ಇಂದಿಗೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಹುಡುಗಿಯ ಬ್ರಾ ಸ್ಟ್ರಾಪ್ ಸರಿದು ಕಾಣಿಸಿಕೊಂಡರೆ, ಜನ ಅಸಹಜವಾಗಿ ವರ್ತಿಸುತ್ತಾರೆ, ಇದು ವ್ಯಂಗ್ಯದ ವಿಷಯವಾಗುತ್ತದೆ. ಗಂಡಸು ತನ್ನ ಬನಿಯನ್ ಒಣಗಿಸಲು ಸಂಕೋಚಿಸದೆ ಇರುವಾಗ, ಬ್ರಾ ಬಗ್ಗೆ ಇಂಥ ವ್ಯಂಗ್ಯದ ವಾಗ್ಬಾಣಗಳೇಕೆ......?
ಸಡಿಲ, ಜೋತಾಡುವ ಬ್ರೆಸ್ಟ್ ಕೆಟ್ಟದಾಗಿ ಕಾಣುತ್ತದೆ. ವಯಸ್ಸಾದ ಹಾಗೆ ಸ್ತನಗಳ ಇಂಥ ಜೋತಾಟ ಮಾಮೂಲಿ. ಇದಕ್ಕೆ ಕಾರಣ ಬ್ರಾ ಧರಿಸದೆ ಇರುವುದಾಗಿದೆ. ಸಡಿಲ, ಜೋತಾಡುವ ಸ್ತನಗಳು ಖಂಡಿತಾ ಅಟ್ರಾಕ್ಟಿವ್ ಎನಿಸುವುದಿಲ್ಲ. ಹಾಗೇಂತ ಇಡೀ ದಿನ, ಬ್ರಾ ಧರಿಸಿಕೊಂಡೇ ಇರುವುದು ಸಹ ಕಷ್ಟದ ಕೆಲಸವಾಗುತ್ತದೆ.
24ರ ರಚಿತಾ ಈ ಬಗ್ಗೆ ಹೇಳುತ್ತಾಳೆ, ``ನನಗೆ ಆರಂಭದಲ್ಲಿ ಬ್ರಾ ಧರಿಸುವುದು ಅಂದ್ರೆ ಇಷ್ಟ ಆಗುತ್ತಿರಲಿಲ್ಲ. ಆದರೆ ಕ್ರಮೇಣ ಇದು ಅಭ್ಯಾಸ ಆಗತೊಡಗಿತು. ಟೀನೇಜ್ ನಲ್ಲಿ ನಾನು ಕಡ್ಡಾಯ ಬ್ರಾ ಧರಿಸಬೇಕು ಎಂದು ಅಮ್ಮ ಹೇಳುತ್ತಿದ್ದಾಗ, ಬಹಳ ಕೋಪ ಬರ್ತಿತ್ತು. ಇನ್ನೊಂದು ಹೊರೆ ಪಟ್ಟಿ ಬಿಗಿದುಕೊಳ್ಳುವುದು ಯಾರಿಗೆ ತಾನೇ ಸುಲಭ ಎನಿಸುತ್ತದೆ? ಆದರೆ ನಾನೀಗ ದೊಡ್ಡವಳಾಗಿದ್ದೇನೆ, ಸ್ತನದ ಗಾತ್ರ ಬೆಳೆಯುತ್ತಿದೆ, ಹೀಗಾಗಿ ಬ್ರಾ ಅನಿವಾರ್ಯ ಎನ್ನುತ್ತಿದ್ದರು. ನನ್ನ ಎದೆಯ ಭಾಗ ಪರ್ಫೆಕ್ಟ್ ಆಗಿ ಕಂಡುಬರಲು ಬ್ರಾ ಧರಿಸಲೇಬೇಕು ಎಂದು ಅಕ್ಕಾ ಸಹ ಹೇಳಿದಳು. ``ಆದರೆ ಬ್ರಾ ಧರಿಸುವುದು ಅಂದ್ರೆ ಹಿಂಸೆಯೇ ಸರಿ. ಇಡೀ ದಿನ ಇದನ್ನು ಧರಿಸಿಕೊಂಡಿರುವುದು ಹಿಂಸೆಯೇ ಸರಿ. ಬ್ರಾ ಧರಿಸಿದ ನಂತರ ಯಾರೋ ನನ್ನ ದೇಹವನ್ನು ಬಿಗಿಯಾಗಿ ಕಟ್ಟಿಹಾಕಿದಂತೆ ಹಿಂಸೆ ಆಗುತ್ತಿತ್ತು. ನಂತರ ಕ್ರಮೇಣ ಇದು ಅಭ್ಯಾಸವಾಗಿ ಹೋಯಿತು. ಈಗ ಬ್ರಾ ಧರಿಸದೆ ಇದ್ದರೆ ಹಿತಕರ ಅನಿಸೋದಿಲ್ಲ.''

