ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು, ನಿಮ್ಮ ಮುಖದ ಫೀಚರ್ಸ್‌ನ್ನು ಹೀಗೆ ಹೈಲೈಟ್ ಮಾಡಿ, ಪಾರ್ಟಿಗೆ ಬಂದ ಅತಿಥಿಗಳಿಂದ ಹೆಚ್ಚಿನ ಹೊಗಳಿಕೆ ಪಡೆಯಿರಿ. ಅದಕ್ಕಾಗಿ ಈ ಸಲಹೆ ಅನುಸರಿಸಿ :
- ಭಾರತಿ ತನೇಜಾ
ಕಂಗಳ ಹೈಲೈಟಿಂಗ್ : ಮುಖದ ಮೇಕಪ್ ಜೊತೆಯಲ್ಲೇ ಕಂಗಳ ಮೇಕಪ್ ಸಹ ಅಷ್ಟೇ ಮುಖ್ಯ. ನೀವು ನಿಮ್ಮ ಕಂಗಳನ್ನು ಸರಿಯಾಗಿ ಹೈಲೈಟ್ ಮಾಡಿದ್ದರೆ, ಅರ್ಧ ಮೇಕಪ್ ಮುಗಿದಂತೆಯೇ ಲೆಕ್ಕ! ಐ ಶ್ಯಾಡೋ ಕಂಗಳನ್ನು ಹೈಲೈಟ್ ಮಾಡಲು ಹಾಗೂ ಅವನ್ನು ಸುಂದರಗೊಳಿಸುವಲ್ಲಿ ಇದರ ಪಾತ್ರ ಹಿರಿದು. ಕಂಗಳನ್ನು ಹೈಲೈಟ್‌ಗೊಳಿಸಲು ಸಮರ್ಪಕ ಬ್ರಶ್ಶಿನ ಆಯ್ಕೆಯೂ ಮುಖ್ಯ. ಕಂಗಳ ಮೂಲೆಗಳನ್ನು ಚೂಪಾಗಿಸಲು, ತೆಳು ಹಾಗೂ ಶಾರ್ಪ್ ಬ್ರಶ್ ಬೇಕು. ಕಂಗಳ ಕ್ರೀಜ್‌ಗಾಗಿ, ಸೌಮ್ಯ ಮತ್ತು ಟಫ್ ಡೋಮ್ ಬ್ರಶ್ ಬೇಕು. ನೀವು ಕಣ್ಣೆವೆಗಳ ಅತಿ ಹತ್ತಿರವೇ ಐ ಶ್ಯಾಡೋ ಹಚ್ಚುತ್ತಿದ್ದರೆ, ಇದಕ್ಕಾಗಿ ಒಂದು ಸಾಫ್ಟ್ ಪೆನ್ಸಿಲ್ ಬಳಸಿಕೊಳ್ಳಿ. ಹೆಚ್ಚಿನ ಮಹಿಳೆಯರು ಐ ಶ್ಯಾಡೋ ಬಳಸುತ್ತಾರೆ ನಿಜ, ಆದರೆ ಇದನ್ನು ಬಳಸುವ ವಿಧಾನ ಪ್ರತಿಯೊಬ್ಬರಿಗೂ ಬಾರದು. ಬ್ರಶ್ ಸ್ಟ್ರೋಕ್ಸ್ ಸರಿ ಇರಬೇಕು, ಆಗ ಮಾತ್ರ ಐ ಶ್ಯಾಡೋ ನ್ಯಾಚುರಲ್ ಆಗಿ ಕಾಣಿಸುತ್ತದೆ. ನೀವು ತಪ್ಪಾಗಿ ಅಥವಾ ಉಲ್ಟಾ ವಿಧಾನದಲ್ಲಿ ಬ್ರಶ್ ಸ್ಟ್ರೋಕ್ಸ್ ಹಚ್ಚಿದ್ದೇ ಆದಲ್ಲಿ, ಇದು ಇಡೀ ಮೇಕಪ್ ಕೆಡಿಸುತ್ತದೆ. ಇದನ್ನು ಹೇಗೆ ಹಚ್ಚಬೇಕೆಂದರೆ ಕಂಗಳ ಲೈನಿಂಗ್ ಮತ್ತು ಕಣ್ಣು ರೆಪ್ಪೆಗಳು ಒಂದೇ ರೇಖೆಯಲ್ಲಿ ಕಂಡುಬರಬೇಕು. ನಿಮಗೆ ಇದರ ವಿಭಿನ್ನ ಶೇಡ್ಸ್ ಗಳ ಬಗ್ಗೆ ತಿಳಿದಿರಬೇಕು. ಎಲ್ಲಕ್ಕೂ ಮೊದಲು ಲೈಟ್ ಕಲರ್‌ನ್ನೇ ಬಳಸಬೇಕು. ಅದಾದ ಮೇಲೆ ಇದಕ್ಕಿಂತ 1 ಶೇಡ್‌ನಷ್ಟೇ ಡಾರ್ಕ್ ಆಗಿರುವ ಕಲರ್ ಬಳಸಿರಿ. ನಂತರ 1 ಸಮತಲ ಬ್ರಶ್ ಬಳಸಿಕೊಂಡು, ಇದನ್ನು ಕಂಗಳ ಮೇಲೆ ಪೂರ್ತಿ ಹರಡಿರಿ. ಕಂಗಳ ಕ್ರೀಜ್ ಕಡೆ ಹೆಚ್ಚು ಬೇಡ. ಎಷ್ಟೋ ಮಹಿಳೆಯರ ಐ ಬ್ರೋಸ್ ಲೈಟ್ ಆಗಿರುತ್ತದೆ. ಹಾಗಾಗಿ ಅವರು ಅದನ್ನು ಡಾರ್ಕ್ ಆಗಿಸಲು ಬಯಸುತ್ತಾರೆ. ನೀವು ನಿಮ್ಮ ವಯಸ್ಸಿಗಿಂತ ಕಿರಿಯರಾಗಿ ಕಾಣಿಸಲು ಬಯಸಿದರೆ, ಐ ಬ್ರೋಸ್‌ನ್ನು ಹೈಲೈಟ್ ಮಾಡಬೇಡಿ. ಇದರಿಂದ ನಿಮಗೆ ಹಣೆಯ ಭಾಗ ಏಕ್‌ದಂ ಉಬ್ಬಿರುವಂತೆ ಅಥವಾ ಕೃತಕವಾಗಿ ಕಂಡುಬರದು, ಸಹಜವಾಗಿರುತ್ತದೆ.
