ಬೇಸಿಗೆ ಕಾಲಿಡುತ್ತಿದ್ದಂತೆ ಚರ್ಮದಲ್ಲಿ ಆರ್ದ್ರತೆಯ ಪ್ರಮಾಣ ಕುಗ್ಗುತ್ತದೆ. ಇದಕ್ಕೆ ಕಾರಣ ಬಿರು ಬಿಸಿಲು, ಧೂಳು, ಬಿಸಿ ಗಾಳಿ, ಮಲಿನತೆ, ಬೆವರು ಇತ್ಯಾದಿ. ತ್ವಚೆಯಲ್ಲಿ ಆರ್ದ್ರತೆ ಕಡಿಮೆ ಆಗುವುದರಿಂದ ಅದು ನಿರ್ಜೀವವಾಗಿ ಶುಷ್ಕವಾಗುತ್ತದೆ. ಹೀಗಾದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು, ಸಮತೋಲಿತ ಆಹಾರ ಸೇವಿಸುವುದು, ಸನ್‌ಸ್ಕ್ರೀನ್‌ ರಕ್ಷಣೆ ಪಡೆಯುವುದು, ಬಿಸಿಲಿಗೆ ಛತ್ರಿ ಹಿಡಿಯುವುದು ಇತ್ಯಾದಿ ಮುಖ್ಯವಾಗುತ್ತದೆ.

ಸೌಂದರ್ಯ ತಜ್ಞೆಯರ ಸಲಹೆಯಂತೆ, ಬೇಸಿಗೆಯಲ್ಲಿ ತ್ವಚೆಯ ಆರ್ದ್ರತೆಯ ಕಡೆ ಗಮನಹರಿಸಬೇಕಾದುದು ಬಲು ಮುಖ್ಯ. ಇಲ್ಲದಿದ್ದರೆ ಹಲವು ಬಗೆಯ ರಾಶೆಸ್‌, ರೆಡ್‌ನೆಸ್‌, ಅಲರ್ಜಿ ಇತ್ಯಾದಿ ಅಪಾಯಗಳು ಎದುರಾಗುತ್ತವೆ.  ಹೀಗಾದಾಗ ಸನ್‌ಸ್ಕ್ರೀನ್‌ ಮತ್ತು ಮಾಯಿಶ್ಚರೈಸರ್‌ ಉತ್ತಮ ಕಂಪನಿಯದೇ ಆಗಿರಬೇಕು, ಆಗ ಚರ್ಮ ಸುರಕ್ಷಿತವಾಗಿರುತ್ತದೆ. ಮನೆಯಿಂದ ಹೊರಡುವ 20 ನಿಮಿಷಗಳ ಮೊದಲು ಇವನ್ನು ಹಚ್ಚಿಕೊಳ್ಳಬೇಕು. ಕನಿಷ್ಠ 15 spf ಇರುವಂಥ ಸನ್‌ಸ್ಕ್ರೀನ್‌ ಆಗಿರಲಿ, ಗರಿಷ್ಠ ಇದ್ದಷ್ಟೂ ಒಳ್ಳೆಯದು.

ನೀವು spf ಹೆಚ್ಚಿಸಿದಷ್ಟೂ ದುಬಾರಿ ಎಂದು ಅಗ್ಗದ ಮಾಲಿಗೆ ಹೋದರೆ, ಆಗ ನಿಮ್ಮ ಅಸಲಿ ವಯಸ್ಸಿಗಿಂತ ನಿಮ್ಮ ಚರ್ಮದ ವಯಸ್ಸು ಹೆಚ್ಚಿರುವಂತೆ ಕಾಣುತ್ತದೆ. ಆದ್ದರಿಂದ ಅಗ್ಗದ ಆಸೆ ಬಿಟ್ಟು, ತಜ್ಞೆಯರ ಸಲಹೆ ಅನುಸರಿಸಿ.

ಬೇಸಿಗೆಯಲ್ಲಿ ಸೆಲೆಬ್ರಿಟೀಸ್‌ ಮುಖ್ಯವಾಗಿ ತಮ್ಮ ಚರ್ಮದ ಕುರಿತಾಗಿ ಬಹಳ ಸಂವೇದನಾಶೀಲರಾಗಿರುತ್ತಾರೆ. ಏಕೆಂದರೆ ಅವರುಗಳು ಸದಾ ಉರಿ ಬಿಸಿಲು, ಧೂಳು, ಮಲಿನ ವಾತಾವರಣ, ಬೆವರಿನೊಂದಿಗೆ ಶೂಟಿಂಗ್‌ ಮಾಡಬೇಕಾಗುತ್ತದೆ. ಬನ್ನಿ, ಅವರು ಈ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೋ ನೋಡೋಣ.

