ಉರಿ ಬೇಸಿಗೆಯಲ್ಲಿ ಹೊರಗೆ ಓಡಾಡುವುದರಿಂದ ನಮ್ಮ ಚರ್ಮ ಸನ್ ಬರ್ನ್ ಗೆ ಒಳಗಾಗುತ್ತದೆ. ಇದರ ವಿರುದ್ಧ ಸುರಕ್ಷಾ ಕವಚ ಪಡೆಯುವುದು ಹೇಗೆಂದು ನೋಡೋಣವೇ?
ಸನ್‌ಸ್ಕ್ರೀನ್‌ನ್ನು ಸನ್‌ಬ್ಲಾಕ್ ಕ್ರೀಂ, ಸನ್‌ಟ್ಯಾನ್ ಲೋಶನ್, ಸನ್‌ಬರ್ನ್ ಕ್ರೀಂ, ಸನ್‌ಕ್ರೀಂ ಎಂದೂ ಕರೆಯುತ್ತಾರೆ. ಇದು ಲೋಶನ್, ಸ್ಪ್ರೇ, ಜೆಲ್ ರೂಪಗಳಲ್ಲಿ ಲಭ್ಯ. ಇಲ್ಲಿ ಸೂರ್ಯನ UV ಕಿರಣಗಳನ್ನು ಪರಾವರ್ತಿಸಿ, ಸನ್‌ಬರ್ನ್‌ನಿಂದ ಸುರಕ್ಷೆ ಒದಗಿಸಲಾಗುತ್ತದೆ. ಯಾವ ಮಹಿಳೆಯರು ಸನ್‌ಸ್ಕ್ರೀನ್ ಉಪಯೋಗಿಸುವುದಿಲ್ಲವೋ ಅಂಥವರಿಗೆ ತ್ವಚೆಯ ಕ್ಯಾನ್ಸರ್ ಆಗುವ ಸಾಧ್ಯತೆಗಳು ಹೆಚ್ಚು. ನಿಯಮಿತವಾಗಿ ಸನ್‌ಸ್ಕ್ರೀನ್ ಬಳಸುವುದರಿಂದ ಸುಕ್ಕು, ನಿರಿಗೆಗಳು ಕಡಿಮೆಯಾಗಿ, ಅವು ನಿಧಾನವಾಗಿ ಮೂಡುತ್ತವೆ. ಯಾರ ಚರ್ಮ ಸೂರ್ಯನ UV ಕಿರಣಗಳಿಗೆ ಅತಿ ಸಂವೇದನಾಶೀಲವಾಗಿ ಪ್ರತಿಕ್ರಿಯಿಸುತ್ತದೋ ಅಂಥವರು ಪ್ರತಿದಿನ ತಪ್ಪದೆ ಸನ್‌ಸ್ಕ್ರೀನ್ ಬಳಸಬೇಕು.
SPF ..... ಎಂದರೇನು?
SPF UV ಕಿರಣಗಳಿಂದ ಸನ್‌ಸ್ಕ್ರೀನ್ ಮೂಲಕ ಗಳಿಸುವಂಥ ಸುರಕ್ಷತೆಯನ್ನು ಅಳೆಯುವ ವೈಜ್ಞಾನಿಕ ಅಳತೆ. ಆದರೆ SPF ಎಂದೂ, ಸನ್‌ಸ್ಕ್ರೀನ್ ಯಾವ ಉತ್ತಮ ವಿಧಾನದಿಂದ UV ಕಿರಣಗಳಿಂದ ಸುರಕ್ಷೆ ಒದಗಿಸುತ್ತದೆಂದು ಅಳೆಯವುದು. ಸಾಮಾನ್ಯವಾಗಿ ಚರ್ಮದ ವಿಶೇಷಜ್ಞರು SPF 15 ಅಥವಾ SPF 30 ಬಳಸುವ ಸಲಹೆ ನೀಡುತ್ತಾರೆ. ಗಮನಿಸಿ, ಅಧಿಕ SPF ಅಧಿಕ ಸುರಕ್ಷತೆಯ ಗ್ಯಾರಂಟಿ ನೀಡುವುದು!
