ಆಹಾರದ ರುಚಿ ಹೆಚ್ಚಿಸುವ ಮಸಾಲೆ ಪದಾರ್ಥಗಳು ಆರೋಗ್ಯ ರಕ್ಷಣೆ ಹೇಗೆ ಮಾಡುತ್ತವೆ ಎನ್ನುವುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ…….
ಅಂದಹಾಗೆ ಮಸಾಲೆಗಳು ಆಹಾರದ ರುಚಿ ಹೆಚ್ಚಿಸಲು ಬಳಸಲ್ಪಡುತ್ತವೆ. ಆದರೆ ಭಾರತದಲ್ಲಿ ಮಸಾಲೆ ಪದಾರ್ಥಗಳು ಔಷಧಿಗಳ ರೂಪದಲ್ಲಿಯೂ ಉಪಯೋಗಿಸಲ್ಪಡುತ್ತವೆ. ಕರಿಮೆಣಸು, ಜಾಯಿಕಾಯಿ, ಅರಿಶಿನ, ಓಂಕಾಳು (ಅಜವಾನ), ಜೀರಿಗೆ, ಲವಂಗ, ಚಕ್ಕೆ ಇವನ್ನೆಲ್ಲ ಔಷಧಿಗಳ ರೂಪದಲ್ಲಿ ಬಳಸುವುದು ಸಾಮಾನ್ಯ ಸಂಗತಿ. ಕೆಲ ಮಸಾಲೆಗಳನ್ನು ಪುಡಿ ಮಾಡಿ ಬಳಸುತ್ತೇವೆ. ಇನ್ನೂ ಕೆಲವು ಮಸಾಲೆಗಳನ್ನು ಅಡುಗೆಯಲ್ಲಿ ಹಾಗೆಯೇ ಬಳಸುತ್ತೇವೆ. ಮಸಾಲೆ ಪದಾರ್ಥಗಳಲ್ಲಿರುವ ಆರೋಗ್ಯದ ಗುಣಗಳ ಬಗ್ಗೆ ತಿಳಿದುಕೊಳ್ಳಿ.
- ಚಕ್ಕೆಶತಶತಮಾನಗಳಿಂದ ಇದರ ಸುವಾಸನೆಯ ಕಾರಣದಿಂದಷ್ಟೇ ಇದನ್ನು ಅಡುಗೆಯಲ್ಲಿ ಬಳಸಲಾಗುತ್ತಿಲ್ಲ, ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಗುಣದಿಂದಾಗಿ ಇದನ್ನು ಅಡುಗೆಯಲ್ಲಿ ಉಪಯೋಗಿಸಲಾಗುತ್ತಿದೆ. ಈ ಆ್ಯಂಟಿ ಆಕ್ಸಿಡೆಂಟ್ ಫ್ರೀರ್ಯಾಡಿಕ್ಸ್ ಜೊತೆಗೆ ಹೋರಾಡುವ ಸಾಮರ್ಥ್ಯ ಹೊಂದಿರುವ ಕಾರಣದಿಂದ ಕ್ಯಾನ್ಸರ್ ಮತ್ತು ಆರ್ಥ್ರೈಟಿಸ್ನಿಂದ ರಕ್ಷಿಸುವುದರ ಜೊತೆಗೆ ನಮ್ಮನ್ನು ಫಿಟ್ ಆಗಿಡಲು ನೆರವಾಗುತ್ತದೆ.
ಫಿಟ್ ಆಗಿರಲು ಸಹಾಯಕ : ಚಕ್ಕೆ ಹೈ ಫ್ಯಾಟ್ ಡಯೆಟ್ನ ಪರಿಣಾಮ ಕಡಿಮೆಗೊಳಿಸುತ್ತದೆ. ಅದರಿಂದ ನೀವು ತೂಕ ನಿಯಂತ್ರಿಸಲು ಸಾಧ್ಯವಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಚಕ್ಕೆಯನ್ನು ದೈನಂದಿನ ರೂಪದಲ್ಲಿ ಬಳಸುವುದರಿಂದ ದೇಹದಲ್ಲಿ ಫ್ಯಾಟ್ ಮಾಲಿಕ್ಯ್ಸೂ್ ಸಂಖ್ಯೆ ಕಡಿಮೆಯಾಗುತ್ತದೆ.
