ಸೀನ್‌ : (ಮೇಕಪ್‌) ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಒಂದು ಜಾಹೀರಾತಿನಲ್ಲಿ ಒಬ್ಬ ಕಾಲೇಜ್‌ ಹುಡುಗಿ ತನ್ನ ಬಾಯ್‌ಫ್ರೆಂಡ್‌ನನ್ನು ಭೇಟಿಯಾಗಲೆಂದು ಬಹಳ ಆತುರದಿಂದ ತಯಾರಾಗುತ್ತಿದ್ದಳು. ಅವಳು ತನ್ನ ಬೀರುವಿನಿಂದ ಬ್ಯೂಟಿಫುಲ್ ಒನ್‌ ಪೀಸ್‌ ರೆಡ್‌ ಕಲರ್‌ ಡ್ರೆಸ್‌ನ್ನು ತೆಗೆದಿರಿಸಿ, ಕನ್ನಡಿ ಮುಂದೆ ನಿಂತು ತನ್ನ ರೆಗ್ಯುಲರ್‌ ಕ್ರೀಂ ತೆಗೆದು ಹಚ್ಚಿಕೊಳ್ಳಲು ಮುಂದಾದಾಗ, ಹಿಂದಿನಿಂದ ಒಂದು ಧ್ವನಿ ಕೇಳಿಸುತ್ತದೆ, `ಬಾಯ್‌ಫ್ರೆಂಡ್‌ನ್ನು ವಿಶೇಷವಾಗಿ ಭೇಟಿಯಾಗಲು ಹೋಗುವಾಗ ಇದೇಕೆ ರೆಗ್ಯುಲರ್ ಕ್ರೀಂ? ಇದರಿಂದ ನಿನ್ನ, ಮೇಕಪ್‌ ಎಂದಿನಂತೆ ಆರ್ಡಿನರಿ ಆಗಿರುತ್ತದಷ್ಟೆ,’ ನಂತರ ಅವಳಿಗೆ ಮತ್ತೊಂದು ಕ್ರೀಂ ಹಚ್ಚಿಕೊಳ್ಳಲು ಸಲಹೆ ನೀಡಲಾಗುತ್ತದೆ.

ಇದೇ ತರಹ ನೀವು ಸಹ ಯಾರನ್ನಾದರೂ ವಿಶೇಷವಾಗಿ ಭೇಟಿಯಾಗಬೇಕಿದ್ದರೆ ಅಥವಾ ಪಾರ್ಟಿಗೆ ಹೋಗಬೇಕಿದ್ದರೆ, ನಿಮ್ಮ ರೆಗ್ಯುಲರ್‌ ಮೇಕಪ್‌ ಕಿಟ್‌ನಿಂದ ದೂರವಿರಿ. ಏಕೆಂದರೆ ಹಾಗೆ ಮಾಡುವುದರಿಂದ ನೀವು ಎಂದಿನಂತೆಯೇ ಕಾಣಿಸುವಿರಿ. ಪಾರ್ಟಿಗೇನಾದರೂ ಹೋದರೆ ಯಾರೂ ನಿಮ್ಮನ್ನು ವಿಶೇಷವಾಗಿ ಗಮನಿಸಲಾರರು.

