ಇತ್ತೀಚೆಗೆ ರಾಷ್ಟ್ರದ ರಾಜಧಾನಿಯಲ್ಲಿ ಗೃಹಿಣಿಯರಿಗಾಗಿ ಏರ್ಪಡಿಸಲಾಗಿದ್ದ ಸೌಂದರ್ಯ ಸ್ಪರ್ಧೆ, ಮಿಸೆಸ್‌ ಇಂಡಿಯಾ ದಿ ಗಾಡೆಸ್ ಪೇಜೆಂಟ್‌ ನಲ್ಲಿ, ಒಬ್ಬರಿಗಿಂತ ಒಬ್ಬರು ಕಣ್ಣು ಕೊರೈಸುವಂತೆ ಗ್ಲಾಮರಸ್‌ ಆಗಿ ಮಿಂಚಿದ ದೆಹಲಿಯ ಗೃಹಿಣಿಯರು, ರಾಂಪ್ ನಲ್ಲಿ ಬೆಕ್ಕಿನ ನಡಿಗೆಯಲ್ಲಿ  ವೈಯಾರ ತೋರಿದಾಗ, ನೆರೆದಿದ್ದ ಸಾವಿರಾರು ಪ್ರೇಕ್ಷಕರು ದಂಗಾದರು! ಬಾಲಿವುಡ್‌ ಸ್ಟಾರ್‌ ರಿಮಿ ಸೇನ್ ಕಾರ್ಯಕ್ರಮಕ್ಕೆ ಆಗಮಿಸಿದಾಗ, ಇವೆಟ್‌ ಮತ್ತಷ್ಟು ಮಗದಷ್ಟು ಕಳೆಗಟ್ಟಿತು! ಮಧು ಕಮ್‌ ಮೋಶನ್‌ ಪಿಕ್ಚರ್ಸ್‌ ಹಾಗೂ ಯುವತಿಯರ ಅಚ್ಚುಮೆಚ್ಚಿನ ಮಾಸಪತ್ರಿಕೆ `ಗೃಹಶೋಭಾ’ ಸಹಪ್ರಾಯೋಜಕತ್ವದಲ್ಲಿ ನಡೆದ ಈ ಸೌಂದರ್ಯ ಸ್ಪರ್ಧೆ, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಅತಿ ಯಶಸ್ವಿಯಾಗಿ ನೆರವೇರಿತು.

MRS-India2

ಈ ಸೌಂದರ್ಯ ಸ್ಪರ್ಧೆಯ ರಾಂಪ್‌ ವಾಕ್‌ ನಲ್ಲಿ ಕ್ಲಾಸಿಕ್‌ ಕ್ಯಾಟಗರಿಯಲ್ಲಿ ಸೋನ್‌ ಅರೋರಾ ವಿಜೇತೆಯಾದರೆ, ಡಾ. ಚಿಂತನಾ ಚೌಧರಿ ಉಪವಿಜೇತೆ ಎನಿಸಲು, ಸುಮೇಧಾ ಸಿಲ್ವಂಕರ್‌ ದ್ವಿತೀಯ ಉಪವಿಜೇತೆ ಎನಿಸಿದರು. ಅದೇ ತರಹ ರಾಯ್ ಕ್ಯಾಟಗರಿಯಲ್ಲಿ ಪಲ್ಲವಿ ಚೋಪ್ರ ವಿಜೇತೆ, ವಾಟಿಕಾ ನೋರಿಯೆಲ್ ‌ಉಪವಿಜೇತೆ ಹಾಗೂ ಬಬೀತಾ ವರ್ಮ ದ್ವಿತೀಯ ಉಪವಿಜೇತೆಯಾಗಿ ಆಯ್ಕೆಯಾದರು. ಎಲೈಟ್‌ ಕ್ಯಾಟಗಿರಿಯಲ್ಲಿ ಅಂಜು ಗುಪ್ತಾ ವಿಜೇತೆ ಆದರು!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