ಬದಲಾಗುತ್ತಿರುವ ಸೀಸನ್‌ಗೆ ತಕ್ಕಂತೆ ಚರ್ಮದಲ್ಲೂ ಹಲವಾರು ಬದಲಾವಣೆಗಳಾಗುತ್ತಿರುತ್ತವೆ. ಈ ಬದಲಾವಣೆಗಳನ್ನು ಗಮನಿಸಿ ನಾವು ಕಾಸ್ಮೆಟಿಕ್ಸ್ ಆರಿಸುತ್ತೇವೆ. ಉದಾ: ಚಳಿಗಾಲದಲ್ಲಿ ಮಾಯಿಶ್ಚರೈಸರ್‌ನ ಧಾರಾಳ ಬಳಕೆ. ಆದರೆ ಬೇಸಿಗೆಯ ದಿನಗಳಲ್ಲಿ ಇದರ ಬಳಕೆ ಅತಿ ಕಡಿಮೆ ಅಥವಾ ಇಲ್ಲವಾಗುತ್ತದೆ. ಆದರೆ ಬೇಸಿಗೆಯಲ್ಲಿ ನಿಜಕ್ಕೂ ಮಾಯಿಶ್ಚರೈಸರ್ ಬಳಸುವುದು ಬೇಡವೇ? ಹಾಗೇನಿಲ್ಲ, ಚಳಿಗಾಲ ಅಥವಾ ಬೇಸಿಗೆ ಇರಲಿ ಚರ್ಮದ ಸೌಂದರ್ಯ ಸಂರಕ್ಷಣೆಗೆ ಇದರ ಬಳಕೆ ಅನಿವಾರ್ಯ. ತಜ್ಞರು ಈ ಕುರಿತು ಏನು ಹೇಳುತ್ತಾರೆ?
ತಜ್ಞರ ಪ್ರಕಾರ, ಸಾಮಾನ್ಯವಾಗಿ ಬಹುತೇಕ ಹೆಂಗಸರ ಅಭಿಪ್ರಾಯದಲ್ಲಿ ಬೇಸಿಗೆಯಲ್ಲಿ ಮಾಯಿಶ್ಚರೈಸರ್ ಬಳಕೆಯಿಂದ ಚರ್ಮ ಆಯ್ಲಿಯಾಗಿ ಜಿಡ್ಡುಜಿಡ್ಡಾಗಬಹುದು. ಹೀಗಾಗಿ ಬೇಸಿಗೆಯಲ್ಲಿ ಇದನ್ನು ಬಳಸಲೇಬಾರದು ಅಂದುಕೊಳ್ಳುತ್ತಾರೆ. ಆದರೆ ತಾಪಮಾನ ಹೆಚ್ಚಿದಂತೆ ಮಾಯಿಶ್ಚರೈಸರ್ ಚರ್ಮಕ್ಕೆ ಇನ್ನಷ್ಟು ಅನಿವಾರ್ಯವಾಗಿ ಬಿಡುತ್ತದೆ. ಮುಖ್ಯವಾಗಿ ಸದಾ ಏಸಿಯಲ್ಲೇ ಕುಳಿತು ಕೆಲಸ ಮಾಡುವವರಿಗೆ ಇದು ಬೇಕೇಬೇಕು.
ಡ್ರೈ ಸ್ಕಿನ್ ಆಗಿದ್ದರೆ ಬೇಸಿಗೆಯ ಆರಂಭದ ದಿನಗಳಲ್ಲೇ ಚರ್ಮದ ಮೇಲೆ ಇದರ ಪರಿಣಾಮ ಕಾಣಿಸುತ್ತದೆ. ಈ ಸೀಸನ್‌ತನ್ನೊಂದಿಗೆ ಸ್ವಿಮಿಂಗ್‌ವಾಟರ್ ಸ್ಪೋರ್ಸ್ ನಂಥ ಚಟುವಟಿಕೆಗಳನ್ನೂ ಜೊತೆಗೆ ತರುತ್ತದೆ. ಆ ಕಾರಣ ಚರ್ಮ ಚುರುಗುಟ್ಟುವ ಬಿಸಿಲಲ್ಲಿ ಸ್ವಿಮಿಂಗ್ ಪೂಲ್ ನೀರಿನ ಕ್ಲೋರಿನ್‌ನಂಥ ಕೆಮಿಕಲ್ಸ್ ಸಂಪರ್ಕಕ್ಕೆ ಬರುವುದರಿಂದ ತೊಂದರೆಗೆ ಈಡಾಗುತ್ತದೆ. ಅದರಲ್ಲೂ ಮುಖ್ಯವಾಗಿ ಚರ್ಮದ ಆರೈಕೆ ಮಾಡದೆ ಇರುವಾಗ, ಮಾಯಿಶ್ಚರೈಸರ್‌ನಿಂದ ಸರಿಯಾದ ಆರೈಕೆ ಮಾಡಿದರೆ ಚರ್ಮವನ್ನು ಹಾನಿಕಾರಕ ಅಂಶಗಳಿಂದ ರಕ್ಷಿಸಬಹುದು.

