ನಾವು ಸಾಧಾರಣವಾಗಿ ತಿಂಗಳಿಗೊಮ್ಮೆ ಒಂದಲ್ಲ ಒಂದು ಹಬ್ಬವನ್ನು ಆಚರಿಸುತ್ತಲೇ ಇರುತ್ತೇವೆ. ಆದರೆ ದೀಪಾವಳಿ ಒಂದು ವಿಶೇಷವಾದ ಹಬ್ಬ. ಈ ಹಬ್ಬದಲ್ಲಿ ನಮ್ಮ  ಬಂಧುಮಿತ್ರರೊಡನೆ ಸೇರುವ ಸುಸಂದರ್ಭ ಒದಗುವುದಲ್ಲದೆ, ಅವರಿಗೆ ಉಡುಗೊರೆ ನೀಡುವ ಅವಕಾಶ ದೊರೆಯುತ್ತದೆ. ಈ ಸಂಭ್ರಮದ ಸಮಯದಲ್ಲಿ ನಮ್ಮ ಆಪ್ತರ ಮನೆಗೆ ಭೇಟಿ ನೀಡುವಾಗ ಅಥವಾ ಅವರು ನಮ್ಮ ಮನೆಗೆ ಬಂದಾಗ ಒಂದು ಪ್ರೀತಿಯ ಉಡುಗೊರೆ ನೀಡಿ ನಮ್ಮ ಸ್ನೇಹ ಸಂಬಂಧವನ್ನು ಮತ್ತಷ್ಟು ಬೆಸೆಯಬಹುದಲ್ಲವೇ?

ಡ್ರೈಫ್ರೂಟ್ಸ್ : ನಿಮ್ಮ ಆಪ್ತರಿಗೆ ರುಚಿಕರ ಮತ್ತು ಆರೋಗ್ಯಕರ ಉಡುಗೊರೆ ನೀಡಬೇಕೆಂಬ ಮನಸ್ಸಾದರೆ ಡ್ರೈಫ್ರೂಟ್ಸ್ ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಆರೋಗ್ಯಕರವಾಗಿರುವುದರ ಜೊತೆಗೆ ಕೆಲಕಾಲ ಉಳಿಯಬಲ್ಲಂತಹುದು. ಅಂಗಡಿಯ ಮಿಠಾಯಿಯಂತೆ ಕೆಡುವ ಪದಾರ್ಥವಲ್ಲ. ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಖರ್ಜೂರ, ಅಕ್ರೋಟ್‌ ಮುಂತಾದ ಮಿಕ್ಸ್ಡ್ ಡ್ರೈಫ್ರೂಟ್ಸ್ ಪ್ಯಾಕ್‌ ಕೊಳ್ಳಿರಿ.

81SqURKT6yL._SL1500_

ಚಾಕೋಲೇಟ್‌ : ನಿಮ್ಮ ಮನೆಯಲ್ಲಿ ಒಬ್ಬ ಪುಟ್ಟ ಅತಿಥಿಯ ಆಗಮನವಾಗಿದ್ದರೆ ಅಥವಾ ನೀವು ಭೇಟಿ ನೀಡಲಿರುವ ಮನೆಯಲ್ಲೊಂದು ಮಗು ಇರುವುದಾದರೆ, ಬೇರೇನೂ ಯೋಚಿಸದೆ ಚಾಕೋಲೇಟ್‌ ಬಾಕ್ಸ್ ಉಡುಗೊರೆಯನ್ನು ಸಿದ್ಧಪಡಿಸಿಕೊಳ್ಳಿ. ಮಕ್ಕಳಿಗೆ ಕೊಡಲು ಇದಕ್ಕಿಂತ ಒಳ್ಳೆಯ ಉಡುಗೊರೆ ಬೇರೊಂದಿಲ್ಲ.

