ನೀವು ಕೂದಲಿನ ಆರೈಕೆಯಲ್ಲಿ ಕೋಂಬಿಂಗ್‌ನ ಮಹತ್ವ ಮರೆತಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಕೂದಲಿಗೆ ಆಯ್ಲಿಂಗ್‌, ಶ್ಯಾಂಪೂ, ಕಂಡೀಶನಿಂಗ್‌..... ಅಷ್ಟೇ ಸಾಕಾಗುವುದಿಲ್ಲ. ಕಡುಕಪ್ಪಾದ, ಒತ್ತಾದ, ದಟ್ಟ, ಸಿಕ್ಕಿಲ್ಲದ ಸುಂದರ ಕೂದಲಿಗಾಗಿ ನಿಯಮಿತವಾಗಿ ತಲೆಗೂದಲನ್ನು ಬಾಚುತ್ತಿರಬೇಕು. ಇದು ಯಾವ ರೀತಿ ಕೂದಲನ್ನು ಸ್ವಸ್ಥ, ಸುಂದರವಾಗಿ ಇಡುತ್ತದೆಂದು ತಿಳಿಯಿರಿ :

ನೀವು ಕೂದಲು ಬಾಚಲು ಕುಳಿತಾಗೆಲ್ಲ, ತ್ವಚೆಗೆ ಅಂಟಿದ ಆಯಿಲ್ ಗ್ಲಾಂಡ್ಸ್ ತಕ್ಷಣ ಸಕ್ರಿಯಗೊಳ್ಳುತ್ತದೆ, ಆಗ ಎಣ್ಣೆ ಕೂದಲಲ್ಲಿ ಸುಲಭವಾಗಿ ಪ್ರವಹಿಸ ತೊಡಗುತ್ತದೆ. ಹೀಗಾಗಿ ಕೂದಲನ್ನು ಬಾಚತೊಡಗಿದಂತೆ, ಕೂದಲಿನ ಹೊಳಪು, ಸಾಫ್ಟ್ ನೆಸ್‌ ತಂತಾನೇ ಹೆಚ್ಚುತ್ತದೆ.

ಡೇಲಿ ಬಾಚುವಿಕೆಯಿಂದ ಕೂದಲು ಸಿಕ್ಕಿಲ್ಲದೆ ನೀಟಾಗಿರುತ್ತದೆ. ಬಹಳ ದಿನಗಳಾದರೂ ತಲೆಗೂದಲು ಬಾಚಿಲ್ಲವಾದರೆ, ಕೂದಲು ಬೇಗ ಸಿಕ್ಕಾಗುತ್ತದೆ. ಸಿಕ್ಕು ಹೆಚ್ಚಿದಂತೆ ಅವು ಬೇಗ ತುಂಡರಿಸಿ ಉದುರುತ್ತದೆ. ಅದು ತುಸು ಸಿಕ್ಕಾಗುತ್ತಿರುವ ಸೂಚನೆ ಸಿಕ್ಕಿದ ತಕ್ಷಣವೇ, ಕೂದಲನ್ನು ನೀಟಾಗಿ ಬಾಚುವುದರಿಂದ, ಕೂದಲು ತುಂಡರಿಸುವುದಿಲ್ಲ ಅಥವಾ ಉದುರುವುದೂ ಇಲ್ಲ.

ಬಾಚುವಿಕೆಯಿಂದ ಸ್ಕಾಲ್ಪ್ ಚರ್ಮದ ರೋಮರಂಧ್ರಗಳು ಓಪನ್‌ ಆಗುತ್ತವೆ.

ಇದರಿಂದ ಅದಕ್ಕೆ ಸುಗಮವಾಗಿ ಆಮ್ಲಜನಕ ದೊರಕುತ್ತದೆ ಮತ್ತು ರಕ್ತ ಸಂಚಾರ ಸಹ ಸುಲಲಿತವಾಗುತ್ತದೆ. ಇದರಿಂದ ಕೂದಲು ನ್ಯಾಚುರಲ್ ಕಂಡೀಶನಿಂಗ್‌ ಪಡೆದಂತಾಗುತ್ತದೆ.

