ಬೇಸಿಗೆಯ ದಿನಗಳಲ್ಲಿ ಹೇರ್‌ಕಟ್ ಹೇರ್‌ಡೂ ಎರಡೂ ಹೇಗೆ ಹೊಂದಿಕೊಂಡಿರಬೇಕು ಎಂದರೆ, ಸ್ಟೈಲ್ ಬೊಂಬಾಟ್ ಆಗಿ ಮಿಂಚುವಂತಿರಬೇಕು ಹಾಗೂ ಮತ್ತೆ ಮತ್ತೆ ಕೂದಲನ್ನು ಸರಿಪಡಿಸಿಕೊಳ್ಳುವ ರಗಳೆಯೂ ಇರಬಾರದು. ಬನ್ನಿ, ಅಂಥ ಹೇರ್‌ಸ್ಟ್ಸೈಲ್ ಬಗ್ಗೆ ತಿಳಿಯೋಣ :
ಬಾಬ್ ಕಟ್ ಬಹಳ ಚಿಕ್ಕದೂ ಅಲ್ಲದ, ಉದ್ದವೂ ಅಲ್ಲದ ಈ ಸ್ಟೈಲ್ ನ್ನು ಬಾಬ್ ಕಟ್ ಎನ್ನುತ್ತಾರೆ. ಈ ಸ್ಟೈಲ್, ಬೇಸಿಗೆಯಲ್ಲಿ ಕಷ್ಟದಿಂದ ಬಿಡುಗಡೆ ಬಯಸುವ ಮತ್ತು ಕೂದಲನ್ನು ಅತಿ ಚಿಕ್ಕದಾಗಿ ಕತ್ತರಿಸಿಕೊಳ್ಳಲು ಬಯಸದ ಹೆಂಗಸರಿಗೆ ಬಲು ವಿಶಿಷ್ಟ ಎನಿಸುತ್ತದೆ. ಈ ಸ್ಟೈಲ್ ಗಾಗಿ ನೀವು ಬ್ಯಾಂಗಲ್ಸ್ ನ್ನು ಯಾವ ರೋಲರ್ಸ್ ಜೊತೆ ಫ್ಲಾಂಟ್ ಮಾಡಿಕೊಳ್ಳಬಹುದು.
ಅಸಿಮೆಟ್ರಿಕ್ ಬಾಬ್ ಕಟ್
ಈ ಕಟ್ ನಿಮ್ಮ ಮುಖವನ್ನು ಮತ್ತಷ್ಟು ಎತ್ತಿ ಹಿಡಿಯಬಲ್ಲದು. ಇದರಲ್ಲಿ ಹಿಂಭಾಗದ ಕೂದಲು ಚಿಕ್ಕದು ಹಾಗೂ ಮುಂಭಾಗದ ಕೂದಲು ದೊಡ್ಡದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಕಟ್‌ನಲ್ಲಿ ಲೆಫ್ಟ್ ಗಿಂತ ಹೆಚ್ಚಾಗಿ ರೈಟ್ ಸೈಡ್‌ನಲ್ಲಿ ಹೆಚ್ಚು ಕೂದಲು ಇರಿಸಿಕೊಳ್ಳುವ ಟ್ರೆಂಡ್ ಇದೆ. ಅಗತ್ಯವೆನಿಸಿದರೆ ನೀವು ಈ ಕಟ್ ಜೊತೆ ಸೈಡ್‌ನಲ್ಲಿ ಒಂದು ಉದ್ದನೆಯ ಫ್ರಿಂಜ್ ಸಹ ಇರಿಸಿಕೊಳ್ಳಬಹುದು.
ಬಾಬ್ ಲೇಯರ್ಸ್ ಶಾರ್ಟ್ ಹೇರ್ಸ್‌ನ ಈ ಲೇಟೆಸ್ಟ್ ಸ್ಟೈಲ್ ಇತ್ತೀಚೆಗೆ ಹೆಚ್ಚು ಜನಪ್ರಿಯ ಆಗುತ್ತಿದೆ. ರೊಮ್ಯಾಂಟಿಕ್ ಲುಕ್ಸ್ ಕ್ರಿಯೇಟ್ ಮಾಡುವ ಲೇಯರ್ಸ್ ಗೆ ಈಗ ಗಿಡ್ಡ ಕೂದಲಿರಿಸಿಕೊಂಡೂ ಕ್ಯಾರಿ ಮಾಡಬಹುದಾಗಿದೆ. ಈ ಸ್ಟೈಲ್ ನಿಂದ ನಿಮಗೆ ಸಾಫ್ಟ್ ಲುಕ್ಸ್ ಕೂಲ್ ಫೀಲ್ ಸಿಗಲಿದೆ.
