ಪ್ರತಿಯೊಬ್ಬ ವಧು ತನ್ನ ಮದುವೆಯ ದಿನ ಅದ್ಭುತವಾಗಿ ಕಂಗೊಳಿಸಬೇಕೆಂದು ತನ್ನ ಬ್ರೈಡಲ್ ಡ್ರೆಸ್, ಹೇರ್ ಸ್ಟೇಲ್, ಮೇಕಪ್‌ಎಲ್ಲವನ್ನೂ ಪರ್ಫೆಕ್ಟ್ ಆಗಿ ಇರಿಸಿಕೊಳ್ಳ ಬಯಸುತ್ತಾಳೆ. ಈ ದಿನ ಹೇರ್ ಸ್ಟೈಲ್‌ಗೆ ತನ್ನದೇ ಆದ ಮಹತ್ವವಿರುತ್ತದೆ. ಏಕೆಂದರೆ ಅದು ವಧುವಿನ ಇಡೀ ಲುಕ್ಸ್ ನ್ನೇ ಬದಲಾಯಿಸಿ ಬಿಡುತ್ತದೆ. ಜೊತೆಗೆ ಅವಳಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಿ, ಗಾರ್ಜಿಯಸ್ ಆಗಿ ಫೀಲಾಗುವಂತೆ ಮಾಡುತ್ತದೆ. ಇದೆಲ್ಲ ಯಾವಾಗ ಸಾಧ್ಯ ಅಂತೀರಾ? ವಧು ತನ್ನ ಮದುವೆಯ 2 ತಿಂಗಳ ಹಿಂದಿನಿಂದಲೇ ತನ್ನ ಕೂದಲಿನ ಆರೈಕೆ (ಅದರಲ್ಲೂ ವಿಶೇಷವಾಗಿ ಬೇಸಿಗೆಯಲ್ಲಿ) ಶುರು ಮಾಡಿದಾಗ ಮಾತ್ರ. ಕೇಶ ತಜ್ಞೆಯರ ಸಲಹೆಗಳ ಪ್ರಕಾರ ಇದಕ್ಕಾಗಿ ಏನೇನು ಕ್ರಮ ಕೈಗೊಳ್ಳಬೇಕೆಂದು ನೋಡೋಣ. ಇದರಿಂದ ಸ್ಮೂತ್, ಶೈನಿಂಗ್, ಸ್ಟೈಲಿಶ್ ಕೂದಲನ್ನು ಪಡೆಯಬಹುದು.
ನಿಮ್ಮ ಕೂದಲಿನ ಬಗ್ಗೆ ಅರಿಯಿರಿ : ವಿಷಯ ಮುಖ ಅಥವಾ ಕೂದಲಿನ ಕುರಿತಾಗಿಯೇ ಇರಲಿ, ನಾವು ನಮ್ಮ ಕೂದಲು ಯಾವ ಪ್ರಕಾರದ್ದು ಎಂದು ತಿಳಿದುಕೊಳ್ಳುವವರೆಗೂ ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆ ನಡೆಸಲಾಗದು. ಹೀಗಾಗಿ ನಿಮ್ಮ ಕೂದಲು ಎಂಥ ಟೈಪ್ ಎಂದು ಅರಿಯಿರಿ. ಅದು ಸ್ಟ್ರೇಟ್ ಅಥವಾ ಕರ್ಲಿಯೇ ಎಂಬುದನ್ನು ತಿಳಿದುಕೊಳ್ಳಿ. ಆಗ ಮದುವೆ ದಿನ ಉತ್ತಮ ರಿಸ್ಟ್ ಇರುತ್ತದೆ.
ವಾರಕ್ಕೆ 2-3 ಸಲ ಕೂದಲನ್ನು ತೊಳೆಯಿರಿ : ನಿಮ್ಮ ಕೂದಲನ್ನು ಸದಾ ಶುಚಿಯಾಗಿಟ್ಟುಕೊಳ್ಳುವುದು ಅತಿ ಅಗತ್ಯ. ಏಕೆಂದರೆ ನಗರ ಜೀವನದಲ್ಲಿ ಮಾಲಿನ್ಯ ಆಳವಾಗಿ ಬೇರೂರಿದೆ. ಕೂದಲು, ಸ್ಕಾಲ್ಪ್ ಗೆ ಧೂಳು ಮಣ್ಣು ಧಾರಾಳ ಬೆರೆತು, ಅದು ಅಂದದ ಕೂದಲನ್ನು ನಿರ್ಜೀವ, ಡಲ್ ಮಾಡಿಬಿಡುತ್ತದೆ. ಹೀಗಾಗಿ ವಾರಕ್ಕೆ 2-3 ಸಲ ತಲೆ ಸ್ನಾನ ಅತ್ಯಗತ್ಯ. ಇದಕ್ಕಿಂತ ಮುಖ್ಯವಾದುದು ಎಂದರೆ ಕೂದಲನ್ನು ಸರಿಯಾಗಿ ತೊಳೆಯುವ ಕ್ರಮ, ಆಗ ಮಾತ್ರ ಕೂದಲು ಡ್ರೈ ಆಗುವುದಿಲ್ಲ.
