ಚರ್ಮದ ಆ ಅಸಾಮಾನ್ಯ ಭಾಗ, ಯಾವುದರಿಂದ ಅದರ ಬಣ್ಣದಲ್ಲಿ ಬದಲಾವಣೆ ಬಂದಿದೆಯೋ, ಒಂದು ಸಾಮಾನ್ಯ ಸಮಸ್ಯೆ ಎನಿಸಿದೆ. ಇದಕ್ಕೆ ನಾನಾ ಸಂಭಾವ್ಯ ಕಾರಣಗಳಿರಬಹುದು. ಬಹುಶಃ ನಿಮ್ಮ ಚರ್ಮದ ಆ ಭಾಗದ ಮೆಲನಿನ್‌ ಮಟ್ಟದಲ್ಲಿ ವ್ಯತ್ಯಾಸದ ಕಾರಣ ಪಿಗ್ಮೆಂಟೇಶನ್‌ನಲ್ಲಿ ಬದಲಾವಣೆ ಆಗಿರಬಹುದು. ಕಲೆ ಗುರುತುಗಳಿರುವ ಚರ್ಮದ್ದು ಕೂಡ ಹಲವು ಸಂಭಾವ್ಯ ಕಾರಣಗಳಿರಬಹುದು. ಅವು ಸಾಧಾರಣದಿಂದ ಜಟಿಲ ಆಗಿರುತ್ತದೆ. ಅಂದರೆ ಮೊಡವೆ, ಗುಳ್ಳೆ, ದದ್ದು, ತೀವ್ರ ಬಿಸಿಲಿನ ಕಾರಣದಿಂದ ಪೇವಲ ಬಣ್ಣ, ಸೋಂಕು, ಅಲರ್ಜಿ, ಹಾರ್ಮೋನ್‌ ಬದಲಾವಣೆ, ಮಚ್ಚೆಗಳಂಥ ಹುಟ್ಟಿನ ಗುರುತುಗಳು.... ಇತ್ಯಾದಿ. ಆದರೆ ಜನ ಸಾಮಾನ್ಯವಾಗಿ ತಿಳಿಯುವುದೆಂದರೆ, ಮುಖದಲ್ಲಿ ಕಲೆ ಗುರುತು ಉಳಿಯಲು ಕಾರಣ ಕೇವಲ ಮೊಡವೆಗಳು ಅಂತ, ಆದರೆ ವಾಸ್ತವ ಹಾಗಲ್ಲ.

ಮೊಡವೆ ಗುಳ್ಳೆಗಳ ಕಾರಣ ಆಗುವ ಗಾಯಗಳೂ ಕಲೆ ಗುರುತು ಉಳಿಸಬಹುದು. ನೀವು ಅದನ್ನು ಜಿಗುಟಿ, ಕೆರೆದು ಮಾಡದಿದ್ದರೂ ಅವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ದ್ರವ ತುಂಬಿದ ಇಂಥ ಗಾಯದ ಕಾರಣ, ಚರ್ಮದಲ್ಲಿ ಆ ಭಾಗ ನೋವಿನಿಂದ ಕೂಡಿರುವಂತೆ ಅನಿಸುತ್ತದೆ. ಆದರೆ ಅಸಲಿಗೆ ಇಂಥ ಗಾಯ ಚರ್ಮದ ಹೊರ ಪದರದ ಮೇಲೆ ಕಾಣಿಸುವುದೇ ಇಲ್ಲ. ಉರಿಯೂತ ಇರುವ ಇಂಥ ಮೊಡವೆಗಳು ನೋವು ನೀಡುವುದು ಸಹಜ, ಇವುಗಳಲ್ಲಿ ಬಿಳಿಯ ರಕ್ತ ಕಣ ಅಧಿಕ ಸಂಗ್ರಹಗೊಂಡಿರುತ್ತವೆ. ಈ ಕಾರಣ ಆ ಭಾಗದಲ್ಲಿ ಹೆಚ್ಚು ಕಿಣ್ವ (ಎನ್‌ಝೈಂ)ಗಳು ಸೇರಿಕೊಳ್ಳುತ್ತವೆ, ಇವು ಹೆಚ್ಚು ಹಿಂಸೆ ನೀಡುತ್ತವೆ.