ಚೀಕ್ಸ್ ಹೈಲೈಟಿಂಗ್ : ಇದರಲ್ಲಿ ಲೈಟ್ ಕಲರ್‌ನ ಮೇಕಪ್ ಪ್ರಾಡಕ್ಟ್ಸ್ ಫೇಸ್‌ಗೆ ಸ್ಲೀಕ್ ಲುಕ್ ನೀಡಲು ಸಹಾಯ ಮಾಡುತ್ತದೆ. ಚೀಕ್‌ಬೋನ್ಸ್ ಹೈಲೈಟಿಂಗ್‌ನ ಬೆಸ್ಟ್ ವಿಧಾನ, ಮುಖದ ಒಂದು ಬದಿಯಿಂದ ಶುರುವಾಗಿ ಕಿವಿಗಳ ಮೇಲ್ಭಾಗದವರೆಗೂ ತಲುಪುವಂಥ ಕಡೆ ಮಾಡಬೇಕು. ಪರ್ಫೆಕ್ಟ್ ಹೈಲೈಟಿಂಗ್‌ಗಾಗಿ ಉತ್ತಮ ಬ್ರಶ್ಶಿನ ನೆರವಿನಿಂದ ಶೇಡ್‌ನ್ನು ಮುಖದ ಹತ್ತಿರ ಲೈಟ್ ಆಗಿ ಟಚ್ ಮಾಡುತ್ತಾ, ಕಿವಿಗಳ ಬಳಿ ಡಾರ್ಕ್ ಮಾಡಬೇಕು. ಚೀಕ್‌ಬೋನ್ಸ್ ಹೈಲೈಟಿಂಗ್‌ನ ಬೆಸ್ಟ್ ಎಫೆಕ್ಟ್ ಯಾವಾಗ ಬರುತ್ತದೆಂದರೆ, ನೀವು ಫಿಶ್ ಫೇಸ್ ಮಾಡಿಕೊಂಡು, ಕೆನ್ನೆಗಳನ್ನು ಒಳಗೆಳೆದುಕೊಂಡಾಗ. ಚೀಕ್ಸ್ ಹೈಲೈಟಿಂಗ್‌ನಲ್ಲಿ ಮುಖಕ್ಕೆ ಕೆಂಪು ನೀಡುವ ಬ್ಲಶ್ ನಿಮ್ಮ ಮುಖಕ್ಕೆ ತಕ್ಷಣ ಫ್ರೆಶ್ ಲುಕ್ ನೀಡಬಹುದು. ಆದರೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವಿಧಾನ ಗೊತ್ತಿರಬೇಕಷ್ಟೆ. ಇಲ್ಲಿ ನೀವು ಚ್ಯೂಸಿ ಆಗಿರಬೇಕು. ಏಕೆಂದರೆ ಪ್ರತಿ ಸ್ಕಿನ್ ಟೈಪ್‌ಗೂ ಪ್ರತಿಯೊಂದು ಬ್ಲಶ್ ಸೂಟ್ ಆಗುವುದಿಲ್ಲ. ಡ್ರೈ ಸ್ಕಿನ್‌ಗೆ ಕ್ರೀಂ ಬ್ಲಶ್, ಆಯ್ಲಿ ಸ್ಕಿನ್‌ಗೆ ಪೌಡರ್ ಬ್ಲಶ್, ನಾರ್ಮಲ್ ಸ್ಕಿನ್‌ಗೆ ಎರಡೂ ಬ್ಲಶ್ ಬಳಸಬಹುದು. ಬ್ಲಶ್‌ಗಾಗಿ ರೌಂಡೆಡ್ ಕ್ಲೀನ್ ಬ್ಲಶ್‌ನ್ನೇ ಬಳಸಬೇಕು ಹಾಗೂ ಹೈಲೈಟಿಂಗ್‌ನ್ನು ನಿಮ್ಮ ಮುಖದ ನ್ಯಾಚುರಲ್ ಪಾರ್ಟ್ ಮಾಡಿಕೊಳ್ಳಲು ಇದನ್ನು ಬ್ಲೆಂಡ್ ಮಾಡಲು ಮರೆಯಬೇಡಿ.