ಶ್ರದ್ಧಾ ಕಪೂರ್‌ : ವೀಟ್‌ನ ಬ್ರಾಂಡ್‌ ಅಂಬಾಸಿಡರ್‌ ನಟಿ ಶ್ರದ್ಧಾ ಹೇಳುತ್ತಾಳೆ, ``ಬೇಸಿಗೆಯಲ್ಲಿ ನಾನು ಬಲು ಸಾಧಾರಣ ದಿನಗಳಂತೆಯೇ ಇರುತ್ತೇನೆ. ಆಗ ಮಾತ್ರ ನನ್ನ ತ್ವಚೆಯ ಸೌಂದರ್ಯ ಉಳಿಯಬಲ್ಲದು. ನಾನು ಆಗ ಧಾರಾಳ ನೀರು ಕುಡಿಯುತ್ತೇನೆ. ಜೊತೆಗೆ ತಾಜಾ ಹಸಿ ತರಕಾರಿ, ಸೊಪ್ಪು, ಹಣ್ಣುಗಳು ನನ್ನ ಡಯೆಟ್‌ನಲ್ಲಿ ಇದ್ದೇ ಇರುತ್ತವೆ. ನಾನು ದಿನಾಲೂ ಹಲವು ಸಲ ತಣ್ಣೀರಿನಲ್ಲಿ ಮುಖ ತೊಳೆಯುತ್ತೇನೆ. ಆಗ ಮಾತ್ರ ಮಲಿನತೆ, ಮಣ್ಣಿನ ಧೂಳಿನಿಂದ ದೂರವಿರಲು ಸಾಧ್ಯ.``ನಾನು 200-300 spf ಸನ್‌ಸ್ಕ್ರೀನ್‌ ಇಲ್ಲದೆ ಹೊರಗೆ ಹೋಗುವುದೇ ಇಲ್ಲ. ಇವೆಲ್ಲವನ್ನೂ ನಾನು ಅಮ್ಮನಿಂದ ಕಲಿತಿದ್ದೇನೆ. ಶೂಟಿಂಗ್‌ನಲ್ಲಿದ್ದಾಗಲೂ ಸಹ ನಾನು ಈ ಮೇಲಿನ ಮಾತುಗಳನ್ನು ಅಕ್ಷರಶಃ ಪಾಲಿಸುತ್ತೇನೆ. ಬೇಸಿಗೆಯಲ್ಲಿ ನಾನು ಹೆಚ್ಚು ಕಡಿಮೆ ಮೇಕಪ್‌ ಮಾಡಿಕೊಳ್ಳುವುದೇ ಇಲ್ಲ.''

ಕರೀನಾ ಕಪೂರ್‌ ಖಾನ್‌ : ಪ್ರತಿಯೊಬ್ಬ ಹುಡುಗಿಯೂ ಸಿನಿಮಾದಲ್ಲಿ ಕರೀನಾಳನ್ನು ನೋಡಿದ ಬಳಿಕ ಅವಳಂಥ ಚರ್ಮ ಹೊಂದಬೇಕೆಂದು ಬಯಸುತ್ತಾಳೆ. ತನ್ನ ಚರ್ಮದ ಕಾಂತಿಯ ಶ್ರೇಯಸ್ಸನ್ನು ಅವಳು ತಾಯಿತಂದೆಯರಿಗೆ ಅರ್ಪಿಸುತ್ತಾಳೆ. ಅವಳು ಸದಾ ತನ್ನ ಚರ್ಮವನ್ನು ಆರ್ದ್ರತೆಯಿಂದ ಕೂಡಿರುವಂತೆ ನೋಡಿಕೊಳ್ಳುತ್ತಾಳೆ. ಬೇಸಿಗೆಯಲ್ಲಿ ಆಕೆ ಧಾರಾಳವಾಗಿ ನೀರು, ಜೂಸ್‌, ಸೂಪ್‌ ಇತ್ಯಾದಿ ಕುಡಿಯುತ್ತಾಳೆ, ಆಗ ತ್ವಚೆ ಡೀಹೈಡ್ರೇಟ್‌ ಆಗುವುದಿಲ್ಲ.ಕರೀನಾ ಹೇಳುತ್ತಾಳೆ, ``ನಾನು ಪಂಜಾಬಿ ಪರಿವಾರದವಳು. ಅಲ್ಲಿ ಊಟ, ತಿಂಡಿ ಎಲ್ಲ ಭಲೇ ಧಾರಾಳ. ನಾನು ಗಡದ್ದಾಗಿ ತಿಂತೀನಿ. ಮುಖ್ಯವಾಗಿ ಪಂಜಾಬ್‌ಗೆ ಹೋದಾಗಲೆಲ್ಲ ಅಲ್ಲಿನ ಅಮೃತಸರದ ಕುಲ್ಚಾ ಮಿಸ್‌ ಮಾಡೋಲ್ಲ. ಹಿಂದೆ ಇದ್ದಂತೆ ಈಗ ಝೀರೋ ಫಿಗರ್‌ಗೆ ನಾನು ಜೋತು ಬೀಳುವುದಿಲ್ಲ, ಈಗಂತೂ ನನಗೆ ಸಲ್ವಾರ್ ಸೂಟ್‌ ಧರಿಸಿ ಏನೂ ಆಗಬೇಕಿಲ್ಲ. `ಟಶನ್‌' ಚಿತ್ರಕ್ಕಾಗಿ ಆಗ ನಾನು ಹಾಗೆಲ್ಲ ಪಾಡುಪಟ್ಟಿದ್ದೆ. ಈಗ ಡೋಂಟ್‌ ಕೇರ್‌.... ಮಜವಾಗಿ ಎಲ್ಲನ್ನೂ ತಿಂತೀನಿ! ಆದರೆ ಜಿಮ್ ಗೆ ಹೋಗಿ ವರ್ಕ್‌ಔಟ್‌ ಮಾಡುವುದನ್ನು ಮಾತ್ರ ತಪ್ಪಿಸೋಲ್ಲ. ಫಿಟ್‌ನೆಸ್‌ ನನಗೆ ಮುಖ್ಯ, ಮೇಕಪ್‌ ಅಲ್ಲ. ಬಿಸಿಲಿಗೆ ಹೊರಡುವ ಮುಂಚೆ ಅಧಿಕ spfವುಳ್ಳ ಸನ್‌ಸ್ಕ್ರೀನ್‌ ಕ್ರೀಂ ಹಚ್ಚುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