ಕಲೆಮುಕ್ತ ತ್ವಚೆಗೆ : ಮುಖದ ಮೇಲೆ ಕಲೆಗಳು ಯಾರಿಗೆ ತಾನೆ ಇಷ್ಟವಾಗುತ್ತವೆ? ಅದು ಕೇವಲ ಸೌಂದರ್ಯಕ್ಕಷ್ಟೇ ಕುಂದು ತರುವುದಿಲ್ಲ. ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಚಕ್ಕೆಯಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ ಗುಣ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ.
ಕೂದಲು ಬೆಳೆಯಲು ಸಹಾಯಕ?: ಪೌಷ್ಟಿಕ ಆಹಾರ ಸೇವಿಸದಿರುವ ಕಾರಣದಿಂದ ಕೂದಲುದುರುವ ಸಮಸ್ಯೆ ಗೋಚರಿಸುತ್ತದೆ. ಇಂತಹ ಸ್ಥಿತಿಯಲ್ಲಿ ಚಕ್ಕೆ ನೆತ್ತಿಯಲ್ಲಿರುವ ರಕ್ತ ಪ್ರವಾಹವನ್ನು ಹೆಚ್ಚಿಸಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
- ಲವಂಗ : ಯುಎಸ್ಡಿಎ ನ್ಯಾಷನಲ್ ನ್ಯೂಟ್ರಿಯೆಂಟ್ ಡೇಟಾಬೇಸ್ನ ಪ್ರಕಾರ, ಲವಂಗದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ವಿಟಮಿನ್ಸ್ ಹಾಗೂ ನಾರಿನಂಶ ಹೇರಳಾಗಿರುತ್ತವೆ. ಅದು ಆರೋಗ್ಯಕ್ಕೆ ಬಹಳ ಉಪಯುಕ್ತ. ಲವಂಗದಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯ್ ಪ್ರಾಪರ್ಟಿ ಪಚನ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ಮುಖದ ಹೊಳಪನ್ನು ಕಾಪಾಡುವ ಕೆಲಸ ಮಾಡುತ್ತದೆ.
ಹಲ್ಲು ನೋವಿನಿಂದ ಮುಕ್ತಿ : ಲವಂಗ ಕೇವಲ ಹಲ್ಲು ನೋವಿನಿಂದಷ್ಟೇ ಮುಕ್ತಿ ಕೊಡುವುದಿಲ್ಲ. ಅದು ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ.
ಕಲೆರಹಿತ ತ್ವಚೆ : ದಿನ ಲವಂಗ ಸೇವನೆಯಿಂದ ರಕ್ತ ಶುದ್ಧವಾಗುತ್ತದೆ. ದೇಹದ ಕಲ್ಮಶಗಳು ಹೊರಹೋಗಿ ನಿಮ್ಮ ತ್ವಚೆ ಮೃದು ಹಾಗೂ ಕಲೆರಹಿತ ಆಗುತ್ತದೆ.
ಏಜಿಂಗ್ ತಡೆ : ಏಜಿಂಗ್ನಲ್ಲಿ ತ್ವಚೆಯ ಜೀವಕೋಶಗಳು ತಮ್ಮ ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಅದರಿಂದ ಮುಖದಲ್ಲಿ ನೆರಿಗೆಗಳು ಕಂಡುಬರುತ್ತವೆ. ಲವಂಗದಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶವಿರುವುದರಿಂದ ಅದು ನೆರಿಗೆಗಳಾಗುವುದನ್ನು ತಡೆದು ನೀವು ಹೆಚ್ಚು ವರ್ಷಗಳ ಕಾಲ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಸೋಂಕಿಗೀಡಾಗದಂತೆ ರಕ್ಷಣೆ : ಲವಂಗದಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಅಲರ್ಜಿಕ್, ಆ್ಯಂಟಿಸೆಪ್ಟಿಕ್ ಗುಣಗಳಿರುವುದರಿಂದ ಅದು ಚರ್ಮ ಸೋಂಕಿಗೀಡಾಗದಂತೆ ರಕ್ಷಿಸುತ್ತದೆ.
