರಿ ಉಪಕರಣಗಳೂ ಸಹ ಪ್ರತಿ ತಿಂಗಳು 2-3 ಸಾವಿರ ಪೇ ಮಾಡುವುದರಿಂದ ಸಿಗುತ್ತದೆ, ಎಂದು ಖುಷಿಪಟ್ಟ. ನಿಧಾನವಾಗಿ ಅವನ ಕ್ರೆಡಿಟ್‌ ಕಾರ್ಡಿನಲ್ಲಿ 5-6 ಕಂತುಗಳು ನಡೆಯತೊಡಗಿತು. ಸಂಬಳ ಬಂದ ತಕ್ಷಣವೇ ಮುಕ್ಕಾಲು ಭಾಗ ಹಾಗೂ ಕ್ರೆಡಿಟ್‌ ಕಾರ್ಡ್ ಪಾವತಿಗೇ ಹೋಗಿಬಿಡುತ್ತಿತ್ತು. ಹೀಗೇ ಒಮ್ಮೆ ಅವನಿಗೆ ಕಾರು ಕೊಳ್ಳಬೇಕೆಂಬ ಐಡಿಯಾ ಹೊಳೆಯಿತು. ಆದರೆ ಬ್ಯಾಂಕ್‌ ಇವನ ಲೋನ್‌ ರಿಜೆಕ್ಟ್ ಮಾಡಿತು. ಏಕೆಂದರೆ ಅವನ ಕ್ರೆಡಿಟ್‌ ಯೂಟಿಲೈಸೇಶನ್‌ ಮಿತಿ ಮೀರಿತ್ತು.

ತಾನು ಮಾಡಿದ ತಪ್ಪಾದರೂ ಏನು ಎಂದು ಮಹೇಶ ಹತಾಶನಾದ. `ನಾನು ಸೌಲಭ್ಯ ಪಡೆಯುತ್ತಿದ್ದೆ, ಆದರೂ ನನ್ನ ಆರ್ಥಿಕ ಪರಿಸ್ಥಿತಿ ಇಷ್ಟೇಕೆ ಹದಗೆಟ್ಟಿತು?'

ಇದೇ ಪ್ರಶ್ನೆಯನ್ನು ನಾವೆಲ್ಲರೂ ನಮ್ಮನ್ನು ಕೇಳಲೇಬೇಕು. ಈ ಕ್ರೆಡಿಟ್‌ ಕಾರ್ಡ್‌ ಕಂಪನಿಗಳು ಮತ್ತೆ ಮತ್ತೆ ಮೆಸೇಜ್‌ ನ್ನು ಕಳುಹಿಸುವುದಾದರೂ ಏಕೆ? EMI ನ್ನು ಬಲು `ಸೌಲಭ್ಯಕರ' ಎಂದು ಬಣ್ಣಿಸುವುದೇಕೆ? ಕುರಿತು ಒತ್ತಾಯ?: ಇಂದಿನ ಲೈಫ್‌ ಸ್ಟೈಲ್ ‌ನಲ್ಲಿ ಕ್ರೆಡಿಟ್‌ ಕಾರ್ಡ್‌ ಕೇವಲ ಪೇಮೆಂಟ್‌ ಸಾಧನ ಮಾತ್ರವಾಗಿರದೆ, ಬ್ಯಾಂಕ್‌/ಫೈನಾನ್ಸ್ ಕಂಪನಿಗಳು ಎಲ್ಲಾ ಗ್ರಾಹಕರಿಂದ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿವೆ. ನೀವು ಆನ್‌ ಲೈನ್‌ ನಲ್ಲಿ ಏನೇ ಖರೀದಿಸಿ, ತಕ್ಷಣ ನಿಮ್ಮ ಮೊಬೈಲ್ ‌ಗೆ ಮೆಸೇಜ್‌ ಬರುತ್ತದೆ :`ಕನ್ವರ್ಟ್‌ ದಿಸ್‌ ಇಂಟು .' ನೆಟ್‌ ಬ್ಯಾಂಕಿಂಗ್‌ ನಲ್ಲಿ ಪಾಪ್‌ ಅಪ್‌ ಓಪನ್‌ ಆಗುತ್ತದೆ, ಕಾಲ್ ‌ಸೆಂಟರ್‌ ಗಳಿಂದ ಕರೆಗಳ ಸುರಿಮಳೆ.

ಇಲ್ಲಿನ ಪ್ರಮುಖ ಪ್ರಶ್ನೆ ಎಂದರೆ, ಈ ಕಂಪನಿಗಳು ಮತ್ತೆ ಮತ್ತೆ EMI ಇಷ್ಟು ಒತ್ತಾಯ ಹೇರುವುದೇಕೆ? ಅಸಲಿ ಕಾರಣ ಕೇವಲ ಗ್ರಾಹಕರ ಸೌಲಭ್ಯಕ್ಕಾಗಿ ಸೇವೆಗೀವೆ ಅಂತ ಏನಲ್ಲ..... ಇದರ ಹಿಂದೆ ಈ ಕಂಪನಿಗಳ ದೊಡ್ಡ ಬಿಸ್‌ ನೆಸ್‌ ಸೀಕ್ರೆಟ್‌ ಅಡಗಿದೆ. ಇದನ್ನು ಸರಳ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳೋಣ.

ಕಂಪನಿಗಳ ಅತಿ ದೊಡ್ಡ ಬಿಸ್‌ ನೆಸ್‌ ಮಾಡೆಲ್ ‌:  ಅಂದ್ರೆ ಈಕ್ವೇಟೆಡ್‌ ಮಂತ್ಲಿ ಇನ್‌ ಸ್ಟಾಲ್ ಮೆಂಟ್‌. ಇದನ್ನು ಸರಳ ಮಾತುಗಳಲ್ಲಿ ದೊಡ್ಡ ಮೊತ್ತವನ್ನು ಸಣ್ಣ ಸಣ್ಣದಾಗಿ, ಪ್ರತಿ ತಿಂಗಳೂ ಇಂತಿಷ್ಟು ಕಟ್ಟಬೇಕು ಎಂಬುದು. ಕಂಪನಿಗಳು ಇವನ್ನು  `ಸೌಲಭ್ಯ' ಎನ್ನುವ ಹೆಸರಲ್ಲಿ ಮಾರುತ್ತವೆ, ಆದರೆ ಅಸಲಿಗೆ ಇದು ಗ್ರಾಹಕರಿಂದ ಅವರಿಗೆ ದೊಡ್ಡ ಲಾಭದ ವ್ಯವಹಾರ. ಜೊತೆಗೆ ಬಡ್ಡಿ ಹಾಗೂ ಪ್ರೋಸೆಸಿಂಗ್‌ ಫೀಸ್‌ ಸೇರಿಕೊಳ್ಳುತ್ತದೆ, ಇದರಿಂದ ಆ ಕಂಪನಿಗಳಿಗೆ ದೊಡ್ಡ ಮೊತ್ತದ ಲಾಭ ಸಿಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