ಈಚಿನ ದಿನಗಳಲ್ಲಿ ಹೋಮ್ ಡೆಕೋರ್‌ ಅಂದರೆ ಗೃಹಾಲಂಕಾರದ ಸ್ವರೂಪ ಹಿಂದಿನ ಕಾಲದ ಶೈಲಿಯತ್ತ ವಾಲುತ್ತಿದೆ. ಅಂದರೆ, ಆಧುನಿಕ ಬದಲಾವಣೆಯ ಜೊತೆಗೆ ಪುರಾತನ ಶೈಲಿಯನ್ನು ಒಗ್ಗೂಡಿಸಿಕೊಳ್ಳುವ ಪದ್ಧತಿಯು ಬಲವಾಗುತ್ತಿದೆ. ಇಲ್ಲಿ ನಾವು 2020ರ ಕೆಲವು ಜನಪ್ರಿಯ ವಿನ್ಯಾಸಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ ಮತ್ತು 2021 ರಲ್ಲೂ ಇವು ಬೇಡಿಕೆಯಲ್ಲಿರುತ್ತವೆ.

ಇಂಡಿಯನ್‌ ಹೆರಿಟೇಜ್‌

ಇತ್ತೀಚಿನ ದಿನಗಳಲ್ಲಿ ಗೃಹಾಲಂಕಾರದಲ್ಲಿ ಪುರಾತನ ಶೈಲಿಗೆ ಒತ್ತು ನೀಡುವ ಪ್ರವೃತ್ತಿ ಕಂಡುಬರುತ್ತದೆ. ಆಕರ್ಷಕ ಕಲರ್‌ ಮತ್ತು ಟೆಕ್ಸ್ ಚರ್‌ ಭಾರತೀಯ ವಿನ್ಯಾಸದ ಪ್ರಮುಖ ತತ್ವಗಳಾಗಿವೆ. ಕಸೂತಿ ಕೆಲಸದಿಂದ ಕೂಡಿದ ಆಕರ್ಷಕ ಫಿನಿಶಿಂಗ್‌ನ ಕುಶನ್‌ಗಳು ಭಾರತೀಯ ಶೈಲಿಯ ಅಲಂಕಾರದ ಒಂದು ಪ್ರಮುಖ ವಿನ್ಯಾಸ. ಭಾರತೀಯ ಫರ್ನೀಚರ್‌ ತೇಗದ ಮರದಿಂದ ಮಾಡಲ್ಪಟ್ಟಿದ್ದು ಬಲವಾಗಿರುತ್ತವೆ. ಭಾರತ ಶ್ರೇಷ್ಠ ಸಿಲ್ಕ್ ಮತ್ತು ಇತರೆ ಟೆಕ್ಸ್  ಟೈಲ್ಸ್ಗೆ ಪ್ರಸಿದ್ಧವಾಗಿದ್ದು, ಅವುಗಳಿಂದ ತಯಾರಿಸಿದ ಬಗೆಬಗೆಯ ವಸ್ತುಗಳು ಕಿಟಕಿ, ಬಾಗಿಲು, ಗೋಡೆಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಈ ಬಗೆಯ ಭಾರತೀಯ ಶೈಲಿಯ ಜೋಡಣೆಯು ಅಂತರರಾಷ್ಟ್ರೀಯ ಗೃಹಾಲಂಕಾರದಲ್ಲೂ ಪ್ರದರ್ಶಿತವಾಗುತ್ತಿದೆ ಮತ್ತು ಇದು ಸದ್ಯದಲ್ಲಿ ಹಿಂದೆ ಬೀಳುವ ಸಾಧ್ಯತೆ ಇಲ್ಲ.

Amphora-Vase-Flower

ಇಕತ್

ಇದು ದಾರಗಳನ್ನು ಬಟ್ಟೆಯ ಮೇಲೆ ವಿಶೇಷ ವಿನ್ಯಾಸದಲ್ಲಿ ಜೋಡಿಸುವ ಒಂದು ಪ್ರಿಂಟಿಂಗ್‌ ಸ್ಟೈಲ್. ಭಾರತ ಮತ್ತು ಇಂಡೋನೇಶಿಯಾದಲ್ಲಿ ಇದು ಜನಪ್ರಿಯವಾಗಿದೆ. ಇಕತ್‌ ಪ್ರಿಂಟ್‌ನ ವಿಭಿನ್ನ ಬಣ್ಣ, ಆಕಾರ ಮತ್ತು ಡಿಸೈನ್‌ಗಳು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಈ ವಿನ್ಯಾಸಗಳನ್ನು ಬಟ್ಟೆಯ ಮೇಲೆ ಮಾತ್ರವಲ್ಲದೆ ಕ್ಲಾಕ್‌, ಮಗ್‌ ಮತ್ತು ಲ್ಯಾಂಪ್‌ಗಳ ಮೇಲೂ ಪ್ರಿಂಟ್‌ ಮಾಡಬಹುದು.

