ಬೇಸಿಗೆಯ ದಿನಗಳಲ್ಲಿ ಹೇರ್‌ಕಟ್ ಹೇರ್‌ಡೂ ಎರಡೂ ಹೇಗೆ ಹೊಂದಿಕೊಂಡಿರಬೇಕು ಎಂದರೆ, ಸ್ಟೈಲ್ ಬೊಂಬಾಟ್ ಆಗಿ ಮಿಂಚುವಂತಿರಬೇಕು ಹಾಗೂ ಮತ್ತೆ ಮತ್ತೆ ಕೂದಲನ್ನು ಸರಿಪಡಿಸಿಕೊಳ್ಳುವ ರಗಳೆಯೂ ಇರಬಾರದು. ಬನ್ನಿ, ಅಂಥ ಹೇರ್‌ಸ್ಟ್ಸೈಲ್ ಬಗ್ಗೆ ತಿಳಿಯೋಣ :
ಬಾಬ್ ಕಟ್ ಬಹಳ ಚಿಕ್ಕದೂ ಅಲ್ಲದ, ಉದ್ದವೂ ಅಲ್ಲದ ಈ ಸ್ಟೈಲ್ ನ್ನು ಬಾಬ್ ಕಟ್ ಎನ್ನುತ್ತಾರೆ. ಈ ಸ್ಟೈಲ್, ಬೇಸಿಗೆಯಲ್ಲಿ ಕಷ್ಟದಿಂದ ಬಿಡುಗಡೆ ಬಯಸುವ ಮತ್ತು ಕೂದಲನ್ನು ಅತಿ ಚಿಕ್ಕದಾಗಿ ಕತ್ತರಿಸಿಕೊಳ್ಳಲು ಬಯಸದ ಹೆಂಗಸರಿಗೆ ಬಲು ವಿಶಿಷ್ಟ ಎನಿಸುತ್ತದೆ. ಈ ಸ್ಟೈಲ್ ಗಾಗಿ ನೀವು ಬ್ಯಾಂಗಲ್ಸ್ ನ್ನು ಯಾವ ರೋಲರ್ಸ್ ಜೊತೆ ಫ್ಲಾಂಟ್ ಮಾಡಿಕೊಳ್ಳಬಹುದು.
ಅಸಿಮೆಟ್ರಿಕ್ ಬಾಬ್ ಕಟ್
ಈ ಕಟ್ ನಿಮ್ಮ ಮುಖವನ್ನು ಮತ್ತಷ್ಟು ಎತ್ತಿ ಹಿಡಿಯಬಲ್ಲದು. ಇದರಲ್ಲಿ ಹಿಂಭಾಗದ ಕೂದಲು ಚಿಕ್ಕದು ಹಾಗೂ ಮುಂಭಾಗದ ಕೂದಲು ದೊಡ್ಡದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಕಟ್‌ನಲ್ಲಿ ಲೆಫ್ಟ್ ಗಿಂತ ಹೆಚ್ಚಾಗಿ ರೈಟ್ ಸೈಡ್‌ನಲ್ಲಿ ಹೆಚ್ಚು ಕೂದಲು ಇರಿಸಿಕೊಳ್ಳುವ ಟ್ರೆಂಡ್ ಇದೆ. ಅಗತ್ಯವೆನಿಸಿದರೆ ನೀವು ಈ ಕಟ್ ಜೊತೆ ಸೈಡ್‌ನಲ್ಲಿ ಒಂದು ಉದ್ದನೆಯ ಫ್ರಿಂಜ್ ಸಹ ಇರಿಸಿಕೊಳ್ಳಬಹುದು.
ಬಾಬ್ ಲೇಯರ್ಸ್ ಶಾರ್ಟ್ ಹೇರ್ಸ್‌ನ ಈ ಲೇಟೆಸ್ಟ್ ಸ್ಟೈಲ್ ಇತ್ತೀಚೆಗೆ ಹೆಚ್ಚು ಜನಪ್ರಿಯ ಆಗುತ್ತಿದೆ. ರೊಮ್ಯಾಂಟಿಕ್ ಲುಕ್ಸ್ ಕ್ರಿಯೇಟ್ ಮಾಡುವ ಲೇಯರ್ಸ್ ಗೆ ಈಗ ಗಿಡ್ಡ ಕೂದಲಿರಿಸಿಕೊಂಡೂ ಕ್ಯಾರಿ ಮಾಡಬಹುದಾಗಿದೆ. ಈ ಸ್ಟೈಲ್ ನಿಂದ ನಿಮಗೆ ಸಾಫ್ಟ್ ಲುಕ್ಸ್ ಕೂಲ್ ಫೀಲ್ ಸಿಗಲಿದೆ.
