ಬೇಸಿಗೆಯ ಕಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ನಮ್ಮನ್ನು ಬಹಳ ಕಾಡಿಸುತ್ತವೆ. ಸನ್‌ ಬರ್ನ್‌ ಕಾರಣ ಮುಖದ ನಾಜೂಕು ತ್ವಚೆ ಕಳೆಗುಂದುತ್ತದೆ. ಚುರುಗುಟ್ಟುವ ಬಿಸಿಲು ಚರ್ಮದಲ್ಲಿನ ಆರ್ದ್ರತೆಯನ್ನು ದಿನೇದಿನೇ ಕುಗ್ಗಿಸುತ್ತದೆ.

ಹೀಗಾಗಿ ಹೆಂಗಸರು ತಮ್ಮ ಬಿಡುವಿಲ್ಲದ ಸತತ ಕೆಲಸಗಳ ಮಧ್ಯೆ ತುಸು ಸಮಯ ಮಾಡಿಕೊಂಡು, ಮುಖದ ಸೌಂದರ್ಯ ಮರಳಿ ಪಡೆಯಲು ಆಗಾಗ ಬ್ಯೂಟಿಪಾರ್ಲರ್‌ಗಳಿಗೆ ಹೋಗುವುದು ಸಾಧ್ಯವಾಗದೇ ಇರಬಹುದು. ಹೀಗಿರುವಾಗ ಕೆಲವು ಸುಲಭ ಉಪಾಯಗಳನ್ನು ಅನುಸರಿಸಿ ಈ ಸೌಂದರ್ಯ ಮರಳಿ ಪಡೆಯಬಹುದು. ಜೊತೆಗೆ ಸ್ಕಿನ್‌ ಬೂಸ್ಟರ್ಸ್‌ ಕೂಡ ಲಭ್ಯವಿದ್ದು, ಈ ನಿಟ್ಟಿನಲ್ಲಿ ಸಹಕಾರಿ ಎನಿಸಿವೆ. ಇದು ನಿಮಗೆ ಕೆಲವೇ ನಿಮಿಷಗಳಲ್ಲಿ, ಬಲು ಸುಲಭ ವಿಧಾನದಲ್ಲಿ ಚಮತ್ಕಾರಿ ಪರಿಣಾಮ ಬೀರಬಲ್ಲದು. ಎಲ್ಲಕ್ಕಿಂತ ಉತ್ತಮ ವಿಷಯ ಎಂದರೆ ಇದರ ಪರಿಣಾಮ ದೀರ್ಘಕಾಲ ನಿಲ್ಲುತ್ತದೆ.

ಹೈಡ್ರೋಫಿಲಿಕ್‌ ಹ್ಯಾಲುರೋನಿಕ್‌ ಆ್ಯಸಿಡ್‌ ಜೆಲ್‌, ಹೆಚ್ಚುವರಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿದ್ದು, ಚರ್ಮಕ್ಕೆ ಉತ್ತಮ ಹೊಳಪು ಹಾಗೂ ಕೋಮಲತೆ ಒದಗಿಸುತ್ತದೆ. ಇದು ಒಂದು ವರ್ಷಕ್ಕೂ ಹೆಚ್ಚು ಕಾಲ ಉಳಿಯುತ್ತದೆ. ಚರ್ಮದ ಮೇಲ್ಪದರದ ಮೇಲೆ ಇದನ್ನು ಇಂಜೆಕ್ಟ್ ಮಾಡುವುದರಿಂದ, ಅದು ಚರ್ಮದ ಆಳಕ್ಕೆ ಇಳಿದು ಅದನ್ನು ದಟ್ಟ ಆರ್ದ್ರಯುಕ್ತಗೊಳಿಸುತ್ತದೆ, ಸೂಕ್ತವಾಗಿ ಪೋಷಿಸುತ್ತದೆ. ಹ್ಯಾಲುರೋನಿಕ್‌ ಆ್ಯಸಿಡ್‌ ಜೆಲ್‌ನ್ನು ಮೈಕ್ರೋ ಇಂಜೆಕ್ಷನ್‌ ಮೂಲಕ ಚರ್ಮದ ಮೇಲ್ಪದರಕ್ಕೆ ನೀಡಲಾಗುತ್ತದೆ. ನೈಸರ್ಗಿಕವಾಗಿ ಇದು ಚರ್ಮದಲ್ಲಿ ಆಂತರಿಕ ರೂಪದಲ್ಲಿ ಕ್ರಿಯಾಶೀಲ ಕೆಲಸ ಮಾಡಿಸುತ್ತದೆ. ಇದರಿಂದ ಚರ್ಮ ಸಹಜವಾಗಿ ನಳನಳಿಸುತ್ತದೆ.

