ಯಾವುದೇ ಮಹಿಳೆಯ ರಂಗುರೂಪು ಹೇಗೆ ಇರಲಿ, ಅವಳು ಸದಾ ಸುಂದರವಾಗಿ ಕಂಗೊಳಿಸಲು ಬಯಸುತ್ತಾಳೆ. ಕಿಟೀ ಪಾರ್ಟಿ ಅಥವಾ ಇನ್ನಾವುದೇ ಫಂಕ್ಷನ್ ಇರಲಿ, ತನಗೆ ಆಹ್ವಾನ ದೊರೆತ ತಕ್ಷಣ ತನ್ನ ಡ್ರೆಸ್, ಜ್ಯೂವೆಲರಿ, ಮೇಕಪ್, ಹೇರ್ ಸ್ಟೈಲ್ ಇತ್ಯಾದಿಗಳ ಬಗ್ಗೆ ಚಿಂತಿಸುತ್ತಾಳೆ. ಈ ಒಂದು ಅವಕಾಶ ಬಳಸಿಕೊಂಡು ಅವಳು ತನ್ನ ದುಬಾರಿ ಡಿಸೈನರ್‌ಡ್ರೆಸ್, ಭಾರಿ ಒಡವೆ, ಬ್ಯೂಟಿಫುಲ್ ಮೇಕಪ್‌ನಿಂದ ಎಲ್ಲರ ಮುಂದೆ ಬೀಗಬಹುದು.
ಆದರೆ ಇಂಥ ಸಂದರ್ಭಗಳಲ್ಲಿ ನೀವು ಸರಳತೆಯಿಂದ ಆಕರ್ಷಕವಾಗಿ ಬದಲಾಗಿ ಎಲ್ಲರನ್ನೂ ಪ್ರಭಾವಿತಗೊಳಿಸುವ ಅವಕಾಶ ಕಳೆದುಕೊಳ್ಳಬೇಡಿ. ಇದಕ್ಕಾಗಿ ನಿಮ್ಮ ವ್ಯಕ್ತಿತ್ವದ ಕಡೆ ಹೆಚ್ಚಿನ ಗಮನ ಕೊಡಬೇಕು.
ನೀವು ಹೇಗೆ ಕಾಣಿಸುತ್ತೀರಿ, ಹೇಗೆ ಇರುತ್ತೀರಿ, ಹೇಗೆ ನಡೆಯುತ್ತೀರಿ, ಹೇಗೆ ಕುಳಿತೇಳುವಿರಿ, ನಿಮ್ಮ ಡ್ರೆಸ್ ಸೆನ್ಸ್ ಹೇಗಿರುತ್ತದೆ, ಆ ಮೂಲಕ ನಿಮ್ಮ ಪರ್ಸನಾಲ್ಟಿ ಹೇಗಾಗಿದೆ, ನಿಮ್ಮ ಬಾಡಿ ಲ್ಯಾಂಗ್ವೇಜ್ ಇತ್ಯಾದಿಗಳೇ ನಿಮಗೆ ಆಕರ್ಷಕ ವ್ಯಕ್ತಿತ್ವ ಒದಗಿಸಬಲ್ಲವು ಎಂಬುದನ್ನು ನೆನಪಿಡಿ.
ಬಾಹ್ಯ ಸೌಂದರ್ಯಕ್ಕೇ ಇಂದು ಹೆಚ್ಚು ಮಾರ್ಕ್ಸ್ ಎಂಬುದು ಗೊತ್ತೇ ಇದೆ, ಆದರೆ ಆಂತರಿಕ ಸೌಂದರ್ಯ ಅದಕ್ಕೂ ಮಿಗಿಲಾದುದು. ಇದರಿಂದ ಎಲ್ಲರ ಹೃದಯ ಗೆಲ್ಲಬಹುದು. ನಿಮ್ಮ ಆತ್ಮವಿಶ್ವಾಸ ಎಂದೂ ಕಳೆದುಕೊಳ್ಳಬೇಡಿ. ಬ್ಯೂಟಿಫುಲ್ ಸ್ಮಾರ್ಟ್ ಎನಿಸಲು ನಿಮ್ಮ ಕೆಲವು ಅಭ್ಯಾಸಗಳನ್ನು ಸುಧಾರಿಸಿ :
ಹೀಗೆ ಸುಂದರವಾಗಿ ಕಂಗೊಳಿಸಿ
ಯಾವುದೇ ಫಂಕ್ಷನ್ ಅಥವಾ ಪಾರ್ಟಿಯಲ್ಲಿ ಬಂದಂಥ ಹೆಚ್ಚಿನ ಮಹಿಳೆಯರು ದುಬಾರಿ ಡಿಸೈನರ್ ಸೀರೆ, ಭಾರಿ ಒಡವೆಗಳನ್ನು ಧರಿಸಿ ಮೆರೆಯುತ್ತಿದ್ದರೆ, ದಪ್ಪ ಮೇಕಪ್ ಪದರ ಮೆತ್ತಿಕೊಂಡು ಹೊಳೆಯುತ್ತಿದ್ದರೆ, ನೀವು ಸರಳ ಗೆಟಪ್‌ನಲ್ಲಿ ಸೌಮ್ಯವಾಗಿ ವರ್ತಿಸುತ್ತಾ ನಸುನಗುತ್ತಿದ್ದರೆ, ಖಂಡಿತಾ ಎಲ್ಲರಿಗಿಂತ ನೀವೇ ಅಲ್ಲಿ ಆಕರ್ಷಣೆಯ ಕೇಂದ್ರವಾಗುತ್ತೀರಿ.
