ಉರಿ ಬೇಸಿಗೆಯಲ್ಲಿ ಹೊರಗೆ ಓಡಾಡುವುದರಿಂದ ನಮ್ಮ ಚರ್ಮ ಸನ್ ಬರ್ನ್ ಗೆ ಒಳಗಾಗುತ್ತದೆ. ಇದರ ವಿರುದ್ಧ ಸುರಕ್ಷಾ ಕವಚ ಪಡೆಯುವುದು ಹೇಗೆಂದು ನೋಡೋಣವೇ?
ಸನ್ಸ್ಕ್ರೀನ್ನ್ನು ಸನ್ಬ್ಲಾಕ್ ಕ್ರೀಂ, ಸನ್ಟ್ಯಾನ್ ಲೋಶನ್, ಸನ್ಬರ್ನ್ ಕ್ರೀಂ, ಸನ್ಕ್ರೀಂ ಎಂದೂ ಕರೆಯುತ್ತಾರೆ. ಇದು ಲೋಶನ್, ಸ್ಪ್ರೇ, ಜೆಲ್ ರೂಪಗಳಲ್ಲಿ ಲಭ್ಯ. ಇಲ್ಲಿ ಸೂರ್ಯನ UV ಕಿರಣಗಳನ್ನು ಪರಾವರ್ತಿಸಿ, ಸನ್ಬರ್ನ್ನಿಂದ ಸುರಕ್ಷೆ ಒದಗಿಸಲಾಗುತ್ತದೆ. ಯಾವ ಮಹಿಳೆಯರು ಸನ್ಸ್ಕ್ರೀನ್ ಉಪಯೋಗಿಸುವುದಿಲ್ಲವೋ ಅಂಥವರಿಗೆ ತ್ವಚೆಯ ಕ್ಯಾನ್ಸರ್ ಆಗುವ ಸಾಧ್ಯತೆಗಳು ಹೆಚ್ಚು. ನಿಯಮಿತವಾಗಿ ಸನ್ಸ್ಕ್ರೀನ್ ಬಳಸುವುದರಿಂದ ಸುಕ್ಕು, ನಿರಿಗೆಗಳು ಕಡಿಮೆಯಾಗಿ, ಅವು ನಿಧಾನವಾಗಿ ಮೂಡುತ್ತವೆ. ಯಾರ ಚರ್ಮ ಸೂರ್ಯನ UV ಕಿರಣಗಳಿಗೆ ಅತಿ ಸಂವೇದನಾಶೀಲವಾಗಿ ಪ್ರತಿಕ್ರಿಯಿಸುತ್ತದೋ ಅಂಥವರು ಪ್ರತಿದಿನ ತಪ್ಪದೆ ಸನ್ಸ್ಕ್ರೀನ್ ಬಳಸಬೇಕು.
SPF ….. ಎಂದರೇನು?
SPF UV ಕಿರಣಗಳಿಂದ ಸನ್ಸ್ಕ್ರೀನ್ ಮೂಲಕ ಗಳಿಸುವಂಥ ಸುರಕ್ಷತೆಯನ್ನು ಅಳೆಯುವ ವೈಜ್ಞಾನಿಕ ಅಳತೆ. ಆದರೆ SPF ಎಂದೂ, ಸನ್ಸ್ಕ್ರೀನ್ ಯಾವ ಉತ್ತಮ ವಿಧಾನದಿಂದ UV ಕಿರಣಗಳಿಂದ ಸುರಕ್ಷೆ ಒದಗಿಸುತ್ತದೆಂದು ಅಳೆಯವುದು. ಸಾಮಾನ್ಯವಾಗಿ ಚರ್ಮದ ವಿಶೇಷಜ್ಞರು SPF 15 ಅಥವಾ SPF 30 ಬಳಸುವ ಸಲಹೆ ನೀಡುತ್ತಾರೆ. ಗಮನಿಸಿ, ಅಧಿಕ SPF ಅಧಿಕ ಸುರಕ್ಷತೆಯ ಗ್ಯಾರಂಟಿ ನೀಡುವುದು!