ಡ್ರೈ ಸ್ಕಿನ್ಗಾಗಿ ತಣ್ಣೀರನ್ನು ಚಿಮುಕಿಸುತ್ತಿರಿ : ಇಂಥವರು ಸಾಫ್ಟ್ ಸ್ಕಿನ್‌ ಪಡೆಯಲು ಬಿಸಿ ನೀರಿನಿಂದ ಸ್ನಾನ ಮಾಡಬಾರದು, ಬದಲಿಗೆ ತಣ್ಣೀರಿನಲ್ಲೇ ಸ್ನಾನ ಮಾಡಬೇಕು. ಜೊತೆಗೆ ಆಗಾಗ ಮುಖಕ್ಕೆ ತಣ್ಣೀರು ಚಿಮುಕಿಸುತ್ತಿರಬೇಕು. ಸ್ನಾನಕ್ಕೆ ಮೊದಲು ಇಡೀ ದೇಹಕ್ಕೆ ಬಾದಾಮಿ ಎಣ್ಣೆಯಿಂದ ಮಸಾಜ್‌ ಮಾಡಿ.

ಗ್ಲಿಸರಿನ್‌ : ರಾತ್ರಿ ಮಲಗುವ ಮೊದಲು ಮುಖಕ್ಕೆ ಚೆನ್ನಾಗಿ ಗ್ಲಿಸರಿನ್‌ ಹಚ್ಚಿಕೊಳ್ಳಿ, ಇಡೀ ರಾತ್ರಿ ಅದನ್ನು ಹಾಗೇ ಬಿಡಿ. ಬೆಳಗ್ಗೆ ತಣ್ಣೀರಿನಿಂದ ಫ್ರೆಶ್‌ ಆಗಿ ಮುಖ ತೊಳೆಯಿರಿ.

ಹನೀ ಮಸಾಜ್‌ : ಮುಖಕ್ಕೆ ಅಪ್ಪಟ, ತಾಜಾ ಜೇನುತುಪ್ಪ ಸವರಿಕೊಳ್ಳಿ. 3-4 ನಿಮಿಷ ಮಸಾಜ್‌ ಮಾಡಿದ ನಂತರ ಮುಖ ತೊಳೆಯಿರಿ. ಮುಖದ ಚರ್ಮಕ್ಕೆ ಬೇಕಾದ ಅನಿವಾರ್ಯ ತೈಲಾಂಶ ಮರಳಿ ಪಡೆಯಲು ಇದನ್ನು ಆಗಾಗ ಮಾಡಬೇಕು.

ಜವೆಗೋಧಿ ಸೌತೆಯ ಫೇಸ್ಪ್ಯಾಕ್‌ : 3-4 ಚಮಚ ಜವೆ ಗೋಧಿಹಿಟ್ಟು, 1-2 ಚಮಚ ಸೌತೆಯ ಪೇಸ್ಟ್, 1-2 ಚಮಚ ಮೊಸರು ಬೆರೆಸಿ ಪ್ಯಾಕ್‌ ತಯಾರಿಸಿ. ಇದನ್ನು ಮುಖಕ್ಕೆ ಸವರಿ, 1-2 ಗಂಟೆ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಆಯ್ಲಿ ಸ್ಕಿನ್ಗಾಗಿ ಕ್ಲೆನ್ಸಿಂಗ್‌ : ಚರ್ಮವನ್ನು ತೈಲರಹಿತ ಮಾಡಲು, ಮುಖವನ್ನು ಒಂದು ದಿನದಲ್ಲಿ 2-3 ಸಲ ಕ್ಲೆನ್ಸರ್‌ನಿಂದ ತೊಳೆಯಬೇಕು.

ಸ್ಕ್ರಬಿಂಗ್‌ : ಮೂಗು ಮತ್ತು ಕೆನ್ನೆಯ ಬಳಿಯ ಡೆಡ್‌ ಸೆಲ್ಸ್ ಮತ್ತು ಬ್ಲ್ಯಾಕ್‌ ಹೆಡ್ಸ್ ತೊಲಗಿಸಲು, ಈ ಭಾಗವನ್ನು ಸ್ಕ್ರಬ್‌ನಿಂದ ಚೆನ್ನಾಗಿ ಉಜ್ಜಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