ಎ ಫಾರ್‌ ಆ್ಯಪಲ್ (ಸೇಬು) : ದಿನ 1 ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದು ಹೇಳುತ್ತಾರೆ. ಸೇಬನ್ನು ಕತ್ತರಿಸಿ ಅಗಿದು ತಿನ್ನುವುದರಿಂದ ಬಾಯಿಯಲ್ಲಿ ಜೊಲ್ಲು ಸುರಿಯುವುದು ಚೆನ್ನಾಗಿರುತ್ತದೆ. ಇದು ಆಲ್ಜೈಮರ್‌ ರೋಗ ಮತ್ತು ಕ್ಯಾನ್ಸರ್‌ನಿಂದ ರಕ್ಷಿಸುವುದಲ್ಲದೆ, ಮಧುಮೇಹದ ಅಪಾಯವನ್ನು ಕರಗಿಸುತ್ತದೆ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಭೇದಿ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತದೆ.

ಸಿ ಫಾರ್‌ ಕ್ಯಾರೆಟ್‌ : ಕ್ಯಾರೆಟ್‌ ವಿಟಮಿನ್‌ `ಎ’ನ ಒಳ್ಳೆಯ ಸ್ರೋತವಾಗಿದೆ. ಇದರಲ್ಲಿ ತ್ವಚೆಯನ್ನು ಸುಂದರಗೊಳಿಸುವ ಹಾಗೂ ಕ್ಯಾನ್ಸರ್‌ ತಡೆಗಟ್ಟುವ ಗುಣಗಳಿವೆ. ಇದು ಕಣ್ಣುಗಳ ದೃಷ್ಟಿಯಲ್ಲಿ ಸುಧಾರಣೆ ತರುತ್ತದೆ. ಇದರಲ್ಲಿ ದೊರಕುವ ಆ್ಯಂಟಿ ಆಕ್ಸಿಡೆಂಟ್ಸ್ ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ತ್ವಚೆಯನ್ನು ರಕ್ಷಿಸುತ್ತವೆ. ಇದನ್ನು ಫೇಸ್‌ ಮಾಸ್ಕ್ ರೂಪದಲ್ಲೂ ಉಪಯೋಗಿಸಲಾಗುತ್ತದೆ.

ಇ ಫಾರ್‌ ಎಗ್‌ಪ್ಯ್ಲಾಂಟ್‌ (ಬದನೆ) : ಬದನೆಯಲ್ಲಿ ಕೆಲವು ಪೌಷ್ಟಿಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅವು ರಕ್ತ ಸಂಚಾರವನ್ನು ಸುಗಮಗೊಳಿಸುತ್ತವೆ. ಮೆದುಳಿಗೆ ಪೋಷಣೆ ನೀಡುತ್ತವೆ. ಬದನೆಯಲ್ಲಿ ಬಹಳ ಕಡಿಮೆ ಪ್ರಮಾಣದ ಕ್ಯಾಲರಿಗಳಿವೆ. ಆದ್ದರಿಂದಲೇ ಇದರ ಸೇವನೆಯಿಂದ ತೂಕ ಹೆಚ್ಚುವುದಿಲ್ಲ. ಇದರಲ್ಲಿ ಹೇರಳವಾಗಿ ಫೈಬರ್‌ ಇರುವುದರಿಂದ ಯಾವಾಗಲೂ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ. ಬದನೆಕಾಯಿ ಮಧುಮೇಹವನ್ನು ನಿಯಂತ್ರಿಸುವಲ್ಲಿ ಮತ್ತು ಹೃದಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.

