ಕರ್ನಾಟಕ ಸರ್ಕಾರದ ‘ಮುಖ್ಯಮಂತ್ರಿಗಳ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ’ ಅಡಿಯಲ್ಲಿ ಉನ್ನತ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆಯು ವೃತ್ತಿಪರ ಕೋರ್ಸ್ಗಳ (NEET, JEE, KCET) ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಉಚಿತ ಆನ್ಲೈನ್ ತರಬೇತಿ ನೀಡುತ್ತಿದೆ. ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಡಿಜಿಟಲ್ ಕಲಿಕಾ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶ.
ಲಭ್ಯವಿರುವ ಪರೀಕ್ಷೆಗಳು
NEET: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ.
JEE (Mains & Advanced): ಐಐಟಿ (IIT), ಎನ್ಐಟಿ (NIT) ಮತ್ತು ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳ ಪ್ರವೇಶಕ್ಕಾಗಿ.
KCET: ಕರ್ನಾಟಕದ ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಮತ್ತು ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ.
ತರಬೇತಿಯ ಪ್ರಮುಖ ಸೌಲಭ್ಯಗಳು
ಪರಿಣಿತ ಉಪನ್ಯಾಸಕರಿಂದ ಲೈವ್ ಆನ್ಲೈನ್ ತರಗತಿಗಳು ಹಾಗೂ ಯಾವುದೇ ಸಮಯದಲ್ಲಿ ವೀಕ್ಷಿಸಬಹುದಾದ ರೆಕಾರ್ಡೆಡ್ ವಿಡಿಯೋ ಪಾಠಗಳು ಲಭ್ಯವಿರುತ್ತವೆ.
ಪಠ್ಯಕ್ರಮಕ್ಕೆ ಅನುಗುಣವಾದ ಡಿಜಿಟಲ್ ನೋಟ್ಸ್, ಪ್ರಶ್ನೆ ಕೋಶ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ ಮತ್ತು ನಿಯಮಿತ ಅಣಕು ಪರೀಕ್ಷೆಗಳನ್ನು ಒದಗಿಸಲಾಗುತ್ತದೆ.
ವಿದ್ಯಾರ್ಥಿಗಳ ಪಠ್ಯಕ್ಕೆ ಸಂಬಂಧಿಸಿದ ಸಂದೇಹಗಳನ್ನು ಬಗೆಹರಿಸಲು ವಿಶೇಷ ಮಾರ್ಗದರ್ಶನದ ವ್ಯವಸ್ಥೆ ಇರುತ್ತದೆ.
ಈ ಪರೀಕ್ಷೆಗಳಿಗೆ ಆನ್ ಲೈನ್ ನಲ್ಲಿ ಉಚಿತ ತರಬೇತಿ ಪಡೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳು ನೋಂದಣಿಗಾಗಿ ಸೇವಾ ಒನ್: https://sevasindhu.karnataka.gov.in/Sevasindhu/English ನಲ್ಲಿ ಅರ್ಜಿ ಸಲ್ಲಿಸಬಹುದು. ಜೊತೆಗೆ, ಅರ್ಜಿ ಸಲ್ಲಿಸುವ ಸಂಬಂಧ ಮಾಹಿತಿಗಾಗಿ ಸೇವಾ ಒನ್ ಸಹಾಯವಾಣಿ: 080-24410574 ಯನ್ನು ಸಂಪರ್ಕಿಸಬಹುದು.





