ಬಿ. ಪಾವನಿ

ಕೊಂಚ  ಯೋಚಿಸಿ. ನಿಮ್ಮ ಲಗ್ನಪತ್ರಿಕೆ (ರಿಂಗ್‌ ಸೆರೆಮನಿ)ಯಲ್ಲಿ ನಿಮಗೆ ಉಂಗುರ ತೊಡಿಸಲು ಹುಡುಗ ನಿಮ್ಮ ಕೈ ಯಾಚಿಸುತ್ತಾನೆ ಮತ್ತು ಮರುಕ್ಷಣವೇ ನಿಮ್ಮ ಉಗುರುಗಳ ಸತ್ತಮುತ್ತ ಕತ್ತರಿಸಿದ, ಒಡೆದ ಕ್ಯುಟಿಕಲ್ಸ್ ನೋಡಿ ಅವನು ಹುಬ್ಬು ಗಂಟಿಕ್ಕಿದರೆ ನಿಮಗೆ ಏನನ್ನಿಸುತ್ತದೆ? ನಿಮ್ಮ ಬಾಯ್‌ಫ್ರೆಂಡ್‌ ಪ್ರೀತಿಯಿಂದ ನಿಮ್ಮ ಕೈ ಒತ್ತಿದಾಗ ನಿಮ್ಮ ಶುಷ್ಕ ಹಾಗೂ ಒರಟಾದ ತ್ವಚೆ ಆತನಿಗೆ ಚುಚ್ಚಿದರೆ ನಿಮ್ಮ ಮೇಲೆ ಯಾವ ಇಂಪ್ರೆಶನ್‌ ಬರಬಹುದು?

ಈಗೀಗ ಮಹಿಳೆಯರು ಮುಖದ ಸೌಂದರ್ಯದ ಜೊತೆ ಜೊತೆಯಲ್ಲೇ  ಕೈಕಾಲುಗಳ ಸೌಂದರ್ಯದ ಬಗ್ಗೆಯೂ ಗಮನಕೊಡುತ್ತಿದ್ದಾರೆ. ವಿಶೇಷವಾಗಿ ಕೈಗಳ ಸೌಂದರ್ಯಕ್ಕೆ ಅವರು ಹೆಚ್ಚು ಗಮನ ಕೊಡುತ್ತಿದ್ದಾರೆ. ಅದಕ್ಕೆ ಅವರು 15 ದಿನಗಳಿಗೊಮ್ಮೆ ಪಾರ್ಲರ್‌ಗೆ ಹೋಗುತ್ತಿದ್ದಾರೆ. ಯಾವಾಗಲೂ ಮಹಿಳೆಯರ ಉಗುರುಗಳು ನೇಲ್‌ಪಾಲಿಶ್‌ನಿಂದ ಅಲಂಕೃತವಾಗಿರುತ್ತವೆ. ಆದರೆ ಕೈಗಳ ಸೌಂದರ್ಯಕ್ಕೆ ಇಷ್ಟು ಸಾಕೆ? ದುಬಾರಿ ಮೆನಿಕ್ಯೂರ್‌ ನಂತರ ಬಹಳಷ್ಟು ಮಹಿಳೆಯರ ಕ್ಯುಟಿಕಲ್ಸ್ ಹೊರಬಂದಿರುತ್ತದೆ. ಅವು ಕೈಗಳ ಸೌಂದರ್ಯ ಕಡಿಮೆ ಮಾಡುತ್ತದೆ ಅಲ್ಲದೆ, ಉಗುರುಗಳಿಗೆ ಇನ್‌ಫೆಕ್ಷನ್‌ ಉಂಟುಮಾಡುತ್ತದೆ.

pretty_hands_and_feet_-_shutterstock

ವಿಶೇಷವಾಗಿ ಚಳಿಗಾಲದಲ್ಲಿ ತ್ವಚೆ ಶುಷ್ಕವಾದಾಗ ಕ್ಯುಟಿಕಲ್ಸ್ ಕೂಡ ಡ್ರೈ ಮತ್ತು ಕಠಿಣವಾಗುತ್ತವೆ. ಆಗ ಕ್ಯುಟಿಕಲ್ಸಿನ ತೊಂದರೆಯಿಂದ ಪರಿಹಾರ ಪಡೆಯಲು ಹಾಗೂ ಕೈಗಳ ಸೌಂದರ್ಯಕ್ಕೆ ಅಂಟಿದ ಕಲೆ ದೂರ ಮಾಡಲು ಮಹಿಳೆಯರು ಕ್ಯುಟಿಕಲ್ಸಿಗೆ ಹಾನಿ ಉಂಟುಮಾಡುವ ವಿಧಾನಗಳನ್ನು ಬಳಸುತ್ತಾರೆ. ಅನೇಕ ಬಾರಿ ಪರಿಸ್ಥಿತಿ ಎಷ್ಟು ಬಿಗಡಾಯಿಸುತ್ತದೆ ಎಂದರೆ ನೇಲ್‌ ಸರ್ಜರಿ ಮಾಡಿಸಬೇಕಾಗಿ ಬರುತ್ತದೆ.

