ಟಾಲಿವುಡ್​ ನಟಿ ಸಮಂತಾ ರುತ್​ ಪ್ರಭು ಹಾಗೂ ನಿರ್ದೇಶಕ ರಾಜ್‌ ನಿಡಿಮೋರು ಡೇಟಿಂಗ್‌ ಮಾಡ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಲೇ ಇತ್ತು. ಕಳೆದ ಕೆಲವು ತಿಂಗಳುಗಳಿಂದಲೂ ಇವರಿಬ್ಬರು ಡೇಟಿಂಗ್‌ ಮಾಡ್ತಿದ್ದಾರೆ, ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಗುಲ್ಲೆದಿತ್ತು. ಇದಕ್ಕೆ ಕಾರಣ, ಸಮಂತಾ ಮತ್ತು ರಾಜ್‌ ನಿಡಿಮೋರು ಒಟ್ಟೊಟ್ಟಿಗೆ ಸುತ್ತಾಡುತ್ತಿದ್ದರು. ಅಲ್ಲದೇ ಇನ್ಸ್ಟಾಗ್ರಾಮ್‌ನಲ್ಲಿ ರಾಜ್‌ ಜೊತೆಗೆ ಸ್ಯಾಮ್‌ ಫೋಟೋಗಳನ್ನೂ ಸಹ ಹಂಚಿಕೊಳ್ಳುತ್ತಿದ್ದರು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್​ ಬಿದ್ದಿದೆ.ಇತ್ತೀಚೆಗೆ ಸಮಂತಾ, ರಾಜ್‌ ಅವರನ್ನ ತಬ್ಬಿಕೊಂಡು ಚಿತ್ರ ಪೋಸ್ಟ್‌ ಮಾಡಿದ್ದು, ಸಖತ್‌ ವೈರಲ್‌ ಆಗುತ್ತಿದ್ದಂತೆ, ಇವರಿಬ್ಬರ ಮದುವೆ ಸುದ್ದಿ ಕನ್ಫರ್ಮ್‌ ಎಂದೆಲ್ಲಾ ಹೇಳಲಾಗುತ್ತಿತ್ತು. ಅಂತೂ ಇಂತೂ ಇವರಿಬ್ಬರು ಇದೀಗ ಹಸೆಮಣೆ ಏರಿದ್ದಾರೆ.ʻದಿ ಫ್ಯಾಮಿಲಿ ಮ್ಯಾನ್‌ʼ : ಸಮಂತಾ ರುತ್‌ ಪ್ರಭು ಮತ್ತು ʻದಿ ಫ್ಯಾಮಿಲಿ ಮ್ಯಾನ್‌ʼ ನಿರ್ದೇಶಕ ರಾಜ್‌ ನಿಡಿಮೋರು ಡಿ.1ರಂದು ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ವಿವಾಹವಾಗಿದ್ದಾರೆ. ಈ ಕುರಿತ ಫೋಟೋಗಳನ್ನು ಸಮಂತಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿರುವ ಸಮಂತಾ ಹಾಗೂ ರಾಜ್‌ ನಿಡಿಮೋರ್‌ಗೆ ಹಲವು ತಾರೆಯರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಈ ಮಧ್ಯೆ ರಾಜ್‌ ಅವರ ಮಾಜಿ ಪತ್ನಿ ಶ್ಯಾಮಲಿ ದೇ ಹಂಚಿಕೊಂಡಿರುವ ಪೋಸ್ಟ್‌ ಕೂಡಾ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.ರಾಜ್‌ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ದೇ ಅವರು ಮೈಕೆಲ್‌ ಬ್ರೂಕ್ಸ್‌ ಅವರ, ʻDesperate People do desperate things’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ʻಹತಾಶ ಜನರು ಹತಾಶ ಕೆಲಸಗಳನ್ನ ಮಾಡುತ್ತಾರೆʼ ಎಂಬುದು ಇದರ ಅರ್ಥ. ಅಂದಹಾಗೆ, ಶ್ಯಾಮಿಲಿ ದೇ ಅವರು ನಿನ್ನೆ ನ.30ರಂದು ಈ ಪೋಸ್ಟ್​ ಹಂಚಿಕೊಂಡಿದ್ದಾರೆ.

2015ರಲ್ಲಿ ಶ್ಯಾಮಲಿ ದೇ ಅವರೊಂದಿಗೆ ವಿವಾಹವಾಗಿದ್ದ ರಾಜ್ ನಿಡಿಮೋರು 2022ರಲ್ಲಿ ಡಿವೋರ್ಸ್‌ ಪಡೆದಿದ್ದರು ಎಂದು ಹೇಳಲಾಗುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