ಮಿಠಾಯಿ : ಸಿಹಿ ತಿಂಡಿಯಲ್ಲದೆ, ಲಂಚ್‌ ಅಥವಾ ಡಿನ್ನರ್‌ ಪಾರ್ಟಿ ಪೂರ್ಣಗೊಳ್ಳುವುದಿಲ್ಲ. ಹಾಗೆಯೇ ಸಿಹಿಯಿಲ್ಲದೆ ಹಬ್ಬ ಪೂರ್ಣವಾಗಲಾರದು. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆಪ್ತರಿಗೆ ಮಿಠಾಯಿಯ ಉಡುಗೊರೆ ನೀಡಿ ಸಂಬಂಧ ಹೆಚ್ಚು ಬೆಸೆಯುವಂತೆ ಮಾಡಿ.  ಗುಲಾಬ್‌ ಜಾಮೂನ್‌, ಸೋನ್‌ಪಪಡೀ, ರಸಗುಲ್ಲಾ, ಕಾಜೂಬರ್ಫಿ ಮುಂತಾದವನ್ನು ಉಡುಗೊರೆಯಾಗಿ ಕೊಡಬಹುದು. ಸ್ವೀಟ್‌ ಬಾಕ್ಸ್ ಎಲ್ಲರಿಗೂ ಮೆಚ್ಚಿಗೆಯಾಗಬಲ್ಲ ಉಡುಗೊರೆ.

ಕಾಯಿನ್‌ : ನಿಮ್ಮ ಅತ್ಯಂತ ಆಪ್ತರಾದವರಿಗೆ ಕೇವಲ ನೆನಪಿನಲ್ಲಿ ಉಳಿಯುವುದಲ್ಲದೆ, ಜೀವನ ಪರ್ಯಂತ ಜೊತೆಯಾಗಿರುವಂತಹ ಉಡುಗೊರೆ ನೀಡಬೇಕೆಂದು ಬಯಸುವಿರಾದರೆ, ಅವರಿಗೆ ಬೆಳ್ಳಿ ಅಥವಾ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ಕೊಡಬಹುದು. ಇದು ನಿಮ್ಮ ಸಂಬಂಧವನ್ನು ಸದಾ ಹಸಿರಾಗಿರಿಸುತ್ತದೆ. ಕಾಯಿನ್‌ಗಳನ್ನು ಆಕರ್ಷಕಗೊಳಿಸಲು ಅವುಗಳ ಮೇಲೆ ದೇವ-ದೇವಿಯರ ಚಿತ್ರ ಅಥವಾ `ಶುಭ ದೀಪಾವಳಿ’ ಎಂಬ ಸಂದೇಶವನ್ನು ಅಚ್ಚು ಮಾಡಿಸಲಾಗುತ್ತದೆ. ನಿಮ್ಮ ಈ ಉಡುಗೊರೆಯನ್ನು ಪಡೆದವರ ಮನಸ್ಸು ಮುದಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

haldiram-s-kaju-jalebi

ಪಟಾಕಿ : ದೀಪಾವಳಿ ಎಂದೊಡನೆ ಮಕ್ಕಳಿಗೆ ಪಟಾಕಿಯೇ ಕಣ್ಮುಂದೆ ಬರುತ್ತದೆ. ಪುಟ್ಟ ಅತಿಥಿಗಳಿಗೆ ಪಟಾಕಿಗಿಂತ ಉತ್ತಮ ಉಡುಗೊರೆ ಬೇರೊಂದಿಲ್ಲ. ಆದರೆ ಪರಿಸರ ಮತ್ತು ಮಕ್ಕಳ ಸುರಕ್ಷೆಯನ್ನು ಗಮನದಲ್ಲಿರಿಸಿಕೊಂಡು ಸಾಧಾರಣವಾದ ಮತ್ತು ಇಕೋ ಫ್ರೆಂಡ್ಲಿ ಪಟಾಕಿಗಳನ್ನೇ ಆರಿಸಿಕೊಳ್ಳಿ.

