ಚುರಿಚುರಿ ಎನ್ನುವ ಬಿಸಿಲಿನ ಬೇಸಿಗೆ ಬಂದೇಬಿಟ್ಟಿತು! ಈ ಸಂದರ್ಭದಲ್ಲಿ ಟ್ಯಾನಿಂಗ್‌ನಿಂದ ಬಚಾವಾಗಲು ನೀವು ತ್ವಚೆಗೆ ಸುರಕ್ಷಾ ಕವಚ ತೊಡಿಸಲು ಸನ್‌ಸ್ಕ್ರೀನ್‌ ಬಳಸುತ್ತಿರಬಹುದು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸುತ್ತಿದ್ದೀರಾ? ಯಾವುದನ್ನು ಸುರಕ್ಷಾ ಕವಚ ಎಂದು ನೀವು ಭಾವಿಸಿದ್ದೀರೋ ಅದು ಸಮರ್ಪಕವಾಗಿ ಕುಳಿತಿದೆಯೇ? ಸನ್‌ಸ್ಕ್ರೀನ್‌ ಎಷ್ಟೇ ಉತ್ತಮ ಬ್ರ್ಯಾಂಡ್‌ನದಾಗಿರಲಿ, ಅದನ್ನು ನೀವು ಸರಿಯಾಗಿ ಬಳಸುವ ಕ್ರಮ ತಿಳಿದಿರದಿದ್ದರೆ ಅದು ನಿಮ್ಮ ಚರ್ಮಕ್ಕೆ ಯಾವ ಪರಿಣಾಮವನ್ನೂ ತರುವುದಿಲ್ಲ. ಹೀಗಿರುವಾಗ ನೀವು ನಿಮ್ಮ ಚರ್ಮವನ್ನು ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸಲು ಬಯಸಿದರೆ ಈ ಕೆಳಗಿನ ಸಲಹೆಗಳನ್ನು ಅಗತ್ಯ ಗಮನಿಸಿ

ಸರಿಯಾದ ಸನ್‌ಸ್ಕ್ರೀನ್‌ ಆರಿಸಿ : ಮಾರುಕಟ್ಟೆಯಲ್ಲಿ ಇಂದು ಸನ್‌ಸ್ಕ್ರೀನ್‌ ಹಲವು ರೂಪಗಳಲ್ಲಿ ಲಭ್ಯ. ಅಂದರೆ ಪೌಡರ್‌, ಜೆಲ್, ಕ್ರೀಂ ಇತ್ಯಾದಿ. ಈ ಎಲ್ಲಾ ತರಹದ ಸನ್‌ಸ್ಕ್ರೀನ್‌ಗಳೂ ಮಾರುಕಟ್ಟೆಯಲ್ಲಿ ಸುಲಭವಾಗಿ ತರತರಹದ ಬ್ರ್ಯಾಂಡ್‌ಗಳಲ್ಲಿ ಲಭ್ಯ. ಆದರೆ ಅದನ್ನು ಖರೀದಿಸುವ ಮೊದಲು ನಿಮ್ಮ ಸ್ಕಿನ್‌ ಟೋನ್‌ನ್ನು ಗುರುತಿಸುವುದು ಅತಿ ಮುಖ್ಯ. ಅಸಲಿಗೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಸನ್‌ಸ್ಕ್ರೀನ್‌ಗಳು ಚಾಕಿ ಎಫೆಕ್ಟ್ ನೀಡುವಂಥವು ಇವೆ. ಇಂಥ ಸನ್‌ಸ್ಕ್ರೀನ್‌ ಫೇರ್‌ ಕಾಂಪ್ಲೆಕ್ಷನ್ನಿನ ಮಹಿಳೆಯರಿಗೆ ಸುಲಭವಾಗಿ ಹೊಂದುತ್ತವೆ. ಆದರೆ ಶ್ಯಾಮಲ ಬಣ್ಣದವರಿಗೆ ಇದು ಗ್ರೇಯಿಶ್‌ ಎಫೆಕ್ಟ್ ನೀಡುತ್ತದೆ, ಅದು ಕೆಟ್ಟದಾಗಿ ಕಾಣುತ್ತದೆ. ಆದ್ದರಿಂದ ನಿಮ್ಮದು ನಸುಗಪ್ಪು ಬಣ್ಣವಾಗಿದ್ದರೆ, ನೀವು ಮೈಕ್ರೋನೈಸ್ಡ್ ಫಾರ್ಮುಲಾದ ಸನ್‌ಸ್ಕ್ರೀನ್‌ ಬಳಸಬೇಕು. ಇದರಲ್ಲಿ  ಸನ್‌ಸ್ಕ್ರೀನ್‌ ಎಫೆಕ್ಟ್ ಕಡಿಮೆ ಇದ್ದು, ತ್ವಚೆಯ ಮೇಲೆ ಇದರ ಪದರ ಎದ್ದು ಕಾಣುವುದಿಲ್ಲ. ಆದರೂ ಇದು ಸೂರ್ಯನ ಯುವಿ ಕಿರಣಗಳಿಂದ ನಿಮ್ಮನ್ನು ಸುರಕ್ಷಿತವಾಗಿಡಬಲ್ಲದು. ಇಂಥ ತ್ವಚೆಯ ಮೇಲ್ಪದರದಲ್ಲಿ ನೀರಿನಂಶ ಬಹಳ ಕಡಿಮೆ ಇರುತ್ತದೆ. ಹೀಗಾಗಿ ಇಂಥ ತ್ವಚೆಗೆ ಹೆಚ್ಚು ಮಾಯಿಶ್ಚರೈಸರ್‌ ಫಾರ್ಮುಲಾದ ಕ್ರೀಂ ಸಹಾಯಕವಾಗುತ್ತದೆ.

