ವಿಷಯ 20+ ಅಥವಾ 50+ನದ್ದಾಗಿರಲಿ, ಪ್ರತಿ ವಯಸ್ಸಿನಲ್ಲೂ ಮಹಿಳೆಯರು ತಮ್ಮ ಸೌಂದರ್ಯ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುತ್ತಾರೆ. ನನ್ನ ಪರಿಚಿತರೊಬ್ಬರು 50+ನವರು, ಈ ವಯಸ್ಸು ದಾಟಿದ್ದರೂ ತಮ್ಮ ಮೇಕಪ್‌ ಮತ್ತು ಲುಕ್ಸ್ ಕುರಿತಾಗಿ ಆಕೆ ಬಹಳ ಆ್ಯಕ್ಟಿವ್ ಎಂದೇ ಹೇಳಬೇಕು. ಅವರ ಮುಂದೆ 30+ನವರಾದ ನಾವು ನಾಚಿಕೊಳ್ಳಬೇಕು. 20+ನವರು ಸಹ ಇವರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಏಕೆಂದರೆ ವಯಸ್ಸು ಹೆಚ್ಚಿದಂತೆ ಸಡಿಲ ತ್ವಚೆ, ರಿಂಕಲ್ಸ್, ಫೈನ್‌ಲೈನ್ಸ್ ಮುಖದ ಅಂದ ಕೆಡಿಸುತ್ತವೆ.

ಹೀಗಾಗಿ ಮುಖದ ಸೊಬಗು ಉಳಿಸಿಕೊಳ್ಳಲು ಇಲ್ಲಿನ ಮೇಕಪ್‌ ಟ್ರಿಕ್ಸ್ ಫಾಲೋ ಮಾಡಿ :

ಫೇಸ್‌ ಮೇಕಪ್‌ ಟ್ರಿಕ್ಸ್ : ಮುಖವನ್ನು ಮೊದಲು ಚೆನ್ನಾಗಿ ಶುಭ್ರಗೊಳಿಸಿ. ಕಲೆ ಗುರುತುಗಳಿದ್ದರೆ ಕನ್ಸೀಲರ್‌ಹಚ್ಚಿರಿ, ಆಗ ಅವು ಸುಲಭವಾಗಿ ಮರೆಯಾಗುತ್ತವೆ. ನಂತರ ಅದರ ಮೇಲೆ ಹಗುರವಾಗಿ ಕೈಗಳಿಂದ ಅಥವಾ ಬ್ರಶ್ಶಿನಿಂದ ಕಾಂಪ್ಯಾಕ್ಟ್ ಪೌಡರ್‌ಹಚ್ಚಿರಿ. ಈಗ ಇದರ ಮೇಲೆ ಸ್ಕಿನ್‌ ಮ್ಯಾಚಿಂಗ್‌ ಫೌಂಡೇಶನ್‌ ಬೇಸ್‌ನ್ನು ಬಳಸಬೇಕು. ಇದನ್ನು ಇಡೀ ಮುಖಕ್ಕೆ ಹಚ್ಚುತ್ತಾ ಮರ್ಜ್‌ಮಾಡಿ. ಎಂದೂ ಹೆಚ್ಚು ಬೇಸ್‌ ಬಳಸಬೇಡಿ, ಆಗ ಇದು ಚರ್ಮವನ್ನು ಇನ್ನಷ್ಟು ಕೆಟ್ಟದಾಗಿ ತೋರಿಸಬಹುದು. ಬೇಸ್‌ ಹಚ್ಚಿದ ನಂತರ ಹಗುರ ಬ್ರಶ್ಶಿನಿಂದ ಮ್ಯಾಚಿಂಗ್‌ ಲೂಸ್‌ ಪೌಡರ್‌ ಹಚ್ಚಿರಿ. ಆಗ ಬೇಸ್‌ಸೆಟ್‌ ಆಗುತ್ತದೆ.