ಇದರ ಬಗ್ಗೆ ಡರ್ಮಟಾಲಜಿಸ್ಟ್ ಡಾ. ರಮಣ್‌ ಹೀಗೆ ಹೇಳುತ್ತಾರೆ, ``ಹೆಚ್ಚಿನ ಮಹಿಳೆಯರು ಉಗುರುಗಳನ್ನು ಗಮನಿಸುವುದನ್ನು ಫ್ಯಾಷನ್‌ಗೆ ಹೊಂದಿಸಿ ನೋಡುತ್ತಾರೆ. ಆದರೆ ಉಗುರುಗಳ ಸ್ವಚ್ಛತೆ ಶರೀರದ ಇತರ ಭಾಗಗಳ ಸ್ವಚ್ಛತೆಯಂತೆಯೇ ಅಷ್ಟೇ ಅಗತ್ಯವಾಗಿದೆ. ಇಷ್ಟೇ ಅಲ್ಲ, ಕ್ಯುಟಿಕಲ್ಸ್ ಬಗ್ಗೆಯೂ ಅವರಿಗೆ ಮಾಹಿತಿ ಕಡಿಮೆ ಇರುತ್ತದೆ. ಹೆಚ್ಚಿನ ಮಹಿಳೆಯರು ಕ್ಯುಟಿಕಲ್ಸನ್ನು ಡೆಡ್‌ ಸ್ಕಿನ್‌ ಎಂದು ತಿಳಿದು ಅದನ್ನು ಕತ್ತರಿಸುತ್ತಾರೆ ಅಥವಾ ಹಲ್ಲಿನಿಂದ ಅಗಿಯುತ್ತಿರುತ್ತಾರೆ. ಕ್ಯುಟಿಕಲ್ಸ್ ತ್ವಚೆಯ ಮೃತ ಅಲ್ಲ, ಜೀವಿತ ಭಾಗವಾಗಿದೆ ಹಾಗೂ ಉಗುರುಗಳ ಸುರಕ್ಷಾ ಕವಚವಾಗಿದೆ. ಕ್ಯುಟಿಕಲ್ಸ್ ಉಗುರುಗಳನ್ನು ಬ್ಯಾಕ್ಟೀರಿಯಲ್ ಅಟ್ಯಾಕ್‌ ಮತ್ತು ಇನ್‌ಫೆಕ್ಷನ್‌ನಿಂದ ರಕ್ಷಿಸುತ್ತವೆ.

''ಒಂದು ವೇಳೆ ನಿಮ್ಮ ಕ್ಯುಟಿಕಲ್ಸ್ ಶುಷ್ಕ ಅಥವಾ ಒಡೆದಿದ್ದರೆ ಕೂಡಲೇ ಚಿಕಿತ್ಸೆ ಮಾಡಿಸುವುದು ಬಹಳ ಅಗತ್ಯ. ಏಕೆಂದರೆ ಚಿಕಿತ್ಸೆ ಇಲ್ಲದಿದ್ದರೆ ಕ್ಯುಟಿಕಲ್ಸ್ ಡ್ಯಾಮೇಜ್‌ ಆಗುತ್ತದೆ. ಅದರ ನೇರ ಪರಿಣಾಮ ಉಗುರುಗಳ ಮೇಲೆ ಬೀಳುತ್ತದೆ. ’’

ಡಾ. ರಮಣ್‌ ಪ್ರಕಾರ ಕ್ಯುಟಿಕಲ್ಸ್ ಡ್ಯಾಮೇಜ್‌ ಆಗುವುದರ ಅರ್ಥ ಉಗುರುಗಳ ಆಕಾರ ಹಾಳಾಗುವುದು. ಅನೇಕ ಬಾರಿ ಉಗುರುಗಳಲ್ಲಿ ಬಿಳಿ ಕಲೆ ಮತ್ತು ಗೆರೆಗಳು ಕಂಡುಬರುತ್ತವೆ. ಅದರಿಂದ ಕ್ಯುಟಿಕಲ್ಸ್ ಡ್ಯಾಮೇಜ್‌ ಆಗುತ್ತವೆ.

ಹೀಗಾಗದಿರಲು ಚಳಿಗಾಲ ಬಂದ ಕೂಡಲೇ ಕ್ಯುಟಿಕಲ್ಸ್ ಮೇಲೆ ಮಾಯಿಶ್ಚರೈಸರ್‌ ಹಚ್ಚಿ. ಡಾ. ರಮಣ್‌ ಹೀಗೆ ಹೇಳುತ್ತಾರೆ,  ಕ್ಯುಟಿಕಲ್ಸ್ ಮೇಲೆ  ಮಾಯಿಶ್ಚರೈಸರ್‌ ಹಚ್ಚುವುದಕ್ಕೂ ಒಂದು ವಿಧಾನವಿದೆ. ಯಾವುದೇ ಮಾಯಿಶ್ಚರೈಸರ್‌ ಹಚ್ಚುವುದರಿಂದ ಕ್ಯುಟಿಕಲ್ಸ್ ಡ್ಯಾಮೇಜ್‌ ಆಗುವುದನ್ನು ತಪ್ಪಿಸಲಾಗುವುದಿಲ್ಲ. ಅದಕ್ಕಾಗಿ ಹೆವಿ ಮಾಯಿಶ್ಚರೈಸರ್‌ ಕ್ರೀಂ ಬರುತ್ತದೆ. ಅದನ್ನು ಉಪಯೋಗಿಸಿದರೆ ಕ್ಯುಟಿಕಲ್ಸ್ ಒಡೆಯುವುದು, ಕತ್ತರಿಸುವುದನ್ನು ತಡೆಯಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