ಫಂಕ್ಷನ್‌ಗೆ ತಕ್ಕಂತೆ ಹೀಗೆ ಸಿದ್ಧರಾಗಿ. ಪಾರ್ಟಿಗೆ ಪೂರಕ ಡ್ರೆಸ್ ಇರಲಿ. ಸಮಯ ಮತ್ತು ಉದ್ದೇಶ ನೆನಪಿರಿಸಿಕೊಂಡು ತಯಾರಾಗಬೇಕು. ಡೀಸೆಂಟ್ ಆಗಿ ಅಚ್ಚುಕಟ್ಟಾಗಿ ನೀವು ಉಟ್ಟುಕೊಂಡು ಬಂದಿರುವ ಕಾಟನ್ ಸೀರೆ ಕೂಡ ಕಾಂಜೀವರಂ ಸೀರೆಗಿಂತ ಹೆಚ್ಚು ಪ್ರಶಂಸೆಗೆ ಒಳಗಾಗುತ್ತದೆ. ಸೀರೆಗೆ ತಕ್ಕಂತೆ ಇತರ ಆ್ಯಕ್ಸೆಸರೀಸ್ ಇರಲಿ. ಬೇರೆಯವರಿಗಿಂತ ನೀವು ಫಿಟ್ & ಫೈನ್ ಆಗಿ ಕಂಗೊಳಿಸಿದಾಗ, ನಿಮ್ಮ ಒಳಗಿನಿಂದ ಆತ್ಮವಿಶ್ವಾಸ ತಂತಾನೇ ಉಕ್ಕಿಬರುತ್ತದೆ. ನೀವು ಬೇರೆ ಹೆಂಗಸರೊಡನೆ ಹೇಗೆ ಬೆರೆಯುತ್ತೀರಿ, ಅವರೊಡನೆ ಹೇಗೆ ಸಂಭಾಷಿಸುತ್ತೀರಿ.... ಇವೆಲ್ಲ ತುಂಬಾ ಮುಖ್ಯ.
ಇಂದಿನ ಆಧುನಿಕ ಸಮಾಜದಲ್ಲಿ, ಎಲ್ಲಕ್ಕೂ ಮೊದಲು ಜನ ನಿಮ್ಮ ಡ್ರೆಸ್‌ಗಮನಿಸಿಯೇ ನಿಮ್ಮನ್ನು ಎಡೆ ಹಾಕುತ್ತಾರೆ. ನೀವು ರೆಡಿಯಾಗಿ ಬಂದಿರುವ ರೀತಿ ಮುಖ್ಯವಾಗುತ್ತದೆಯೇ ಹೊರತು ಅದು ದುಬಾರಿ ಡಿಸೈನರ್ ಮೆಟೀರಿಯಲ್ ಅಲ್ಲವೇ ಎಂಬುದು ಮುಖ್ಯವಲ್ಲ. ನೀವು ಪಾರ್ಟಿಯಲ್ಲಿ ಯಾವುದೇ ಡ್ರೆಸ್ ಧರಿಸಿರಲಿ, ಅದು ಸಂದರ್ಭಕ್ಕೆ ಸೂಕ್ತವಾಗಿರಬೇಕು, ನಿಮಗೆ ಹೊಂದುವಂತಿರಬೇಕು. ಜೊತೆಗೆ ನೀವು ಆ ಡ್ರೆಸ್‌ನ್ನು ಸರಿಯಾಗಿ ಮೇಂಟೇನ್ ಮಾಡುತ್ತಿರಬೇಕು.
ಮುಖವೇ ವ್ಯಕ್ತಿತ್ವದ ದರ್ಪಣ
ನೀವು ಸಿನಿಮಾ, ಟಿವಿ ಶೋಗಳಲ್ಲಿ ನೋಡಿರಬಹುದು, ನಟಿಯರು ಗೌನ್‌ಯಾ ಡ್ರೆಸ್ ಧರಿಸಿ ಸ್ಟೇಜ್ ಮೇಲೆ ಪಾರ್ಟಿಗಾಗಿ ಬರುತ್ತಾರೆ. ಅದನ್ನಂತೂ ಅವರು ಸಂಭಾಳಿಸಲು ಆಗದು, ಎಲ್ಲರ ಮುಂದೆ ಆಗ ಅವರು ಸಂಕೋಚಕ್ಕೆ ಒಳಗಾಗುತ್ತಾರೆ. ಆದ್ದರಿಂದ ನೀವು ನಿಮ್ಮ ಪರ್ಸನಾಲ್ಟಿ, ವಯಸ್ಸು, ಗೆಟಪ್‌ಗೆ ತಕ್ಕಂತೆ ನಿಮ್ಮ ಡ್ರೆಸ್‌ಆಯ್ಕೆ ಮಾಡಿ.