ಮಾಧ್ಯಮ ಸಂಸ್ಥೆ ಜೀ಼, 854 ಮಿಲಿಯನ್ ವೀಕ್ಷಕರನ್ನು 208 ಮಿಲಿಯನ್ ಮನೆಗಳ ಮೂಲಕ ತಲುಪಿ ತನ್ನ ಹೊಸ ಬ್ರ್ಯಾಂಡ್ ಟ್ಯಾಗ್ ಲೈನ್ "ನಿಮ್ಮ ನಂಬಿಕೆಯ Z' ಅನ್ನುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಈಗ ಈ ಭಾಂಧವ್ಯವನ್ನು ಮತ್ತಷ್ಟು ಪುಷ್ಟಿಗೊಳಿಸಲು 'Z What's Next" ಅನ್ನುವ ಮೂಲಕ ನೆಟ್ವರ್ಕ್ ಟ್ರಾನ್ಸ್ಫರ್ಮೇಷನ್ ನ ಕಂಟೆಂಟ್ ತಂತ್ರಜ್ಞಾನದ ಪವರ್ ಹೌಸ್ ಮೂಲಕ ಮಾಡಲು ಹೊರಟಿದೆ.
'Z What's ನೆಕ್ಸ್ಟ್' ಇಂಡಸ್ಟ್ರಿ ಯಲ್ಲಿಯೇ ಮೊದಲ ಪ್ರಯತ್ನವಾಗಿದ್ದು ಜೀ಼ ತನ್ನ ಪಾರ್ಟ್ನರ್ ಗಳ ಜೊತೆಗೂಡಿ ಮನರಂಜನೆಯ ಮರುಕಲ್ಪನೆಯನ್ನು ಮಾಡುತ್ತಿದೆ. ಇದರಲ್ಲಿ ಜೀ಼ ಯ ಕಂಟೆಂಟ್ ಗಳು ಹೇಗೆ ನಿರಾಯಾಸವಾಗಿ ಡಿವೈಸ್ ಗಳಲ್ಲಿ ಎಲ್ಲಾ ಪ್ಲಾಟ್ಫಾರ್ಮ್ ಗಳಲ್ಲಿ ಕ್ರಿಯೇಟಿವಿಟಿ ಮತ್ತು ತಂತ್ರಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ ಎಲ್ಲವನ್ನು ಹೇಗೆ ಸರಿದೂಗಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಮಾರುಕಟ್ಟೆದಾರರಿಗೆ ಇದು ಒಳ್ಳೆಯ ಅವಕಾಶವಾಗಿದ್ದು ಇಲ್ಲಿ 30 ಸೆಕೆಂಡ್ ಗಳ ಜಾಹಿರಾತು ಹೇಗೆ ಕ್ಯಾರೆಕ್ಟರ್ ಗಳಾಗಿ ಬದಲಾಗುತ್ತದೆ ಮತ್ತು ಜೀ಼ ಇದನ್ನು ಹೇಗೆ ವಿನ್ಯಾಸಗೊಳಿಸುತ್ತದೆ ಎಂದು ತೋರಿಸಿಕೊಡುವುದಲ್ಲದೇ ಭಾರತದ ಮನರಂಜನೆಯ ಮುಂದಿನ ಭವಿಷ್ಯಕ್ಕೆ ಪಾರ್ಟ್ನರ್ ಗಳನ್ನೂ ಆಹ್ವಾನಿಸುತ್ತದೆ.
