ಫೇಸ್‌ ಮಾಸ್ಕ್ ತ್ವಚೆಯ ರಕ್ಷಣೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಇದು ತ್ವಚೆಯನ್ನು ಸ್ವಚ್ಛಗೊಳಿಸುವ ಜೊತೆಗೆ ಮೃತ ಕೋಶಗಳನ್ನೂ ಹೊರಗೆ ತೆಗೆಯುತ್ತದೆ. ಅದರಿಂದ ತ್ವಚೆ ಸ್ವಚ್ಛವಾಗಿ, ಕೋಮಲವಾಗಿ ಮತ್ತು ತಾರುಣ್ಯದಂತೆ ಕಂಡುಬರುತ್ತದೆ. ರಕ್ತ ಸಂಚಾರ ಹೆಚ್ಚಾಗುತ್ತದೆ.

ಮಾಸ್ಕ್ ಅನೇಕ ರೀತಿಯಲ್ಲಿರುತ್ತದೆ. ಅವನ್ನು ತ್ವಚೆಯ ಬಗೆ ಹಾಗೂ ಹವಾಮಾನದ ಆಧಾರದಲ್ಲಿ ಹಾಕುತ್ತಾರೆ. ಈಗ ಹಣ್ಣುಗಳು ಮತ್ತು ತರಕಾರಿಗಳ `ಮಾಸ್ಕ್' ಹೆಚ್ಚು ಪ್ರಚಲಿತದಲ್ಲಿದೆ. ಅವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ವಿಟಮಿನ್‌ಗಳು ಹಾಗೂ ಮಿನರಲ್ ಗಳಿಂದ ತುಂಬಿರುವುದರಿಂದ ಇವು ತ್ವಚೆಯ ಪೋಷಣೆಯನ್ನೂ ಮಾಡುತ್ತವೆ. ಆದರೆ ಅನೇಕ ಬಾರಿ ತ್ವಚೆ ಸಂವೇದನಾಶೀಲವಾಗಿರುತ್ತದೆ. ಆದ್ದರಿಂದ ಯಾವುದೇ ರೀತಿಯ ಮಾಸ್ಕ್ ಹಾಕಲಾಗುವುದಿಲ್ಲ. ಹೀಗಿರುವಾಗ ಯಾರಾದರೂ ತಜ್ಞರಿಂದ ಅಭಿಪ್ರಾಯ ಪಡೆಯಿರಿ ಮತ್ತು ನಿಮಗೆ ತೊಂದರೆಯಾಗದಂತೆ ಯಾವ ಫೇಸ್‌ ಮಾಸ್ಕ್ ಸೂಟ್‌ ಆಗುತ್ತದೆಂದು ತಿಳಿದುಕೊಳ್ಳಿ.

ಇದರ ಬಗ್ಗೆ ಕಾಸ್ಮೆಟಿಕ್‌ ಸರ್ಜನ್‌ ಮತ್ತು ಸ್ಕಿನ್‌ ಎಕ್ಸ್ ಪರ್ಟ್‌ ಡಾ. ಪ್ರೇಮಾ ಹೀಗೆ ಹೇಳುತ್ತಾರೆ, ಫೇಸ್‌ ಮಾಲ್ಕ್ ಹಾಕುವುದು ಮುಖಕ್ಕೆ ಯಾವಾಗಲೂ ಒಳ್ಳೆಯದು. ಆದರೆ ನಿಮಗೆ ಸೂಟ್‌ ಆಗುವ ಫೇಸ್‌ ಮಾಸ್ಕ್ ನ್ನೇ ಹಚ್ಚಿ. ಇಲ್ಲದಿದ್ದರೆ ಮುಖದ ಮೇಲೆ ಗುಳ್ಳೆಗಳು, ಕುರುಗಳು ಮತ್ತು ದದ್ದುಗಳು ಆಗುವ ಅಪಾಯವಿರುತ್ತದೆ.