ಸೀನ್‌ : (ಹೇರ್ಸ್ಟೈಲ್) ಶ್ವೇತಾ ನೋಡಲು ಎಷ್ಟು ಸುಂದರವಾಗಿದ್ದಳೋ, ಅವಳ ತಲೆಗೂದಲು ಅಷ್ಟೇ ಕೆಟ್ಟದ್ಧಾಗಿತ್ತು, ಡ್ರೈನೆಸ್‌ನಿಂದ ನಿರ್ಜೀವವಾಗಿತ್ತು. ತನ್ನ ಕೂದಲಿನ ಕಾರಣ ಅವಳು ಖಂಡಿತಾ ಆಕರ್ಷಕ ಎನಿಸುತ್ತಿರಲಿಲ್ಲ. ಅವಳಿಗೆ ತನ್ನ ಚೆಲುವಾದ ಮುಖವೇ ಸಾಕು, ಕೂದಲಿನದೇನು ವಿಶೇಷ ಎನಿಸುತ್ತಿತ್ತು. ಒಂದು ದಿನ ಆಕೆ ಪಾರ್ಟಿಗೆ ಹೋಗಬೇಕೆಂದು ಒಂದು ಡಿಸೈನರ್‌ ಡ್ರೆಸ್‌ ಕೊಂಡಳು. ಜೊತೆಗೆ ಮ್ಯಾಚಿಂಗ್‌ ಸ್ಯಾಂಡಲ್, ಇಯರ್‌ರಿಂಗ್ಸ್ ಸಹ. ಆದರೆ ಹೇರ್‌ಸ್ಟೈಲ್ ‌ಹೆಸರಿನಲ್ಲಿ ತನ್ನ ಕೂದಲನ್ನು ಓಪನ್‌ ಆಗಿಯೇ ಬಿಟ್ಟಿದ್ದಳು. ಮೇಕಪ್‌ ಹೆಸರಿನಲ್ಲಿ ಅವಳು ತುಸು ಫೌಂಡೇಶನ್‌ ಸವರಿಕೊಂಡು, ಲಿಪ್‌ ಗ್ಲಾಸ್ ಹಚ್ಚಿಕೊಂಡಳು.

ಪಾರ್ಟಿಯಲ್ಲಿ ಶ್ವೇತಾಳ ಒಟ್ಟಾರೆ ಗೆಟಪ್‌ ನೋಡಿ ಯಾರೂ ಪ್ರಭಾವಿತರಾಗಲಿಲ್ಲ. ಸಾಲದೆಂಬಂತೆ ಅಲಳ ಗೆಳತಿ ತನುಶ್ರೀ, ಏನೇ ಇದು, ಡ್ರೆಸ್ಸಿಂಗ್‌ ಸೆನ್ಸೇ ಇಲ್ಲದವಳಂತೆ ಬಂದಿದ್ದೀಯ ಎಂದು ರೇಗಿಸಿದಳು. ಇದರಿಂದ ಸಹಜವಾಗಿಯೇ ಅವಳಿಗೆ ಕೋಪ ಬಂದಿತು. ಶ್ವೇತಾಳ ಗೆಳತಿ ತನುಶ್ರೀ ಸಹ ಇದೇ ಸ್ಟೈಲ್‌ನಲ್ಲಿ ಸೇಮ್ ಡ್ರೆಸ್‌ ಧರಿಸಿದ್ದಳು. ವ್ಯತ್ಯಾಸವೆಂದರೆ, ಅವಳು ಒಂದು ಬ್ಯೂಟಿಫುಲ್ ಹೇರ್‌ಸ್ಟೈಲ್ ಮಾಡಿಕೊಂಡು ಬಂದಿದ್ದಳು. ಪಾರ್ಟಿಗೆ ಬಂದಿದ್ದವರೆಲ್ಲ ತನುಶ್ರೀಯನ್ನು ಹೊಗಳಿದರು. ಹೀಗಾಗಿ ನೀವು ಶ್ವೇತಾಳಂತೆ ಯೋಚಿಸಿದರೆ, ಈಗಿನ ಕಾಲದಂತಲ್ಲದೆ ನಿಮ್ಮನ್ನು ಪೂರ್ವ ಕಾಲದ ಪುಟ್ಟಕ್ಕ ಎಂದು ಜನ ನಿರ್ಲಕ್ಷಿಸುತ್ತಾರೆ.

