ಪ್ರತಿ ವೆಡ್ಡಿಂಗ್‌ ಸೀಸನ್‌ನಲ್ಲಿ ಫ್ಯಾಷನ್‌ ಬಹಳಷ್ಟು ಬದಲಾಗುತ್ತದೆ. ಅದು ಬ್ರೈಡಲ್ ವೇರ್‌, ಜ್ಯೂವೆಲರಿ ಅಥವಾ ಬ್ರೈಡಲ್ ಮೇಕಪ್ ಆಗಿರಬಹುದು. ಬ್ರೈಡಲ್ ಮೇಕಪ್‌ನ ನೂತನ ಟ್ರೆಂಡ್‌ನಲ್ಲಿ ಥೀಮ್ ಬೇಸ್ಡ್ ವೆಡಿಂಗ್‌ನ ಮಾದರಿಯಲ್ಲಿ ಈಗ ಥೀಮ್ ಬೇಸ್ಡ್ ಅರೇಬಿಯನ್‌ ಸ್ಟೈಲ್ ಮೇಕಪ್‌ನ ಟ್ರೆಂಡ್‌ ಇದೆ. ಈ ಟ್ರೆಂಡನ್ನು ಗಮನದಲ್ಲಿಟ್ಟುಕೊಂಡು ಮೇಕಪ್‌ ಆರ್ಟಿಸ್ಟ್ ಮತ್ತು ಹೇರ್ ಡಿಸೈನರ್‌ ಉಷಾ ಅವುಗಳ ಟೆಕ್ನಿಕ್‌ ಬಗ್ಗೆ ಹೇಳಿದ್ದಾರೆ.

ಈ ಮೇಕಪ್‌ನ ವೈಶಿಷ್ಟ್ಯಅರೇಬಿಯನ್‌ ಸ್ಟೈಲ್ ಬ್ರೈಡಲ್ ಮೇಕಪ್‌ ತನ್ನ ಹೆಸರಿನಂತೆಯೇ ರಾಯಲ್ ಆಗಿದೆ. ಈ ಮೇಕಪ್‌ನ ವಿಶೇಷತೆ ಎಂದರೆ ಇದರಲ್ಲಿ ಕಣ್ಣುಗಳನ್ನು ಹೆಚ್ಚು ಹೈಲೈಟ್‌ ಮಾಡಲಾಗುತ್ತದೆ.

ಕಣ್ಣುಗಳಿಗೆ ಡಾರ್ಕ್‌, ಡ್ರಮಾಟಿಕಲ್ ಮತ್ತು ಸೆನ್ಶುಯಸ್‌ ಲುಕ್‌ ಕೊಡಲಾಗುತ್ತದೆ. ಅರೇಬಿಯನ್‌ ಐ ಮೇಕಪ್‌ನಲ್ಲಿ ಗೋಲ್ಡನ್‌ಐ ಶ್ಯಾಡೋ ಉಪಯೋಗಿಸಲಾಗುತ್ತದೆ. ಜೊತೆಗೆ ಬ್ಲೂ, ಗ್ರೀನ್‌, ಪರ್ಪಲ್, ಯೆಲ್ಲೋ, ಬ್ಲ್ಯಾಕ್‌ ಮತ್ತು ಡಾರ್ಕ್‌ ಗ್ರೇ ಇತ್ಯಾದಿಗಳನ್ನು ಬ್ರೈಡಲ್ ನ ಡ್ರೆಸ್‌ನೊಂದಿಗೆ ಮ್ಯಾಚ್‌ ಮಾಡಿ ಉಪಯೋಗಿಸಲಾಗುತ್ತದೆ.

ಫೇಸ್ಮೇಕಪ್

ಎಲ್ಲಕ್ಕೂ ಮೊದಲು ಮುಖವನ್ನು ಚೆನ್ನಾಗಿ ಕ್ಲೆನ್ಸಿಂಗ್‌ ಮಾಡಿ. ಕ್ಲೆನ್ಸಿಂಗ್‌ ನಂತರ ಓಪನ್‌ ಪೋರ್ಸ್‌ಗಳನ್ನು ಮುಚ್ಚಲು ಟೋನರ್ ಹಚ್ಚಿ. ನಂತರ ಮುಖಕ್ಕೆ ಪ್ರೈಮರ್‌ ಹಚ್ಚಿ. ಪ್ರೈಮರ್‌ನ ತೆಳುವಾದ ಲೇಯರ್‌ನ್ನು ತ್ವಚೆಯಲ್ಲಿ ಪೂರ್ತಿಯಾಗಿ ಬ್ಲೆಂಡ್‌ ಮಾಡಿ. ನಂತರ ಮುಖದ ಫೀಚರ್ಸ್‌ನ್ನು ಶಾರ್ಪ್‌ ಆಗಿ ತೋರಿಸಲು ಫೇಸ್‌ನ ಕಾಂಟೂರಿಂಗ್‌ ಮತ್ತು ಕರೆಕ್ಷನ್‌ ಮಾಡಿ. ಡರ್ಮಾ ಕಲರ್‌ಗಾಗಿ ಡೀಜೆ ಸೀರೀಸ್‌ನ್ನು ಉಪಯೋಗಿಸಿ. ಅದನ್ನು ಹಚ್ಚಿ ಮುಖದ ಕಲೆಗಳನ್ನು ಮುಚ್ಚಿ. ಕಾಂಟೂರಿಂಗ್‌ನಿಂದ ಅಗಲವಾದ ಮೂಗನ್ನು ತೆಳುವಾಗಿ ಕಾಣಿಸಬಹುದು. ಫೋರ್‌ ಹೆಡ್‌ ಅಗಲವಾಗಿದ್ದರೆ ಅದನ್ನೂ ಕಾಂಟೂರಿಂಗ್‌ ಮಾಡಿ. ನಂತರ ಸ್ಕಿನ್‌ಗೆ ಅನುಗುಣವಾಗಿ ಬೇಸ್‌ ಹಚ್ಚಿ. ಬ್ರಶ್‌ನಿಂದ ಪ್ಯಾನ್‌ ಕೇಕ್‌ ಡೌನ್‌ವರ್ಡ್ಸ್ ಹಚ್ಚಿ. ಮುಖಕ್ಕೆ ಉತ್ತೇಜನ ನೀಡಲು ಚೀಕ್‌ ಬೋನ್ಸ್ ಏರಿಯಾ ಮತ್ತು `ಜಾ' ಲೈನ್‌ ಏರಿಯಾದಲ್ಲಿ  ಜಾ ಲೈನ್‌ ಏರಿಯಾದ ಕಟಿಂಗ್‌ ಮಾಡಿ ನಂತರ ಟ್ರಾನ್ಸ್ ಲೂಸೆಂಟ್‌ ಪೌಡರ್‌ ಹಚ್ಚಿ ಮತ್ತು ಪಾಲಿಶಿಂಗ್‌ ಬ್ರಶ್‌ನಿಂದ ಮುಖದ ಪಾಲಿಶಿಂಗ್‌ ಮಾಡಿ. ಕೊನೆಯಲ್ಲಿ ಸ್ಟುಡಿಯೋ ಫಿಕ್ಸರ್‌ ಹಚ್ಚಿ. ಇದು ಮೇಕಪ್‌ನ್ನು ಫಿಕ್ಸ್ ಮಾಡುತ್ತದೆ.

