ಮನೆಯನ್ನು ಚೊಕ್ಕಟಗೊಳಿಸಬಲ್ಲ  ಬಗೆಬಗೆಯ ಉಪಕರಣಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳಿಂದ ನೀವು ಕಡಿಮೆ ಸಮಯದಲ್ಲಿ ಆಯಾಸಗೊಳ್ಳದೆಯೇ ನಿಮ್ಮ ಮನೆಯನ್ನು ಸದಾ ಶುಭ್ರವಾಗಿ ಬೆಳಗುವಂತೆ ಇರಿಸಿಕೊಳ್ಳಬಹುದು.

ಹೈಟೆಕ್‌ ಗ್ಯಾಡ್ಜೆಟ್ಸ್ ಇಂದು ಎಲ್ಲ ಬಗೆಯ ಕಷ್ಟಕರವಾದ ಕೆಲಸಗಳನ್ನೂ ಸುಲಭಗೊಳಿಸಿವೆ. ಮನೆಯನ್ನು ಚೊಕ್ಕಟಗೊಳಿಸಲು ಬಳಸುವ ಪೊರಕೆ, ಬಟ್ಟೆಗಳಿಗೆ ಬದಲಾಗಿ ಅನೇಕ ಬಗೆಯ ಅಡ್ವಾನ್ಸ್ಡ್ ಅಂಡ್‌ ಸ್ಮಾರ್ಟ್‌ ಹೈಟೆಕ್‌ ಗ್ಯಾಡ್ಜೆಟ್ಸ್ ದೊರೆಯುತ್ತವೆ.

window-grill-cleaner

ವ್ಯಾಕ್ಯೂಮ್ ಕ್ಲೀನರ್

ಇದು ಹಿಂದಿನ ಉಪಕರಣವೇ ಆದರೂ ಈಗ ಚಿಕ್ಕದಾಗಿ ಅನುಕೂಲಕರವಾಗಿ ಮಾರ್ಪಾಟಾಗಿದೆ. ನೀವು ಪೊರಕೆಯಿಂದ ಒಂದು ಕೋಣೆಯನ್ನು ಗುಡಿಸುವಷ್ಟು ಸಮಯದಲ್ಲಿ ವ್ಯಾಕ್ಯೂಮ್ ಕ್ಲೀನರ್‌ನಿಂದ 3-4 ಕೊಠಡಿಗಳನ್ನು ಚೊಕ್ಕಟಗೊಳಿಸಬಹುದು. ನೀವು ಮಲ್ಟಿಪುಲ್ ಕ್ಲೀನಿಂಗ್‌ ವ್ಯಾಕ್ಯೂಮ್ ಕ್ಲೀನರ್‌ನ್ನು ಕೊಂಡರೆ ಒಣನೆಲದ ಜೊತೆಗೆ ಒದ್ದೆಯಾದ ನೆಲವನ್ನೂ ಚೊಕ್ಕಟಗೊಳಿಸಬಹುದು. ಅಲ್ಲದೆ ಇಂಡಿಕೇಟರ್‌ನ ಸಹಾಯದಿಂದ ಡಸ್ಟ್ ಬ್ಯಾಗ್‌ ತುಂಬಿದೆಯೇ ಎಂದು ತಿಳಿದುಕೊಳ್ಳಬಹುದು. ವ್ಯಾಕ್ಯೂಮ್ ಕ್ಲೀನರ್‌ನಲ್ಲಿ ಸೈಡ್‌ ಬ್ರಶ್‌ ಕೂಡ ಇದ್ದರೆ ನೀವು ಪ್ರತಿಯೊಂದು ಮೂಲೆಯನ್ನೂ ಶುಭ್ರಗೊಳಿಸಬಹುದು. ಈ ಉಪಕರಣವನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ, ನೀವು 2 ಗಂಟೆಗಳ ಕಾಲ ಅದನ್ನು ಬಳಸಬಹುದು.

ಫರ್‌ಬಾಲ್‌ ವ್ಯಾಕ್ಯೂಮ್ ಕ್ಲೀನರ್‌

ಇತ್ತೀಚಿನ ದಿನಗಳಲ್ಲಿ ಫರ್‌ಬಾಲ್ ವ್ಯಾಕ್ಯೂಮ್ ಕ್ಲೀನರ್‌ ಬಹಳಷ್ಟು ಬೇಡಿಕೆಯಲ್ಲಿದೆ. ಕಲರ್‌ ಫುಲ್ ಆಗಿರುವುದರಿಂದ ಇದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಆಟೊಮ್ಯಾಟಿಕ್‌ ಉಪಕರಣವಾದ ಇದು ಫುಟ್‌ಬಾಲ್‌ನಂತೆ ಮನೆಯನ್ನೆಲ್ಲ ಸುತ್ತಿ ನೆಲವನ್ನು ಸ್ವಚ್ಛಗೊಳಿಸುತ್ತದೆ. ಸಣ್ಣ ಕೋಣೆಯನ್ನು ಶುಭ್ರಗೊಳಿಸಲು ಇದು ಬಲು ಸಹಾಯಕಾರಿ. ಜೊತೆಗೆ ಡನ್‌ ಫ್ಲೋರಿಂಗ್‌ಗೆ ಇದು ಬಹಳ ಉತ್ತಮವೆಂದು ಹೇಳಲ್ಪಡುತ್ತದೆ.