falo-or-sabziyo-ki

ಬಿ ಫಾರ್‌ ಬೀಟ್‌ರೂಟ್‌ : ಬೀಟ್‌ರೂಟ್‌ ಪೊಟ್ಯಾಶಿಯಂ, ಮೆಗ್ನೀಶಿಯಂ, ಐರನ್‌, ವಿಟಮಿನ್‌ ಬಿ6, ಎ, ಸಿ, ನೈಟ್ರೇಟ್‌ ಇತ್ಯಾದಿಗಳ ಒಳ್ಳೆಯ ಸ್ರೋತವಾಗಿದೆ. ಇದು ಹಾರ್ಟ್‌ ಅಟ್ಯಾಕ್‌, ಹಾರ್ಟ್‌ ಸ್ಟ್ರೋಕ್‌ ಮತ್ತು ರಕ್ತದೊತ್ತಡದ ಅಪಾಯವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಇದು ಒಳ್ಳೆಯ ಆ್ಯಂಟಿ ಆಕ್ಸಿಡೆಂಟ್‌ ಕೂಡ ಆಗಿದೆ. ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಡಿ ಫಾರ್‌ ಡೇಟ್ಸ್ (ಖರ್ಜೂರ) : ಐರನ್‌ ಮತ್ತು ಫ್ಲೋರಿನ್‌ನಿಂದ ತುಂಬಿರುವ ಖರ್ಜೂರ ವಿಟಮಿನ್‌ಗಳು ಮತ್ತು ಖನಿಜಗಳ ಒಳ್ಳೆಯ ಸ್ರೋತವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಲೆವೆಲ್‌ ಕಡಿಮೆಯಾಗುವುದಲ್ಲದೆ, ಅನೇಕ ಆರೋಗ್ಯ ದೋಷಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಪ್ರಾಕೃತಿಕ ಸಕ್ಕರೆ ಹೆಚ್ಚಾಗಿದ್ದು ಎನರ್ಜಿ ಕೊಡುತ್ತದೆ. ಅಲ್ಲದೆ, ಇದರಲ್ಲಿ ಪೊಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು, ಸೋಡಿಯಂ ಕಡಿಮೆ ಇರುತ್ತದೆ. ಈ ಪ್ರಾಕೃತಿಕ ಅಂಶಗಳಿಂದ ತುಂಬಿರುವ ಖರ್ಜೂರ ಒಂದು ಸ್ವಸ್ಥ ನರ್ವ್ ಸಿಸ್ಟಮನ್ನು ವ್ಯವಸ್ಥಿತವಾಗಿಡಲು ಹಾಗೂ ಹೊಟ್ಟೆಯ ಕ್ಯಾನ್ಸರ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಎಫ್‌ ಫಾರ್‌ ಫಿಗ್ಸ್ (ಅಂಜೂರ) : ಅಂಜೂರ ಪೊಟ್ಯಾಶಿಯಂನ ಬಹಳ ಒಳ್ಳೆಯ ಸ್ರೋತವಾಗಿದೆ. ಇದರ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಅಂಜೂರ ಫೈಬರ್‌ನ ಆಹಾರದ ಬಹಳ ಒಳ್ಳೆಯ ಸ್ರೋತವಾಗಿದೆ. ಅದರಿಂದಲೇ ವೇಟ್‌ ಕಂಟ್ರೋಲ್ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೃದಯದ ಮೇಲೂ ಸಹ ಒಳ್ಳೆಯ ಪ್ರಭಾವ ಬೀರುತ್ತದೆ. ಅದು ತ್ವಚೆಯ ಮೇಲೆ ಉಂಟಾಗುವ ಕಲೆಗಳಿಂದಲೂ ರಕ್ಷಿಸುತ್ತದೆ.

ಜಿ ಫಾರ್‌ ಗಾರ್ಲಿಕ್‌ (ಬೆಳ್ಳುಳ್ಳಿ) : ಬೆಳ್ಳುಳ್ಳಿ ಭಾರತೀಯ ವ್ಯಂಜನಗಳಲ್ಲಿ ಸಾಮಾನ್ಯವಾಗಿ ದೊರಕುತ್ತದೆ. ಆದರೆ ಊಟಕ್ಕೆ ರುಚಿ ಕೊಡುವುದಲ್ಲದೆ, ಬೆಳ್ಳುಳ್ಳಿಯಲ್ಲಿ ಅಪಾರ ಔಷಧೀಯ ಗುಣಗಳಿವೆ. ಬೆಳ್ಳುಳ್ಳಿಯಲ್ಲಿ ಜೀವಾಣುರೋಧಕ ಹಾಗೂ ವಿಷಾಣುರೋಧಕ ಗುಣಗಳು ಇರುವುದರಿಂದ ಅದನ್ನು ತ್ವಚೆಯ ಸೋಂಕಿನ ಚಿಕಿತ್ಸೆಗಾಗಿ ಉಪಯೋಗಿಸಲಾಗುತ್ತದೆ.