ವಿಶೇಷ ಮಾಸ್ಕ್ ಗಳು ಕೆಳಗಿನಂತಿವೆ :

ವೈಟ್ನಿಂಗ್ಮಾಸ್ಕ್ : ಇದು ಇನ್‌ಸ್ಟೆಂಟ್‌ ಗ್ಲೋ ಕೊಡುತ್ತದೆ. ಆದರೆ ಇದನ್ನು ಹಬ್ಬಗಳಲ್ಲಿ, ಮದುವೆ, ಪಾರ್ಟಿ ಇತ್ಯಾದಿ ವಿಶೇಷ ಸಂದರ್ಭಗಳಿಗೆ ಹೋಗುವ ಮೊದಲು ಉಪಯೋಗಿಸುವುದು ಒಳ್ಳೆಯದು. ಎಲ್ಲಾದರೂ ಹೋಗುವ 2 ಗಂಟೆಗಳ ಮೊದಲು ಯಾವುದಾದರೂ ಬ್ಯೂಟಿ ಪಾರ್ಲರ್‌ ಅಥವಾ ಸ್ಕಿನ್‌ ಕೇರ್‌ ಸೆಂಟರ್‌ನಿಂದ ಹಾಕಿಸಿಕೊಳ್ಳುವುದು ಒಳ್ಳೆಯದು.

ಮಾಯಿಶ್ಚರೈಸಿಂಗ್ಮಾಸ್ಕ್ : ಇದನ್ನು 40 ವಯಸ್ಸಿನ ನಂತರ ಹದಿನೈದು ದಿನಗಳಿಗೊಮ್ಮೆ ಮಾಡಿಸಿಕೊಂಡರೆ ತ್ವಚೆ ಶುಷ್ಕವಾಗುವುದಿಲ್ಲ ಹಾಗೂ ಮುಖದಲ್ಲಿ ಗ್ಲೋ ಇರುತ್ತದೆ.

ರಿಜುವಿನೇಷನ್ಮಾಸ್ಕ್ : ಇದು ಮುಟ್ಟಂತ್ಯ (ಮೆನೋಪಾಸ್‌)ದ ನಂತರ ಬಹಳ ಉಪಯೋಗವಾಗುತ್ತದೆ. ಇದರಿಂದ ತ್ವಚೆ ಸ್ವಚ್ಛವಾಗುವ ಜೊತೆ ಜೊತೆಗೆ ಪಿಗ್ಮೆಂಟೇಶನ್‌, ನೆರಿಗೆಗಳೂ ಕಡಿಮೆಯಾಗುತ್ತವೆ.

ಆ್ಯಕ್ನೆ ಮಾಸ್ಕ್ : ಮುಖದಲ್ಲಿ ಆ್ಯಕ್ನೆ ಅಥವಾ ಮೊಡವೆಗಳು ಇರುವವರಿಗೆ ಇದು ಬಹಳ ಲಾಭವಾಗುತ್ತದೆ. ಸಮುದ್ರದ ಸಾರದಿಂದ ತಯಾರಾಗುವ ಈ ಮಾಸ್ಕ್ ತ್ವಚೆಯ ತೈಲದ ಸ್ರಾವವನ್ನು ಕಡಿಮೆ ಮಾಡುತ್ತದೆ. 6 ಬಾರಿ ಫೇಸ್‌ ಮಾಸ್ಕ್ ಉಪಯೋಗಿಸಿದ ನಂತರ ಆ್ಯಕ್ನೆ ಮಾಯವಾಗುತ್ತದೆ.

ಅಂಡರ್ ಮಾಸ್ಕ್ : ಇದನ್ನು ಹೆಚ್ಚಾಗಿ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು ಹಾಕಲಾಗುತ್ತದೆ. ಅದರಿಂದ ಕಣ್ಣುಗಳ ಸುತ್ತಲಿನ ನೆರಿಗೆಗಳು ಹಾಗೂ ಗೆರೆಗಳು ಕಡಿಮೆಯಾಗುತ್ತವೆ.

ಕೊಲ್ಯಾಜನ್ಮಾಸ್ಕ್ : ಇದನ್ನು 40 ವಯಸ್ಸಿನ ನಂತರ ಹಾಕಬೇಕು. ಏಕೆಂದರೆ ಈ ವಯಸ್ಸಿಗೆ ಬರುವಷ್ಟರಲ್ಲಿ ಶರೀರದ ಕೊಲ್ಯಾಜನ್‌ ಉತ್ಪಾದನೆ ಶೇ.15ರಷ್ಟು ಕಡಿಮೆಯಾಗುತ್ತದೆ. ಅದರಿಂದ ತ್ವಚೆ ಬೇಗ ಮುದುರುತ್ತದೆ. ಈ ಮಾಸ್ಕ್ ಮುಖದ ತ್ವಚೆಯ ಆಳದವರೆಗೆ ಹೋಗಿ ಕಳೆದುಹೋದ ನಿಮ್ಮ ಕಾಂತಿ ವಾಪಸ್‌ ತರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