ಸನ್ಸ್ಕ್ರೀನ್ ಬಳಸದಿದ್ದರೆ ಹಾನಿ
ಸನ್ಸ್ಕ್ರೀನ್ ಎಲ್ಲಾ ಋತುಮಾನಗಳಿಗೂ ಅಗತ್ಯಬೇಕು. ಅದರಲ್ಲೂ ಬೇಸಿಗೆಯಲ್ಲಿ ಇದರ ಬಳಕೆ ಅನಿವಾರ್ಯ. ಈ ಸೀಸನ್ ಚರ್ಮ ರೋಗಗಳ ಸೀಸನ್ ಎಂದೇ ಪರಿಗಣಿಸಲ್ಪಟ್ಟಿದೆ. ಈ ಸೀಸನ್ನಲ್ಲಿ ಸಮ್ಮರ್ ರಾಶೆಸ್, ಫೋಟೋ ಡರ್ಮೈಟಿಸ್, ಹೆಚ್ಚು ಬೆವರುವಿಕೆಯ ಸಮಸ್ಯೆ, ಫಂಗಲ್/ಬ್ಯಾಕ್ಟೀರಿಯಾ ಇನ್ಫೆಕ್ಷನ್ ಇತ್ಯಾದಿಗಳಿಂದ ಮಹಿಳೆಯರು ಹೆಚ್ಚು ಕಷ್ಟಪಡುತ್ತಾರೆ. ಬೇಸಿಗೆಯಲ್ಲಿ ಸ್ವಲ್ಪ ದೂರ ಬಿಸಿಲಿನಲ್ಲಿ ಓಡಾಡುವುದರಿಂದ ಸನ್ಟ್ಯಾನ್, ಸನ್ಬರ್ನ್ ಸಮಸ್ಯೆಗಳು ಹೆಚ್ಚುತ್ತವೆ. ಟ್ಯಾನಿಂಗ್ ಎಲ್ಲಕ್ಕಿಂತಲೂ ಹೆಚ್ಚು ಹಿಂಸೆ ನೀಡುತ್ತದೆ. ಹೀಗಾಗಿ ಮನೆಯಿಂದ ಹೊರಹೋಗುವ ಮೊದಲು ಉತ್ತಮ ಗುಣಮಟ್ಟದ ಸನ್ಸ್ಕ್ರೀನ್ ಬಳಸಲು ಮರೆಯದಿರಿ.
ಯಾವ ಮಹಿಳೆಯರು ಸನ್ಸ್ಕ್ರೀನ್ ಬಳಸುವುದಿಲ್ಲವೋ, ಅವರು ಬೇಗನೇ ವೃದ್ಧಾಪ್ಯಕ್ಕೆ ಬಲಿಯಾಗುತ್ತಾರೆ. ಅವರಿಗೆ ಬೇಗನೇ ಸುಕ್ಕು, ನೆರಿಗೆಗಳು ಮೂಡುತ್ತವೆ. UV ಕಿರಣಗಳ ಅತ್ಯದಿಕ ಎಕ್ಸ್ ಪೋಶರ್ ತ್ವಚೆಯ ಕ್ಯಾನ್ಸರ್ಗೆ ಕಾರಣವಾಗಬಹುದು.
ಸನ್ಸ್ಕ್ರೀನ್ ಆರಿಸುವುದು ಹೇಗೆ?
ಸಮರ್ಪಕ ಸನ್ಸ್ಕ್ರೀನ್ನ ಆಯ್ಕೆ ಅತಿ ಅಗತ್ಯ. ಸಾಮಾನ್ಯವಾಗಿ ಮಹಿಳೆಯರು SPF 15 ಬಳಸುತ್ತಾರೆ. ಇದು ಉತ್ತಮ ಕೂಡ, ಆದರೆ ಯಾರದು ಅತಿ ಎಂಬಷ್ಟು ಗೌರವರ್ಣ, ಚರ್ಮದ ಕ್ಯಾನ್ಸರ್ನ ಕೌಟುಂಬಿಕ ಹಿನ್ನೆಲೆ ಇದೆಯೋ ಅಥವಾ ಲುಪುಸ್ ಮುಂತಾದ ಕಾಯಿಲೆಗಳ ಕಾರಣ ತ್ವಚೆ ಸೂರ್ಯನ ಕಿರಣಗಳಿಗೆ ಅತ್ಯಧಿಕ ಸಂವೇದನಾಶೀಲವಾಗಿದ್ದರೆ, ಅಂಥವರಿಗೆ SPF 30 ಅಥವಾ ಅದಕ್ಕಿಂತಲೂ ಅಧಿಕ SPFವುಳ್ಳ ಸನ್ಸ್ಕ್ರೀನ್ ಹಚ್ಚಿಕೊಳ್ಳಬೇಕು. ನೀವೇನಾದರೂ SPF 15 ಗಿಂತ SPF 30 ಎರಡುಪಟ್ಟು ಹೆಚ್ಚು ಉತ್ತಮ ಎಂದು ಭಾವಿಸಿದರೆ ಅದು ತಪ್ಪು. SPF 15, 93% UV ಕಿರಣಗಳನ್ನು ಫಿಲ್ಟರ್ ಮಾಡಿದರೆ, SPF 30, ಇದಕ್ಕಿಂತಲೂ ತುಸು ಅಧಿಕ ಅಂದರೆ 97% UV ಕಿರಣಗಳನ್ನು ಫಿಲ್ಟರ್ ಮಾಡುತ್ತದೆ.