ಜೆ ಫಾರ್‌ ಜ್ಯಾಕ್‌ಫ್ರೂಟ್‌ (ಹಲಸಿನ ಹಣ್ಣು): ಹಲಸಿನ ಹಣ್ಣಿನ ತಿರುಳಿನಲ್ಲಿ ಹೆಚ್ಚು ಪ್ರಮಾಣದ ಫೈಬರ್‌ ಇರುತ್ತದೆ. ಅದಲ್ಲದೆ ವಿಟಮಿನ್‌, ಖನಿಜಗಳು, ಎಲೆಕ್ಟ್ರೊಲೈಟ್ಸ್, ಫೈಟೋನ್ಯೂಟ್ರಿಯೆಂಟ್ಸ್, ಕಾರ್ಬೋಹೈಡ್ರೇಟ್ಸ್, ಫೈಬರ್‌, ಕೊಬ್ಬು ಪ್ರೋಟೀನ್‌ ಮತ್ತು ಇತರ ಪೌಷ್ಟಿಕಾಂಶಗಳ ಪ್ರಮಾಣ ಹೆಚ್ಚಾಗಿರುತ್ತದೆ. ಹಲಸಿನ ಹಣ್ಣಿನಲ್ಲಿ ಹೆಚ್ಚು ಕ್ಯಾಲೋರಿಗಳಿವೆ. ಆದರೆ ಇದರಲ್ಲಿ ಸ್ಯಾಚುರೇಟೆಡ್‌ ಫ್ಯಾಟ್ಸ್ ಅಥವಾ ಕೊಲೆಸ್ಟ್ರಾಲ್ ಇರುವುದಿಲ್ಲ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಇರುವುದರಿಂದ ಇದು ಕ್ಯಾನ್ಸರ್‌ ಮತ್ತು ಇತರ ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಇದು ಕಣ್ಣುಗಳಿಗೂ ಒಳ್ಳೆಯದು. ಕ್ಯಾಟ್ರಾಕ್ಟ್ ನಿಂದ ರಕ್ಷಣೆಯನ್ನು ಮಾಡುತ್ತದೆ. ಇದು ಪೊಟ್ಯಾಶಿಯಂನ ಒಳ್ಳೆಯ ಸ್ರೋತವಾಗಿದೆ. ಇದನ್ನು ಮೂಳೆಗಳು ಮತ್ತು ತ್ವಚೆಯ ಆರೋಗ್ಯದಲ್ಲಿ ಸುಧಾರಣೆ ತರಲು ಉಪಯೋಗಿಸುತ್ತಾರೆ.

ಎಂ ಫಾರ್‌ ಮ್ಯಾಂಗೋ (ಮಾವು) : ವಿಟಮಿನ್‌ `ಸಿ’ ಮತ್ತು ಬೀಟಾ ಕೆರೋಟಿನ್‌ಗೆ ಮಾವು ಒಳ್ಳೆಯ ಸ್ರೋತವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್‌ ಇದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಲ್ಯುಕೇಮಿಯಾ ಮತ್ತು ಪ್ರಾಸ್ಟೇಟ್‌ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಮಾವು ಓಪನ್‌ ಪೋರ್ಸ್‌ ಮತ್ತು ಮೊಡವೆಗಳನ್ನು ಕೊನೆಗಾಣಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್‌ ಪಚನಕ್ರಿಯೆಗೆ ಸಹಾಯ ಮಾಡುತ್ತದೆ. ಮಾವಿನಕಾಯಿ ಹೃದಯಾಘಾತವನ್ನು ತಡೆಯಲು ಒಳ್ಳೆಯ ಉಪಾಯವಾಗಿದೆ. ವಿಟಮಿನ್‌ `ಸಿ’ ಮತ್ತು ವಿಟಮಿನ್‌ `ಎ’ ಹೆಚ್ಚಾಗಿರುವುದರಿಂದ ಇದು ಆರೋಗ್ಯ ರಕ್ಷಣೆಗೆ ಬಹಳ ಅಗತ್ಯವಾಗಿದೆ.

