ಮದುವೆಯ ದಿನದಂದು ತಾನು ಮಿಸ್ ಯೂನಿವರ್ಸ್‌ಳಂತೆ ಕಾಣಿಸಬೇಕು ಎಂಬುದು ಎಲ್ಲ ಹುಡುಗಿಯರ ಕನಸಾಗಿರುತ್ತದೆ. ಹಾಗೆ ಕಾಣಿಸುವಲ್ಲಿ ಮುಗುಳ್ನಗೆ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಮದುವೆಯ ದಿನವಂತೂ ಮುಗುಳ್ನಗೆ ವಧುವನ್ನು ಅನುಪಮ ಸುಂದರಿಯನ್ನಾಗಿಸುತ್ತದೆ.
ಮುಗುಳ್ನಗೆಯಲ್ಲಿ ಅಪೀಲ್ ಇಲ್ಲದಿದ್ದರೆ ನೀವು ಯಾವಾಗಲೂ ಅಂಜಿಕೆಯಲ್ಲಿದ್ದಂತೆ ಇರುತ್ತೀರಿ. ಮುಗುಳ್ನಗೆಯಲ್ಲಿ ಅಪೀಲ್ ಇದ್ದರಂತೂ ನೀವು ಚೆನ್ನಾಗಿ ಕಾಣಿಸುವುದಲ್ಲದೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ, ಗಾಬರಿ ಕಡಿಮೆಯಾಗುತ್ತದೆ ಮತ್ತು ನೀವು ಮಾಡುವ ಎಲ್ಲ ಕೆಲಸಗಳಲ್ಲೂ ಸಂಪೂರ್ಣ ಭರವಸೆ ಇರುತ್ತದೆ. ಆದರೆ ಮುಗುಳ್ನಗೆಯಲ್ಲಿ ನಿಮ್ಮ ಹಲ್ಲುಗಳು ಮುತ್ತಿನಂತೆ ಹೊಳೆದಾಗಲೇ ಅಪೀಲ್ ಇರುತ್ತದೆ. ಒಂದು ವೇಳೆ ನಿಮ್ಮ ದಂತಪಕ್ತಿಗಳು ಮುತ್ತಿನಂತೆ ಹೊಳೆಯದಿದ್ದರೆ ಬೇಸರಪಟ್ಟುಕೊಳ್ಳಬೇಡಿ. ಕೆಲವು ವಿಷಯಗಳನ್ನು ಗಮನಿಸಿ ಅದನ್ನು ಪಡೆಯಬಹುದು.
ಎಲ್ಲಕ್ಕೂ ಮೊದಲು ಹಲ್ಲುಗಳ ಮೇಲೆ ಕಲೆ ಬೀಳದಂತೆ ನೋಡಿಕೊಳ್ಳಿ. ಹಲ್ಲುಗಳ ಮೇಲೆ ಕಲೆ ಉಂಟು ಮಾಡುವ ಆಹಾರ ಪದಾರ್ಥಗಳನ್ನು ವರ್ಜಿಸಿ. ಟೀ, ಕಾಫಿ, ಚೆರ್ರಿ, ಗಾಢ ಬಣ್ಣದ ಆಹಾರ ಪದಾರ್ಥಗಳನ್ನು ಸೇವಿಸಿದ ಕೂಡಲೇ ಹಲ್ಲುಗಳನ್ನು ಬ್ರಶ್ ಮಾಡಿ.
ಅಂಟಿಕೊಳ್ಳುವ ಪದಾರ್ಥಗಳನ್ನು ಉಪಯೋಗಿಸಬೇಡಿ. ಏಕೆಂದರೆ ಹಲ್ಲುಗಳಲ್ಲಿ ಫಿಲ್ಲಿಂಗ್ ಇದ್ದರೆ ಅದು ಹೊರಬರಲಾರದು.
ಉಸಿರಿನಲ್ಲಿ ದುರ್ಗಂಧ ಉಂಟು ಮಾಡುವ ಆಹಾರಪದಾರ್ಥಗಳು ಬೇಡ.
ನೀವು 2 ಕಾಳು ಬಟಾಣಿ ತಿಂದಿದ್ದರೂ ನಿಯಮಿತವಾಗಿ ಬಾಯಿ ತೊಳೆದುಕೊಳ್ಳಿ.