- ಏಲಕ್ಕಿಪಾ್: ಪಲ್ಯ ಹಾಗೂ ಸಿಹಿ ಪದಾರ್ಥಗಳಲ್ಲಿ ಏಲಕ್ಕಿ ಬಳಸಲಾಗುತ್ತದೆ. ಇದು ಕೇವಲ ಆಹಾರದ ರುಚಿಯನ್ನಷ್ಟೇ ಹೆಚ್ಚಿಸುವುದಿಲ್ಲ. ದೇಹವನ್ನು ಡೀಟಾಕ್ಸಿಫೈ ಮಾಡಿ ತೂಕ ಕಡಿಮೆಗೊಳಿಸುವ, ಖಿನ್ನತೆಯೊಂದಿಗೆ ಹೋರಾಡುವ, ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡುತ್ತದೆ. ಇದರಲ್ಲಿ ಕಬ್ಬಿಣಾಂಶ, ನಾರಿನಂಶ, ಕ್ಯಾಲ್ಶಿಯಂ, ಪೊಟ್ಶಾಶಿಯಂ, ಮೆಗ್ನಿಷಿಯಂ, ಸತು, ವಿಟಮಿನ್ `ಎ’ ಮತ್ತು `ಸಿ’ ಹೇರಳಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಕಂಡುಬರುವ ಪೈನಿನ್ ಸಬ್ನೀನ್ ಲಿಲನ್ಲೂ್ನಂತಹ ತೈಲಗಳು ಆರೋಗ್ಯಕ್ಕೆ ಸಾಕಷ್ಟು ಉಪಯುಕ್ತಾಗಿವೆ. ಏಕೆಂದರೆ ಅವುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶವಿರುವುದರಿಂದ ಪಚನಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಮೆಟಬಾಲಿಸಂನ್ನು ಕ್ರಿಯಾಶೀಲಗೊಳಿಸುವ ಕೆಲಸವನ್ನೂ ಮಾಡುತ್ತದೆ.
ಡೀಟಾಕ್ಸಿನ್ನ ಕೆಲಸ : ಒಂದು ವೇಳೆ ದೇಹದಿಂದ ವಿಷಕಾರಿ ಘಟಕಗಳು ಹೊರಗೆ ಬರದೇ ಇದ್ದರೆ, ಏಜಿಂಗ್, ಕಿಡ್ನಿ ಕಲ್ಲುಗಳು, ಯೂರಿಕ್ ಆ್ಯಸಿಡ್ ಒಗ್ಗೂಡುವ ಕಾರಣದಿಂದ ಸಮಸ್ಯೆ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ಏಲಕ್ಕಿಯ ನಿಯಮಿತ ಸೇವವನೆಯಿಂದ ದೇಹದಲ್ಲಿರುವ ವಿಷಕಾರಿ ಘಟಕಗಳು ಹೊರಹೋಗಿ ನಾವು ಫಿಟ್ ಆಗಿರಲು ಸಹಾಯವಾಗುತ್ತದೆ. ನೀವು ಉಸಿರಿನ ದುರ್ವಾಸನೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, 10-15 ದಿನಗಳ ಕಾಲ ನಿಯಮಿತವಾಗಿ ಏಲಕ್ಕಿ ಸೇವನೆ ಮಾಡಿದರೆ ಆ ಸಮಸ್ಯೆ ನಿವಾರಣೆಯಾಗಿ ನಿಮ್ಮ ಪಚನ ವ್ಯವಸ್ಥೆಯೂ ಸಮರ್ಪಕಗೊಳ್ಳುತ್ತದೆ.