ಸಮರ್ಪಕ ಕ್ರಮ ಅಗತ್ಯ : ಸಾಮಾನ್ಯವಾಗಿ ಮಹಿಳೆಯರು ಸನ್‌ಸ್ಕ್ರೀನ್‌ನ್ನು ಚರ್ಮದ ಮೇಲೆ ನೇರವಾಗಿಯೇ ಹಚ್ಚಿಕೊಳ್ಳುತ್ತಾರೆ, ಆದರೆ ಇದು ಸರಿಯಲ್ಲ. ಆದ್ದರಿಂದ ಮೊದಲು ಚರ್ಮಕ್ಕೆ ನೇರವಾಗಿ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಬೇಕು. ಅದಾದ 20-30 ನಿಮಿಷಗಳ ನಂತರ, ಸನ್‌ಸ್ಕ್ರೀನ್‌ ಹಚ್ಚಬೇಕು. ಚರ್ಮ ಮೊದಲೇ ಮಾಯಿಶ್ಚರೈಸರ್‌ನ್ನು ಹೀರಿಕೊಂಡಿದ್ದರೆ ಸನ್‌ಸ್ಕ್ರೀನ್‌ಗೆ ಸರಾಗವಾಗಿ ಕೆಲಸ ಮಾಡಲು ಸಾಧ್ಯ.

ನೀವು ಮುಖಕ್ಕೆ ಮೇಕಪ್‌ ಮಾಡುತ್ತಿದ್ದರೆ, ಸನ್‌ಸ್ಕ್ರೀನ್‌ ಬಳಸಿದ ನಂತರ ಈ ಮೇಕಪ್‌ ಶುರು ಮಾಡಬೇಕು. ಒಂದು ಪಕ್ಷ ನೀವು ಮೇಕಪ್‌ ಮಾಡುವುದಿಲ್ಲವಾದರೆ, ಸನ್‌ಸ್ಕ್ರೀನ್‌ ನಿಮ್ಮ ಮುಖಕ್ಕೆ ಹಚ್ಚುವ ಕೊನೆಯ ಪ್ರಸಾಧನವಾಗುತ್ತದೆ.

ಅಸಲಿಗೆ, ಸನ್‌ಸ್ಕ್ರೀನ್‌ ತ್ವಚೆಯ ಮೇಲೆ ಒಂದು ಸುರಕ್ಷಾ ಪದರ ಆಗಿರುತ್ತದೆ. ಇದರ ಮೇಲೆ ಮೇಕಪ್‌ ಅಲ್ಲದೆ ಬೇರೇನಾದರೂ ಹಚ್ಚಿದರೆ, ತ್ವಚೆಯ ಮೇಲೆ ಇದರ ಪ್ರಭಾವ ಕಡಿಮೆ ಆಗುತ್ತದೆ. ಅದೇ ತರಹ ಚರ್ಮದ ಮೇಲೆ ನೇರವಾಗಿ ಸನ್‌ಸ್ಕ್ರೀನ್‌ ಹಚ್ಚಿದರೆ, ಆಗಲೂ ಸನ್‌ಸ್ಕ್ರೀನ್‌ ತ್ವಚೆಯ ಮೇಲೆ ಉತ್ತಮ ಪ್ರಭಾವಶಾಲಿ ಸುರಕ್ಷಾಕವಚ ಎಂದೆನಿಸುವುದಿಲ್ಲ. ಆಗದು ಸೂರ್ಯನ ಯುವಿ ಕಿರಣಗಳಿಂದ ಸಂಪೂರ್ಣವಾಗಿ ರಕ್ಷಿಸುವಲ್ಲಿಯೂ ವಿಫಲವಾಗುತ್ತದೆ. ಕೆಲವು ಮಹಿಳೆಯರು ತಮ್ಮ ಮಾಯಿಶ್ಚರೈಸರ್‌ನಲ್ಲಿ ಸನ್‌ಸ್ಕ್ರೀನ್‌ ಲೋಶನ್‌ ಮಿಕ್ಸ್ ಮಾಡಿ ಹಚ್ಚಿಕೊಳ್ಳುತ್ತಾರೆ. ಈ ಕ್ರಮ ಕೂಡ ಸರಿಯಲ್ಲ. ಇದರಿಂದ ಸನ್‌ಸ್ಕ್ರೀನ್‌ನ ಪ್ರಭಾವವೆಲ್ಲ ಹೋಗಿಬಿಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