ಲೆಜೆಂಡ್ಸ್ ಪ್ರೋ T20 ಲೀಗ್ ತನ್ನ ಮುಂದಿನ ಆಟಗಾರರ ಪಟ್ಟಿ ಪ್ರಕಟಿಸಿದೆ. ಈ ಬಾರಿ ಲೀಗ್‌ಗೆ ದಿನೇಶ್ ಕಾರ್ತಿಕ್, ಶಾನ್ ಮಾರ್ಶ್, ಅಮಿತ್ ಮಿಶ್ರಾ, ವಿನಯ್ ಕುಮಾರ್, ಇಂಗ್ಲೆಂಡ್‌ನ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ಗೋವಾದಲ್ಲಿ ನಡೆಯುವ ಈ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ.

2024ರಲ್ಲಿ ತಮ್ಮ T20 ವೃತ್ತಿಜೀವನವನ್ನು ಮುಗಿಸಿದ ಭಾರತದ ಪ್ರಸಿದ್ಧ ಫಿನಿಷರ್‌ ದಿನೇಶ್ ಕಾರ್ತಿಕ್ ಅವರು ಮತ್ತೆ ಮೈದಾನಕ್ಕೆ ಮರಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್,  “ಭಾರತವನ್ನು ಪ್ರತಿನಿಧಿಸಿರುವ ವರ್ಷಗಳು ನನಗೆ ಅನೇಕ ಸ್ಮರಣೀಯ ಕ್ಷಣಗಳನ್ನು ಕೊಟ್ಟಿವೆ. ಮತ್ತೆ ಆಡುವ ಅವಕಾಶ ಸಿಕ್ಕಿರುವುದು  ವಿಶೇಷ. ಲೆಜೆಂಡ್ಸ್ ಪ್ರೋ T20 ಲೀಗ್ ನಮ್ಮಂತಹವರನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತಿದೆ. ಗೋವಾದಂತಹ ಅದ್ಭುತ ಸ್ಥಳದಲ್ಲಿ ಮತ್ತೆ ಅಭಿಮಾನಿಗಳ ಎದುರು ಆಡಲು ಉತ್ಸುಕರಾಗಿದ್ದೇನೆ” ಎಂದಿದ್ದಾರೆ.

ಭಾರತದ ಪ್ರೀಮಿಯರ್ T20 ಲೀಗ್‌ನ ಮೊದಲ ‘ಆರೇಂಜ್ ಕ್ಯಾಪ್’ ವಿಜೇತ ಶಾನ್ ಮಾರ್ಶ್ ಹಲವು ವರ್ಷಗಳ ಬಳಿಕ ಭಾರತಕ್ಕೆ ಮರಳಲಿದ್ದಾರೆ. “ಲೆಜೆಂಡ್ಸ್ ಪ್ರೋ T20 ಲೀಗ್ ಮತ್ತೆ ಇಲ್ಲಿ ಆಡಲು ಅವಕಾಶ ನೀಡಿರುವುದು ವಿಶೇಷ' ಎಂದಿದ್ದಾರೆ ಮಾರ್ಶ್ .

ಭಾರತದ ಅತ್ಯುತ್ತಮ ಲೆಗ್-ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಅಮಿತ್ ಮಿಶ್ರಾ, ಭಾರತದ ಪ್ರಮುಖ T20 ಟೂರ್ನಿಯಲ್ಲಿ ಮೂರು ವಿಭಿನ್ನ ತಂಡಗಳ ಪರವಾಗಿ ಮೂರು ಹ್ಯಾಟ್-ಟ್ರಿಕ್‌ಗಳನ್ನು ಪಡೆದ ಏಕೈಕ ಬೌಲರ್. “25 ವರ್ಷಗಳ ವೃತ್ತಿಜೀವನದ ನಂತರ ಇದು ನನ್ನ ಕ್ರಿಕೆಟ್‌ನ ಎರಡನೇ ಇನ್ನಿಂಗ್ಸ್. ದಿಗ್ಗಜರ ಜೊತೆ ಮತ್ತೆ ಸ್ಪರ್ಧಿಸುವ ಅವಕಾಶ ದೊರೆತಿರುವುದು ಅತ್ಯಂತ ಸಂತಸದ ವಿಷಯ" ಎಂದಿದ್ದಾರೆ ಮಿಶ್ರಾ.

ವಿನಯ್ ಕುಮಾರ್ ಕೂಡ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದು“ಲೆಜೆಂಡ್ಸ್ ಪ್ರೋ T20 ಲೀಗ್‌ನ ಭಾಗವಾಗಿರುವುದು ನನಗೆ ಸಂತೋಷ ತಂದಿದೆ” ಎಂದಿದ್ದಾರೆ.

ಎಡಗೈ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಮಾಂಟಿ ಪನೇಸರ್ ಕೂಡ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದು, “ಭಾರತದಲ್ಲಿ ಆಡುವುದು ಯಾವಾಗಲೂ ಅದ್ಭುತ ಅನುಭವ. ಲೆಜೆಂಡ್ಸ್ ಪ್ರೋ T20 ಲೀಗ್‌ನಲ್ಲಿ ಮತ್ತೆ ಮೈದಾನಕ್ಕಿಳಿಯುವ ಕಾತರತೆ ಇದೆ” ಎಂದಿದ್ದಾರೆ.

ಲೆಜೆಂಡ್ಸ್ ಪ್ರೋ T20 ಲೀಗ್‌ನ ಮೊದಲ ಆವೃತ್ತಿ 2026ರ ಜನವರಿ 26ರಿಂದ ಫೆಬ್ರವರಿ 4ರವರೆಗೆ ಗೋವಾದ ಹೊಸ 1919 ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