ಔಟ್‌ಫಿಟ್ಸ್ : ನಿಮ್ಮ ಆಪ್ತರ ಇಷ್ಟಾನಿಷ್ಟಗಳನ್ನು ಗಮನದಲ್ಲಿರಿಸಿಕೊಂಡು ಉಡುಗೊರೆಗಾಗಿ ನೀವು ಡ್ರೆಸ್‌ಗಳನ್ನೂ ಕೊಳ್ಳಬಹುದು. ಬಟ್ಟೆ ಕೊಳ್ಳುವಾಗ ಅವರ ವಯಸ್ಸು, ಬಣ್ಣ, ಪರ್ಸನಾಲಿಟಿ, ಪ್ರೊಫೆಶನ್‌ಗಳನ್ನು ಗಮನದಲ್ಲಿರಿಸಿಕೊಂಡಿರಿ. ಅಂತಹ ಉಡುಗೊರೆ ಪಡೆದವರ ಮನಸ್ಸು ಸೂರೆಗೊಳ್ಳುವುದು.

ಹೋಮ್ ಅಪ್ಲೈಯನ್ಸೆಸ್‌ : ಹೋಮ್ ಮೇಕರ್ಸ್ ಗೆ ಕೊಡಬಹುದಾದ ಉತ್ತಮ ಉಡುಗೊರೆಯೆಂದರೆ, ಹೋಮ್ ಅಪ್ಲೈಯನ್ಸೆಸ್‌. ಇದರಿಂದ ಅವರ ಕೆಲಸ ಹಗುರವಾಗುವುದರಿಂದ ಇದನ್ನು ಬಳಸುವಾಗ ನಿಮ್ಮನ್ನು ನೆನೆಯುವರು.

ಮೇಕಪ್‌ ಕಿಟ್‌ : ನಿಮ್ಮ ಪ್ರಿಯ ಗೆಳತಿಗೆ ಉಡುಗೊರೆ ನೀಡಲು ಮೇಕಪ್‌ ಕಿಟ್‌ನ್ನೂ ಕೊಳ್ಳಬಹುದು. ನಿಮ್ಮ ಆ ಗೆಳತಿ ಮೇಕಪ್‌ ಪ್ರಾಡಕ್ಟ್ಸ್ ನ್ನು ಬಳಸುವ ಆಸಕ್ತಿ ಹೊಂದಿರುವರೇ ಎಂಬುದನ್ನೂ ಯೋಚಿಸಿ. ಇಲ್ಲವಾದರೆ ನಿಮ್ಮ ಉಡುಗೊರೆ ಉಪಯೋಗವಾಗುವುದಿಲ್ಲ.

ಜ್ಯೂವೆಲರಿ : ನಿಮ್ಮ ಲೇಡಿ ಲವ್ ಗೆ ಉತ್ತಮ ಉಡುಗೊರೆ ಎಂರೆ ಜ್ಯೂವೆಲರಿ. ಇದಕ್ಕಾಗಿ ನೀವು ಚಿನ್ನ, ಬೆಳ್ಳಿ ಎಂದೇ ಹೋಗಬೇಕಿಲ್ಲ. ಆರ್ಟಿಫಿಶಿಯ್‌ ಜ್ಯೂವೆಲರಿ ಸೆಟ್‌ ಒಂದು ಒಳ್ಳೆಯ ಗಿಫ್ಟ್. ನೆಕ್‌ಲೇಸ್‌ ಸೆಟ್‌, ಹೆವಿ ಇಯರ್‌ರಿಂಗ್ಸ್, ಬ್ಯಾಂಗಲ್ಸ್, ಬ್ರೇಸ್‌ಲೆಟ್‌ ಮುಂತಾದುವನ್ನೂ ಕೊಳ್ಳಬಹುದು ಅಥವಾ ಜ್ಯೂವೆಲರಿ ಬಾಕ್ಸ್ ನ್ನು ಸಹ ಕೊಡಬಹುದು.