ಕಂಟೆಂಟ್ ಬಗ್ಗೆ ಜನರ ಅಭಿರುಚಿ ಬದಲಾದರೂ ಇಂದಿಗೂ ದೂರದರ್ಶನ ಹೇಗೆ ವೀಕ್ಷಕರ ಅಚ್ಚುಮೆಚ್ಚಿನ ಮತ್ತು ಪವರ್ಫುಲ್ ಪ್ಲಾಟ್ಫಾರ್ಮ್ ಆಗಿರುವುದರಲ್ಲಿ ಜೀ಼ ಯ ಪ್ರಯತ್ನ ಬೆಟ್ಟದಷ್ಟಿದೆ. ಜೀ಼ ಯ ಕಂಟೆಂಟ್ ಗಳು ಟೆಲಿವಿಷನ್ ನಿಂದ, OTT, ಸೋಶಿಯಲ್ ಮೀಡಿಯಾ ಎಲ್ಲಾ ಪ್ಲಾಟ್ಫಾರ್ಮ್ ಗಳಿಗೆ ಹೇಳಿಮಾಡಿಸಿದ ಹಾಗಿದೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ತನ್ನ ಟೆಕ್ ಪವರ್ ಹೌಸ್ ಮತ್ತು ಉತ್ತಮ್ಮ ಕಂಟೆಂಟ್ ಮೂಲಕ ಜೀ಼ ಎರಡು ಹೈಬ್ರಿಡ್ ಚಾನೆಲ್ಗಳನ್ನೂ ಬಿಡುಗಡೆ ಮಾಡಲು ಹೊರಟಿದೆ. 'Z What's Next' ಮೂಲಕ ಬರ್ತಿದೆ 2 ಚಾನೆಲ್ ಗಳು 'ಜೀ಼ ಪವರ್' ಮತ್ತು 'ಜೀ಼ ಸೋನಾರ್ ಬಾಂಗ್ಲಾ'.
ಜೀ ಪವರ್ ಕರ್ನಾಟಕದ ಯುವ ಪೀಳಿಗೆಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ಕನ್ನಡ ಹೈಬ್ರಿಡ್ ಚಾನೆಲ್ ಆಗಿದೆ. ಈ ಹೊಸ ಚಾನೆಲ್ ದಿಟ್ಟ, ಯುವಪೀಳಿಗೆಯ ಮಹತ್ವಾಕಾಂಕ್ಷೆಯ ಕಥೆಗಳ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ. ಇದು ಆಗಸ್ಟ್ 2025 ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಮಲ್ಟಿಮೀಡಿಯಾ ಅಭಿಯಾನದೊಂದಿಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಇನ್ನು ಈ ಹೊಸ ಚಾನೆಲ್ ನಲ್ಲಿ ಶುರುವಿಗೆ 5 ಧಾರಾವಾಹಿಗಳು, 1 ದಿನನಿತ್ಯ ಪ್ರಸಾರ ಆಗುವ ರಿಯಾಲಿಟಿ ಶೋ, ಜೊತೆಗೆ ದಿನವೂ ಸಿನೆಮಾ ಪ್ರಸಾರ ಆಗಲಿದೆ.
‘Z’ Whats Next ನಲ್ಲಿ, ವರ್ಷಗಳಿಂದ ದೇಶದಾದ್ಯಂತ 11 ಭಾಷೆಗಳಲ್ಲಿ 50 ಚಾನೆಲ್ ಗಳೊಂದಿಗೆ ಮನರಂಜನೆಯಲ್ಲಿ ವೀಕ್ಷಕರಿಗೆ ಮೊದಲ ಆಯ್ಕೆ ಆಗಿರುವ ಜೀ ನೆಟ್‌ವರ್ಕ್ ಅನ್ನು ಹೈಲೈಟ್ ಮಾಡಲಾಗಿದೆ. ಜೀ ತನ್ನ ವಿಭಿನ್ನ ಕಥೆಗಳ ಮೂಲಕ ಭಾರತದ ಪ್ರತಿಯೊಂದು ಭಾಷೆಯ ವೀಕ್ಷಕರಿಗೂ ಭಾವನಾತ್ಮಕವಾಗಿ ಹಾಗು ದೃಶ್ಯಾತ್ಮಕವಾಗಿ ಹತ್ತಿರವಾಗಿದೆ. ಈ ಕಥೆಗಳಲ್ಲಿ ನಮ್ಮ ಜೀವನದ ಮೇಲೆ ಪ್ರಭಾವ ಬೀರುವ ಕೆಲವು ಪಾತ್ರಗಳು ಕೂಡ ಇರಲಿವೆ.