ಊಟವಾದ ಮೇಲೆ ಮಿಂಟ್ ಅಥವಾ ಮೌಥ್ ಫ್ರೆಶ್‌ನರ್ ಬದಲು ಶುಗರ್ ಲೆಸ್ ಗಮ್ಸ್ ಅಂದರೆ ಆರ್ಬಿಟ್, ಹ್ಯಾಪಿ ಡೆಂಟ್ ಇತ್ಯಾದಿ ತೆಗೆದುಕೊಳ್ಳಿ. ಇದು ಉಸಿರಿಗೆ ತಾಜಾತನ ಕೊಡುವುದಲ್ಲದೆ ಜೊಲ್ಲು ಉಂಟು ಮಾಡುತ್ತದೆ.
ನಾಲಿಗೆ ಮತ್ತು ವಸಡುಗಳನ್ನು ಯಾವಾಗಲೂ ಆರೋಗ್ಯವಾಗಿಡಿ.
ಜೊಲ್ಲಿನ ಉತ್ಪಾದನೆ ಕಡಿಮೆಯಾದರೆ ಹಲ್ಲುಗಳು ಕೊಳೆಯುವಿಕೆ ಮತ್ತು ಉಸಿರಿನಲ್ಲಿ ದುರ್ವಾಸನೆ ಉಂಟಾಗುತ್ತದೆ. ಒಂದು ವೇಳೆ ನಿಮ್ಮ ಬಾಯಲ್ಲಿ ಶುಷ್ಕತನ ಇದ್ದರೆ ಹಗಲಿನಲ್ಲಿ ನೀರು ಚೆನ್ನಾಗಿ ಕುಡಿಯಿರಿ ಮತ್ತು ಶುಗರ್ ಲೆಸ್ ಗಮ್ ಅಗಿಯುತ್ತಿರಿ.
ಧೂಮಪಾನ ತ್ಯಜಿಸಿ.
ಗಟ್ಟಿಯಾದ ಪದಾರ್ಥಗಳನ್ನು ತಿನ್ನಬೇಡಿ.
ಚೆನ್ನಾಗಿ ನಿದ್ದೆ ಮಾಡಿ. ಒತ್ತಡದಿಂದ ದೂರವಿರಿ. ಅದರಿಂದ ಹಲ್ಲುಗಳು ಅನಾವಶ್ಯಕವಾಗಿ ದಣಿಯುತ್ತವೆ ಹಾಗೂ ಅವು ಮುರಿಯುವ ಅಪಾಯವಿರುತ್ತದೆ.
ಬಾಟಲ್ ಮುಚ್ಚಳ ಅಥವಾ ಪ್ಲ್ಯಾಸ್ಟಿಕ್ ಪ್ಯಾಕಿಂಗ್‌ಗಳನ್ನು ಹಲ್ಲುಗಳಿಂದ ಕೀಳಬೇಡಿ. ಅವನ್ನು ತೆರೆಯಲು ಕತ್ತರಿ ಮತ್ತು ಓಪನರ್‌ಉಪಯೋಗಿಸಿ.
ಏಕಾಗ್ರತೆಗಾಗಿ ತುಟಿ ಕಚ್ಚುವುದು, ಉಗುರು ಕಚ್ಚುವುದು, ಪೆನ್ ಅಥವಾ ಪೆನ್ಸಿಲ್ ಕಚ್ಚುವ ಅಭ್ಯಾಸ ಬಿಟ್ಟುಬಿಡಿ.
ತುಟಿಗಳಿಗೆ ಲಿಪ್‌ಸ್ಟಿಕ್ ಅಗತ್ಯವಾಗಿ ತೀಡಿ, ಅದರಿಂದ ಮುಗುಳ್ನಗೆಯ ಕಾಂತಿ ಹೆಚ್ಚುತ್ತದೆ.