ಸಾಮಾನ್ಯವಾಗಿ ಒಮ್ಮೊಮ್ಮೆ ನಮ್ಮೆಲ್ಲರಿಂದಲೂ ಇಂಥ ತಪ್ಪುಗಳಾಗುವುದುಂಟು. ಆದರೆ ಇಂಥ ತಪ್ಪುಗಳಾಗದಂತೆ ಅದನ್ನು ಸರಿಪಡಿಸಲಿಕ್ಕೂ ಹಲವು ಅವಕಾಶಗಳಿವೆ. ನೀವು ಸಹ ಸರಿಯಾದ ಮೇಕಪ್‌ ಮತ್ತು ಪ್ರಾಪರ್‌ ಹೇರ್‌ಸ್ಟೈಲ್‌ನಿಂದ ನಿಮ್ಮ ಲುಕ್ಸ್ ನ್ನು ಇನ್ನಷ್ಟು ಆಕರ್ಷಕ ಮಾಡಿಕೊಳ್ಳಬಹುದು.

ವಧುವಿನ ತಾಯಿಯ ಹೇರ್ಸ್ಟೈಲ್

ಸಾಮಾನ್ಯವಾಗಿ ಅಮ್ಮಂದಿರ ಕೂದಲು ವೈಟ್‌ ಆಗಿರುತ್ತದೆ. ಆದರೆ ವಧುವಿನ ತಾಯಿಯಾದ ಕಾರಣ, ಅತಿಥಿ ಸತ್ಕಾರದಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು. ಹೀಗಾಗಿ ಸುಂದರವಾಗಿ ಕಂಗೊಳಿಸಲು, ಹೆವಿ ಹೇರ್‌ಸ್ಟೈಲ್‌ನ ಡಿಮ್ಯಾಂಡ್‌ಮಾಡಬಹುದು.

ಹೆವಿ ಲುಕ್ಸ್ ಗಳಿಸಲು ಎಲ್ಲಕ್ಕೂ ಮೊದಲು ಕೆಳಭಾಗದಲ್ಲಿ ಒಂದು ಪೋನಿಟೇಲ್ ಮಾಡಿಕೊಳ್ಳಿ. ಮುಂಭಾಗದ ಕೂದಲನ್ನು ವಿಂಗಡಿಸಿ ಹಾಗೇ ಬಿಡಿ ಮತ್ತು ಹಿಂಭಾಗದ ಕೂದಲಿನ ಬ್ಯಾಕ್‌ ಕೋಂಬಿಂಗ್‌ ಮಾಡಿ. ನಂತರ ಫ್ರಂಟ್‌ನ ಕೂದಲನ್ನು ಬ್ಯಾಕ್‌ಕೋಂಬಿಂಗ್‌ ಮಾಡಿದ ಕೂದಲಿನ ಮೇಲೆ ಹರಡಿಕೊಳ್ಳಿ. ಈಗ ಚೆನ್ನಾಗಿ ಪಿನಿಂಗ್‌ ಮಾಡಿ. ಪೋನಿಗೆ ಸ್ಟಫಿಂಗ್‌ ಹಾಕಿ ಅದನ್ನು ಪಫ್‌ನಲ್ಲಿ ಒಳಭಾಗಕ್ಕೆ ಪಿನ್‌ ಅಪ್‌ ಮಾಡಿ. ಈಗ ಹೇರ್‌ಸ್ಪ್ರೇ ನಿಂದ ಕೂದಲನ್ನು ಸೆಟ್‌ ಮಾಡಿ. ಉಳಿದಿರುವ ಸೈಡ್‌ನ ಕೂದಲನ್ನು ರೋಲ್ ‌ಮಾಡಿ, ಅದಕ್ಕೆ ಹೂವು ಅಥವಾ ಇತರೆ ಆ್ಯಕ್ಸೆಸರೀಸ್‌ ಸಿಗಿಸಿಡಿ.