ಇಂಥ ಸ್ಥಿತಿಯಲ್ಲಿ ನಿಮ್ಮ ಚರ್ಮ ಸ್ವಯಂ ತಾನೇ ಆ ಗಾಯ ಮಾಡಿಸುವ ಕೆಲಸ ಮಾಡುತ್ತದೆ. ಆ ಕಾರಣವಾಗಿ ಕಲೆ ಗುರುತು ಹೊಸ ಪದರದ ಮೇಲೆ ಮೂಡಿ ಬರುತ್ತದೆ. ಹೀಗಾಗಿ ಮೊಡವೆಯೊಂದೇ ಮುಖದ ಮೇಲೆ ಕುರೂಪಿ ಬಣ್ಣ ಮೂಡಿಸಲು ಕಾರಣವಲ್ಲ. ಇತರ ಗಾಢ ಬಣ್ಣದ ಕಲೆಗಳು, ಹೆಚ್ಚು ಪಿಗ್ಮೆಂಟೇಶನ್‌ವುಳ್ಳ ಚರ್ಮಕ್ಕೆ ಕಾರಣವೆಂದರೆ ಹೆಚ್ಚುತ್ತಿರುವ ನಿಮ್ಮ ವಯಸ್ಸು, ತೀವ್ರ ಬಿಸಿಲಿನಿಂದ ಆಗುವ ಹಾನಿ, ಗರ್ಭನಿರೋಧಕ ಮಾತ್ರೆಗಳೂ ಕಾರಣ ಎನ್ನಬಹುದು. ಈ ಕಲೆ, ಅಲರ್ಜಿ ಅಥವಾ ಹೈಪರ್‌ಪಿಗ್ಮೆಂಟೇಶನ್‌ನಂಥ ಚರ್ಮದ ಗಂಭೀರ ಸಮಸ್ಯೆಗಳು ಹೆಚ್ಚಿದರೆ ಕೂಡಲೇ ಚರ್ಮ ತಜ್ಞರನ್ನು ಭೇಟಿ ಮಾಡಿ, ನಿಧಾನಿಸಬೇಡಿ.

ಗುರುತು ಮತ್ತು ಕಲೆಗಳ ವ್ಯತ್ಯಾಸ

ಮೊಡವೆ ಉಳಿಸುವ ಗುರುತು ಮತ್ತು ಚರ್ಮದ ಕಲೆಗಳಲ್ಲಿ ಖಂಡಿತಾ ವ್ಯತ್ಯಾಸವಿದೆ. ಇವೆರಡರ ನಡುವಿನ ವ್ಯತ್ಯಾಸ ತಿಳಿಯುವಲ್ಲಿ ಜನ ತುಸು ಕನ್‌ಫ್ಯೂಶನ್‌ಗೆ ಒಳಗಾಗುತ್ತಾರೆ. ಅದೆಂದರೆ ವಾಸ್ತವಿಕ ಮೊಡವೆಗಳ ಗುರುತು ಹಾಗೂ ಅವು ಒಡೆದ ನಂತರ ಕೆಂಪು ಕಲೆ ಅಥವಾ ಡಿಸ್‌ಕಲರೇಶನ್‌.

ಚರ್ಮದ ಮೇಲ್ಪದರದ ಮೇಲೆ ಗುಲಾಬಿ, ಕೆಂಪು ಅಥವಾ ಬೂದು ಬಣ್ಣದ ಗುರುತು ಸಮಯ ಸರಿದಂತೆ ತಾನಾಗಿ ಕಣ್ಮರೆಯಾಗಿ ತಿಳಿಯಾಗುತ್ತದೆ. ಅಸಲಿಗೆ ಇವು ಮೊಡವೆಗಳಿಂದ ಆಗಿರುವುದಿಲ್ಲ. ಆದರೆ ವಾಸ್ತವವಾಗಿ ಕಲೆ ಚರ್ಮದ ಒಳಭಾಗದ ಹಾನಿಯ ಕಾರಣ ಆಗಿರುತ್ತದೆ, ಆ ಕಾರಣ ಅದು ಕಲೆ ಉಳಿಸಿಬಿಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