ಕ್ರಾಕರಿ : ಡಿನ್ನರ್‌ ಸೆಟ್‌, ಟೀಸೆಟ್‌, ಬೌಲ್‌ ಸೆಟ್‌ನಂತಹ ಕ್ರಾಕರಿಯನ್ನು ನಿಮ್ಮ ಆಪ್ತೇಷ್ಟರಿಗೆ ಉಡುಗೊರೆಯಾಗಿ ನೀಡಬಹುದು.

ಡೆಕೋರೇಟಿವ್ ಐಟಮ್ಸ್ : ಉಡುಗೊರೆಗಾಗಿ ಆರಿಸಬಹುದಾದ ಇತರೆ ಐಟಮ್ಸ್ ಎಂದರೆ ಕ್ಯಾಂಡಲ್ ಸ್ಟ್ಯಾಂಡ್‌, ಲ್ಯಾಂಪ್ಸ್, ವಾಲ್‌ಕ್ಲಾಕ್‌, ಹ್ಯಾಂಗಿಂಗ್‌ ವಾಲ್‌ ಪೀಸ್‌, ಡನ್‌ ಡೆಕೋರ್‌ ಆ್ಯಕ್ಸೆಸರೀಸ್‌, ಮೆಟಲ್ ಶೋಪೀಸ್‌, ಪೇಂಟಿಂಗ್ಸ್, ಸೀನರಿ ಇತ್ಯಾದಿ…. ಈ ಉಡುಗೊರೆಗಳು ನಿಮ್ಮ ಸಂಬಂಧವನ್ನು ಸದೃಢಗೊಳಿಸುವುದರ ಜೊತೆಗೆ ಮನೆಯನ್ನೂ ಬೆಳಗಿಸುತ್ತವೆ.

ಗ್ಯಾಡ್ಜೆಟ್‌ ಗಿಫ್ಟ್ : ಮಹಿಳೆಯರಿಗಾಗಿ ಉಡುಗೊರೆ ಕೊಳ್ಳುವುದು ಸುಲಭದ ಕೆಲಸ. ಆದರೆ ಪುರುಷರಿಗೆ ಏನನ್ನು ಕೊಳ್ಳಬೇಕು ಎಂದೇ ತಿಳಿಯುವುದಿಲ್ಲ. ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಪುರುಷರಿಗಾಗಿ ವಾಚ್‌, ಮೊಬೈಲ್ ಫೋನ್‌, ಲ್ಯಾಪ್‌ಟಾಪ್‌ನಂತಹ ಗ್ಯಾಡ್ಜೆಟ್ಸ್ ಕೊಳ್ಳಬಹುದು. ಇಂತಹ ಗ್ಯಾಡ್ಜೆಟ್‌ಗಳನ್ನು ಕೊಳ್ಳಲು ಸಾಧ್ಯವಾಗದಿದ್ದರೆ ಮೊಬೈಲ್ ಕವರ್‌, ಲ್ಯಾಪ್‌ಟಾಪ್‌ ಬ್ಯಾಗ್‌, ಕಾರ್ಡ್‌ ಹೋಲ್ಡರ್‌ ಮುಂತಾದವನ್ನು ಖರೀದಿಸಬಹುದು.

– ಜಿ. ಪವಿತ್ರಾ 

ಕ್ರಿಯೇಟಿವ್‌ ಐಡಿಯಾಸ್‌

ನಿಮಗಿಷ್ಟವಾದ ಉಡುಗೊರೆಯನ್ನೇನೋ ತಂದಿರುತ್ತೀರಿ. ಆದರೆ ಅದನ್ನು ಗಿಫ್ಟ್ ರಾಪಿಂಗ್‌ ಮಾಡಲು ಮರೆಯದಿರಿ. ಇದರಿಂದ ನಿಮ್ಮ ಗಿಫ್ಟ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಸ್ಮಾರ್ಟ್‌ ಟಿಪ್ಸ್

ಅನೇಕರಿಗೆ ಗಿಫ್ಟ್ ಕೊಡುವ ಯೋಚನೆ ಇದ್ದರೆ, ಒಂದೊಂದೇ ವಸ್ತುವನ್ನು ಕೊಳ್ಳುವ ಬದಲು ಒಟ್ಟಾರೆ ಕೊಳ್ಳಿ. ಇದರಿಂದ ನಿಮಗೆ ಹಣ ಉಳಿತಾಯವಾಗುತ್ತವೆ.