- ಕರಿಮೆಣಸು : ಇದರಲ್ಲಿ `ಪೀಪೆರಿನ್’ ಎಂಬ ಅಂಶ ಇರುತ್ತದೆ. ಇದು ದೇಹದಲ್ಲಿ ಕೊಬ್ಬಿನಂಶ ಉಂಟಾಗದಂತೆ ತಡೆಯುತ್ತದೆ. 2013ರಲ್ಲಿ `ಪಡ್ ಕೆಮಿಸ್ಟ್ರಿ’ಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಪೀಪೆರಿನ್ ಎಚ್ಇಆರ್2 ಜೀನ್ನ ಬೆಳವಣಿಗೆಯನ್ನು ಕಡಿಮೆಗೊಳಿಸು ಕೆಲಸ ಮಾಡುತ್ತದೆ. ಅದು ಸ್ತನ ಕ್ಯಾನ್ಸರ್ನ ಜೀಕೋಶಗಳನ್ನು ತಗ್ಗಿಸುತ್ತದೆ. ಇದರಲ್ಲಿ ನಾರಿನಂಶ ಹೆಚ್ಚು ಹೊತ್ತು ಹೊಟ್ಟೆಯನ್ನು ಪ್ ಆಗಿರುವಂತೆ ನೋಡಿಕೊಳ್ಳುತ್ತದೆ. ದಿನ ಕರಿಮೆಣಸಿನ ಸೇವನೆಯಿಂದ ದೇಹದಲ್ಲಿ ವಿಟಮಿನ್ನ ಪೂರೈಕೆ ಮಾಡುತ್ತದೆ. ಇದರಲ್ಲಿ ಮೆಗ್ನಿಷಿಯಂ, ತಾಮ್ರದಂತಹ ಖನಿಜಾಂಶಗಳು ಆರೋಗ್ಯಕರ ಚಯಾಪಚಯ ಕ್ರಿಯೆಗೆ ಸಹಾಯಕಾಗಿವೆ.
ತೂಕ ಕಡಿಮೆಗೊಳಿಸಲು ಸಹಾಯಕ : ಒಂದು ಅಧ್ಯಯನದ ಪ್ರಕಾರ, `ಪೀಪೆರಿನ್’ ಎಂಬ ಅಂಶ ಕೊಬ್ಬಿನ ಜೀವಕೋಶಗಳೊಂದಿಗೆ ಹೋರಾಡುವ ಕೆಲಸ ಮಾಡುತ್ತದೆ. ಅದರಿಂದ ನೀವು ಸುಲಭಾಗಿ ತೂಕ ಕಡಿಮೆಗೊಳಿಸಬಹುದಾಗಿದೆ.
ಆ್ಯಂಟಿ ಆಕ್ಸಿಡೆಂಟ್ ಪ್ರಾಪರ್ಟಿ : ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಪ್ರಾಪರ್ಟಿ ಇದ್ದು, ಅದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಮ್ಮನ್ನು ರೋಗಗಳಿಂದ ರಕ್ಷಿಸುತ್ತದೆ. ಅದರಿಂದಾಗಿ ನಾವು ಮೇಲಿಂದ ಮೇಲೆ ಅನಾರೋಗ್ಯಕ್ಕೀಡಾಗುವುದು ತಪ್ಪುತ್ತದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಪ್ರಕಾರ, ಬೇರೆ ಪದಾರ್ಥಗಳಿಗಿಂತ ಇಮ್ಯೂನಿಟಿ ಹೆಚ್ಚಿಸುವ ಗುಣ ಹೆಚ್ಚಾಗಿರುತ್ತದೆ. ಇದರಲ್ಲಿನ ಫಿನೊಲಿಕ್ ಕಂಟೆಂಟ್ ಕ್ಯಾನ್ಸರ್ನಿಂದ ರಕ್ಷಿಸುತ್ತದೆ.