ಒಂದು ಒಳ್ಳೆಯ ಮುಗುಳ್ನಗೆ ಪಡೆಯಲು ಡೆಂಟಿಸ್ಟರು ಸೂಚಿಸುವ ಪ್ರಕ್ರಿಯೆಗಳಿಗೆ ಕೊಂಚ ಸಮಯ ಹಿಡಿಯುತ್ತದೆ. ಹೀಗಾಗಿ ಮದುವೆಗೆ ಕೆಲವು ವಾರಗಳ ಮೊದಲೇ ವೈದ್ಯರ ಬಳಿಗೆ ಹೋಗುವುದು ಒಳ್ಳೆಯದು. ನಿಮ್ಮ ಮುಗುಳ್ನಗೆಯನ್ನು ಆಕರ್ಷಕವಾಗಿಸಲು ಕೆಳಗಿನ ವಿಷಯಗಳನ್ನು ಗಮನಿಸಿ.
ಹಲ್ಲಿನ ಬಿಳುಪು : ಹೊಳೆಯುವ ಮುಗುಳ್ನಗೆಗೆ ಬಿಳುಪು ಸಹಜವಾಗಿರಬೇಕು. ಅದಕ್ಕಾಗಿ ಮದುವೆಗೆ ಸುಮಾರು 2 ವಾರಗಳ ಮೊದಲೇ ಹಲ್ಲುಗಳನ್ನು ಸ್ವಚ್ಛ ಮಾಡಿಸಬೇಕು. ಹಲ್ಲುಗಳು ಬಿಳುಪಾಗಲು ಟ್ರೇ ಮತ್ತು ವ್ಯಾಜರ್ಸ್‌ನಂತಹ ಹಲವು ವಿಧಾನಗಳಿವೆ.
ಬ್ರೇಸೆಸ್ : ಬ್ರೇಸಿಸ್ ಹಲವು ವರ್ಷಗಳವರೆಗೆ ಹಾಕಬೇಕು ಎಂಬುದು ಮಿಥ್ಯೆ. ಹೊಸದಾದ 6 ತಿಂಗಳ ಬ್ರೇಸೆಸ್‌ನಿಂದ ದಂತಪಂಕ್ತಿಗಳ ಆಶಾದಾಯಕ ಪರಿಣಾಮ 6 ತಿಂಗಳಲ್ಲಿ ಪಡೆಯಬಹುದು. ಇದು ವಧುಗಳ ಹಲ್ಲುಗಳ ಮಧ್ಯದ ಜಾಗ ಅಥವಾ ಅಂಟಿಕೊಂಡಿರುವ ಹಲ್ಲುಗಳಿಗೆ ಲಾಭದಾಯಕ.
ಅಲಂಕೃತ ಪದರಗಳು : ಹಲ್ಲುಗಳ ಆಕೃತಿ, ಬಣ್ಣವನ್ನು 1-2 ವಾರಗಳಲ್ಲಿ ಬದಲಿಸುವಲ್ಲಿ ಅಲಂಕೃತ ಪದರಗಳು ಸಹಾಯ ಮಾಡುತ್ತವೆ. ಅವು ದೀರ್ಘಕಾಲ ಇರುತ್ತವೆ.
ಪ್ರಸಾಧನ ಬಾಂಡಿಂಗ್ : ಇದು ಕಲೆಗಳು, ಬಿರುಕು ಇತ್ಯಾದಿಗಳನ್ನು ಅಡಗಿಸಲು ಒಳ್ಳೆಯ ಆಯ್ಕೆಯಾಗಿದೆ. ಇದನ್ನು ನೇರವಾಗಿ ಹಲ್ಲುಗಳಿಗೆ ಹಚ್ಚಲಾಗುತ್ತದೆ. ಇದು ಹಲ್ಲುಗಳಿಗೆ ಹೆಚ್ಚುವರಿ ಆಸರೆ ಕೊಡುತ್ತದೆ.
ಗಮ್ ಡೀ ಪಿಗ್ಮೆಂಟೇಶನ್ : ಸುಂದರ ಮುಗುಳ್ನಗೆ ಪಡೆಯಲು ಇದು ಸಹಾಯ ಮಾಡುತ್ತದೆ.
ಗಮ್ ನ ಶಸ್ತ್ರಚಿಕಿತ್ಸೆ : ಈ ಚಿಕಿತ್ಸೆಯ ಮೂಲಕ ವಸಡುಗಳಿಗೆ ಮತ್ತೆ ಆಕಾರ ಕೊಟ್ಟು ಸೆಕ್ಸಿ ಮುಗುಳ್ನಗೆ ಪಡೆಯಬಹುದು.
– ಎ.ಪಿ. ವರ್ಷಿಣಿ