ಯಾವುದೇ ಹಬ್ಬ ಅಥವಾ ವಿಶೇಷ ಶುಭ ಸಮಾರಂಭವಿರಲಿ, ವಿಶೇಷ ಬಗೆಯ ಲುಕ್ಸ್ ಬೇಕಾಗುತ್ತದೆ. ಲುಕ್ಸ್ ವಿಶಿಷ್ಟವಾಗಿದ್ದಷ್ಟೂ ಹಬ್ಬದ ಸಡಗರ ಸಂಭ್ರಮ ಹೆಚ್ಚುತ್ತದೆ. ಮಹಿಳೆಯರು ತಮ್ಮ ಉಡುಗೆ ತೊಡುಗೆ, ಆಭರಣ, ಮೇಕಪ್ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ, ಹೇರ್ ಸ್ಟೈಲ್ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹಬ್ಬ ಎಂಬುದರ ಸಡಗರ ಹೆಚ್ಚಲು ಹೆಣ್ಣುಮಕ್ಕಳ ಅಲಂಕಾರ, ಓಡಾಟ, ಸಂಭ್ರಮದ ವಾತಾವರಣವೇ ಮುಖ್ಯ. ಇಂಥ ಸಂದರ್ಭದಲ್ಲಿ ಹೇರ್ ಸ್ಟೈಲ್ ಎಷ್ಟು ಆಧುನಿಕವಾಗಿದ್ದರೆ ಅಷ್ಟೂ ಉತ್ಸಾಹ, ಉಲ್ಲಾಸ ಹೆಚ್ಚುತ್ತದೆ.
ಹಾಗಿದ್ದರೆ ಈ ಸಲದ ಹಬ್ಬಗಳ ವಿಶೇಷ ಲುಕ್ಸ್ ಗಾಗಿ ನಿಮ್ಮ ಹೇರ್‌ಸ್ಟೈಲ್ ಹೇಗಿರಬೇಕು? ಬನ್ನಿ ಗಮನಿಸೋಣ :
ಸೆಂಟರ್ ಪಫ್ ವಿತ್ ಸ್ಟ್ರೀಕಿಂಗ್
ಎಲ್ಲಕ್ಕೂ ಮೊದಲು ಕೂದಲನ್ನು ಪ್ರೆಸ್ಸಿಂಗ್ ಮಾಡಿ, ಹೇರ್‌ಗೆ ಸ್ಚ್ರೇಟ್ ಲುಕ್ ಕೊಡಿ. ನಂತರ ಮುಂಭಾಗದಲ್ಲಿ ಮಧ್ಯದಿಂದ ಕೂದಲನ್ನು ಪಫ್ ಮಾಡಿ. ಪಫ್‌ನ ಎಲ್ಲಾ ಕಡೆ ಬೇರೆ ಬೇರೆ ಬಣ್ಣದ ಹೇರ್ ಎಕ್ಸ್ ಟೆನ್ಶನ್ಸ್ ಅಳವಡಿಸಿ. ಅದನ್ನು ಕೂದಲಿನ ಮಧ್ಯೆ ಮರ್ಜ್ ಮಾಡುತ್ತಾ ಒಂದು ಬದಿಗೆ ಟ್ವಿಸ್ಟಿಂಗ್ ರೋಲ್ ಜಡೆ ಹೆಣೆಯಿರಿ.
ಸೆಂಟರ್ ಹೇರ್ ಫಾಲ್
ಎಲ್ಲಕ್ಕೂ ಮೊದಲು ಕೂದಲನ್ನು ಪ್ರೆಸ್ಸಿಂಗ್ ಮೆಶೀನಿನ ನೆರವಿನಿಂದ ಸ್ಟ್ರೇಟ್ ಮಾಡಿಕೊಳ್ಳಿ. ನಂತರ ಸೈಡ್ ಪಾರ್ಟಿಶನ್ ಮಾಡಿ ಫ್ರಂಟ್‌ನಿಂದ ಒಂದು ಬದಿಗೆ ಫ್ರೆಂಚ್ ನಾಟ್ ಹಾಕಿ. ಜಡೆಯನ್ನು ಓಪನ್ ಹೇರ್ ಕಡೆಗೆ ಸರಿಸಿ. ಡ್ರೆಸ್ ಅನುಸಾರ ಜಡೆಗೆ ಬೀಡ್ಸ್ ಯಾ ಆ್ಯಕ್ಸೆಸರೀಸ್ ಅಳವಡಿಸಿ. ಇದು ನಿಮಗೆ ಬೊಂಬಾಟ್ ಎಲಿಗೆಂಟ್ ಲುಕ್ ನೀಡುತ್ತದೆ.
ಸಾಫ್ಟ್ ಕರ್ಲ್
ಕೂದಲಿಗೆ ಸೈಡ್ ಪಾರ್ಟಿಂಗ್ ಕೊಡಿ. ನಂತರ ಫ್ರಂಟ್‌ನ ಕೆಲವು ಕೂದಲನ್ನು ಬಿಟ್ಟು, ಕುತ್ತಿಗೆಗಿಂತ ಮೇಲಕ್ಕೆ ಪೋನಿ ಮಾಡಿ. ಎಲ್ಲಾ ಕೂದಲನ್ನೂ ಕರ್ಲಿಂಗ್ ರಾಡ್‌ನಿಂದ ಕರ್ಲ್ ಮಾಡಿ. ಫ್ರಂಟ್‌ನಲ್ಲಿ ಬಿಟ್ಟಿದ್ದ ಕೂದಲನ್ನು ಟ್ವಿಸ್ಟ್ ಮಾಡುತ್ತಾ ಹಿಂಬದಿಗೆ ಕೊಂಡು ಹೋಗಿ ಪಿನ್ ಅಪ್ ಮಾಡಿ. ಪೋನಿ ಮೇಲ್ಭಾಗದಲ್ಲಿ ಫೆದರ್ ಯಾ ನಿಮ್ಮಿಷ್ಟದ ಹೇರ್ ಆ್ಯಕ್ಸೆಸರೀಸ್ ಅಳವಡಿಸಿ. ಈ ಕೂದಲು ಮುಖದ ಮೇಲೆ ಬರಬಾರದು, ಹಾಗೆ ಮಾಡಿ. ಇದಕ್ಕಾಗಿ ಸೈಡ್ ಪಾರ್ಟಿಶನ್ ಮಾಡಿ, ಯಾವುದಾದರೂ ಸುಂದರ ಕ್ಲಿಪ್ ಅಳವಡಿಸಿ.
ಈ ಎಲ್ಲಾ ಹೇರ್ ಸ್ಟೈಲ್, ನಿಮ್ಮ ಲುಕ್ಸ್ ಗೆ ಬದಲಾವಣೆ ನೀಡುವುದರ ಜೊತೆ, ನಿಮ್ಮ ಒಟ್ಟಾರೆ ವ್ಯಕ್ತಿತ್ವವನ್ನೂ ಆಕರ್ಷಕಗೊಳಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
- ತ್ರಿವೇಣಿ ಭಟ್