ಎಚ್‌ ಫಾರ್‌ ಹನಿಡ್ಯೂ ಮೆಲನ್‌ (ಕರಬೂಜ) : ಕರಬೂಜದಲ್ಲಿ ವಿಟಮಿನ್‌ `ಸಿ’ ಹೇರಳವಾಗಿದೆ. ಆದ್ದರಿಂದ ತ್ವಚೆಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಬಹಳ ಉಪಯೋಗವಾಗುತ್ತದೆ. ಅದು ಒಳ್ಳೆಯ ಸಂಪೂರ್ಣ ಆಹಾರವಾಗಿದ್ದು ಪೊಟ್ಯಾಶಿಯಂನ ಒಳ್ಳೆಯ ಸ್ರೋತವಾಗಿದೆ. ಹೃದಯದ ಬಡಿತವನ್ನು ನಿಯಂತ್ರಿಸಲೂ ಸಹಾಯ ಮಾಡುತ್ತದೆ.

ಕೆ ಫಾರ್‌ ಕಿವೀ ಫ್ರೂಟ್ಸ್ : ಎಲ್ಲ ರೀತಿಯ ಕಿವೀ ಫ್ರೂಟ್‌ಗಳು ಮತ್ತು ತರಕಾರಿಗಳ ಸೇವನೆಯಿಂದ ಹೃದಯ ರೋಗಗಳು, ಮಧುಮೇಹ, ಕ್ಯಾನ್ಸರ್‌ ಮತ್ತು ಇತರ ಪ್ರಕಾರದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಕಿವೀ ಫ್ರೂಟ್‌ನಿಂದ ಸುಂದರ ತ್ವಚೆ, ಒಳ್ಳೆಯ ನಿದ್ದೆ ಮತ್ತು ಹೃದಯದ ಆರೋಗ್ಯ, ಮಲಬದ್ಧತೆ ಸಮಸ್ಯೆಯಿಂದ ಮುಕ್ತಿಯೂ ಸಿಗುತ್ತದೆ.

ಎನ್‌ ಫಾರ್‌ ನಟ್ಸ್ : ಎಲ್ಲ ನಟ್ಸ್ ಗಳೂ ವಿಟಮಿನ್‌ `ಇ’ ಮತ್ತು ಪೊಟ್ಯಾಶಿಯಂನಿಂದ ತುಂಬಿವೆ. ಇವುಗಳಲ್ಲಿ ಖನಿಜಗಳು, ಕ್ಯಾಲ್ಶಿಯಂ, ಐರನ್‌, ಮೆಗ್ನೀಶಿಯಂ ಮತ್ತು ಝಿಂಕ್‌ ಹೇರಳಾಗಿವೆ. ಇವು ವಿಟಮಿನ್‌ ಮತ್ತು ಉನ್ನತ ಕ್ಯಾಲೋರಿಗಳ ಒಳ್ಳೆಯ ಸ್ರೋತವಾಗಿದೆ. ಆದ್ದರಿಂದ ಎಲ್ಲ ನಟ್ಸ್ ಗಳೂ ಆರೋಗ್ಯಕ್ಕೆ ಒಳ್ಳೆಯವು.

ಐ ಫಾರ್‌ ಐಸ್‌ಬರ್ಗ್‌ ಲೆಟ್ಯೂಸ್‌ : ಇದರಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನ ಅಂಶ ಬಹಳ ಕಡಿಮೆ. ಇದರಲ್ಲಿ ಉನ್ನತ ಮಟ್ಟದ ಪ್ರೋಟೀನ್‌ಗಳು ಮತ್ತು ಪೌಷ್ಟಿಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಆದ್ದರಿಂದ ನೀವು ತೂಕ ಕಡಿಮೆ ಮಾಡಿಕೊಳ್ಳಬೇಕೆಂದಾಗ ಇದು ಸಾಕಷ್ಟು ಉಪಯೋಗಾಗುತ್ತದೆ. ಐಸ್‌ಬರ್ಗ್‌ ಲೆಟ್ಯೂಸ್‌ ದಿನನಿತ್ಯ ಉಪಯೋಗಿಸುವುದರಿಂದ ತೂಕ ಕರಗಿಸಿಕೊಳ್ಳಲು ಸಹಾಯಕವಾಗುತ್ತದೆ.