ಕ್ರಾಪ್ ಸ್ಟೈಲ್
ಬೇಸಿಗೆಯ ಪ್ರಕೋಪದಿಂದ ತಪ್ಪಿಸಿಕೊಳ್ಳಲು ನೀವು ಕೂದಲನ್ನು ಶಾರ್ಟ್ ಆಗಿರಿಸಿಕೊಳ್ಳಲು ಬಯಸುವಿರಿ, ಜೊತೆಗೆ ಅದು ಸ್ಟೈಲಿಶ್ ಆಗಿಯೂ ಇರಬೇಕೆನಿಸಿದರೆ, ಆಗ ಕ್ರಾಪ್ ಸ್ಟೈಲ್ ಫಾಲೋ ಮಾಡಿ. ಇದರಲ್ಲಿ ಕೂದಲಿನ ತುದಿ ಬ್ರೋಕನ್ `’ ಆಕಾರದಲ್ಲಿ ಕಟ್ ಆಗಿರುತ್ತದೆ. ಹೀಗಾಗಿ ಇದನ್ನು ಮೇಂಟೇನ್ ಮಾಡಲು ಬಹಳ ಕಷ್ಟಪಡಬೇಕಿಲ್ಲ.
3D ಮ್ಯಾಜಿಕ್
ಕೂದಲನ್ನು ಉದ್ದಕ್ಕೆ ಇರಿಸಿಕೊಂಡು, ಉತ್ತಮ ಸ್ಟೈಲ್ ಬೇಕೆನಿಸಿದರೆ, ನೀವು ಈ 3D ಮ್ಯಾಜಿಕ್ ಹೇರ್ ಕಟ್ ಫಾಲೋ ಮಾಡಬಹುದು. ಇದರಲ್ಲಿ ಮೇಲ್ಭಾಗದ ಕೂದಲು ಶಾರ್ಟ್, ಕೆಳಗಿನದು ಲಾಂಗ್ ಹಾಗೂ ಮಧ್ಯದ್ದು ಮೀಡಿಯಂ ಆಗಿರುತ್ತದೆ.
ಈ ಕಟ್‌ನಿಂದ ಕೂದಲು ಉದ್ದ ಹಾಗೂ ದಟ್ಟವಾಗಿ ಕಂಡುಬರುತ್ತದೆ. ಈ ಸ್ಟೈಲ್ ನಿಮಗೆ ಸ್ಮಾರ್ಟ್ ಲುಕ್ಸ್ ನೀಡುತ್ತದೆ. 3D ಮ್ಯಾಜಿಕ್ ಕಟ್‌ನ ಮೋಡಿಯನ್ನು ನೀವು ಟ್ರೆಡಿಷನಲ್ ಮಾಡರ್ನ್ ಔಟ್‌ಫಿಟ್ಸ್ ಎರಡಕ್ಕೂ ಹೊಂದುವುದನ್ನು ಕಾಣಬಹುದು.
ಸೈಡ್ ಲೇಯರ್ ಕಟ್
ನಿಮ್ಮನ್ನು ನೀವು ಡಿಫರೆಂಟ್ ಲುಕ್ಸ್ ನಲ್ಲಿ ನೋಡಬಯಸಿದರೆ, ಕೂದಲಿಗೆ ಸೈಡ್ ಲೇಯರಿಂಗ್ ಸ್ಟೈಲ್ ನೀಡಬಹುದು. ಈ ಕಟ್ ಅಸಿಮೆಟ್ರಿಕ್ ಗೆಟಪ್‌ನಲ್ಲಿರುತ್ತದೆ. ಇದಕ್ಕಾಗಿ ಕಟ್ಸ್ ಗೆ ವೆಟ್ ಡ್ರೈಯರ್ ನೀಡಿ, ಲಘುವಾಗಿ ಸೆಟ್ ಮಾಡುವ ಅಗತ್ಯವಿದೆ. ಆದರೆ ಗಮನಿಸಿ, ಕೂದಲನ್ನು ನಿಮಗೆ ಸೂಟ್ ಆಗುವಂಥ ಸೈಡ್ ಕಡೆ ಮಾತ್ರ ಸೆಟ್ ಮಾಡಿಸಿ. ಈ ಸೈಡ್ ಲೇಯರಿಂಗ್ ನಿಮಗೆ ಮಾಡರ್ನ್ ಲುಕ್ಸ್ ಒದಗಿಸಿ, ಫೇಸ್‌ನ್ನು ಇನ್ನಷ್ಟು ಯಂಗ್ ಆಗಿಸುತ್ತದೆ. ಕೂದಲಿಗೆ ಕಲರ್ ಮಾಡಿದ್ದರೆ, ಅಂಥ ಲೇಯರಿಂಗ್ ನಿಮಗೆ ಬಹಳ ಸ್ಟೈಲಿಶ್ ಎನಿಸುತ್ತದೆ.