ನಮ್ಮ ಚಾಯ್ಸ್ ನಮಗಿರಬೇಕು
ಕಂಫರ್ಟ್ ವಿಷಯ ಬಂದಾಗ ರಚನಾ ಹೇಳುವುದೆಂದರೆ, ``ಆರಂಭದಲ್ಲಿ ಇದು ಬಿಲ್ ಕುಲ್ ಕಂಫರ್ಟೆಬಲ್ ಅನಿಸುತ್ತಿರಲಿಲ್ಲ. ಉಸಿರಾಡಲಿಕ್ಕೆ ತೊಂದರೆ ಆಗುತ್ತಿತ್ತು. ಭುಜದ ಬಳಿ ಸ್ಟ್ರಾಪ್ ನ ಗುರುತು ಉಳಿದುಬಿಡುತ್ತಿತ್ತು. ಬೇಸಿಗೆಯಲ್ಲಂತೂ ಈ ಹಿಂಸೆ ಇನ್ನೂ ಹೆಚ್ಚುತ್ತಿತ್ತು. ಸ್ತನಗಳ ಮಧ್ಯೆ ಬೆವರು, ನವೆ, ತುರಿಕೆ, ಕಡಿತ ಇತ್ಯಾದಿ.
``ಇಷ್ಟು ಮಾತ್ರವಲ್ಲ, ಬ್ರಾ ಧರಿಸುವುದರಿಂದ ರಾಶೆಸ್ ಸಹ ಹೆಚ್ಚುತ್ತಿತ್ತು. ಇಷ್ಟೆಲ್ಲ ಕಷ್ಟಪಟ್ಟು ಬ್ರಾ ಧರಿಸುವುದರಿಂದ ಮಾತ್ರ ಬ್ರೆಸ್ಟ್ ಸರಿಯಾದ ಪೊಝಿಶನ್ ನಲ್ಲಿ ಇರುತ್ತದೆ. ಆಗ ಅದು ಕಸುವಿನಿಂದ ಕೂಡಿರುತ್ತದೆ, ಜೋತಾಡುವುದಿಲ್ಲ. ಇಷ್ಟು ಮಾತ್ರವಲ್ಲ, ಬೇರೆ ಬೇರೆ ಚಟುವಟಿಕೆಗಳಲ್ಲಿ ಮುಳುಗಿರುವಾಗ, ಅದು ತುಳುಕುವುದಿಲ್ಲ. ಆ ಕಾರಣದಿಂದ ಅದು ಕೆಟ್ಟದಾಗಿ ಕಾಣುವುದಿಲ್ಲ. ಹಾಗಾಗಿ ಬ್ರಾ ಧರಿಸುವುದರಿಂದ ತಂತಾನೇ ಆತ್ಮವಿಶ್ವಾಸ ಉಕ್ಕಿ ಬರುತ್ತದೆ. ಇಡೀ ದಿನ ಧರಿಸುವುದು ಹಿಂಸೆ, ಹೀಗಾಗಿ ರಾತ್ರಿ ಹೊತ್ತು ಇದನ್ನು ಕಳಚಿಟ್ಟು ಮಲಗುವೆ.''
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿರುವ ಪ್ರೀತಿ ಕುಮಾರ್ ಹೇಳುತ್ತಾಳೆ, ``ಇಡೀ ದಿನ ಬ್ರಾ ಧರಿಸಿರುವುದು ಅಂದ್ರೆ ನಿಜಕ್ಕೂ ಅನ್ ಕಂಫರ್ಟೆಬಲ್ ಅನಿಸುತ್ತದೆ. ಮೊದಲ ಸಲ ನಾನು ಬ್ರಾ ಧರಿಸಿದಾಗ, ಯಾರೋ ನನ್ನ ಎದೆ ಹಿಡಿದು ಅಮುಕುತ್ತಿರುವಂತೆ, ನನ್ನ ಉಸಿರು ಸಿಕ್ಕಿ ಹಾಕಿಕೊಂಡಿತು. ಇನ್ನು ಮುಂದೆ ಉಸಿರಾಡುವುದೇ ಕಷ್ಟಕರ ಎನಿಸಿತು. ಅದನ್ನು ಆಗಲೇ ಕಳಚಿ ಬಿಸಾಡೋಣ ಎನಿಸಿತು. ಹೀಗೇ ಕೆಲವು ದಿನ ಧರಿಸಿ ಅಭ್ಯಾಸವಾದಾಗ ನನಗೆ ಕ್ರಮೇಣ ಸೆಟ್ ಆಯಿತು.