ವೈಟ್‌ ಆದಕಾರಣ ಮುಂಭಾಗದ ಕೂದಲಲ್ಲಿ ಗ್ಯಾಪ್‌ ಕಾಣಿಸಿದರೆ, ಅದನ್ನು ಭರ್ತಿ ಮಾಡಲು ಹೇರ್‌ ಬಿಲ್ಡರ್‌ ಕಲರ್‌ ಬಳಸಿರಿ. ಇದು ಪೌಡರ್‌ ರೂಪದಲ್ಲಿ ಸಿಗುತ್ತದೆ. ಹೀಗೆ ಕಡಿಮೆ ಪ್ರಮಾಣದ ಕೂದಲಲ್ಲಿ ಹೆವಿ ಹೇರ್‌ಸ್ಟೈಲ್ ಮಾಡಿಕೊಳ್ಳಬಹುದು.

ಸಂಗೀತ್ದಿನದ ಹೇರ್ಸ್ಟೈಲ್

ನಿಮ್ಮದು ಉದ್ದ ಕೂದಲಾಗಿದ್ದರೆ, ಅದರಲ್ಲಿ ಹಲವು ಬಗೆಯ ಹೇರ್‌ಸ್ಟೈಲ್ ಮಾಡಬಹುದು. ನೀವು ಮದುವೆಯ ಸಂಗೀತ್‌ ಫಂಕ್ಷನ್‌ಗೆ ಹೊರಟಿದ್ದರೆ, ಭಾರಿ ರೇಷ್ಮೆ ಸೀರೆ ಅಥವಾ ಚೂಡೀದಾರ್‌ ಧರಿಸುವಿರಿ. ಇದಕ್ಕಾಗಿ ಮುಂಭಾಗದಲ್ಲಿ ಬೈತಲೆ ತೆಗೆದು, ಹಿಂಭಾಗದಲ್ಲಿ ಸಿಂಪಲ್ ಹೈ ಪೋನಿ ಮಾಡಿ. ಗಂಟು ಹಾಕಿಡಿ. ಇಂಥ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಟ್ರೆಡಿಷನ್‌ ಜಡೆ ಅಥವಾ ಕೊಂಡೆ ಚೆನ್ನಾಗಿ ಒಪ್ಪುತ್ತದೆ. ಇಂಥ ಜಡೆಗೆ ಹೊಳೆಯುವ ರಿಬ್ಬನ್‌ನ್ನು ಝಿಗ್‌ಝಾಗ್‌ ಮಾಡಿ ಬಳಸಿರಿ. ಡ್ರೆಸ್‌ಗೆ ಹೊಂದುವ ಆ್ಯಕ್ಸೆಸರೀಸ್‌ ಧರಿಸಿ. ಆಗ ನೀವು ಸಹಜವಾಗಿಯೇ ಪಾರ್ಟಿಯ ಕೇಂದ್ರಬಿಂದು ಆಗುವಿರಿ. ಜೊತೆಗೆ ಬೈತಲೆ ಬೊಟ್ಟು ತೊಟ್ಟರೆ ಇನ್ನೂ ಚೆನ್ನಾಗಿರುತ್ತದೆ. ಇದು ನಿಮ್ಮ ಲುಕ್ಸ್ ನ್ನು ಸಂಪೂರ್ಣ ಬದಲಾಯಿಸುತ್ತದೆ. ಈ ಹೇರ್‌ಸ್ಟೈಲ್ ಮೇಲೆ ಮುಂಭಾಗದ ಸೈಡ್‌ನಲ್ಲಿನ ಕೂದಲ ಮೇಲೆ ಸ್ಟಿಕರ್‌ ಅಳವಡಿಸಿ ಅದನ್ನು ಇನ್ನಷ್ಟು ಆಕರ್ಷಕಗೊಳಿಸಬಹುದು.