ತೀವ್ರ ಬಿಸಿಲಿನ ಕಾಟವಿದ್ದಾಗ
ಬೇಸಿಗೆಯ ತೀಕ್ಷ್ಣ ಬಿಸಿಲು ಮೈಗೆ ಚುರಿಚುರಿ ಎನಿಸುತ್ತದೆ. ಇದರಿಂದಾಗಿ ಸನ್ ಬರ್ನ್, ಟ್ಯಾನಿಂಗ್ ತಪ್ಪಿದ್ದಲ್ಲ. ಹೀಗಾದಾಗ 30, 40, 50 SPF ನ ಸನ್‌ಸ್ಕ್ರೀನ್ ಲೋಶನ್ ಬಳಕೆಯೊಂದೇ ಹಾನಿಗೆ ಪರಿಹಾರ. ಚರ್ಮದ ಆರೈಕೆಗೆ ಕೇವಲ ಇಷ್ಟು ಮಾತ್ರ ಸಾಕಾಗುವುದಿಲ್ಲ. ಸನ್‌ಸ್ಕ್ರೀನ್ ಹಚ್ಚಿದ ನಂತರ ಸಾಕಷ್ಟು ಪ್ರಮಾಣದಲ್ಲಿ ಮಾಯಿಶ್ಚರೈಸರ್ ಹಚ್ಚಿಕೊಂಡಾಗ ಮಾತ್ರ ಕೋಮಲತೆ ಉಳಿಯಲು ಸಾಧ್ಯ. ಬೇಸಿಗೆಯಲ್ಲಿ ಮಾಯಿಶ್ಚರೈಸರ್ ಬೇಸ್ಡ್ ಸನ್‌ಸ್ಕ್ರೀನ್ ಬಳಸುವುದು ಲೇಸು. ಕೆಮಿಕಲ್ಸ್ ನಿಂದ ಪಾರಾಗಲು ಬೇಸಿಗೆ ಬಂದಂತೆ ನಮ್ಮ ಹಲವಾರು ಪ್ಲಾನ್ ಸಿದ್ಧವಿರುತ್ತದೆ. ವಾಟರ್ ಪಾರ್ಕ್, ಪೂಲ್ ಪಾರ್ಕ್ ಇತ್ಯಾದಿ. ಸ್ವಿಮಿಂಗ್ ಪೂಲ್‌ನಲ್ಲಿ ರಾಶಿ ಕ್ಲೋರಿನ್ ಬೆರೆತಿರುವುದು ತಿಳಿದ ಸಂಗತಿ. ಅದು ಚರ್ಮಕ್ಕೆ ಹಾನಿಕರ. ನೀವು ಹೆಚ್ಚು ಹೊತ್ತು ಪೂಲ್ ಬಳಸುತ್ತೀರಾದರೆ ಆದಷ್ಟೂ ಚೆನ್ನಾಗಿ ದೇಹ ಕ್ಲೀನ್ ಮಾಡಿ. ಹೀಗೆ ಪರ್ಫೆಕ್ಟ್ ಕ್ಲೀನ್ ಆದ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚಬೇಕು. ಅದು ಚರ್ಮದಲ್ಲಿ ಆಳವಾಗಿ ಇಳಿದು ಪೋಷಣೆ ಒದಗಿಸುತ್ತದೆ. ಹೀಗೆ ಅದು ಚರ್ಮಕ್ಕೆ ಆಗುವ ಹಾನಿ ತಪ್ಪಿಸುತ್ತದೆ.
ಬೇಸಿಗೆಯಲ್ಲಿ ಡ್ರೈ ಸ್ಕಿನ್
ಬಹುತೇಕ ಹೆಂಗಸರು ಬೇಸಿಗೆಯಲ್ಲಿ ಸ್ಕಿನ್ ಡ್ರೈ ಆಗುವುದಿಲ್ಲ ಎಂದೇ ಹೇಳುತ್ತಾರೆ. ಆದರೆ ಅದು ತಪ್ಪು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಅವರು ಬಿಸಿಲಲ್ಲಿ ತಿರುಗಾಡಿ, ಸ್ವಿಮಿಂಗ್ ಪೂಲ್, ಏಸಿಯಲ್ಲಿ ಇದ್ದುಬಿಡುತ್ತಾರೆ. ಜೊತೆಗೆ ಅವರು ಬಳಸುವ ಎಷ್ಟೋ ಕಾಸ್ಮೆಟಿಕ್ಸ್ ನಲ್ಲೂ ಕ್ಲೋರಿನ್ ಬೆರೆತಿರುತ್ತದೆ. ಈ ಕಾರಣಗಳಿಂದ ಅವರ ಚರ್ಮ ಡ್ರೈ ಆಗಿ ನಿರ್ಜೀವ ಆಗುತ್ತದೆ. ಇದರ ಆರೈಕೆಗಾಗಿ ಚರ್ಮಕ್ಕೆ ಸೌಮ್ಯವಾದ ಪ್ರಾಡಕ್ಟ್ಸ್ ಬಳಸಬೇಕು, ಅಂದರೆ ನಿತ್ಯ ಮಾಯಿಶ್ಚರೈಸರ್ ಹಚ್ಚಬೇಕು, ಅದು ಲಾಭಕರ. ಇದರಲ್ಲಿನ ಎಮೋಲಿಯಂಟ್ಸ್ ಅಂಶ ಚರ್ಮ ಡ್ರೈ ಆಗದಂತೆ ರಕ್ಷಿಸುತ್ತದೆ, ಅದನ್ನು ಕಾಂತಿಯುತಗೊಳಿಸುತ್ತದೆ. ಇದು ಚರ್ಮದ ಮೇಲೆ ಸುರಕ್ಷಾ ಕವಚವಾಗಿ, ಕೀಟಾಣುಗಳ ಹಾನಿಯಿಂದ ತಪ್ಪಿಸುತ್ತದೆ.