ಸಾಕ್ ಬನ್
ಉದ್ದನೆಯ ಕೂದಲು ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಉರಿ ಬೇಸಿಗೆಯಲ್ಲಿ ಈ ನೀಳ ಕೇಶರಾಶಿಯನ್ನು ಮೇಂಟೇನ್ ಮಾಡುವುದು ಕಡು ಕಷ್ಟವೇ ಸರಿ. ಹೀಗಾಗಿ ಈ ಸೀಸನ್‌ನಲ್ಲಿ `ಸಾಕ್ ಬನ್’ ಕ್ವಿಕ್ ಈಝಿ ಅನಿಸುತ್ತದೆ, ಜೊತೆಗೆ ಟ್ರೆಂಡಿಯೂ ಕೂಡ. ಇದರ ಫ್ಯಾಷನ್ ಕುರಿತು ಹೇಳುವುದಾದರೆ, ಹೊರಗಿನ ರಾಂಪ್ ಶೋಸ್‌ನಲ್ಲಿ ಇದು ಬಲು ಹಿಟ್ ಎನಿಸಿದೆ. ಹೊರಗಿನಿಂದ ಆ್ಯಕ್ಸೆಸರೀಸ್ ತರಿಸಬೇಕಾದ ಅಗತ್ಯ ಇಲ್ಲ. ಬಳಸದ ಹೊಸ ಸಾಕ್ಸ್ ಒಂದಿದ್ದರೆ ಸಾಕು, ಈ ಸ್ಟೈಲ್ ಬಲು ರೀಸೆನೆಬ್ ಎನಿಸಿದೆ, ಕೂದಲಿನ ವಾಲ್ಯೂಂ ಹೆಚ್ಚಿಸುತ್ತದೆ.
ಫಿಶ್ ಟೇಲ್
ಇದು ನೋಡಲು ತುಸು ಕಠಿಣಕರ ಎನಿಸಿದರೂ, ಇದನ್ನು ನೀವು ಕೇವಲ 5 ನಿಮಿಷಗಳಲ್ಲಿ ರೆಡಿ ಮಾಡಬಹುದು. ಇದನ್ನು ಸಿದ್ಧಪಡಿಸಲು ನಿಮ್ಮ ಕೂದಲನ್ನು 2 ಭಾಗವಾಗಿ ವಿಭಜಿಸಿ. ಒಂದು ಕಡೆಯಿಂದ ಸ್ವಲ್ಪ ಕೂದಲು ತೆಗೆದುಕೊಳ್ಳಿ. ಹಾಗೇ ಇನ್ನೊಂದು ಕಡೆಯಿಂದ ಮತ್ತಷ್ಟು ಕೂದಲು ತೆಗೆದುಕೊಳ್ಳಿ. ಈ ರೀತಿ ಅಡಿ ಭಾಗದವರೆಗೆ ಇಡೀ ಕೂದಲ ರಾಶಿಗೆ ಜಡೆ ಹೆಣೆಯಿರಿ. ಈ ಜಡೆ ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ ಎರಡೂ ಬಗೆಯ ಉಡುಗೆಗಳಿಗೆ ಹೊಂದುತ್ತದೆ.
ಸ್ಲೀಕ್ಡ್ ಬ್ಯಾಕ್ ಪೋನಿ
ಪೋನಿಟೇಲ್ ಸಿದ್ಧಪಡಿಸುವ ಈ ಲೇಟೆಸ್ಟ್ ಪ್ಯಾಟರ್ನ್ ಕೇವಲ ನಿಮ್ಮ ಫಾರ್ಮಲ್ ಔಟ್‌ಫಿಟ್ ಮಾತ್ರವಲ್ಲದೆ, ಕ್ಯಾಶ್ಯುಯೆಲ್ಸ್ ಗೂ ಹೊಂದುತ್ತದೆ. ಕೂದಲಿಗೆ ಪ್ರೆಸ್ಸಿಂಗ್ ಮೆಶೀನ್ ನೆರವಿನಿಂದ ಸ್ಟ್ರೇಟ್ ಲುಕ್ ಕೊಡಿ, ಅದಾದ ಮೇಲೆ ಇದಕ್ಕೆ ಲಘುವಾಗಿ ಜೆಲ್ ಸವರಿಬಿಡಿ. ಹೀಗೆ ಮಾಡುವುದರಿಂದ ಲುಕ್ ಸ್ಲೀಕ್ಡ್ ಆಗಿ ಕಾಣಿಸುತ್ತದೆ. ಜೊತೆಗೆ ಸ್ಟೈಲ್ ಕೂಡ ಹೆಚ್ಚು ಹೊತ್ತು ಉಳಿಯುತ್ತದೆ. ಇದಾದ ಮೇಲೆ ಕ್ರೌನ್ ಏರಿಯಾದಿಂದ ಕೋಂಬ್ ಮಾಡುತ್ತಾ, ಕೂದಲನ್ನು ಮೇಲೆತ್ತಿ ಹಾಗೂ ಅಡಿಭಾಗದತ್ತ ಕಿವಿಗಳ ಲೆವೆಲ್ ವರೆಗೂ ಟೈಟ್ ಪೋನಿಟೇಲ್ ಮಾಡಿ.