ಇದಕ್ಕಾಗಿ ಮೊದಲು ಕೂದಲಿಗೆ ನೀರು ತಾಗಿಸಿ. ನಂತರ ಸ್ಕಾಲ್ಪ್ ಗೆ ಮೈಲ್ಡ್ ಶ್ಯಾಂಪೂ ಹಚ್ಚಿ ಲಘುವಾಗಿ ಕೈಗಳಿಂದ ಮಸಾಜ್ ಮಾಡಿ. ನಂತರ ಕೂದಲನ್ನು ತುಸು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ (ಕುದಿವ ನೀರು ಬೇಡ). ಆಮೇವೆ ಕಂಡೀಶನರ್ ಹಚ್ಚಿ, ಆಗ ಕೂದಲಿನ ಸೌಮ್ಯತೆ, ಮೃದುತ್ವ ಹೆಚ್ಚುತ್ತದೆ.
ಟ್ರಿಮ್ಮಿಂಗ್ ಕೂಡ ಅಗತ್ಯ : ನೀವು ನಿಮ್ಮ ಕೂದಲು ಬೇಗ ಉದ್ದ ಬೆಳೆಯಬೇಕೆಂದು ಬಯಸಿದರೆ, ಇದಕ್ಕಾಗಿ ನಿಯಮಿತವಾಗಿ ಕೂದಲನ್ನು ಟ್ರಿಮ್ಮಿಂಗ್ ಮಾಡಿಸುತ್ತಿರಿ. ಇದರಿಂದ ನಿಮ್ಮ ಮುಹೂರ್ತದ ದಿನ ಸ್ಟೈಲ್ ಮಾಡಿಸಲು ಸುಲಭವಾಗುತ್ತದೆ ಹಾಗೂ ನಿಮಗೆ ಬೆಟರ್ ಲುಕ್ಸ್ ಸಿಗುತ್ತದೆ. ಆದರೆ ಹೇರ್ ಸ್ಟೈಲಿಂಗ್ ಉಪಕರಣಗಳು ಜಾಸ್ತಿ ಆಗಬಾರದಷ್ಟೆ. ಏಕೆಂದರೆ ಅದರಿಂದ ಕೂದಲು ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚು.
ಹೇರ್ ಸ್ಪಾ ಆಯ್ಲಿಂಗ್ : ಮಾಲಿನ್ಯ, ಉರಿಬೇಸಿಗೆ, ಅಪೌಷ್ಟಿಕ ಆಹಾರ ಸೇವನೆಯ ಕಾರಣಗಳಿಂದ ಕೂದಲು ಬಲು ಡಲ್ ಆಗುತ್ತದೆ. ಹೀಗಾಗಿ ಈ ಡಲ್ ಕೂದಲಿಗೆ ಹೆಚ್ಚಿನ ಪ್ರೋಟೀನ್ ನೀಡಬೇಕಾದ ಅಗತ್ಯವಿದೆ. ಇದಕ್ಕಾಗಿ ಸ್ಪಾ ಟ್ರೀಟ್‌ಮೆಂಟ್‌ಗಿಂತ ಬೆಸ್ಟ್ ಬೇರೊಂದಿಲ್ಲ. ಹೀಗಾಗಿ ನೀವು ತಿಂಗಳಲ್ಲಿ 1-2 ಸಲ ಕೂದಲಿಗೆ ಅಗತ್ಯ ಸ್ಪಾ ಮಾಡಿಸಿ. ಸಾಮಾನ್ಯವಾಗಿ ಕೂದಲು ಅಂಟಂಟಾಗುತ್ತದೆ ಎಂಬ ಹೆದರಿಕೆಯಿಂದ ನಾವು ಕೂದಲಿಗೆ ಎಣ್ಣೆ ಹಚ್ಚಲು ಹೋಗುವುದಿಲ್ಲ. ಆದರೆ ಆಯ್ಲಿಂಗ್‌ನಿಂದ ಕೂದಲು ವೇಗವಾಗಿ ಬೆಳೆಯುವುದಲ್ಲದೆ, ಅದಕ್ಕೆ ಹೆಚ್ಚಿನ ಶೈನಿಂಗ್ ಸಹ ಬರುತ್ತದೆ. ಹೀಗಾಗಿ ರೆಗ್ಯುಲರ್ ಸ್ಪಾ ಆಯ್ಲಿಂಗ್ ಅಭ್ಯಾಸವನ್ನು ನಿರ್ಲಕ್ಷಿಸಬೇಡಿ.