ಈ ಸಂಗತಿಗಳತ್ತ ಗಮನಹರಿಸಿ

ಎಂದೂ ಒದ್ದೆ ಕೂದಲನ್ನು ಬಾಚಲು ಹೋಗಬೇಡಿ. ಒದ್ದೆ ಕೂದಲನ್ನು ಬಾಚುವುದರಿಂದ ಅದರ ಬುಡ ದುರ್ಬಲಗೊಳ್ಳುತ್ತದೆ. ಇದರಿಂದ ಅದು ತುಂಡರಿಸಿ, ಉದುರುವ ಸಾಧ್ಯತೆಗಳೇ ಹೆಚ್ಚು. ಒಂದು ಪಕ್ಷ ಇನ್ನೂ ಸಂಪೂರ್ಣ ಒಣಗಿರದ ಕೂದಲನ್ನು ಬಾಚಲೇಬೇಕಾದ ಅನಿವಾರ್ಯತೆ ಬಂದಲ್ಲಿ, ಆಗ ಅಗತ್ಯ ಕಟ್ಟಿಗೆಯ ಬಾಚಣಿಗೆ ಉಪಯೋಗಿಸಿ. ಪ್ಲಾಸ್ಟಿಕ್‌ ಬದಲು ಕಟ್ಟಿಗೆಯ ಬಾಚಣಿಗೆ ಈ ನಿಟ್ಟಿನಲ್ಲಿ ಎಷ್ಟೋ ಉಪಯುಕ್ತ.

ಕೂದಲು ಹೆಚ್ಚು ಸಿಕ್ಕಾಗಿರುವಾಗ, ಅವಸರದಲ್ಲಿ  ಬೇಗ ಬೇಗ ಬಾಚಲು ಹೋಗಬೇಡಿ. ಮೊದಲು ಬೆರಳುಗಳ ನೆರವಿನಿಂದ ನಿಧಾನವಾಗಿ ಸಿಕ್ಕು ಬಿಡಿಸುವ ಧಾವಂತದಲ್ಲಿ ಕೂದಲು ತುಂಡರಿಸಿ ಉದುರುವಂತೆ ಮಾಡಬೇಡಿ. ಕೂದಲನ್ನು ಅತಿಯಾಗಿ ಎಳೆದಾಡುವುದರಿಂದ ಅದರ ಬುಡಕ್ಕೂ ಹೆಚ್ಚಿನ ಹಾನಿ ಆಗಬಹುದು.

ದಿನಕ್ಕೆ ಹಲವು ಸಲ ತಲೆ ಬಾಚುತ್ತಾ ಕೂರಬೇಡಿ. ಆದ್ದರಿಂದ ದಿನಕ್ಕೆ 2 ಸಲ ತಲೆ ಬಾಚಿದರೆ ಸಾಕು.

ಬಾಚಣಿಗೆಯನ್ನು ಸದಾ ಶುಚಿಯಾಗಿ ಇಟ್ಟುಕೊಳ್ಳಿ. ಕೊಳಕು ಬಾಚಣಿಗೆಯಿಂದ ಕೂದಲಿಗೆ ಮತ್ತೆ ಕೊಳೆ ತಗುಲುವ ಸಾಧ್ಯತೆ ಇದೆ. ಇದರಿಂದ ಅದರಲ್ಲಿ ತಲೆಹೊಟ್ಟು ಹೆಚ್ಚು ಸಾಧ್ಯತೆಗಳಿವೆ. ಕೊಳೆಯಿಂದ ಸ್ಕಾಲ್ಪ್ ನ ರೋಮ ರಂಧ್ರಗಳು ಕ್ಲೋಸ್‌ ಆಗುವುದರಿಂದ ಅದಕ್ಕೆ ಅಗತ್ಯವಾದ ಆಮ್ಲಜನಕದ ಪೂರೈಕೆ ಆಗುವುದಿಲ್ಲ. ಇದರಿಂದಾಗಿ ಕೂದಲು ಡ್ಯಾಮೇಜ್‌ ಆಗುವ ಅಪಾಯ ಹೆಚ್ಚುತ್ತದೆ.

ಕೂದಲಿಗೆ ಎಂದಾದರೂ ಹೇರ್‌ ಮಾಸ್ಕ್ ಗೋರಂಟಿ, ಕ್ರೀಮ್ ಯಾ ಇನ್ನೇನಾದರೂ ಹಚ್ಚಿದ್ದರೆ, ಆ ಸಮಯದಲ್ಲಿ ಅದನ್ನು ಬಾಚದೇ ಹಾಗೇ ಬಿಡಿ. ಏಕೆಂದರೆ ಹೀಗಾದಾಗ ಸಿಕ್ಕು ಬಿಡಿಸಲು ಹೋದರೂ, ಸಿಕ್ಕು ಬಿಟ್ಟುಕೊಳ್ಳದೆ ಉಲ್ಟಾ ಡ್ಯಾಮೇಜ್‌ ಆಗುತ್ತದೆ.

ಕೂದಲನ್ನು ಸದಾ ಮುಂಭಾಗಕ್ಕೆ ಕೊಂಡೊಯ್ದು ಬಾಚಬೇಕು. ಇದರಿಂದ ಬಾಚುವಿಕೆ ಸುಲಭವಾಗುತ್ತದೆ ಹಾಗೂ ಈ ವಿಧಾನ ಕೂದಲಿಗೆ ಸುರಕ್ಷಿತ ಕೂಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