ಸಂತಾನೋತ್ಪತ್ತಿಗೂ ನೆರವು : ಇದು ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡುತ್ತದೆ. ಜೊತೆಗೆ ಮಹಿಳೆಯರ ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತದೆ. ಇದು ಸ್ಪರ್ವ್ ಕೌಂಟ್ ಕೂಡ ಹೆಚ್ಚಿಸುತ್ತದೆ.
ಎಕ್ಸ್ಫಾಲಿಯೆಟ್ ಸ್ಕಿನ್ : ತ್ವಚೆಯಲ್ಲಿ ಮೃತ ಚರ್ಮ ಜಮೆಗೊಂಡರೆ ಅದು ಕಳಾಹೀನವಾಗಿ ಗೋಚರಿಸುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಮೆಣಸನ್ನು ಪುಡಿ ಮಾಡಿ ಅದರಲ್ಲಿ ಮೊಸರು ಮಿಶ್ರಣ ಮಾಡಿ, ಅದನ್ನು ಸ್ಕ್ರಬ್ನಂತೆ ಬಳಸಿ. ಅದರಿಂದ ರಕ್ತ ಪರಿಚಲನೆ ಹೆಚ್ಚಿ ತ್ವಚೆಗೆ ಬೇಕಾಗುವ ಪೋಷಕಾಂಶಗಳು ದೊರಕುತ್ತದೆ.
- ಜೀರಿಗೆ : ಇದು ಪಚನ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆ ಜೊತೆಗೆ ಹೊಟ್ಟೆಯನ್ನು ಸೋಂಕಿನಿಂದ ರಕ್ಷಿಸುತ್ತದೆ. ಇದು ತೂಕ ಕಡಿಮೆಗೊಳಿಸಲು ಕೂಡ ಸಹಾಯಕ. ಹಾಗೆಂದೇ ಆಹಾರದಲ್ಲಿ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಾಗುತ್ತದೆ.
ಹೇರಳ ಕಬ್ಬಿಣಾಂಶ : ಒಂದು ಚಿಕ್ಕ ಚಮಚ ಜೀರಿಗೆಯಲ್ಲಿ 1.4 ಎಂ.ಜಿ. ಕಬ್ಬಿಣಾಂಶ ಇರುತ್ತದೆ. ಹೀಗಾಗಿ ಜೀರಿಗೆ ದೇಹದ ಕಬ್ಬಿಣಾಂಶದ ಕೊರತೆ ನೀಗಿಸುವ ಕೆಲಸ ಮಾಡುತ್ತದೆ.
ತೂಕ ಕಡಿಮೆಗೊಳಿಸುತ್ತದೆ : `ಕ್ಲಿನಿಕಲಿ ಪ್ರ್ಯಾಕ್ಟೀಸ್ ಕಾಂಪ್ಲಿಮೆಂಟರಿ ಥೆರಪೀಸ್’ನಲ್ಲಿ ಪ್ರಕಟಗೊಂಡ ಒಂದು ಅಧ್ಯಯನದ ಪ್ರಕಾರ, ಹೆಚ್ಚು ತೂಕದಿಂದ ತೊಂದರೆಗೊಳಗಾದ ಮಹಿಳೆಯರ ದೇಹದ ರಚನೆಯ ಮೇಲೆ ಜೀರಿಗೆ ಅತ್ಯಂತ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಅದು ದೇಹದ ಕೊಬ್ಬು ಮತ್ತು ಕೊಲೆಸ್ಟ್ರಾಲ್ನ್ನು ಕಡಿಮೆಗೊಳಿಸಿ, ಮತ್ತೆ ಮತ್ತೆ ತಿನ್ನಬೇಕೆಂಬ ಮನಸ್ಸನ್ನು ಜಾಗೃತಗೊಳಿಸುವಲ್ಲಿ ತಡೆಯುತ್ತದೆ. ಅದರಿಂದ ತೂಕ ಕಡಿಮೆಗೊಳಿಸಲು ನೆರಾಗುತ್ತದೆ.