ಹಿತ್ತಾಳೆ ಮತ್ತು ತಾಮ್ರ

ಹಿತ್ತಾಳೆ ಮತ್ತು ತಾಮ್ರ ನಮಗೆ ಹೊಸದೇನೂ ಅಲ್ಲ. ಇತ್ತೀಚಿನ ದಿನಗಳಲ್ಲಿ ಇವು ಜಾಗತಿಕ ವಿನ್ಯಾಸದ ಪರಿಕಲ್ಪನೆಯ ಭಾಗವಾಗಿ ಬೆಳೆದಿವೆ ಮತ್ತು ಇವಿನ್ನೂ ಬಹಳ ಕಾಲ ಬೇಡಿಕೆಯಲ್ಲುಳಿಯುವ ಸಾಧ್ಯತೆ ಇದೆ. ಡಿಸೈನರ್‌ಗಳು ಹಿತ್ತಾಳೆಯನ್ನು ಕರಗಿಸಿ, ಅಚ್ಚಿಗೆ ಹಾಕಿ, ನಂತರ ಪಾಲಿಶ್‌ ಮಾಡಿ ಆಕರ್ಷಕಗೊಳಿಸುತ್ತಾರೆ. ಇದರಿಂದ ಪೆಂಡೆಂಟ್‌ನಂತಹ ಆಭರಣಗಳಿಂದ ಹಿಡಿದು ಲೈಟ್ಸ್, ಕುರ್ಚಿ, ಅಲಂಕಾರಿಕ ವಸ್ತುಗಳು ಬಾತ್‌ ಮತ್ತು ಕಿಚನ್‌ ಉಪಕರಣಗಳು ಮುಂತಾದವನ್ನೆಲ್ಲ ವಿನ್ಯಾಸಗೊಳಿಸುತ್ತಾರೆ.

ಪುರಾತನ ಕಾಲದಿಂದಲೂ ಬಳಕೆಯಲ್ಲಿರುವ ಮತ್ತೊಂದು ಲೋಹವೆಂದರೆ ತಾಮ್ರ, ತಾಮ್ರದ ಪಾತ್ರೆಗಳ ತಯಾರಿಕೆ ಶತಮಾನಗಳಿಂದ ನಡೆದು ಬಂದಿದೆ. ತಾಮ್ರದ ಟೇಬಲ್‌ವೇರ್ (ಮೇಜಿನ ಮೇಲೆ ಬಡಿಸಲು ಬಳಸುವ ಪಾತ್ರೆ) ಆಧುನಿಕ ಹೋಟೆಲ್‌ಗಳ ಸ್ಟೈಲ್‌ ಆಗಿವೆ. ತಾಮ್ರದ ಲೈಟಿಂಗ್‌ ಉಪಕರಣಗಳೂ ಈಗ ಬೇಡಿಕೆಯಲ್ಲಿವೆ. ಹೀಗೆ ಈ ಪುರಾತನ ಉಪಕರಣಗಳು ಆಧುನಿಕ ರೂಪದೊಂದಿಗೆ ಜನಪ್ರಿಯವಾಗಿವೆ.

lifestyle

ಕ್ರಿಸ್ಟಲ್

ಗೃಹಾಲಂಕಾರದಲ್ಲಿ ಬಳಸಲ್ಪಡುವ ಕ್ರಿಸ್ಟಲ್ ಹೊಸ ವಸ್ತುವೇನೂ ಅಲ್ಲ. ಹಿಂದಿಗಿಂತ ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ಎಲ್ಲ ಹೋಟೆಲ್ ಮತ್ತು ಪಾರ್ಟಿ ಹಾಲ್‌ಗಳಲ್ಲಿ ಕ್ರಿಸ್ಟಲ್‌ನ ತೂಗುದೀಪಗಳು ಕಂಗೊಳಿಸುತ್ತವೆ. ಹೊಳೆಯುವ ಸೆಂಟರ್‌ಪೀಸ್‌ಗಳು ಅತಿಥಿಗಳಿಗೊಂದು ದೊಡ್ಡ ಆಕರ್ಷಣೆಯಾಗಿದೆ. ಮೇಜನ್ನು ಅಲಂಕರಿಸಲು ಕ್ರಿಸ್ಟಲ್ ಶೋ ಪೀಸ್‌ಗಳು ಲಭ್ಯವಿವೆ. ಬಗೆಬಗೆಯ ವಿನ್ಯಾಸಗಳಲ್ಲಿ ದೊರೆಯುವ ಕ್ರಿಸ್ಟಲ್ ಗ್ಲಾಸ್‌ನ ಹೂದಾನಿಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಶುದ್ಧ ಕ್ರಿಸ್ಟಲ್‌ನಿಂದ ತಯಾರಾದ ಶೋ ಪೀಸ್‌ ಮತ್ತು ತೂಗುದೀಪಗಳು ಅತ್ಯಂತ ದುಬಾರಿಯಾಗಿರುತ್ತವೆ. ಆದ್ದರಿಂದ ಕೃತಕ ಕ್ರಿಸ್ಟಲ್‌ನ ವಸ್ತುಗಳನ್ನು ಕೊಳ್ಳಲು ನಿಮಗೆ ಕಷ್ಟವಾಗಲಾರದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