- ರಾಘವೇಂದ್ರ ಅಡಿಗ ಎಚ್ಚೆನ್.

‘ದಿ ವಿಲನ್’ ಚಿತ್ರದ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಮತ್ತೆ ಒಂದಾಗಿದ್ದಾರೆ. ಇಂದು ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ, ಈ ಹೊಸ ಚಿತ್ರಕ್ಕೆ 'ದಾದಾ ಆನ್ ಹಾಲಿಡೇಸ್' ಎಂದು ಹೆಸರಿಡಲಾಗಿದೆ. ಟೈಟಲ್​​ ಪೋಸ್ಟರ್​​ನಲ್ಲಿ ಸುದೀಪ್ ಅವರು ಲುಂಗಿ ಕಟ್ಟಿ, ಅದಕ್ಕೊಂದು ದಪ್ಪ ಬೆಲ್ಟು ಕಟ್ಟಿ, ಬಣ್ಣ ಬಣ್ಣದ ಶರ್ಟು ಧರಿಸಿ, ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಥೇಟ್ ಹಳೆಯ ಕಾಲದ ರೌಡಿ ರೀತಿ ಕಾಣುತ್ತಿದ್ದಾರೆ. ಪೋಸ್ಟರ್​​ನಲ್ಲಿ ನಾಯಿ ಸಹ ಒಂದಿದೆ. ಜೊತೆಗೆ ಒಂದು ಬೋರ್ಡ್​​ ಸಹ ಇದ್ದು, ಬೋರ್ಡ್​​ ಮೇಲೆ ದಾದಾನಿಗೆ ಕೆಲವು ನಿಯಮಗಳನ್ನು ಸಹ ಬರೆಯಲಾಗಿದೆ.

ಅಜ್ಜಿಯನ್ನು ಗೌರವಿಸಬೇಕು’, ‘ಯಾವುದೇ ಅಪರಾಧ ಮಾಡುವಂತಿಲ್ಲ’, ‘ಸಂಜೆ 7 ಗಂಟೆಗೆ ಮನೆಗೆ ಬರಬೇಕು’ ಮತ್ತು ‘ಕುಟುಂಬವೇ ಮೊದಲು’ ಎಂಬ ನಿಯಮಗಳು ಆ ಬೋರ್ಡ್​​ನಲ್ಲಿವೆ. ಒಟ್ಟಾರೆ ಈ ಪೋಸ್ಟರ್ ನೋಡಿದರೆ ಇದೊಂದು ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ರೀತಿ ಕಾಣುತ್ತಿದೆ. ಹಳೆಯ ರೌಡಿಯೊಬ್ಬ ಎಲ್ಲವನ್ನೂ ಬಿಟ್ಟು ಒಳ್ಳೆಯತನಕ್ಕೆ ಒಗ್ಗಿಕೊಳ್ಳುವ ಪ್ರಯತ್ನದಲ್ಲಿರುವ ಕತೆ ಇದರಲ್ಲಿರುವಂತೆ ಕಾಣುತ್ತಿದೆ.

ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕ ಪ್ರೇಮ್, ಪ್ರತಿಯೊಂದು ಚಲನಚಿತ್ರವೂ ಒಂದು ಹೊಸ ಪಯಣ. ನಿಮ್ಮ ಅಪಾರ ಪ್ರೀತಿ, ಬೆಂಬಲ ಮತ್ತು ಆಶೀರ್ವಾದದೊಂದಿಗೆ, ಕಿಚ್ಚ ಸುದೀಪ್ ಅವರೊಂದಿಗೆ ಕೈಗೊಂಡಿರುವ ನನ್ನ ಮುಂದಿನ ಚಲನಚಿತ್ರ ಪಯಣವನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಟೈಟಲ್​ ಟೀಸರ್ ಸಹ ರಿಲೀಸ್ ಆಗಿದ್ದು, ಟೀಸರ್​​ನ ಆರಂಭದಲ್ಲಿ ಪೊಲೀಸರು ನಿರ್ದೇಶಕ ಪ್ರೇಮ್ ಅನ್ನು ಎತ್ತಿಕೊಂಡು ಬಂದಿರುತ್ತಾರೆ. ಅಲ್ಲಿ ಪ್ರೇಮ್ ತಮ್ಮ ಹೊಸ ಸಿನಿಮಾ ಮತ್ತು ಹೀರೋ ಬಗ್ಗೆ ಇಂಟ್ರೊಡಕ್ಷನ್ ಕೊಡುತ್ತಾರೆ. ಅದಾದ ಬಳಿಕ ಸುದೀಪ್ ಅವರು ಪೊಲೀಸ್ ಠಾಣೆಗೆ ಅದೇ ತಮ್ಮ ರೌಡಿ ವೇಷದಲ್ಲಿ ಬಂದು ಪಾಸ್​​ಪೋರ್ಟ್ ಪಡೆದುಕೊಳ್ಳುತ್ತಾರೆ. ಜೊತೆಗೆ ಒಂದು ಸೂಟ್​​​ಕೇಸ್ ಮೇಲೆ ಕೂತು ಖುಷಿಯಾಗಿ ಹೊರಡುತ್ತಾರೆ. ಟೀಸರ್ ಸಹ ಟೈಟಲ್ ಪೋಸ್ಟರ್ ರೀತಿಯೇ ಮಜವಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡ ‘ಮಾರ್ಕ್’ ಸಿನಿಮಾದ ಬಳಿಕ ಸುದೀಪ್ ‘ಬಿಲ್ಲ ರಂಗ ಭಾಷಾ’ ಚಿತ್ರದ ಬಹುತೇಕ ಕೆಲಸಗಳನ್ನು ಮುಗಿಸಿದ್ದಾರೆ. ದೇವರಾಯ’ ಹಾಗೂ ತಮಿಳು ನಿರ್ದೇಶಕ ಚೇರನ್ ಅವರ ಸಿನಿಮಾ ಸೇರಿದಂತೆ ಹಲವು ಯೋಜನೆಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