ಸೈಡ್ಬನ್ನಿನ ಸೊಬಗು

ನೀವು ಮುಂಭಾಗದ ಕೂದಲಿನಿಂದ ಒಂದು ಸೈಡ್‌ ಪಫ್‌ ಮಾಡಿ. ನಂತರ ಕುತ್ತಿಗೆಯ ಮೇಲುಭಾಗದಲ್ಲಿ ಹಿಂದಿನ ಭಾಗದ ಕೂದಲಿನಿಂದ 3 ಸ್ವಿಚ್‌ ಮೂಡಿಸಿ, ಜಡೆ ಹೆಣೆಯಿರಿ. ಈಗ ನಕಲಿ ಕೂದಲಿನಿಂದ ತಯಾರಿಸಿದ ಹೂವಿನ ಆ್ಯಕ್ಸೆಸರೀಸ್‌ ಅಳವಡಿಸಿ. ಇಂಥ ಹೇರ್‌ಸ್ಟೈಲ್ ಜೊತೆ ಸೀರೆ ಮತ್ತು ಹ್ಯಾಂಗಿಂಗ್‌ ಇಯರ್‌ರಿಂಗ್ಸ್ ನ್ನು ಅಗತ್ಯ ಧರಿಸಿ. ಇದರಿಂದ ಪರ್ಫೆಕ್ಟ್ ಲುಕ್ಸ್ ಸಿಗುತ್ತದೆ. ಹೈ ಬನ್ಗೆ ಹೆಚ್ಚಿನ ಡಿಮ್ಯಾಂಡ್

ಸೀರೆ ಹಾಗೂ ಲಾಚಾ ಜೊತೆ ಹೈ ಬನ್‌ ಸ್ಟೈಲ್ ಚೆನ್ನಾಗಿ ಒಪ್ಪುತ್ತದೆ. ಕೂದಲಿಗೆ ಹೊಸ ಲುಕ್‌ ನೀಡಲು ಸಿಂಪಲ್ ಜಡೆಯ ಜಾಗದಲ್ಲಿ ಹೈ ಬನ್‌ ಮಾಡಿ. ಇದನ್ನು ಮಾಡಿಕೊಳ್ಳುವುದೂ ಸುಲಭ, ಜೊತೆಗೆ ಬಹಳ ಹೊತ್ತು ಉಳಿಯುವ ಕೇಶಶೈಲಿಯೂ ಹೌದು. ಈ ಹೇರ್‌ಸ್ಟೈಲಿನಿಂದ ನಿಮ್ಮ ಡ್ಯಾನ್ಸ್ ಸ್ಟೆಪ್ಸ್ ಗೆ ಏನೂ ತೊಂದರೆ ಇಲ್ಲ, ಹಾಯಾಗಿ ಹೆಜ್ಜೆ ಹಾಕಿ. ಇದಕ್ಕಾಗಿ ಕೂದಲಿನ ಫ್ರಂಟ್ ಸೆಕ್ಷನಿಂಗ್‌ ಮಾಡಿ, ಹಿಂಬದಿ ಬ್ಯಾಕ್‌ ಕೋಂಬಿಂಗ್‌ ಮಾಡಬೇಕು. ಅದಕ್ಕೆ ಮುಂಭಾಗದ ಕೂದಲನ್ನು ಅಟ್ಯಾಚ್‌ ಮಾಡಿ ಪಿನ್‌ ಅಪ್ ಮಾಡಬೇಕು. ಈಗ ಹೇರ್‌ ಕಲರ್‌ ಅಥವಾ ಡ್ರೆಸ್‌ಗೆ ಹೊಂದು ಫ್ಲಾಸ್ ತೆಗೆದುಕೊಳ್ಳಿ. ಜಡೆ ಹೆಣೆದ ನಂತರ ಇವನ್ನು ಬಳಸಬೇಕು ಹಾಗೂ ಚೆನ್ನಾಗಿ ಸೆಟ್‌ ಮಾಡಿ. ಕೊನೆಯಲ್ಲಿ ಹೇರ್‌ ಆ್ಯಕ್ಸೆಸರೀಸ್‌ನಿಂದ ಸಿಂಗರಿಸಿ. ಹೇರ್‌ಸ್ಪ್ರೇ ಬಳಸಲು ಮರೆಯದಿರಿ.