ಕ್ರಾಪ್ ಸ್ಟೈಲ್
ಬೇಸಿಗೆಯ ಪ್ರಕೋಪದಿಂದ ತಪ್ಪಿಸಿಕೊಳ್ಳಲು ನೀವು ಕೂದಲನ್ನು ಶಾರ್ಟ್ ಆಗಿರಿಸಿಕೊಳ್ಳಲು ಬಯಸುವಿರಿ, ಜೊತೆಗೆ ಅದು ಸ್ಟೈಲಿಶ್ ಆಗಿಯೂ ಇರಬೇಕೆನಿಸಿದರೆ, ಆಗ ಕ್ರಾಪ್ ಸ್ಟೈಲ್ ಫಾಲೋ ಮಾಡಿ. ಇದರಲ್ಲಿ ಕೂದಲಿನ ತುದಿ ಬ್ರೋಕನ್ `' ಆಕಾರದಲ್ಲಿ ಕಟ್ ಆಗಿರುತ್ತದೆ. ಹೀಗಾಗಿ ಇದನ್ನು ಮೇಂಟೇನ್ ಮಾಡಲು ಬಹಳ ಕಷ್ಟಪಡಬೇಕಿಲ್ಲ.
3D ಮ್ಯಾಜಿಕ್
ಕೂದಲನ್ನು ಉದ್ದಕ್ಕೆ ಇರಿಸಿಕೊಂಡು, ಉತ್ತಮ ಸ್ಟೈಲ್ ಬೇಕೆನಿಸಿದರೆ, ನೀವು ಈ 3D ಮ್ಯಾಜಿಕ್ ಹೇರ್ ಕಟ್ ಫಾಲೋ ಮಾಡಬಹುದು. ಇದರಲ್ಲಿ ಮೇಲ್ಭಾಗದ ಕೂದಲು ಶಾರ್ಟ್, ಕೆಳಗಿನದು ಲಾಂಗ್ ಹಾಗೂ ಮಧ್ಯದ್ದು ಮೀಡಿಯಂ ಆಗಿರುತ್ತದೆ.
ಈ ಕಟ್‌ನಿಂದ ಕೂದಲು ಉದ್ದ ಹಾಗೂ ದಟ್ಟವಾಗಿ ಕಂಡುಬರುತ್ತದೆ. ಈ ಸ್ಟೈಲ್ ನಿಮಗೆ ಸ್ಮಾರ್ಟ್ ಲುಕ್ಸ್ ನೀಡುತ್ತದೆ. 3D ಮ್ಯಾಜಿಕ್ ಕಟ್‌ನ ಮೋಡಿಯನ್ನು ನೀವು ಟ್ರೆಡಿಷನಲ್ ಮಾಡರ್ನ್ ಔಟ್‌ಫಿಟ್ಸ್ ಎರಡಕ್ಕೂ ಹೊಂದುವುದನ್ನು ಕಾಣಬಹುದು.
ಸೈಡ್ ಲೇಯರ್ ಕಟ್
ನಿಮ್ಮನ್ನು ನೀವು ಡಿಫರೆಂಟ್ ಲುಕ್ಸ್ ನಲ್ಲಿ ನೋಡಬಯಸಿದರೆ, ಕೂದಲಿಗೆ ಸೈಡ್ ಲೇಯರಿಂಗ್ ಸ್ಟೈಲ್ ನೀಡಬಹುದು. ಈ ಕಟ್ ಅಸಿಮೆಟ್ರಿಕ್ ಗೆಟಪ್‌ನಲ್ಲಿರುತ್ತದೆ. ಇದಕ್ಕಾಗಿ ಕಟ್ಸ್ ಗೆ ವೆಟ್ ಡ್ರೈಯರ್ ನೀಡಿ, ಲಘುವಾಗಿ ಸೆಟ್ ಮಾಡುವ ಅಗತ್ಯವಿದೆ. ಆದರೆ ಗಮನಿಸಿ, ಕೂದಲನ್ನು ನಿಮಗೆ ಸೂಟ್ ಆಗುವಂಥ ಸೈಡ್ ಕಡೆ ಮಾತ್ರ ಸೆಟ್ ಮಾಡಿಸಿ. ಈ ಸೈಡ್ ಲೇಯರಿಂಗ್ ನಿಮಗೆ ಮಾಡರ್ನ್ ಲುಕ್ಸ್ ಒದಗಿಸಿ, ಫೇಸ್‌ನ್ನು ಇನ್ನಷ್ಟು ಯಂಗ್ ಆಗಿಸುತ್ತದೆ. ಕೂದಲಿಗೆ ಕಲರ್ ಮಾಡಿದ್ದರೆ, ಅಂಥ ಲೇಯರಿಂಗ್ ನಿಮಗೆ ಬಹಳ ಸ್ಟೈಲಿಶ್ ಎನಿಸುತ್ತದೆ.