furboll-vacuum-cleaner1

ಆಟೊಮ್ಯಾಟಿಕ್‌ ಫ್ಲೋರ್‌ ಮಾಪ್‌

ಈ ಉಪಕರಣ ಮೊದಲು ನೆಲದ ಮೇಲಿನ ಕಸವನ್ನು ಚೊಕ್ಕಟಗೊಳಿಸಿ ನಂತರ ಸಾರಿಸುತ್ತದೆ. ನೆಲವನ್ನು ಸಾರಿಸಲು ಇದರಲ್ಲಿ ಸ್ವಲ್ಪ ನೀರು ತುಂಬಿಸಿ. ನಿಮ್ಮ ಕೈಗೆ ಎಟುಕದಿರುವ ಮೂಲೆಯನ್ನು ಸಹ ಈ ಗ್ಯಾಡ್ಜೆಟ್‌ ಮುಟ್ಟಬಲ್ಲದು. ಇದರ ಬ್ಯಾಟರಿಯನ್ನು ಒಂದು ಸಲ ಫುಲ್ ಚಾರ್ಜ್‌ ಮಾಡಿದರೆ, ಇದು 2 ಗಂಟೆಗಳ ಕಾಲ ಕೆಲಸ ಮಾಡಬಲ್ಲದು.

ಮೋಪೆಡ್‌ ವ್ಯಾಕ್ಯೂಮ್

ಫ್ಲೋರ್‌ ಮಾಪ್‌ನಂತೆ ಇದು ಕೂಡ ಗುಡಿಸುವ, ಸಾರಿಸುವ ಎರಡೂ ಕೆಲಸಗಳನ್ನು ಮಾಡುತ್ತದೆ. ಚಿಕ್ಕ ಕೊಠಡಿಯನ್ನು ಸ್ವಚ್ಛಗೊಳಿಸಲು ಇದು ಉತ್ತಮ. ಆದರೆ ಕೊಠಡಿ ದೊಡ್ಡದಾಗಿದ್ದರೆ ಫ್ಲೋರ್‌ ಮಾಪ್‌ನ್ನೇ ಕೊಳ್ಳಿರಿ. ಒಮ್ಮೆ ಫುಲ್ ಚಾರ್ಜ್‌ ಮಾಡಿದರೆ ಇದನ್ನು 6 ಗಂಟೆಗಳ ಕಾಲ ಬಳಸಬಹುದು. ಇದನ್ನು ಕೈಲಿ ಹಿಡಿದಿರುವ ಅಗತ್ಯವಿಲ್ಲ. ಟೈಮ್ ಸೆಟ್‌ ಮಾಡಿಬಿಟ್ಟರೆ ಸಾಕು. ಅದು ನೆಲವನ್ನು ಚೊಕ್ಕಟಗೊಳಿಸಿದ ನಂತರ ತಾನಾಗಿ ನಿಲ್ಲುತ್ತದೆ. ಇದು ನೋಡಲೂ ಆಕರ್ಷಕವಾಗಿ ಕಾಣುವುದರಿಂದ ಉಪಯೋಗಿಸಿದ ನಂತರ ಡೆಕೋರ್‌ ಆ್ಯಕ್ಸೆಸರಿಯಾಗಿಯೂ ಇರಿಸಿಕೊಳ್ಳಬಹುದು.

Hightech-gadgets-

ಫ್ಲೋರ್‌ ವಾಶಿಂಗ್‌

ಡನ್‌ ಫ್ಲೋರಿಂಗ್‌ ಆದರೆ ಅದನ್ನು ಅಳೆಯುವ ಅವಶ್ಯಕತೆಯೇ ಇರುವುದಿಲ್ಲ. ಆದರೆ ಹಾರ್ಡ್‌ ಫ್ಲೋರಿಂಗ್‌ನ್ನು ಹೊಳಪುಗೊಳಿಸಲು ವಾಶ್‌ ಮಾಡಬೇಕಾಗುತ್ತದೆ. ಅದಕ್ಕಾಗಿ ಫ್ಲೋರ್‌ ವಾಶಿಂಗ್‌ ಗ್ಯಾಡ್ಜೆಟ್‌ ನಿಮಗೆ ಸಹಾಯಕಾರಿಯಾಗುತ್ತದೆ. ಇದು ತ್ರೀ ಸ್ಟೆಪ್ಸ್ ನಲ್ಲಿ ಕೆಲಸ ಮಾಡುತ್ತದೆ. ಮೊದಲು ಕೋಣೆಯಲ್ಲಿ ಬಿದ್ದಿರುವ ಕಸವನ್ನು ಚೊಕ್ಕಟಗೊಳಿಸುತ್ತದೆ. ನಂತರ ನೀರಿನ ಸಹಾಯದಿಂದ ನೆಲವನ್ನು ತೇವಗೊಳಿಸಿ ಸ್ವಚ್ಛ ಮಾಡುತ್ತದೆ. ಕಡೆಯಲ್ಲಿ ನೀರಿನಿಂದ ಕೂಡಿದ ನೆಲವನ್ನು ಸಾರಿಸಿ ಒಣಗಿಸುತ್ತದೆ. ಹೀಗಾಗಿ ನಿಮಗೆ ನೆಲವನ್ನು ವಾಶ್‌ ಮಾಡಲು ಡಿಟರ್ಜೆಂಟ್‌ ಅಥವಾ ಪ್ಲಾಸ್ಟಿಕ್‌ ಪೊರಕೆಯ ಅವಶ್ಯಕತೆಯೇ ಇರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