ಶಾರ್ಟ್ ಸ್ಕರ್ಟ್ ಯಾ ಡೀಪ್ ಲೋ ನೆಕ್ ಡ್ರೆಸ್ ಧರಿಸಿ ಯಾವುದೇ ಇವೆಂಟ್ ಯಾ ಪ್ರಮೋಶನ್ ಗಾಗಿ ಓಡಾಡುವ ತಾರೆಯರಿಗೆ ಅಸಹಜತೆ, ಇರಿಸುಮುರಿಸು ಹೊಸತೇನಲ್ಲ. ಇದು ತಂತಾನೇ ಆಗಿರುತ್ತದೋ ಅಥವಾ ಇವರೇ ಮೇಲೆ ಬಿದ್ದು ಮಾಡಿಕೊಳ್ಳುತ್ತಾರೋ.... ಅವರೇ ಹೇಳಬೇಕು. ಸೋನಾಳ `ದಹಾಡ್' ಚಿತ್ರದ ಪ್ರಮೋಟ್ ಗಾಗಿ ಹೊರಟ ಹುಮಾಳ ಕಥೆ ಕೇಳಿ. ಹುಮಾ ಇನ್ನರ್ ವೇರ್ ಧರಿಸದೆ, ಡೀಪ್ ಲೋ ನೆಕ್ ಡ್ರೆಸ್ ಧರಿಸಿ ಇವೆಂಟ್ ಗೆ ಬಂದಿಳಿದಳು. ಸೋನಾಳ ಜೊತೆ ಹಾಡು ಕುಣಿತದ ಮಸ್ತಿಯಲ್ಲಿ ಮೈಮರೆತ ಹುಮಾಳಿಗೆ, ತನ್ನ ಲೋ ನೆಕ್ ಮತ್ತಷ್ಟು ಜಾರುತ್ತಿರುವ ಕಡೆ ಜ್ಞಾನವೇ ಇರಲಿಲ್ಲ. ಆದರೆ ವರದಿಗಾರರು ಇದನ್ನೆಲ್ಲ ರೆಕಾರ್ಡ್ ಮಾಡದೇ ಇರುತ್ತಾರೆಯೇ? ಇನ್ನಾದರೂ ಎಚ್ಚರ ಹುಮಾ, ಬೋಲ್ಡ್ ನೆಸ್ ನಿಭಾಯಿಸುವುದು ಸುಲಭವಲ್ಲ, ಎನ್ನುತ್ತಾರೆ ಹಿತೈಷಿಗಳು.
ನಾನು ಐಶ್ವರ್ಯಾ ಅಲ್ಲ, ಆಲಿಯಾ!
ಇತ್ತೀಚೆಗೆ ಆಲಿಯಾ ಭಟ್ ಬ್ಯೂಟಿಫುಲ್ ಗೌನ್ ಧರಿಸಿ ಮ್ಯಾಟ್ ಗಾಲಾ 2023 ಇವೆಂಟ್ ಗೆ ಬಂದು ಅದರ ಬೆಡಗು ಹೆಚ್ಚಿಸಿದಳು. ಆದರೆ ವಿದೇಶೀ ವರದಿಗಾರರು ಅವಳ ಈ ಮಜಾ ವೇಳೆಯನ್ನು ಕಿರಿಕಿರಿಗೆ ಬದಲಾಯಿಸಿದರು. ಇವೆಂಟ್ ಗೆ ಬಂದಿದ್ದ ಒಬ್ಬ ವಿದೇಶೀ ವರದಿಗಾರ, ಇವಳನ್ನು ಐಶ್ವರ್ಯಾ ರೈ ಎಂದೇ ಭಾವಿಸಿ, ಹಾಗೆಂದೇ ಮತ್ತೆ ಮತ್ತೆ ಜೋರಾಗಿ ಕರೆಯುತ್ತಿದ್ದ. ಮೊದಲೇನೋ ಗೊಂದಲಕ್ಕೊಳಗಾದ ಆಲಿಯಾ ನಂತರ ಮಂದಹಾಸ ಬೀರುತ್ತಾ ಮುನ್ನಡೆದಳು. ಅತ್ತ ಸೋಶಿಯಲ್ ಮೀಡಿಯಾದಲ್ಲಿ ಇಂಥದಕ್ಕೆ ಕಾದಿದ್ದ ಐಶ್ ಫ್ಯಾನ್ಸ್ ಗೆ ಲಾಟರಿ ಹೊಡೆಯಿತು. ಹೀಗಾಗಿ ಅವರು ಹುಯಿಲೆಬ್ಬಿಸಿದರು. ಐಶ್ ಬಿಟ್ಟರೆ ಇಲ್ಲ ಅಂತ ಕೂಗಾಡಿದರು. ಪಾಪ, ಇತ್ತ ಆಲಿಯಾಳನ್ನು ಕೇಳುವವರೇ ಇಲ್ಲ! ಅವಳ ಗ್ಲಾಮರ್, ಗೌನಿನ ಬೆಡಗಿನ ಬಗ್ಗೆ ವಿಚಾರಿಸುವವರೇ ಇಲ್ಲ. ಅವಳು ಮಾಡದ ತಪ್ಪಿಗೆ ಪ್ರಚಾರ ಕಳೆದುಕೊಂಡಳು. ಒಮ್ಮೊಮ್ಮೆ ಹೀಗೂ ಆಗುತ್ತದೆ ಎಂಬ ಪಾಠ ಕಲಿತಳು.