ಕೃತಕ ಜಡೆ

ಯಾವುದೇ ಫಂಕ್ಷನ್‌ಗೆ ನೀವು ಘಾಘ್ರಾ ಧರಿಸಿ ಹೊರಟರೆ, ಅದಕ್ಕೆ ಹೊಂದುವಂತೆ ಫ್ಯಾನ್ಸಿ ಜಡೆಯ ಹೇರ್‌ಸ್ಟೈಲ್ ‌ಇರಲಿ. ಇಂದಿನ ಆಧುನಿಕ ಯುವತಿಯರಿಗೆ ಇಂಥ ಕೇಶಶೈಲಿ ಚೆನ್ನಾಗಿ ಒಪ್ಪುತ್ತದೆ. ಇದಕ್ಕೆ ಮೊದಲು ಬೈತಲೆ ತೆಗೆದು, ಹಿಂಬದಿಯ ಕೂದಲಿಗೆ ಸ್ವಿಚ್‌ ನೆರವಿನಿಂದ ಎತ್ತರದ ಜಡೆ ಹೆಣೆಯಿರಿ. ಚೌರಿ ಅಥವಾ ಕೃತಕ ಜಡೆಯನ್ನು ಇದಕ್ಕೆ ಚೆನ್ನಾಗಿ ಅಟ್ಯಾಚ್‌ ಮಾಡಿ, ಆಗದು ಬಿಟ್ಟುಹೋಗದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಆ್ಯಕ್ಸೆಸರೀಸ್‌ ಅಳವಡಿಸಲಾದ ರೆಡಿಮೇಡ್‌ ಕೃತಕ ಜಡೆಯೇ ದೊರಕುತ್ತದೆ. ಇದನ್ನು ಜಡೆಯ ಬಳಿ ರೋಲ್ ‌ಮಾಡಿ, ಚೆನ್ನಾಗಿ ಪಿನಿಂಗ್‌ ಮಾಡಿ. ಜಡೆಯ ಉಳಿದ ತೂಗಾಡುವ ಭಾಗಕ್ಕೆ ಒಡವೆ, ಸ್ಟಿಕರ್‌, ರಿಬ್ಬನ್‌ನಿಂದ ಅಲಂಕರಿಸಿ. ಈ ಹೇರ್‌ಸ್ಟೈಲ್ ನಿಮ್ಮ ಡ್ರೆಸ್‌ಗೆ ಚೆನ್ನಾಗಿ ಸೂಟ್‌ ಆಗುತ್ತದೆ.

ಡ್ರೆಸ್ಗೆ ತಕ್ಕಂತಿರಲಿ ಹೇರ್ಸ್ಟೈಲ್

ನೀವು ಪಾರ್ಟಿಯಲ್ಲಿ ಎಲ್ಲರಿಗಿಂತ ಚೆನ್ನಾಗಿ ಕಂಗೊಳಿಸಬೇಕೆಂಬ ಆಸೆ ಹೊಂದಿದ್ದರೆ, ನಿಮ್ಮ ಡ್ರೆಸ್‌ಗೆ ತಕ್ಕಂತೆ ಹೇರ್‌ಸ್ಟೈಲ್ ಬದಲಿಸಿಕೊಳ್ಳಿ. ಹಾಲ್ಟರ್‌ ನೆಕ್‌ವುಳ್ಳ ಡ್ರೆಸ್‌ಗೆ ತಕ್ಕಂತೆ ನಿಮ್ಮ ಹೇರ್‌ಸ್ಟೈಲ್‌ನ್ನೂ ಬದಲಾಯಿಸಿ. ಹಾಲ್ಟರ್‌ ನೆಕ್‌ವುಳ್ಳ ಡಿಸೈನ್‌ಗೆ ಮ್ಯಾಚ್‌ ಆಗುವಂತೆ ಸೈಡ್‌ ಪಫ್‌ ಬನ್‌ ಮಾಡಿ, ಅದನ್ನು ಎಲ್ಲರೂ ಮೆಚ್ಚುವಂತೆ ಹೇರ್‌ ಅಟ್ಯಾಚ್‌ಮೆಂಟ್‌ನಿಂದ ಸಿಂಗರಿಸಿ. ನಿಮ್ಮ ಈ ಹೊಸ ಗೆಟಪ್‌ ಎಲ್ಲರ ಮೆಚ್ಚುಗೆ ಗಳಿಸುತ್ತದೆ.