ಸ್ಮರಣಶಕ್ತಿ ಹೆಚ್ಚಿಸುತ್ತದೆ : ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಇನ್ಫ್ಲೆಮೇಟರಿ ಗುಣ ಸ್ಮರಣಶಕ್ತಿ ಹೆಚ್ಚಿಸಲು ನೆರವಾಗುತ್ತದೆ.
- ಜಾಯಿಕಾಯಿ : ಇದು ಆಹಾರದ ರುಚಿ ಹೆಚ್ಚಿಸಲಷ್ಟೇ ನೆರವಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಉಪಯುಕ್ತ.
ಒಳ್ಳೆ ನಿದ್ರೆಗೆ ಸಹಾಯಕ : ಇಂದಿನ ಧಾವಂತದ ಜೀವನದಲ್ಲಿ ಖಿನ್ನತೆಯಿಂದ ಕೂಡಿದ ಜೀನಶೈಲಿಯ ಕಾರಣದಿಂದ ನಾವು ನೆಮ್ಮದಿಯ ನಿದ್ರೆ ಮಾಡಲು ಆಗುವುದಿಲ್ಲ. ರಾತ್ರಿ ಮಲಗುವ ಮುನ್ನ ಒಂದು ಚಿಟಕಿಯಷ್ಟು ಜಾಯಿಕಾಯಿ ಪುಡಿಯನ್ನು ಹಾಲಿನಲ್ಲಿ ಹಾಕಿಕೊಂಡು ಕುಡಿಯುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ.
ತ್ವಚೆಯ ಸಮಸ್ಯೆಗೆ ಪರಿಹಾರ : ಹೆಚ್ಚುತ್ತಿರುವ ಮಾಲಿನ್ಯ, ಸೂಕ್ತ ಅಲ್ಲದ ಕಾಸ್ಮೆಟಿಕ್ಗಳನ್ನು ಬಳಸುವುದು ಹಾಗೂ ಹಾರ್ಮೋನುಗಳ ಬದಲಾಣೆಯಿಂದಾಗಿ ಆ್ಯಕ್ನೆ, ಸುಕ್ಕುಗಳ ಸಮಸ್ಯೆ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ಜಾಯಿಕಾಯಿಲ್ಲಿರುವ ಆ್ಯಂಟಿಸೆಪ್ಟಿಕ್ ಹಾಗೂ ಆ್ಯಂಟಿ ಇನ್ಫ್ಲೆಮೇಟರಿ ಅಂಶ ಕ್ಲೆನ್ಸಿಂಗ್ನ ಕೆಲಸ ಮಾಡುತ್ತದೆ.
ರೋಗದಿಂದ ದೂರ : ಜಾಯಿಕಾಯಿ ರೋಗ ನಿರೋಧಕ ಸಾಮರ್ಥ್ಯವನ್ನು ಬಲಪಡಿಸುವ ಕೆಲಸ ಮಾಡುತ್ತದೆ. ಇದರಲ್ಲಿರುವ ವಿಟಮಿನ್ಸ್, ಮಿನರಲ್ಸ್ನ ಅಂಶಗಳು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಕೆಲಸ ಮಾಡುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ನ ಮಟ್ಟ ಹೆಚ್ಚುತ್ತ ಹೋದಂತೆ ಹೃದಯಾಘಾತ, ಕಿಡ್ನಿ ಸಮಸ್ಯೆಗಳು ಉಂಟಾಗುತ್ತದೆ. ಅ ಅಪಾಯಕಾರಿ ಸಂಕೇತಗಳೇ ಹೌದು. ಜಾಯಿಕಾಯಿಯಲ್ಲಿರುವ ಎಥೆನಾಲಿಕ್ ಎಕ್ಸ್ಟ್ರ್ಯಾಕ್ಟ್ ಕೊಲೆಸ್ಟ್ರಾಲ್ನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ.