ಚರ್ಮ ತಜ್ಞರ ಪ್ರಕಾರ, ಕನಿಷ್ಠ SPF 30ಯ ಸನ್ಸ್ಕ್ರೀನ್ ಆದರೂ ಬಳಸುವುದು ಲೇಸು. ಎಷ್ಟೋ ಮಹಿಳೆಯರು SPF 50 ಸಹ ಬಳಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಎಲ್ಲೂ ನಿಮಗೆ ಹಾನಿಕಾರಕ UV ಕಿರಣಗಳಿಂದ 100% ಸುರಕ್ಷೆ ಒದಗಿಸಬಲ್ಲಂಥ ಸನ್ಸ್ಕ್ರೀನ್ ಇಲ್ಲವೆಂದೇ ಹೇಳಬೇಕು. ಸದಾ ಅತ್ಯುತ್ತಮ ಬ್ರ್ಯಾಂಡ್ನ ಸನ್ಸ್ಕ್ರೀನ್ನ್ನೇ ಬಳಸಬೇಕು. ಯಾರು ಹೆಚ್ಚು ಬೆವರುತ್ತಾರೋ, ಅಂಥವರು ವಾಟರ್ ಪ್ರೂಫ್ ಯಾ ಸ್ವೆಟ್ಪ್ರೂಫ್ ಸನ್ಸ್ಕ್ರೀನ್ನ್ನು ಅಗತ್ಯವಾಗಿ ಬಳಸಬೇಕು.
ಸನ್ಸ್ಕ್ರೀನ್ನ್ನು ಎಷ್ಟು/ಹೇಗೆ ಬಳಸಬೇಕು?
ಎಂಥ ಸನ್ಸ್ಕ್ರೀನೇ ಆದರೂ, ಅದನ್ನು ನೀವು ಪ್ರತಿನಿತ್ಯ ಸಮರ್ಪಕ ರೀತಿಯಲ್ಲಿ ಬಳಸದಿದ್ದರೆ ಅದರಿಂದ ಹೆಚ್ಚಿನ ಲಾಭ ಸಿಗುವುದಿಲ್ಲ. ಇದಕ್ಕಾಗಿ ಕೆಲವು ಸಲಹೆಗಳು :
– ಬಿಸಿಲಲ್ಲಿ ಹೊರಡುವ 15-20 ನಿಮಿಷಕ್ಕೆ ಮುನ್ನ ಮಾತ್ರ, ಸನ್ಸ್ಕ್ರೀನ್ ಹಚ್ಚಿಕೊಳ್ಳಬೇಕು. ಇದನ್ನು ಊರಿಗೆ ಮುಂಚೆ ಹಚ್ಚಿಕೊಳ್ಳಬೇಡಿ.
– ಹೊರಗೆ ಹೊರಡುವ ಮುನ್ನ ಮೇಕಪ್ ಮಾಡಿಕೊಳ್ಳುವ ಐಡಿಯಾ ಇದ್ದರೆ, ಮೊದಲು ಸನ್ಸ್ಕ್ರೀನ್ ಹಚ್ಚಿ ನಂತರ ಮೇಕಪ್ ಮಾಡಿ. ಉಲ್ಟಾ ಮಾಡಿದರೆ ಲಾಭವಿಲ್ಲ.
– ಸನ್ಸ್ಕ್ರೀನ್ ಬಳಸಲು ಜಿಪುಣತನ ಬೇಡ, ಧಾರಾಳವಾಗಿ ಹಚ್ಚಿಕೊಳ್ಳಿ.
– ಮುಖಕ್ಕಷ್ಟೇ ಅಲ್ಲ, ದೇಹದ ತೆರೆದ ಭಾಗಗಳು…. ಅಂದ್ರೆ ಸ್ಲೀವ್ ಲೆಸ್ ಬಳಸುವಾಗ ತೋಳು, ಕುತ್ತಿಗೆ, ಬೆನ್ನಿನ ಭಾಗ, ಸೊಂಟದ ಹಿಂಭಾಗ ಇತ್ಯಾದಿ.
– ಪ್ರತಿ 2 ಗಂಟೆಗೊಮ್ಮೆ ಸನ್ಸ್ಕ್ರೀನ್ ಹಚ್ಚುತ್ತಿರಿ.
