ಪಬ್ಲಿಕ್ ಟಾಯ್ಲೆಟ್ ಅಥವಾ ಬಯಲು ಪ್ರದೇಶದಲ್ಲಿ ಹೆಂಗಸರು ದೇಹಬಾಧೆ ತೀರಿಸಿಕೊಳ್ಳುವ ಬದಲು ಈ ಆಧುನಿಕ ತಂತ್ರ ಉಪಯೋಗಿಸಬಾರದೇಕೆ? ಹೇಗೆ ಅಂತೀರಾ.....?
ಸಾಮಾನ್ಯವಾಗಿ ಹೆಂಗಸರು ಹೆಲ್ಚ್ ಹೈಜೀನ್ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಮೇಲ್ನೋಟಕ್ಕೆ ಸ್ವಚ್ಛತೆ ಶುಭ್ರತೆ ಇರುವಂತೆ ಕಂಡುಬಂದರೂ, ಪಬ್ಲಿಕ್ ಟಾಯ್ಲೆಟ್ ಭಯ ತಪ್ಪಿದ್ದ್ದಲ್ಲ. ನೀವು ಎಲ್ಲೇ ಗಮನಿಸಿ, ಪಬ್ಲಿಕ್ ಟಾಯ್ಲೆಟ್ ಗಳು ಅನ್ ಹೈಜಿನಿಕ್ ಆಗಿರುವುದೇ ಹೆಚ್ಚು.ಹೊರಗೆ ಬಂದ ಮೇಲೆ ಯಾರೇ ಆಗಲಿ, ಸುರಕ್ಷಿತ ಜಾಗದಲ್ಲಿ ದೇಹಬಾಧೆಯ ನಿವಾರಣೆ ಅನಿವಾರ್ಯ. ಗಂಡಸರಿಗೇನೋ ಬಯಲು ಪ್ರದೇಶ ಹೇಳಿ ಮಾಡಿಸಿದ್ದು. ಆದರೆ ಈ ನಿಟ್ಟಿನಲ್ಲಿ ಹೆಂಗಸರು ಏನು ಮಾಡಬೇಕು? ಹಾಗಾಗಿಯೇ ಬಲವಂತವಾಗಿ ಮೂತ್ರ ವಿಸರ್ಜನೆಗೆ ಹೋಗದೆ, ಹೊರಗೆ ಬಂದು ಕೆಲಸ ಕಾರ್ಯ ಮುಗಿಸಿ, 4-5 ಗಂಟೆಗಳ ನಂತರ ಮನೆಗೆ ಹಿಂದಿರುಗಿದಾಗಲೇ ಹೆಂಗಸರು ಬಾತ್ ರೂಮಿಗೇ ಓಡುತ್ತಾರೆ. ಇದು ಟಾಕ್ಸಿಕ್ ಆಗಿ ಅವರಿಗೆ ಹಲವಾರು ಹಿಂಸೆ ನೀಡುತ್ತದೆ, ಕಿಡ್ನಿ ಸ್ಟೋನ್ಸ್ ಗೆ ಮೂಲವಾಗುತ್ತದೆ. ಅದರ ನಿವಾರಣೆಗಾಗಿ ಪಬ್ಲಿಕ್ ಟಾಯ್ಲೆಟ್ ಬಳಸಿದರೆ ಸೋಂಕು, ವಾಟರ್ ಇನ್ ಫೆಕ್ಷನ್ ಕಟ್ಟಿಟ್ಟ ಬುತ್ತಿ. ವಜೈನ್ ಇನ್ ಫೆಕ್ಷನ್ ಗೆ ಪಬ್ಲಿಕ್ ಟಾಯ್ಲೆಟ್ ಬಳಕೆಯೇ ಮೂಲ ಎಂದರೆ ತಪ್ಪಾಗಲಾರದು. ಹಾಗಾದರೆ ಆರೋಗ್ಯಕ್ಕೆ ಕೇಡಾಗದೆ ಇರಲು ಹೆಂಗಸರು ಏನು ಮಾಡಬೇಕು? ಈ ಜಂಜಾಟಗಳೇ ಬೇಡ, ಪಬ್ಲಿಕ್ ಟಾಯ್ಲೆಟ್ ಗೆ ಹೋದರೆ ತಾನೇ ಕಷ್ಟ ಎಂದು ಹೆಂಗಸರು 3-4 ಗಂಟೆ ಕಾಲ ಬೇಕೆಂದೇ ನೀರು ಕುಡಿಯದೇ ಕಷ್ಟ ಪಡುವುದೂ ಮಾಮೂಲೇ! ಖಂಡಿತಾ ಇದರಿಂದ ಅನಾರೋಗ್ಯ ತಪ್ಪಿದ್ದಲ್ಲ. ಮೂತ್ರ ವಿಸರ್ಜನೆಯನ್ನು ಬಲವಂತವಾಗಿ ತಡೆ ಹಿಡಿಯುವುದು, ಬೇಕೆಂದೇ ನಿರ್ಜಲ ಉಪವಾಸ ಅಥವಾ ಗಂಟೆಗಟ್ಟಲೇ ನೀರು ಕುಡಿಯದೇ ಇದ್ದುಬಿಟ್ಟರೆ, ಅದಕ್ಕಿಂತ ಕೆಟ್ಟದ್ದು ಬೇರೇನಿಲ್ಲ. ಇದರಿಂದ ಕಿಡ್ನಿ ಬೇಗ ಹಾಳಾಗುತ್ತದೆ.