ಕಾರ್ಪೊರೇಟ್ ಬನ್
ನಿಮ್ಮ ಲುಕ್ಸ್ ಗೆ ಕಾರ್ಪೊರೇಟ್ ಸ್ಟೈಲ್ ನೀಡಲು ನಿಮ್ಮ ಕೂದಲು ಬಿಲ್‌ಕುಲ್ ಉತ್ತಮ ರೀತಿಯಲ್ಲಿ ಟೈ ಆಗಿರಬೇಕು, ಜೊತೆಗೆ ಆಗಾಗ ಮುಖದ ಮೇಲೆ ಹಾಯುತ್ತಿರಬಾರದು. ಹೀಗಾಗಿ ಎಲ್ಲಕ್ಕೂ ಮೊದಲು ಕೂದಲನ್ನು ಬಾಚಣಿಗೆಯಿಂದ ಸಿಕ್ಕಿಲ್ಲದಂತೆ ಬಿಡಿಸಿ, ಅದಕ್ಕೆ ಜೆಲ್ ಸವರಿ, ಸೆಟ್ ಮಾಡಿ. ಆಗ ಅದು ಸಲೀಸಾಗಿ ಅಂಟಿಕೊಳ್ಳುತ್ತದೆ. ಇದಾದ ಮೇಲೆ ಸೈಡ್ ಪಾರ್ಟಿಶನ್ ಮಾಡಿ, ಫ್ರಂಟ್‌ನಿಂದ ಫಿಂಗರ್ ಕೋಂಬ್ ಮಾಡಿ, ಕೊನೆಯಲ್ಲಿ ಎಲ್ಲಾ ಕೂದಲನ್ನೂ ಸೇರಿಸಿ ಹಿಂದಕ್ಕೆ ತಂದು ಕೊಂಡೆ (ಬನ್) ಮಾಡಿ, ಬಾಬ್ ಪಿನ್ನುಗಳಿಂದ ಅದನ್ನು ಫಿಕ್ಸ್ ಮಾಡಿ.
ಈ ಬನ್‌ಗೆ ಲಘು ಫ್ಯಾಷನೆಬಲ್ ಟಚ್ ನೀಡುವುದಕ್ಕಾಗಿ ಅದನ್ನು ಸ್ಟೈಲಿಶ್ ಆ್ಯಕ್ಸೆಸರೀಸ್‌ನಿಂದ ಅಲಂಕರಿಸಿ, ಕಲರ್‌ಫುಲ್ ಪಿನ್ನುಗಳಿಂದ ಸೆಟ್ ಮಾಡಿ. ಈ ಸ್ಟೈಲ್‌ನಿಂದ ಎಲ್ಲಾ ಕೂದಲೂ ಒಟ್ಟಿಗೆ ಬಂಧಿಸಲ್ಪಡುತ್ತದೆ, ಹೀಗಾಗಿ ನಿಮಗೆ ಬೇಸಿಗೆಯಲ್ಲಿ ತೊಂದರೆಯ ಪ್ರಶ್ನೆಯೇ ಬರುವುದಿಲ್ಲ.
ಫನ್‌ಹಾಫ್ ಬನ್
ಹಾಫ್ ಪೋನಿಯ ಈ ಲೇಟೆಸ್ಟ್ ವರ್ಷನ್ ಬೇಸಿಗೆಗೆ ಬಲು ಹಿತಕರ. ಈ ಸ್ಟೈಲ್ ನೋಡಲು, ಕೇಳಲು ಮಾತ್ರವಲ್ಲದೆ ಸಿದ್ಧಪಡಿಸಲೂ ಸಹ ಸುಲಭವೆನಿಸಿದೆ. ಹಾಗಿದ್ದರೆ ತಡವೇಕೆ? ಕ್ಯೂಟ್ ಕೂಲ್ ಸ್ಟೈಲಿಂಗ್‌ಗಾಗಿ ಈ ಬೇಸಿಗೆಯಲ್ಲಿ ಫನ್ ನಿಮ್ಮದಾಗಿಸಿಕೊಳ್ಳಿ.
– ಟಿ. ಭಾರ್ಗವಿ