ಎಲ್ ಫಾರ್‌ ಲೆಮನ್‌ (ನಿಂಬೆ) : ನಿಂಬೆ ವಿಟಮಿನ್‌ `ಇ’ನ ಒಳ್ಳೆಯ ಸ್ರೋತವಾಗಿದೆ. ಅದು ಇಮ್ಯೂನ್‌ ಸಿಸ್ಟಂನಲ್ಲಿ ಸುಧಾರಣೆ ತರಲು ಸಹಾಯ ಮಾಡುತ್ತದೆ. ಇದು ಆಹಾರದ ರುಚಿ ಹೆಚ್ಚಿಸುವುದಲ್ಲದೆ, ತ್ವಚೆಯನ್ನು ಆರೋಗ್ಯವಾಗಿ, ಹೊಳಪು ತರುವಂತೆ ಮಾಡುತ್ತದೆ.

ಓ ಫಾರ್‌ ಆಲಿವ್‌ : ಆಲಿವ್‌ ಆಯಿಲ್‌ ಬ್ಲಡ್‌ನಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಮತ್ತು ಬ್ಲಡ್‌ ಪ್ರೆಷರ್‌ ನಿಯಂತ್ರಿಸಲು ಲಾಭದಾಯಕ. ಇದು ಹಣ್ಣುಗಳು ಮತ್ತು ತರಕಾರಿಗಳ ಆಯ್ಕೆ ರೂಪದಲ್ಲಿ ಫೈಬರ್‌ ಮತ್ತು ವಿಟಮಿನ್‌ `ಇ’ನ ಒಳ್ಳೆಯ ಸ್ರೋತವಾಗಿದೆ. ಜೊತೆಗೆ ಇದೂ ಒಂದು ಆ್ಯಂಟಿ ಆಕ್ಸಿಡೆಂಟ್‌ ರೂಪದಲ್ಲಿ ಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಪಿ ಫಾರ್‌ ಪೆಪ್ಪರ್‌ (ಮೆಣಸು) : ಮೆಣಸು ಕೆರೋಟಿನ್‌ ಮತ್ತು ವಿಟಮಿನ್‌ `ಸಿ’ನ ಒಳ್ಳೆಯ ಸ್ರೋತವಾಗಿದೆ. ಇದರಲ್ಲಿ ಬ್ಲೂ ಫ್ಲೆಮಿನಾಯ್ಡ್ಸ್ ಅಂಶಗಳು ಹೆಚ್ಚಾಗಿರುತ್ತವೆ. ಅ ಕ್ಯಾನ್ಸರ್‌ ತಡೆಯಲು ಸಹಾಯ ಮಾಡುತ್ತವೆ.

ಎಸ್‌ ಫಾರ್‌ ಸ್ಟ್ರಾಬೆರಿ : ಸ್ಟ್ರಾಬೆರಿ ವಿಟಮಿನ್‌ `ಸಿ’ಯ ದೊಡ್ಡ ಸ್ರೋತವಾಗಿದೆ. ಹೀಗಾಗಿ ಶರೀರದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ. ಜೊತೆಗೆ ಕ್ಯಾನ್ಸರ್‌ನೊಂದಿಗೆ ಹೋರಾಡಲೂ ಸಹಾಯ ಮಾಡುತ್ತದೆ. ಸ್ಟ್ರಾಬೆರಿ ಕೊಲೋಜೆನ್‌ನ ಉತ್ಪಾದನೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಹಾಗೂ ತ್ವಚೆಗೆ ಮೃದುತ್ವ ಕೊಡುತ್ತದೆ. ವಯಸ್ಸು ಹೆಚ್ಚಾದಂತೆಲ್ಲಾ ನಾವು ಕೊಲೋಜೆನ್‌ ಕಳೆದುಕೊಳ್ಳುತ್ತೇವೆ. ಒಂದು ವೇಳೆ ವಿಟಮಿನ್‌ `ಸಿ’ನಿಂದ ಸಮೃದ್ಧವಾಗಿರುವ ಪದಾರ್ಥವನ್ನು ಅಗಿದು ತಿಂದರೆ ನಮ್ಮ ತ್ವಚೆಯ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ತ್ವಚೆ ಮೊದಲಿಗಿಂತ ಹೆಚ್ಚು ಸ್ವಚ್ಛ ಹಾಗೂ ಆರೋಗ್ಯವಾಗಿ ಕಂಡುಬರುತ್ತದೆ.