ಕ್ವಿಕ್ಮೇಕಪ್

ಪ್ರಸ್ತುತ ಎಲ್ಲರಿಗೂ ಕಾಲೇಜು, ಆಫೀಸುಗಳಿಗೆ ಹೋಗುವ ಗಡಿಬಿಡಿ ಇದ್ದೇ ಇರುತ್ತದೆ. ಹೀಗಿರುವಾಗ ದೈನಂದಿನ ಕೆಲಸ ಅಥವಾ ಪಾರ್ಟಿಗೆ ಹೋಗ ಬೇಕಾಗಿರಲಿ, ಅರ್ಜೆಂಟ್‌ ಫಟಾಫಟ್‌ ಮೇಕಪ್‌ ಎಲ್ಲರಿಗೂ ಅತ್ಯಗತ್ಯ. ಈಗ ಪಾರ್ಲರ್‌ಗಳಲ್ಲೂ ಯಾರೂ ಗಂಟೆಗಟ್ಟಲೆ ಕುಳಿತು ಮೇಕಪ್‌ ಮಾಡಿಸಿಕೊಳ್ಳುವುದಿಲ್ಲ. ಎಲ್ಲರಿಗೂ ಕ್ವಿಕ್‌ ಮೇಕಪ್‌ ಬೇಕೇಬೇಕು, ಅದಕ್ಕಾಗಿ ಕೆಳಗಿನ ಟಿಪ್ಸ್ ಅನುಸರಿಸಿ :

2 ನಿಮಿಷಗಳ ಫಟಾಫಟ್ಮೇಕಪ್

ಮುಖ ಮತ್ತು ಕುತ್ತಿಗೆಯವರೆಗೂ ಮೊದಲೇ ಕ್ಲೆನ್ಸಿಂಗ್‌ ಮಾಡಿ. ನಂತರ ಫೌಂಡೇಶನ್‌ ಅಥವಾ ಕ್ರೀಂ ಬೇಸ್ಡ್ ಪ್ರೈಮರ್‌ ಹಚ್ಚಿರಿ. ಇದಾದ ಮೇಲೆ ಕಾಂಪ್ಯಾಕ್ಟ್ ಅಥವಾ ಟ್ರಾನ್ಸ್ ಲೂಸೆಂಟ್‌ ಪೌಡರ್‌ ಹಚ್ಚಿರಿ. ಕಂಗಳನ್ನು ಹೈಲೈಟ್‌ ಮಾಡಲು ಪರ್ಪಲ್ ಶ್ಯಾಡೋನ ಐ ಶ್ಯಾಡೋ ಬಳಸಿ. ಕಂಗಳನ್ನು ಡಿಫೈನ್‌ ಮಾಡಲು ಬ್ಲ್ಯಾಕ್‌ ಐ ಲೈನರ್‌ ಹಚ್ಚಿರಿ. ನಂತರ ಮಸ್ಕರಾ ಹಚ್ಚಬೇಕು.

ಯಂಗ್ಲುಕ್ಪಡೆಯಲು

ಕೆನ್ನೆ ಮೇಲೆ ಪೀಚ್‌ ಯಾ ಪಿಂಕ್‌ ಬಣ್ಣದ ಬ್ಲಶ್‌ ಆನ್‌ ಹಚ್ಚಿರಿ. ಆಮೇಲೆ ಲಿಪ್‌ಗ್ಲಾಸ್‌ ಯಾ ಲಿಪ್‌ಸ್ಟಿಕ್‌ ಹಚ್ಚಬೇಕು.