ಕಂಗಳ ಮೇಕಪ್‌: ಬೇಸ್‌ ಹಚ್ಚಿದ ನಂತರ ಐ ಮೇಕಪ್‌ ಶುರು ಮಾಡಿ. ಕಂಗಳ ಮೇಲೆ ಕ್ರೀಂ ಬೇಸ್‌ ಶ್ಯಾಡೋ ಹಚ್ಚುವ ಬದಲು ಪೌಡರ್‌ ಬೇಸ್‌ ಶ್ಯಾಡೋ ಹಚ್ಚಿ, ಚೆನ್ನಾಗಿ ಬ್ರಶ್ಶಿನಿಂದ ಮರ್ಜ್‌ ಮಾಡಿ. ನಂತರ ಲೈಟ್‌ ಬ್ರೌನ್‌ ಯಾ ಪೀಚ್‌ ಕಲರ್‌ನ ಶ್ಯಾಡೋ ಹಚ್ಚಿರಿ. ಇದನ್ನು ಕೈಗಳಿಂದ ಹಗುರುವಾಗಿ ಕಂಗಳ ಹೊರ ಅಂಚಿನಿಂದ, ಒಳಭಾಗದ ಕಡೆ ಎಳೆಯುತ್ತಾ ತರಬೇಕು. ಒಳಭಾಗದಿಂದ ಹೊರಭಾಗದತ್ತ ತುಸು ಡಾರ್ಕ್‌ ಆಗಿಯೇ ಇರಲಿ. ಇದೀಗ ಬ್ರೌನ್‌+ ಬ್ಲ್ಯಾಕ್‌ ಕಲರ್‌ ಮಿಕ್ಸ್ ಮಾಡಿ ಬ್ರಶ್ಶಿನಿಂದ ಲೈನರ್‌ ತೀಡಿರಿ. ಒಳಗಿನಿಂದ ಹೊರಗಡೆಗೆ ಲೈಟ್‌ ಆಗಿ ತುಸು ಮೇಲೆ ತೆಗೆದು ಹಚ್ಚಬೇಕು. ವಾಟರ್‌ ಲೈನ್‌ ಏರಿಯಾದಲ್ಲಿ ಕಾಡಿಗೆಯ ಅಗತ್ಯವಿದ್ದರೆ ಮಾತ್ರ ಹಚ್ಚಿರಿ, ಇಲ್ಲದಿದ್ದರೆ ಹೊರಗಿನ ಕಡೆ ತುಸು ಲೈನರ್‌ ಹಚ್ಚಿ ಬ್ರಶ್ಶಿನಿಂದ ಮರ್ಜ್‌ ಮಾಡಿ. ಐ ಬ್ರೋಸ್‌ನ್ನು ಶಾರ್ಪ್‌ ಆಗಿ ತೋರಿಸಲು, ಕೂದಲಿನ ಬಣ್ಣದ ಐ ಬ್ರೋ ಪೆನ್ಸಿಲ್‌ನ್ನೇ ಬಳಸಬೇಕು. ಆದರೆ ಅದನ್ನು ಪರ್ಮನೆಂಟ್‌ಆಗಿಸಬೇಡಿ. ಲೈಟ್‌ ಆದ ಪೆನ್ಸಿಲ್‌ ಬಳಸುತ್ತಾ ಕಾಟನ್‌ನಿಂದ  ಒರೆಸಿಬಿಡಿ, ಆಗ ಅದು ಕೃತಕ ಎನಿಸುವುದಿಲ್ಲ.

ತುಟಿಗಳ ಮೇಕಪ್‌: ತುಟಿಗಳ ಆಕಾರಕ್ಕೆ ಅನುಸಾರ ಅದರ ಔಟ್‌ಲೈನ್‌ ಮಾಡಿ. ತುಟಿಗಳು ತೆಳು ಆಗಿದ್ದರೆ ಹೊರಗಿನ ಭಾಗಕ್ಕೆ ಎಳೆಯುತ್ತಾ ಔಟ್‌ಲೈನ್‌ ಮಾಡಿ ಹಾಗೂ ದಪ್ಪಗಿದ್ದರೆ ಒಳಭಾಗಕ್ಕೆ ಒತ್ತುತ್ತಾ  ಔಟ್‌ಲೈನ್‌ ನೀಡಿ. ಔಟ್‌ಲೈನ್‌ ಸಹ ಡಾರ್ಕ್‌ ಕಲರ್‌ಆಗಿರಬಾರದು. ಯಾವ  ಬಣ್ಣ ನಿಮ್ಮ ಲಿಪ್‌ಸ್ಟಿಕ್‌ನದೋ ಅದೇ ಬಣ್ಣದಿಂದಲೇ ಮಾಡಿ. ಲಿಪ್‌ಸ್ಟಿಕ್‌ ಬಣ್ಣ ಸಹ ವಯಸ್ಸಿಗೆ ತಕ್ಕಂತೆ ಲೈಟ್‌ ಪಿಂಕ್‌, ಪೀಚ್‌, ಲೈಟ್‌ ಬ್ರೌನ್‌ ಇರಲಿ. ಔಟ್‌ಲೈನ್‌ ಆದ ಮೇಲೆ ತುಟಿಗಳಿಗೆ ಲಿಪ್‌ಸ್ಟಿಕ್‌ ಫಿಲ್ ಮಾಡಿ.

ಚೀಕ್ಸ್ ಮೇಕಪ್‌: ಕೊನೆಗೆ ಕೆನ್ನೆಗಳು ತುಂಬಿರುವಂತೆ ತೋರಿಸಲು, ಚೀಕ್ಸ್ ಬೋನ್‌ ಮೇಲೆ ಬ್ರಶ್‌ನ ಸಹಾಯದಿಂದ ಕೆಳಗಿನಿಂದ ಮೇಲ್ಭಾಗದತ್ತ ಒಂದೇ ಸ್ಟ್ರೋಕ್‌ನಲ್ಲಿ ಪೀಚ್‌ ಬಣ್ಣದ ಬ್ಲಶರ್‌ ಹಚ್ಚಿರಿ. ಇದೇ ತರಹ ಮತ್ತೊಂದು ಕೆನ್ನೆಗೂ ಮಾಡಿ.

ಹೇರ್‌ಸ್ಟೈಲ್ : ಕೂದಲಿಗೆ ಲೈಟ್‌ ಆಗಿ ಬ್ಯಾಕ್‌ ಕೂಂಬಿಂಗ್‌ ಮಾಡಿ, ಒಂದು ಬದಿಯ ಕೂದಲಿಗೆ ಉತ್ತಮವಾಗಿ ನೀಡ್‌ ಮಾಡುತ್ತಾ ಪಿನ್‌ ಹಾಕಿಡಿ. ಇದೇ ರೀತಿ ಇನ್ನೊಂದು ಬದಿಯ ಕೂದಲಿಗೂ ಮಾಡಿ, ಫ್ರೆಂಚ್‌ ರೋಲ್ ಮಾಡಿ ಪಿನ್‌ ಅಳವಡಿಸಿ. ಈಗ ಮುಂಭಾಗದ ಕೂದಲಿನ 1-1 ಸೆಕ್ಷನ್‌ ತೆಗೆದುಕೊಂಡು ಬ್ಯಾಕ್‌ ಕೂಂಬಿಂಗ್‌ ಮಾಡಿ. ಒನ್‌ಸೈಡ್‌ ಕೂದಲನ್ನು ಲೈಟ್‌ ಆಗಿ ನೀಡ್‌ ಮಾಡುತ್ತಾ ಪಿನ್‌ ಅಳವಡಿಸಿ. ಹೇರ್‌ಸ್ಟೈಲ್‌ ಆದ ಮೇಲೆ ಇಡೀ ಕೂದಲಿಗೆ, ಹೇರ್‌ಸ್ಪ್ರೇ ಸಿಂಪಡಿಸಿ, ನಂತರ ಹೂ ಮುಡಿಸಿ. ಸೀರೆಗೆ ಹೊಂದುವ ಜ್ಯೂವೆಲರಿ ಧರಿಸಿ, ರಾಯಲ್ ಲುಕ್ಸ್ ರೆಡಿ ಆಯ್ತು.

– ಪ್ರತಿನಿಧಿ

Tags:
COMMENT