ವಿ ಫಾರ್‌ ವಿಕ್ಟೋರಿಯಾ ಪ್ಲಮ್ : ಈ ಬೋರೆಹಣ್ಣು ವಿಟಮಿನ್‌, ಖನಿಜ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಿಂದ ತುಂಬಿದೆ. ಇದರಲ್ಲೂ ಕಡಿಮೆ ಕ್ಯಾಲೋರಿಗಳಿವೆ. ಸ್ಯಾಚುರೇಟೆಡ್‌ ಫ್ಯಾಟ್ಸ್ ಇಲ್ಲ. ವಿಕ್ಟೋರಿಯಾ ಬೇರ್‌ ನಾರಿನಂಶವುಳ್ಳ ಆಹಾರದ ಒಂದು ಸಮೃದ್ಧ ಸ್ರೋತವಾಗಿದೆ. ಇದನ್ನು ರಿಯಾಕ್ಟಿವ್‌ ಆಕ್ಸಿಜನ್‌ ತಳಿಗಳ (ಆರ್‌ಓಎಸ್‌) ವಿರುದ್ಧ ನಮ್ಮ ಶರೀರಕ್ಕೆ ರಕ್ಷಣೆ ಕೊಡಲು ಉಪಯೋಗಿಸಲಾಗುತ್ತದೆ.

ಕ್ಯೂ ಫಾರ್‌ ಕ್ವೀನ್ಸ್ (ಬೇಲದ ಹಣ್ಣು) : ಬೇಲದ ಹಣ್ಣಿನ ತಿರುಳು ಮತ್ತು ಸಿಪ್ಪೆಯಲ್ಲಿ ಫೈಬರ್‌ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ಕಡಿಮೆ ಕ್ಯಾಲೋರಿಗಳಿರುವ ಹಣ್ಣಾಗಿದೆ. ಬೇಯಿಸಿದ ಬೇಲದ ಹಣ್ಣಿನಲ್ಲಿ ವಿಟಮಿನ್‌ `ಸಿ’ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.

ಟಿ ಫಾರ್‌ ಟೊಮೇಟೊ : ಟೊಮೇಟೊ ವಿಟಮಿನ್‌ ಎ, ಸಿ, ಕೆ ಪೊಟ್ಯಾಶಿಯಂನ ಒಳ್ಳೆಯ ಸ್ರೋತವಾಗಿದೆ. ಅದರಲ್ಲಿ ಸೋಡಿಯಂ, ಸ್ಯಾಚುರೇಟೆಡ್‌ ಫ್ಯಾಟ್ಸ್, ಕೊಲೆಸ್ಟ್ರಾಲ್ ಮತ್ತು ಕ್ಯಾಲೋರಿ ಕಡಿಮೆ ಇವೆ.

ಡಬ್ಲ್ಯು ಫಾರ್‌ ವಾಟರ್‌ ಮೆಲನ್‌ (ಕಲ್ಲಂಗಡಿ) : ಕಲ್ಲಂಗಡಿಯಲ್ಲಿ ಪೊಟ್ಯಾಶಿಯಂ, ಆ್ಯಂಟಿ ಆಕ್ಸಿಡೆಂಟ್ಲ್ ವಿಟಮಿನ್‌ ಬಿ, ಎ, ಬಿ6, ಸಿ, ಕ್ಯಾಲ್ಶಿಯಂ, ಥಾಯಮಿನ್‌, ಸೋಡಿಯಂ ಮತ್ತು ಫೈಬರ್‌ಗಳಿಂದ ಪರಿಪೂರ್ಣವಾಗಿದೆ. ಅದು ನಮ್ಮನ್ನು ಹೃದಯರೋಗ, ಕ್ಯಾನ್ಸರ್‌, ಪಚನ ದೋಷಗಳು, ಕೂದಲುದುರುವುದು ಇತ್ಯಾದಿ ರೋಗಗಳಿಂದ ರಕ್ಷಿಸುತ್ತದೆ. ಇದು ಹೆಚ್ಚು ನೀರಿನಿಂದ ಕೂಡಿದ್ದು ಬಹಳ ಕಡಿಮೆ ಕ್ಯಾಲೋರಿಗಳಿವೆ. ನಾರಿನಂಶ ಹೇರಳವಾಗಿದೆ. ಹೀಗಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ವೈ ಫಾರ್‌ ಯಾಮ್ (ಗೆಣಸು) : ಮರಗೆಣಸು ಒಳ್ಳೆಯ ತರಕಾರಿಯಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಿನ ಪ್ರಮಾಣದಲ್ಲಿವೆ. ಈ ಗೆಣಸು ಶಕ್ತಿಯ ಒಳ್ಳೆಯ ಸ್ರೋತವಾಗಿದೆ. ಏಕೆಂದರೆ 100 ಗ್ರಾಂ ಮರಗೆಣಸು 118 ಕ್ಯಾಲೋರಿ ಕೊಡುತ್ತದೆ. ಇದರಲ್ಲಿರುವ ಫೈಬರ್‌ ಮಲಬದ್ಧತೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಜಟಿಲ ಕಾರ್ಬೋಹೈಡ್ರೇಟ್‌ನ ಒಳ್ಳೆಯ ಸ್ರೋತವಾಗಿರುವುದರಿಂದ ಇದು ಬ್ಲಡ್‌ ಶುಗರ್‌ನ ಮಟ್ಟದಲ್ಲಿ ಸತತವಾಗಿ ಹೆಚ್ಚಾಗುವಿಕೆಯನ್ನು ನಿಯಂತ್ರಿಸುವುದು.