ಮೆದುಳಿನ ಕಾರ್ಯವೈಖರಿ ಸುಧಾರಣೆ : ಇದರಲ್ಲಿ `ಮೈರಿಸ್ಟಿಸಿನ್’ ಎಂಬ ಅಂಶ ಇರುತ್ತದೆ. ಇದು ಅಲ್ಜೈಮರ್ ರೋಗಕ್ಕೆ ಕಾರಣಾಗುವ ಕಿಣ್ವದ ಕ್ರಿಯೆಯನ್ನು ತಡೆಯುವ ಕೆಲಸ ಮಾಡುತ್ತದೆ. ಅದು ಮೆದುಳನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಅದರಿಂದ ನೆನಪಿನ ಶಕ್ತಿ ಹೆಚ್ಚಾಗಿ ಒತ್ತಡ ಕಡಿಮೆಯಾಗುತ್ತದೆ.
- ಅರಿಶಿನ : ಪ್ರತಿಯೊಂದು ಅಡುಗೆಮನೆಯಲ್ಲೂ ದೊರೆಯುವ ಅರಿಶಿನ. ಅಡುಗೆಗೆ ಹಳದಿ ವರ್ಣ ತರುವುದರ ಜೊತೆಗೆ ಇದರ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್, ಆ್ಯಂಟಿ ಬ್ಯಾಕ್ಟೀರಿಯಲ್ ಹಾಗೂ ಆ್ಯಂಟಿ ಫಂಗಸ್ ಗುಣಗಳು ಅದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
ಆರೋಗ್ಯಕರ ತ್ವಚೆಗೆ ಉಪಯುಕ್ತ : ಮದುವೆ ಹೆಣ್ಣಿಗೆ ಅರಿಶಿನದ ಲೇಪನವನ್ನು ಶತಶತಮಾನಗಳಿಂದ ಮಾಡಿಕೊಂಡು ಬರಲಾಗಿದೆ. ಏಕೆಂದರೆ ಇದು ಮುಖದ ತ್ವಚೆಯ ಕೊಳಕನ್ನು ಕ್ಷಣಾರ್ಧದಲ್ಲಿ ನಿವಾರಿಸುತ್ತದೆ. ತ್ವಚೆಯ ಯಾವುದೇ ಬಗೆಯ ತೊಂದರೆಯನ್ನು ನಿವಾರಿಸಲು ಕೂಡ ಅದು ನೆರಾಗುತ್ತದೆ.
ಆ್ಯಂಟಿಸೆಪ್ಟಿಕ್ನ ಕಾರ್ಯ : ಜ್ವರ ಬಂದಾಗ, ದೇಹದಲ್ಲಿ ತರಚಿದ ಗಾಯಗಳಾದಾಗ ಅರಿಶಿನವನ್ನು ಹಾಲಲ್ಲಿ ಬೆರೆಸಿ ಕುಡಿದರೆ ಉತ್ತಮ ಪರಿಣಾಮ ಕಂಡುಬರುತ್ತದೆ. ಇಂತಹ ಸ್ಥಿತಿಯಲ್ಲಿ ಕರ್ಕ್ಯೂಮಿನ್ನ ಉಪಸ್ಥಿತಿಯಲ್ಲಿ ಆ್ಯಂಟಿಸೆಪ್ಟಿಕ್ನ ಕೆಲಸ ಮಾಡುತ್ತದೆ.
ರಕ್ತ ಶೋಧಕ : ಹಲವು ಅಧ್ಯಯನಗಳಿಂದ ಸಾಬೀತಾದ ಸಂಗತಿಯೆಂದರೆ, ಅರಿಶಿನ ರಕ್ತ ಶೋಧಕದಂತೆ ಕೆಲಸ ಮಾಡಿ ದೇಹದಿಂದ ವಿಷಕಾರಿ ಘಟಕಗಳನ್ನು ಹೊರಹಾಕಲು ನೆರಾಗುತ್ತದೆ.