ಮನೋಜ್ ಏಕೆ ಡಿನ್ನರ್ ಮಾಡುವುದಿಲ್ಲ?
ಫಿಟ್ನೆಸ್ ಗಾಗಿ ಸಿನಿ ತಾರೆಯರು ಏನು ತಾನೇ ಮಾಡುವುದಿಲ್ಲ? ಈ ನಿಟ್ಟಿನಲ್ಲಿ ಹೊಸ ಹೆಸರಿನ ಸೇರ್ಪಡೆ ಎಂದರೆ ಅದು ಮನೋಜ್ ವಾಜಪೇಯಿ ಅವರದು. ಮನೋಜ್ ತನ್ನ ದೇಹಕ್ಕೆ ಒಂದಿಷ್ಟೂ ಕೊಬ್ಬು ಸೇರಬಾರದು ಎಂದು ಬಯಸುವರು. ಇದಕ್ಕಾಗಿ ಆತ ತನ್ನ ತಂದೆ, ತಾತಂದಿರ ಡಯೆಟ್ ಪ್ಲಾನ್ ಫಾಲೋ ಮಾಡುತ್ತಾ, ರಾತ್ರಿ ಹೊತ್ತು ಊಟ ಮಾಡುವುದನ್ನೇ ಬಿಟ್ಟರು. ಹೀಗೆ ಕಳೆದ 12 ವರ್ಷಗಳಿಂದ ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ನೀವು ಸಹ ಪತ್ನಿಗೆ ಅದು ಮಾಡು, ಇದು ಮಾಡು ಎನ್ನುವುದನ್ನು ಬಿಟ್ಟು, ಮನೋಜ್ ತರಹ ಫಿಟ್ & ಫೈನ್ ಆಗಿರಬಾರದೇಕೆ?
ಉದ್ಧಾರ ಆಗಲ್ಲ, ಉದ್ಧಾರ ಆಗೋದಿಕ್ಕೂ ಬಿಡೋಲ್ಲ!
ಭಗವಾಧಾರಿಗಳು ಭಾರತದ ಚಿತ್ರರಂಗವನ್ನು ಎಷ್ಟು ಭಗವಾಗೊಳಿಸಿದ್ದಾರೆ ಎಂದರೆ, ಪ್ರತಿ ವರ್ಷ ಯಾವುದಾದರೊಂದು ಪೌರಾಣಿಕ ಚಿತ್ರ ಬಿಡುಗಡೆ ಆಗಲೇಬೇಕು ಎಂಬುದು ಟ್ರೆಂಡ್ ಆಗಿಹೋಗಿದೆ. ಈ ಸರಣಿಯಲ್ಲಿ ವಿವಾದಗಳಿಗೆ ಇದೀಗ ಸಿಲುಕಿರುವ ಚಿತ್ರ ಅಂದ್ರೆ `ಆದಿ ಪುರುಷ್.' ಮೊದಲು ಈ ಚಿತ್ರದ ಪಾತ್ರಗಳ ಗೆಟಪ್ ಬಗ್ಗೆ ದೊಡ್ಡ ಗಲಭೆ ಎಬ್ಬಿಸಲಾಯಿತು. ಇದೀಗ ಕೆಲವು ದೃಶ್ಯಗಳ ಬಗ್ಗೆ ಆಕ್ಷೇಪಣೆ ಎದ್ದಿದೆ. FB ನಲ್ಲಿ ಭಗವಾ ತಂಡ ರಾಮ, ಹನುಮಂತ, ರಾವಣರ ಸರಿಯಾದ ಗೆಟಪ್ ಬಗ್ಗೆ ಏನೆಲ್ಲ ವ್ಯಾಖ್ಯಾನ ಮಾಡಿದರು ಅಂದ್ರೆ, ಏನೋ ಪರ್ಸನಲಿ ಅವರನ್ನೆಲ್ಲ ಭೇಟಿ ಮಾಡಿ ಬಂದಂತೆ! ಈಗ ಈ ತಂಡದ ಆಕ್ಷೇಪಣೆ ಅಂದ್ರೆ, ಈ ಚಿತ್ರದ ಕೆಲವು ದೃಶ್ಯಗಳು ಬ್ಯಾನ್ ಆಗಿಲ್ಲವಂತೆ! ಇವರ ಬಳಿ ಇಷ್ಟೊಂದು ದಂಡದ ಸಮಯ ಎಲ್ಲಿರುತ್ತೆ ಅಂತ? ಇವರ ಕೆಲಸವೇ ಇದು, ಹೇಗಾದರೂ ಮಾಡಿ ಜನರ ಮನಸ್ಸನ್ನು ಇಂಥ ಕಡೆ ಕೇಂದ್ರೀಕರಿಸಿ, ಭಗವಾ ಸರ್ಕಾರದ ಚಟುವಟಿಕೆಗಳನ್ನು ಗಮನಿಸದಂತೆ ಮಾಡುವುದು!