ಆರ್‌ ಫಾರ್‌ ರಾಡಿಶ್‌ (ಮೂಲಂಗಿ) :  ಮೂಲಂಗಿಯಲ್ಲಿ ಫೈಟೋ ಕೆಮಿಕಲ್ಸ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ಅಂಶಗಳಿವೆ. ಜೊತೆಗೆ ಅದರಲ್ಲಿ ವಿಟಮಿನ್‌ `ಸಿ’ ಕೂಡ ಸಿಗುತ್ತದೆ. ಅದು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್‌ನಂತೆ ಕಾರ್ಯ ನಿರ್ವಹಿಸುತ್ತದೆ.

ಯು ಫಾರ್‌ ಉಗಲಿ (ಗಜನಿಂಬೆ) : ಇದು ಕ್ಯಾನ್ಸರ್‌, ಹಾರ್ಟ್‌ ಅಟ್ಯಾಕ್‌, ಹೈ ಬ್ಲಡ್‌ಪ್ರೆಷರ್‌ ಇತ್ಯಾದಿ ಅಪಾಯಗಳನ್ನು ಕಡಿಮೆಗೊಳಿಸುತ್ತದೆ. ಮಾಂಸಖಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಲಾಭಕಾರಿ. ಈ ಹಣ್ಣನ್ನು ತ್ವಚೆಗೆ ಸಂಬಂಧಿಸಿದ ರೋಗಗಳ ಸಂಬಂಧಗಳಲ್ಲೂ ತಿನ್ನಲು ಹೇಳಲಾಗುತ್ತದೆ.

ಝೆಡ್‌ ಫಾರ್‌ ಝುಕಿನಿ (ಆಸ್ಟ್ರೇಲಿಯನ್‌ ಸೌತೆಕಾಯಿ) : ಇದರಲ್ಲಿ ಶೇ.94ರಷ್ಟು ನೀರಿದೆ. ಕ್ಯಾಲೋರಿಯೂ ಬಹಳ ಕಡಿಮೆ ಪ್ರಮಾಣದಲ್ಲಿದೆ. ಇದರಲ್ಲಿರುವ ಫೈಬರ್‌ ಪಚನಕ್ರಿಯೆಗೆ ಸಹಾಯ ಮಾಡುತ್ತದೆ. ಮಲಬದ್ಧತೆ ತಡೆಯುತ್ತದೆ. ಬ್ಲಡ್‌ಶುಗರ್‌ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಝುಕಿನಿ ಕೊಲೆಸ್ಟ್ರಾಲ್ ಮಟ್ಟವನ್ನೂ ಕಡಿಮೆಗೊಳಿಸುತ್ತದೆ. ಇದರಲ್ಲಿ ಊತವನ್ನು ಶಮನಗೊಳಿಸುವ ಗುಣಗಳೂ ಇವೆ. ಹೀಗಾಗಿ ಇದು ಆಸ್ತಮಾ, ಮೂಳೆಗಳ ಕಾಯಿಲೆಯನ್ನು ತಡೆಯಲು ಮತ್ತೆ ಗೋಟ್ಸ್ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

– ಶ್ರೀಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