ಮದುವೆಯ ದಿನ ಎಲ್ಲರ ದೃಷ್ಟಿ ವಧುವಿನ ಶೃಂಗಾರದ ಮೇಲೆ ಇರುತ್ತದೆ. ಈ ವಿಶೇಷ ಸಂದರ್ಭಕ್ಕಾಗಿ ನಿಮ್ಮ ಅಲಂಕಾರ ಹೇಗಿರಬೇಕೆಂದರೆ ನೋಡುವವರು ರೆಪ್ಪೆ ಮಿಟುಕಿಸುವುದನ್ನು ಮರೆತುಬಿಡಬೇಕು.
ಮದುವೆಯ ದಿನದಂದು ಅತ್ಯಂತ ಸುಂದರವಾಗಿ ಕಾಣಿಸಿಕೊಳ್ಳುವ ಕನಸನ್ನು ಎಲ್ಲ ಹುಡುಗಿಯರೂ ಹೊಂದಿರುತ್ತಾರೆ. ವಧುವಿನ ಸಿಂಗಾರದಲ್ಲಿ ಯಾವುದೇ ಕೊರತೆ ಬಾರದಂತೆ ಬ್ರೈಡಲ್ ಮೇಕಪ್ ಹಾಗೂ ಹೇರ್ ಸ್ಟೈಲ್ ಹೇಗಿರಬೇಕೆಂದು ಮೇಕಪ್ ಎಕ್ಸ್ ಪರ್ಟ್ ರೀಟಾ ಇಲ್ಲಿ ತಿಳಿಸಿದ್ದಾರೆ.
ಬ್ರೈಡಲ್ ಮೇಕಪ್
ಫೇಸ್ ಕ್ಲೀನಿಂಗ್ : ಮುಖ ತೊಳೆಯಲು 3 ಹನಿ ಲ್ಯಾವೆಂಡರ್ ಆಯಿಲ್, 3 ಹನಿ ರೋಸ್ ಆಯಿಲ್, 2 ಹನಿ ಪಚೋರಿ ಆಯಿಲ್ ಮತ್ತು 2 ಹನಿ ಟೀ ಟ್ರೀ ಆಯಿಲ್ ನ್ನು ಸ್ಪ್ರೇ ಬಾಟಲ್ ನ ತಣ್ಣೀರಿನಲ್ಲಿ ಬೆರೆಸಿ ಮುಖಕ್ಕೆ ಸ್ಪ್ರೇ ಮಾಡಿ ಮತ್ತು ಸ್ವಲ್ಪ ಹೊತ್ತು ಒಣಗಲು ಬಿಡಿ. ಈಗ ಮುಖವನ್ನು ಡ್ರೈ ಟಿಶ್ಯೂ ಪೇಪರ್ ನಿಂದ ಒತ್ತಿ.
ಬೇಸ್ : ಸ್ಕೀನ್ ಟೋನ್ ಗೆ ಅನುಸಾರವಾಗಿಯೇ ಬೇಸ್ ತೆಗೆದುಕೊಳ್ಳಿ. ಬೇಸ್ ಎಫ್ ಎಸ್ 22 ಸ್ಪಂಜ್ ನಲ್ಲಿ ತೆಗೆದುಕೊಂಡು ಕಣ್ಣುಗಳ ಕೆಳಗೆ ಹಚ್ಚಲು ಶುರುಮಾಡಿ. ಈ ಬೇಸ್ ನಲ್ಲಿ ಐವರಿ ಶೇಡ್ ಬೆರೆಸಿ. ಇದರಿಂದ ಮುಖದಲ್ಲಿ ಬ್ರೈಟ್ ನೆಸ್ ಬರುತ್ತದೆ. ಈಗ ಬ್ರಶ್ ಸಹಾಯದಿಂದ ಮುಖದ ಮೇಲೆ ಬೇಸ್ ನ್ನು ಮರ್ಜ್ ಮಾಡಿ. ಮುಖದ ಮೇಲೆ ಯೆಲ್ಲೋ ಟೋನ್ ಕೊಡುವುದಿದ್ದರೆ ಜಿ 165ರ ಐವರಿ ಶೇಡ್ ಬೇಸ್ ನಲ್ಲಿ ಬೆರೆಸಿ.
ವಧುವಿನ ಮೇಕಪ್ ನಲ್ಲಿ ಹೆಚ್ಚು ಬ್ರೈಟ್ ನೆಸ್ ಗಾಗಿ ಬೇಸ್ ಬಿಳಿ 070ನ್ನು ಕೆನ್ನೆಗಳು, ಮೂಗು ಹಾಗೂ ಹಣೆಯ ಸ್ಪಂಜಿನಿಂದ ಹಚ್ಚಿದ ನಂತರ ಬ್ರಶ್ ನಿಂದ ಚೆನ್ನಾಗಿ ಮರ್ಜ್ ಮಾಡಿ. ಎಷ್ಟು ಚೆನ್ನಾಗಿ ಮರ್ಜ್ ಮಾಡುತ್ತೀರೋ, ಅಷ್ಟು ಚೆನ್ನಾಗಿ ಮುಖದಲ್ಲಿ ಕಾಂತಿ ಬರುತ್ತದೆ. ಈಗ ಪೌಡರ್ ಬ್ರಶ್ ನಿಂದ ಟ್ರಾನ್ಸ್ ಲ್ಯೂಶನ್ ಪೌಡರ್ ಹಚ್ಚಿ. ಈ ಪೌಡರ್ ನಲ್ಲಿ ಸ್ಕಿನ್ ಕಲರ್ ಹಾಗೂ ವೈಟ್ ಕಲರ್ ಎರಡನ್ನೂ ಸೇರಿಸಿ ಹಚ್ಚಿ. ಈಗ ಮುಖಕ್ಕೆ ವಾಟರ್ ಸ್ಪ್ರೇ ಮಾಡಿ ಮತ್ತು ಪಫ್ ನ ಸಹಾಯದಿಂದ ಮುಖವನ್ನು ಒಣಗಿಸಿ. ಬೇಸ್ ಪೂರ್ತಿಯಾದ ಮೇಲೆ ಕಣ್ಣುಗಳ ಮೇಕಪ್ ಶುರು ಮಾಡಿ.
ಐ ಮೇಕಪ್ : ಪಿಂಕ್ ಕಲರ್ ನ ಐ ಶ್ಯಾಡೋನಲ್ಲಿ ಸೀಲರ್ ಜೆಲ್ ನ 2 ಹನಿ ಐ ಬಾಲ್ ಮೇಲೆ ಹಚ್ಚಿ. ಇದರಲ್ಲಿ ಐ ಶ್ಯಾಡೋನ ಪೌಡರ್ ಪ್ರಾಡಕ್ಟ್ ಉಪಯೋಗಿಸಿ. ಶ್ಯಾಡೋನೊಂದಿಗೆ ಸೀಲರ್ ಹಚ್ಚುವುದರಿಂದ ಶ್ಯಾಡೋ ಬಹಳ ಹೊತ್ತು ಇರುತ್ತದೆ. ಮುಖದ ಮೇಲೆ ಪೌಡರ್ ಶ್ಯಾಡೋ ಬೀಳುವುದೂ ಇಲ್ಲ.
ಮಸ್ಕರಾ : ರೆಪ್ಪೆಗಳ ಮೇಲೆ ಜೆಲ್ ಬೇಸ್ ಮಸ್ಕರಾ ಹಚ್ಚಿ. ನಂತರ ಬ್ರಶ್ ನಿಂದ ರೆಪ್ಪೆಗಳನ್ನು ಉಜ್ಜಿ.