ಹಾಗಾದರೆ ಇದಕ್ಕೆ ಪರಿಹಾರವೇನು?
ಪಬ್ಲಿಕ್ ಟಾಯ್ಲೆಟ್ ಬಳಕೆಯನ್ನು ಮಾಡದಿರಲೆಂದೇ ಹೆಂಗಸರಿಗಾಗಿ ಈಗ `ಪೋರ್ಟೆಬಲ್ ಟಾಯ್ಲೆಟ್'ನ ಕಾನ್ಸೆಪ್ಟ್ ಬಂದಿದೆ. ಅವರಿಗಾಗಿ ಎಂದೇ ಎಲ್ಲೆಂದರಲ್ಲಿಗೆ ಕೊಂಡೊಯ್ಯಬಹುದಾದ ಮೂತ್ರ ವಿಲೇವಾರಿಯ ಸಾಧನವೇ ಈ ಪೋರ್ಟೆಬಲ್ ಟಾಯ್ಲೆಟ್. ಹೆಚ್ಚಿನ ಮಾಹಿತಿ
ಈಗ ಎಲ್ಲಿ ನೋಡಿದರೂ ಪಬ್ಲಿಕ್ ಟಾಯ್ಲೆಟ್ ಎಂದಾಕ್ಷಣ ಅದು ವೆಸ್ಟರ್ನ್ ಟಾಯ್ಲೆಟ್ಟೇ ಆಗಿರುತ್ತದೆ. ಅದಕ್ಕೆ ಹೋಲಿಸಿದರೆ, ನಮ್ಮ ಈಸ್ಟರ್ನ್ ಟಾಯ್ಲೆಟ್ಸ್ ಎಷ್ಟೋ ಹೈಜಿನಿಕ್ ಎನ್ನಬಹುದು. ಮಂಡಿ ನೋವು ಉಳ್ಳರಿಗೆ ಮಾತ್ರ ಇದರಿಂದ ತುಸು ಕಷ್ಟ. ಪಬ್ಲಿಕ್ ಟಾಯ್ಲೆಟ್ ಎಂದ ಮೇಲೆ ಒಂದು ದಿನಕ್ಕೆ ಅದನ್ನು ಹಲವಾರು ಮಂದಿ ಬಳಸುವುದು ಸಹಜ. ಹೀಗಾಗಿ ಪಬ್ಲಿಕ್ ಟಾಯ್ಲೆಟ್ ನಲ್ಲಿ ಹೈಜೀನ್ ಬಯಸುವುದು ಮೂರ್ಖತನ.
ಈ ಪೋರ್ಟೆಬ್ ಟಾಯ್ಲೆಟ್ ನ್ನು ನೀವು ಶಾಲೆ, ಕಾಲೇಜ್, ಆಸ್ಪತ್ರೆ, ಏರ್ ಪೋರ್ಟ್, ರೈಲು.... ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸುಲಭವಾಗಿ ಬಳಸಬಹುದು. ಇದನ್ನು ಬಳಸಲು ಟಾಯ್ಲೆಟ್ ಸೀಟ್ ಮೇಲೆ ಕೂರಬೇಕೆಂಬ ಜಂಜಾಟವಿಲ್ಲ, ಅಂದ್ರೆ ಇತರರ ರೋಗಾಣು ನಿಮ್ಮನ್ನು ತಗುಲುವುದೇ ಇಲ್ಲ! ಹೆಂಗಸರು ನಿಂತುಕೊಂಡೇ ಇದರ ಬಳಕೆ ಮಾಡಬಹುದು. ಗರ್ಭವತಿಯರಿಗೆ ಇದಂತೂ ವರದಾನವೇ ಸರಿ. ಗರ್ಭಿಣಿಯರು ಹೆಚ್ಚು ಬಗ್ಗಬಾರದು, ಹೀಗಾಗಿ ಸೀದಾ ನಿಂತು ಬಳಸುವ ಕ್ರಮ ಇಲ್ಲಿ ಅನುಕೂಲಕರ.