ಕಾರ್ಪೊರೇಟ್‌ ಗಿಫ್ಟ್ ಐಡಿಯಾಸ್‌

ನೀವು ಒಂದು ಕಂಪನಿಯ ಮಾಲೀಕರಾಗಿದ್ದರೆ, ನಿಮ್ಮ ನೌಕರರು ನಿಮ್ಮಿಂದ ದೀಪಾವಳಿ ಉಡುಗೊರೆಯನ್ನು ನಿರೀಕ್ಷಿಸುತ್ತಾರೆ. ಮಿಠಾಯಿ, ಚಾಕೊಲೇಟ್‌, ಡ್ರೈಫ್ರೂಟ್ಸ್ ಅಲ್ಲದೆ ನೀವು ಈ ರೀತಿಯಲ್ಲೂ ಗಿಫ್ಟ್ಸ್ ಮಾಡಬಹುದು.

ಸ್ಟೇಷನರಿ : ಡೈರಿ, ಪೆನ್‌ಸೆಟ್‌, ಫೋಲ್ಡರ್‌, ಫೈಲ್ ಮುಂತಾದ ಸ್ಟೇಷನರಿ ವಸ್ತುಗಳನ್ನು ನಿಮ್ಮ ಕೆಲಸಗಾರರಿಗೆ ಉಡುಗೊರೆಯಾಗಿ ಕೊಡಬಹುದು.

ಜಿಮ್ ಮೆಂಬರ್‌ಶಿಪ್‌ : ನಿಮ್ಮ ಕೆಲಸಗಾರರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ನೀವು ಅವರಿಗೆ ಜಿಮ್ ಮೆಂಬರ್‌ಶಿಪ್‌ ಕೊಡಿಸಬಹುದು.

ಇನ್ಸೂರೆನ್ಸ್ ಪಾಲಿಸಿ : ನೌಕರರ ಸುರಕ್ಷತೆಗಾಗಿ ಅವರಿಗೆ ಇನ್ಶೂರೆವ್ಸ್ ಪಾಲಿಸಿಯ ಉಡುಗೊರೆ ನೀಡಬಹುದು.

ಪುಸ್ತಕಗಳು : ನೌಕರರ ತಿಳಿವಳಿಕೆ ಹೆಚ್ಚಿಸಲು ಅವರಿಗೆ ಪುಸ್ತಕಗಳನ್ನು ಕೊಡಬಹುದು.

ಸ್ಪಾ ವೋಚರ್‌ : ನಿಮ್ಮ ಕೆಲಸಗಾರರಿಗೆ ಸ್ಪಾವೋಚರನ್ನು ಕೊಡಬಹುದು. ಇದರಿಂದ ಅವರ ದಣಿವೆಲ್ಲ ದೂರವಾಗಿ ಮನಃಪೂರ್ತಿ ಯಾಗಿ ದೀಪಾವಳಿ ಹಬ್ಬವನ್ನು ಆಚರಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

ಗಿಫ್ಟ್ ವೋಚರ್‌?: ಉಡುಗೊರೆಯಾಗಿ ಗಿಫ್ಚ್ ವೋಚರ್‌ನ್ನು ನೀಡುವುದು ಒಂದು ಪರ್ಯಾಯ ವಿಧಾನ. ಇದರಿಂದ ಅವರು ತಮಗೆ ಬೇಕಾದ ವಸ್ತುವನ್ನು ತಾವೇ ಕೊಳ್ಳಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