- ಮೆಂತ್ಯ : ಇದನ್ನು `ಮಿರ್ಯಾಕ್ ಸ್ಪೈಸ್’ ಎಂದು ಕರೆಯಲಾಗುತ್ತದೆ. ಇದು ಆಹಾರಗಳ ರುಚಿ ಹೆಚ್ಚಿಸುತ್ತದಲ್ಲದೆ, ಸೌಂದರ್ಯ ಹೆಚ್ಚಿಸುವ ಕೆಲಸವನ್ನೂ ಮಾಡುತ್ತದೆ.
ಪಚನ ವ್ಯವಸ್ಥೆಗೆ ಪೂರಕ : ಮೆಂತ್ಯದ ನಿಯಮಿತ ಸೇವನೆಯಿಂದ ಪಚನಕ್ರಿಯೆ ಸುಧಾರಣೆಯಾಗುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಹಾಗೂ ನಾರಿನಂಶ ಹೇರಳವಾಗಿರವುದರಿಂದ ದೇಹದಲ್ಲಿರುವ ಟಾಕ್ಸಿನ್ಸ್ ಹೊರಹೋಗುತ್ತವೆ.
ಮುಟ್ಟಿನ ನೋವು ನಿವಾರಣೆ : ಮುಟ್ಟಿನ ಸಂದರ್ಭದಲ್ಲಿ ನೀರಿನಲ್ಲಿ ನೆನೆಸಿದ ಮೆಂತ್ಯದ ಕಾಳುಗಳನ್ನು ಅಗಿಯುವುದರಿಂದ ಹೊಟ್ಟೆನೋವಿನಿಂದ ನಿರಾಳತೆ ದೊರಕುತ್ತದೆ. ಮೂಡ್ಸ್ವಿಂಗ್ನ ಸಮಸ್ಯೆಯೂ ಇದರಿಂದ ನಿವಾರಣೆಯಾಗುತ್ತದೆ.
ಕಿಡ್ನಿ ಸಮಸ್ಯೆಗೆ ಪರಿಹಾರ : ಮೆಂತ್ಯದ ಕಾಳುಗಳಲ್ಲಿ ಫಾಲಿಫಿನೊಲಿಕ್ ಫ್ಲೆಿನೈಡ್್ಸ ಕಂಡು ಬರುತ್ತದೆ. ಅದು ಕಿಡ್ನಿ ವ್ಯವಸ್ಥೆಯನ್ನು ಸುಧಾರಿಸುತ್ತದೆ.
- ಲವಂಗ : ಲವಂಗದ ಎವೆರೋಮನ್ ಯುಗದಲ್ಲೂ ಈ ಲಂಗದೆಲೆಯ ಬಳಕೆ ಮಾಡಲಾಗುತ್ತಿತ್ತು. ಇದು ಭಾರತೀಯ ಅಡುಗೆಯ ಒಂದು ಮುಖ್ಯ ಭಾಗ.
ಉಸಿರಾಟದ ಸಮಸ್ಯೆಗೆ ಉಪಯುಕ್ತ : ವೈದ್ಯಕೀಯ ಸಂಶೋಧನೆಯ ಪ್ರಕಾರ, ಲಂಗದೆಲೆ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಹೊಂದಿದೆ. ಇದರ ಉಪಯೋಗದಿಂದ ಉಸಿರಾಟದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಒತ್ತಡ ಕಡಿಮೆಗೊಳಿಸುತ್ತದೆ : ಲಿನಾಲೋ ಅಂಶ ಲಂಗದೆಲೆಯಲ್ಲೂ ಕಂಡುಬರುತ್ತದೆ. ಇದು ಸೆಲೆಟ್ರಸ್ ಹಾರ್ವೋನ್ನ್ನು ಸಮತೋಲನದಲ್ಲಿಡಲು ನೆರವಾಗಿ, ಒತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಆರೋಗ್ಯಕ್ಕೆ ಉಪಯುಕ್ತಾಗಿರು ಈ ಮಸಾಲೆ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರ್ಪಡೆ ಮಾಡಿಕೊಂಡು ಆಹಾರದ ರುಚಿ ಹೆಚ್ಚಿಸಿಕೊಳ್ಳಿ, ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ.