ಪುಟಾಣಿ ಉಂಡೆ
ಬೇಕಾಗುವ ಸಾಮಗ್ರಿ
ಹುರಿಗಡಲೆ ೧ ಕಪ್, ಒಣಕೊಬ್ಬರಿ ತುರಿ ೧/೪ ಕಪ್, ಗೋಡಂಬಿ ೫-೬ , ಬಾದಾಮಿ ೨, ಬೆಲ್ಲದ ಪುಡಿ ೩/೪ ಕಪ್, ತುಪ್ಪ ೩ ಚಮಚ.
ಮಾಡುವ ವಿಧಾನ
ಹುರಿಗಡಲೆಯನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ನುಣ್ಣಗೆ ಪುಡಿಮಾಡಿಕೊಳ್ಳಿ. ಗೋಡಂಬಿ, ಬಾದಾಮಿ ಪುಡಿಮಾಡಿ, ಹುರಿಗಡಲೆಪುಡಿಯೊಂದಿಗೆ ಬೆರೆಸಿಕೊಳ್ಳಿ. ಸಣ್ಣ ಉರಿಯಲ್ಲಿ ಬಾಣಲೆಗೆ ತುಪ್ಪಹಾಕಿ ಬೆಲ್ಲದ ಪುಡಿಯನ್ನು ಸೇರಿಸಿ. ಬೆಲ್ಲ ಕರಗಿ ೧ ನೂಲೆಳೆ ಪಾಕ ಬರುವಾಗ ಉರಿಯಾರಿಸಿ, ಹುರಿಗಡಲೆ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಗುಚಿ ಬಿಸಿಯಿದ್ದಾಗಲೇ ಸಣ್ಣ ಉಂಡೆಗಳನ್ನು ಕಟ್ಟಿ. ಕೊಬ್ಬರಿತುರಿಯಲ್ಲಿ ಉರುಳಿಸಿ.
ತಮ್ಮ ವಿಶ್ವಾಸಿ
ಕಾವ್ಯ ಭಾರದ್ವಾಜ್

आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