– ನೀವು ಬಿಸಿಲಲ್ಲಿ ಹೊರಡುವುದು ಕಡಿಮೆ ಆದರೆ, ನಿಮ್ಮ ಸನ್ಸ್ಕ್ರೀನ್ ಖರ್ಚಾಗುವುದೂ ಕಡಿಮೆ. ಹಾಗೇಂತ ಜಿಪುಣತನಕ್ಕಾಗಿ ಎಕ್ಸ್ ಪೈರಿ ಆದ ಮೇಲೂ ಡೇಟ್ ಕಡೆ ನಿರ್ಲಕ್ಷ್ಯ ತೋರಿ ಅದೇ ಹಳೆಯದ್ದನ್ನೇ ಹಚ್ಚುತ್ತಿರಬೇಡಿ, ಅದೇನೂ ಪರಿಣಾಮ ಬೀರದು.
ಸನ್ಸ್ಕ್ರೀನ್ : ಮಿಥ್ಯೆ ಸತ್ಯಗಳು
ಮಿಥ್ಯೆ : ಸನ್ಸ್ಕ್ರೀನ್ ಹಚ್ಚುವುದರಿಂದ ಎಂದೂ ಸನ್ಟ್ಯಾನ್ ಆಗುವುದಿಲ್ಲ.
ಸತ್ಯ : ನೀವು SPF 30 ಸನ್ಸ್ಕ್ರೀನ್ ಹಚ್ಚುವಿರಾದರೆ, ನೀವು ಸನ್ಬರ್ನ್ನಿಂದ ಪಾರಾಗುವಿರಿ. ಹಾಗೆಯೇ ಉತ್ತಮ ಸನ್ಸ್ಕ್ರೀನ್ ನಿಮ್ಮನ್ನು UV ಕಿರಣಗಳಿಂದಲೂ ಕಾಪಾಡುತ್ತವೆ. ಆದರೆ ಸನ್ಸ್ಕ್ರೀನ್ ಹಚ್ಚಿ ಬಹಳ ಹೊತ್ತು ನೀವು ಬಿಸಿಲಲ್ಲಿ ಓಡಾಡುತ್ತಿದ್ದರೆ, ನಿಮಗೆ ಸನ್ಟ್ಯಾನ್ ಸಮಸ್ಯೆ ಆಗಬಹುದು.
ಮಿಥ್ಯೆ : ನೀರಿದ್ದಾಗ ಸನ್ಬರ್ನ್ ಆಗದು.
ಸತ್ಯ : ಸುಡುವಂಥ ಬಿಸಿಲಿದ್ದಾಗ ನೀರು ದೇಹಕ್ಕೆ ತಂಪು ನೀಡುವುದಂತೂ ನಿಜ. ಆದರೆ ನೀರಿನಲ್ಲಿ ಮುಳುಗಿದ ದೇಹ ಸೂರ್ಯನ ಕಿರಣಗಳಿಂದ ಸುರಕ್ಷಿತ ಆಗಿರುತ್ತದೆ ಎಂದುಕೊಳ್ಳುವುದು ಖಂಡಿತಾ ಸರಿಯಲ್ಲ. ಏಕೆಂದರೆ ವಾಸ್ತದಲ್ಲಿ ನೀರು UV ಕಿರಣಗಳನ್ನು ಪರಾವರ್ತಿತಗೊಳಿಸುತ್ತದೆ. ಹೀಗೆ ನಮ್ಮನ್ನು ಇದರ ಕುರಿತು ಹೆಚ್ಚು ಎಕ್ಸ್ ಪೋಸ್ ಮಾಡುತ್ತದೆ.
ಮಿಥ್ಯೆ : ಕಾರು/ಬಸ್ಸಿನ ಕಿಟಕಿಯಿಂದ ಹಾದುಬರುವ ಸೂರ್ಯ ಕಿರಣ ನಿಮಗೇನೂ ಹಾನಿ ಮಾಡದು.
ಸತ್ಯ : ಹಾಗೇನೂ ಇಲ್ಲ. ಹಾನಿಕಾರಕ UV ಕಿರಣಗಳು ಕಿಟಕಿ ಗಾಜನ್ನು ಸುಲಭವಾಗಿ ಹಾದು ಬರುತ್ತವೆ. ನೀವು ವಿಂಡೋ ಸೀಟ್ ಬಳಿ ಕೂರಬಯಸಿದರೆ, ಕೆಲಸದ ಸಲುವಾಗಿ ಲಾಂಗ್ ಡ್ರೈವ್ ಹೊರಡುತ್ತಿದ್ದರೆ, ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸನ್ಸ್ಕ್ರೀನ್ ಹಚ್ಚಿಯೇ ನೀವು ಕಾರು/ಬಸ್ಸನ್ನು ಹತ್ತಬೇಕು.
– ಡಾ. ಮಂಗಳಾ ಪ್ರಸಾದ್