ಮೇಕಪ್

ಅರೇಬಿಯನ್‌ ಸ್ಟೈಲ್‌ನ ಈ ಬ್ರೈಡಲ್ ಮೇಕಪ್‌ನಲ್ಲಿ ಐ ಲೈನರ್‌ನ್ನು ಕಣ್ಣುಗಳ ಮೂಲೆಯಿಂದ ಮುಂದೆ ತಂದು ಬ್ರೈಡಲ್‌ನ ಔಟ್‌ ಫಿಟ್‌ನೊಂದಿಗೆ ಮ್ಯಾಚ್‌ ಮಾಡುತ್ತಾ ಕಲರ್ಸ್‌ ಹಚ್ಚಲಾಗುತ್ತದೆ. ಈ ಐ ಮೇಕಪ್‌ನಲ್ಲಿ ಕಣ್ಣುಗಳ ತುದಿಯಲ್ಲಿ ಕೊಂಚ ಡಾರ್ಕ್‌ ಶೇಡ್ ಕೊಡಲಾಗುತ್ತದೆ. ಇದಲ್ಲದೆ, ವಾಲ್ಯೂಮ್ ಐಸ್‌ ಮಸ್ಕರಾದಿಂದ ರೆಪ್ಪೆಗಳನ್ನು ತುಂಬಿದಂತೆ ಮಾಡಲಾಗುತ್ತದೆ. ಮೊದಲು ಐ ಬ್ರೋಸ್‌ಗೆ ಕೆಳಗಿನಿಂದ ಶೇಪ್‌ ಕೊಡಿ. ನಂತರ ಬ್ರೋಸ್‌ ಬ್ರಶ್‌ನಿಂದ ಬ್ರೋಸ್‌ಗೆ ಬ್ರಶ್‌ ಮಾಡಿ. ಕಣ್ಣುಗಳ ಮೇಲೆ ಗೋಲ್ಡನ್‌ ಕಲರ್‌ನ ಹೈಲೈಟರ್‌ ಹಚ್ಚಿ. ಐ ಬಾಲ್ಸ್ ಮೇಲೆ ಗೋಲ್ಡನ್‌ ಐ ಶ್ಯಾಡೋ ಹಚ್ಚಿ. ಅದರಿಂದ ಮೇಕಪ್‌ ಎನ್‌ ಹ್ಯಾನ್ಸ್ ಆಗುತ್ತದೆ. ಔಟ್ ಸೈಡ್‌ನಲ್ಲಿ ಬ್ಲ್ಯಾಕ್‌ ಶ್ಯಾಡೋ ಹಚ್ಚಿ, ಕಣ್ಣುಗಳ ವಾಟರ್‌ ಲೈನ್‌ ಏರಿಯಾದ ಹೊರಗೆ ತೆಳುವಾಗಿ ಐ ಲೈನರ್‌ ಹಚ್ಚಿ. ವಾಟರ್‌ ಲೈನ್ ಏರಿಯಾದಲ್ಲಿ ಕಾಜಲ್ ಹಚ್ಚಿ. ಐ ಬಾಲ್ಸ್ ಮೇಲೆ ಸ್ಪಾರ್ಕ್ಸ್‌ ಕೂಡ ಹಚ್ಚಿ. ನಂತರ ಐ ಲ್ಯಾಶಸ್‌ ಮೇಲೆ ಮಸ್ಕರಾ ಹಚ್ಚಿ. ಎಷ್ಟು ಹೆಚ್ಚು ಮಸ್ಕರಾ ಕೋಟ್‌ ಹಚ್ಚುತ್ತೀರೋ ಕಣ್ಣುಗಳು ಅಷ್ಟು ಸುಂದರವಾಗಿ ಕಾಣುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