5 ನಿಮಿಷಗಳ ಬೆಸ್ಟ್ ಮೇಕಪ್

ಮುಖ ಮತ್ತು ಕುತ್ತಿಗೆ ಕ್ಲೀನ್‌ ಮಾಡಿ. ನಂತರ ಕ್ರೀಂ ಬೇಸ್ಡ್ ಪ್ರೈಮರ್‌ ಹಚ್ಚಿರಿ. ನಂತರ ಡಾರ್ಕ್‌ ಸರ್ಕಲ್ ಅಥವಾ ಡಾರ್ಕ್‌ ಟೋನ್ ಅಡಗಿಸಲು, ಡರ್ಮಾದ ಡೀ5 ಹಚ್ಚಿರಿ. ಇದಾದ ಮೇಲೆ ಡೀ30 ಹಚ್ಚಬೇಕು. ಇದರಿಂದ ಪಿಂಪಲ್ ಪ್ಯಾಚೆಸ್‌ ಮರೆಯಾಗುತ್ತದೆ.  ಈಗ ಬ್ರಶ್‌ನಿಂದ ಮುಖನ್ನು ಬ್ಲೆಂಡ್‌ ಮಾಡಿ, ಆಗ ಪರ್ಫೆಕ್ಟ್ ಕರೇಜ್‌ ಸಿಗುತ್ತದೆ. ನಂತರ ಬ್ಲಶರ್‌ ಬಳಸಿ ಬ್ಲೆಂಡ್‌ ಮಾಡಿ. ಈಗ ಐ ಲೈನರ್‌ ಮತ್ತು ಔಟ್‌ಫಿಟ್‌ ಅನುಸಾರ ಐ ಶ್ಯಾಡೋ ಬಳಸಿ ಹಾಗೂ ಮಸ್ಕರಾದಿಂದ ಕಂಗಳಿಗೆ ಬ್ಯೂಟಿಫುಲ್ ಲುಕ್‌ ಕೊಡಿ.

ಕೊನೆಯಲ್ಲಿ ಲಿಪ್‌ ಬ್ರಶ್‌ನಿಂದ ತುಟಿಗಳಿಗೆ ಡ್ರೆಸ್‌ಗೆ ಹೊಂದುವ ಕಲರ್‌ ಹಚ್ಚಿರಿ.

ಈವ್ನಿಂಗ್ಪಾರ್ಟಿ

ತ್ವಚೆಗೆ ತಕ್ಕಂತೆ ಫೌಂಡೇಶನ್‌ಬಳಸಿರಿ. ಇದನ್ನು ಮುಖಕ್ಕೆ ಮಾತ್ರವಲ್ಲದೆ, ಕುತ್ತಿಗೆಗೂ ಹಚ್ಚಿಕೊಳ್ಳಿ. ಮುಖದಲ್ಲಿ ತುಸು ಉಬ್ಬಿದಂತೆ ಕಂಡು ಬರುವ ಕಡೆ ಅಥವಾ ನಿಮಗೆ ಬೇಕಾದ ಜಾಗದಲ್ಲಿ ಗಾಢ ಬಣ್ಣದ ಫೌಂಡೇಶನ್‌ ಹಚ್ಚಬೇಕು.

ಹಗಲಿನ ಪಾರ್ಟಿ

ಕ್ಲೆನ್ಸಿಂಗ್‌ ಮಿಲ್ಕ್ ಬಳಸಿ ಮುಖನ್ನು ಸ್ವಚ್ಛಗೊಳಿಸಿ. ನಂತರ ತ್ವಚೆಗೆ ತಕ್ಕಂತೆ ಟೋನರ್‌ ಹಚ್ಚಿರಿ. ಕೊನೆಯಲ್ಲಿ ಮಾಯಿಶ್ಚರೈಸರ್ ಹಚ್ಚಬೇಕು, ಆಗ ತ್ವಚೆಯ ಕೋಮಲತೆ ಉಳಿದುಕೊಳ್ಳುತ್ತದೆ.

ಗೀತಾಂಜಲಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