ಸನ್‌ಸ್ಕ್ರೀನ್ ಬಳಸದಿದ್ದರೆ ಹಾನಿ
ಸನ್‌ಸ್ಕ್ರೀನ್ ಎಲ್ಲಾ ಋತುಮಾನಗಳಿಗೂ ಅಗತ್ಯಬೇಕು. ಅದರಲ್ಲೂ ಬೇಸಿಗೆಯಲ್ಲಿ ಇದರ ಬಳಕೆ ಅನಿವಾರ್ಯ. ಈ ಸೀಸನ್ ಚರ್ಮ ರೋಗಗಳ ಸೀಸನ್ ಎಂದೇ ಪರಿಗಣಿಸಲ್ಪಟ್ಟಿದೆ. ಈ ಸೀಸನ್‌ನಲ್ಲಿ ಸಮ್ಮರ್ ರಾಶೆಸ್, ಫೋಟೋ ಡರ್ಮೈಟಿಸ್, ಹೆಚ್ಚು ಬೆವರುವಿಕೆಯ ಸಮಸ್ಯೆ, ಫಂಗಲ್/ಬ್ಯಾಕ್ಟೀರಿಯಾ ಇನ್‌ಫೆಕ್ಷನ್ ಇತ್ಯಾದಿಗಳಿಂದ ಮಹಿಳೆಯರು ಹೆಚ್ಚು ಕಷ್ಟಪಡುತ್ತಾರೆ. ಬೇಸಿಗೆಯಲ್ಲಿ ಸ್ವಲ್ಪ ದೂರ ಬಿಸಿಲಿನಲ್ಲಿ ಓಡಾಡುವುದರಿಂದ ಸನ್‌ಟ್ಯಾನ್, ಸನ್‌ಬರ್ನ್ ಸಮಸ್ಯೆಗಳು ಹೆಚ್ಚುತ್ತವೆ. ಟ್ಯಾನಿಂಗ್ ಎಲ್ಲಕ್ಕಿಂತಲೂ ಹೆಚ್ಚು ಹಿಂಸೆ ನೀಡುತ್ತದೆ. ಹೀಗಾಗಿ ಮನೆಯಿಂದ ಹೊರಹೋಗುವ ಮೊದಲು ಉತ್ತಮ ಗುಣಮಟ್ಟದ ಸನ್‌ಸ್ಕ್ರೀನ್ ಬಳಸಲು ಮರೆಯದಿರಿ.
ಯಾವ ಮಹಿಳೆಯರು ಸನ್‌ಸ್ಕ್ರೀನ್ ಬಳಸುವುದಿಲ್ಲವೋ, ಅವರು ಬೇಗನೇ ವೃದ್ಧಾಪ್ಯಕ್ಕೆ ಬಲಿಯಾಗುತ್ತಾರೆ. ಅವರಿಗೆ ಬೇಗನೇ ಸುಕ್ಕು, ನೆರಿಗೆಗಳು ಮೂಡುತ್ತವೆ. UV ಕಿರಣಗಳ ಅತ್ಯದಿಕ ಎಕ್ಸ್ ಪೋಶರ್ ತ್ವಚೆಯ ಕ್ಯಾನ್ಸರ್‌ಗೆ ಕಾರಣವಾಗಬಹುದು.
ಸನ್‌ಸ್ಕ್ರೀನ್ ಆರಿಸುವುದು ಹೇಗೆ?
ಸಮರ್ಪಕ ಸನ್‌ಸ್ಕ್ರೀನ್‌ನ ಆಯ್ಕೆ ಅತಿ ಅಗತ್ಯ. ಸಾಮಾನ್ಯವಾಗಿ ಮಹಿಳೆಯರು SPF 15 ಬಳಸುತ್ತಾರೆ. ಇದು ಉತ್ತಮ ಕೂಡ, ಆದರೆ ಯಾರದು ಅತಿ ಎಂಬಷ್ಟು ಗೌರವರ್ಣ, ಚರ್ಮದ ಕ್ಯಾನ್ಸರ್‌ನ ಕೌಟುಂಬಿಕ ಹಿನ್ನೆಲೆ ಇದೆಯೋ ಅಥವಾ ಲುಪುಸ್ ಮುಂತಾದ ಕಾಯಿಲೆಗಳ ಕಾರಣ ತ್ವಚೆ ಸೂರ್ಯನ ಕಿರಣಗಳಿಗೆ ಅತ್ಯಧಿಕ ಸಂವೇದನಾಶೀಲವಾಗಿದ್ದರೆ, ಅಂಥವರಿಗೆ SPF 30 ಅಥವಾ ಅದಕ್ಕಿಂತಲೂ ಅಧಿಕ SPFವುಳ್ಳ ಸನ್‌ಸ್ಕ್ರೀನ್ ಹಚ್ಚಿಕೊಳ್ಳಬೇಕು. ನೀವೇನಾದರೂ SPF 15 ಗಿಂತ SPF 30 ಎರಡುಪಟ್ಟು ಹೆಚ್ಚು ಉತ್ತಮ ಎಂದು ಭಾವಿಸಿದರೆ ಅದು ತಪ್ಪು. SPF 15, 93% UV ಕಿರಣಗಳನ್ನು ಫಿಲ್ಟರ್ ಮಾಡಿದರೆ, SPF 30, ಇದಕ್ಕಿಂತಲೂ ತುಸು ಅಧಿಕ ಅಂದರೆ 97% UV ಕಿರಣಗಳನ್ನು ಫಿಲ್ಟರ್ ಮಾಡುತ್ತದೆ.