ಒಬ್ಬ ಮಹಿಳೆಯ ಸೌಂದರ್ಯದಲ್ಲಿ ಅವಳ ಕೂದಲಿಗೆ ತನ್ನದೇ ಆದ ಮಹತ್ವವಿರುತ್ತದೆ. ಕೂದಲು ದಟ್ಟವಾಗಿ ಸುಂದರವಾಗಿದ್ದರೆ ಸೌಂದರ್ಯ ಹೆಚ್ಚಾಗುತ್ತದೆ. ತೆಳುವಾಗಿದ್ದರೆ ಅಷ್ಟು ಚೆನ್ನಾಗಿರುವುದಿಲ್ಲ. ಆದರೆ ಈಗ ಹೆದರುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಕೂದಲು ತೆಳುವಾಗಿದ್ದರೆ ಅದರ ಕೊರತೆ ನೀಗಿಸಲು ಒಂದು ಸರಳ ಹಾಗೂ ಒಳ್ಳೆಯ ಉಪಾಯ ಹೇರ್ ಎಕ್ಸ್ ಟೆನ್ಶನ್ ಲಭ್ಯವಿದೆ. ಅದರ ಮೂಲಕ ಕೂದಲನ್ನು ದಟ್ಟವಾಗಿ ತೋರಿಸುವ ಜೊತೆ ಜೊತೆಗೆ ಅವನ್ನು ಕಲರ್ಡ್ ಹೇರ್ ಎಕ್ಸ್ ಟೆನ್ಶನ್ ಮಾಡಿಸಿ ಸ್ಟೈಲಿಶ್ ಹಾಗೂ ಫ್ಯಾಷನೆಬಲ್ ಆಗಿಯೂ ಕಾಣಬಹುದು.
ವಿಎಲ್ಸಿಸಿ ಇನ್‌ಸ್ಟಿಟ್ಯೂಟ್‌ನ ಹೇರ್ ಎಕ್ಸ್ ಪರ್ಟ್ ರಾಜು ಹೇರ್ ಎಕ್ಸ್ ಟೆನ್ಶನ್ ಯಾವ ರೀತಿ ಮಾಡಿ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಬಹುದೆಂದು ತಿಳಿಸಿಕೊಟ್ಟರು. ತೆಳುವಾದ ಕೂದಲನ್ನು ದಟ್ಟವಾಗಿರಿಸಲು ಮತ್ತು ಕೆಲವು ಕೂದಲನ್ನು ಕಲರ್ಡ್ ಆಗಿ ಕಾಣಿಸಲು ನೀವು ಹೇರ್ ಎಕ್ಸ್ ಟೆನ್ಶನ್ ಮೂಲಕ ಆರ್ಟಿಫಿಶಿಯಲ್ ಹೇರ್‌ನ್ನು ನಿಮ್ಮ ಕೂದಲಿಗೆ ಅಳವಡಿಸಿಕೊಳ್ಳಬಹುದು.
ಇದರಲ್ಲಿ ಅಸಲಿ ಕೂದಲು ಮತ್ತು ನಕಲಿ ಸಿಂಥೆಟಿಕ್ ಹೇರ್ ಎರಡು ರೀತಿಯದ್ದು ಸಿಗುತ್ತದೆ. ನೀವು ನಿಮ್ಮ ಕೂದಲಿನ ಬಣ್ಣಕ್ಕೆ ತಕ್ಕಂತೆ ಆರಿಸಿಕೊಳ್ಳಬಹುದು.
ಏನಿದು ಹೇರ್ ಎಕ್ಸ್ ಟೆನ್ಶನ್?
ಹೇರ್ ಎಕ್ಸ್ ಟೆನ್ಶನ್ ಮಾರ್ಕೆಟ್‌ನಲ್ಲಿ ತೆಳುವಾದ ಸೆಕ್ಷನ್‌ಗಳಲ್ಲಿ ತಯಾರಾಗಿರುತ್ತದೆ. ಅವುಗಳ ತುದಿಯಲ್ಲಿ ಅಂಟು ಇರುತ್ತದೆ. ಇದರೊಂದಿಗೆ ಒಂದು ಎಲೆಕ್ಟ್ರಿಕ್ ಹೇರ್ ಅಟ್ಯಾಚ್‌ಮೆಂಟ್ ಕೂಡ ಸಿಗುತ್ತದೆ. ಅದರೊಂದಿಗೆ ಆರ್ಟಿಫಿಶಿಯಲ್ ಕೂದಲನ್ನು ಒರಿಜಿನಲ್ ಹೇರ್ಸ್ ನಲ್ಲಿ ಫಿಕ್ಸ್ ಮಾಡಿರುತ್ತಾರೆ. ಈ ಮೆಷಿನ್‌ನ್ನು ಟೆಂಪರೇಚರ್‌ಗೆ ಅನುಗುಣವಾಗಿ ಸೆಟ್ ಮಾಡಿರುತ್ತಾರೆ. ಇದರ ಟೆಂಪರೇಚರ್ 220 ರಿಂದ 250 ಇರುತ್ತದೆ. ಇದನ್ನು ಕೊಂಚ ಪ್ರೆಸ್ ಮಾಡಬೇಕಾಗುತ್ತದೆ. ಹೇರ್ ಎಕ್ಸ್ ಟೆನ್ಶನ್‌ನಲ್ಲಿರುವ ಹೇರ್ ಗ್ಲೂನ್ನು ಇದು ಮೆಲ್ಟ್ ಮಾಡುತ್ತದೆ. ಅದರಿಂದ ಇವು ಸುಲಭವಾಗಿ ಒರಿಜಿನಲ್ ಕೂದಲಿನೊಂದಿಗೆ ಅಂಟಿಕೊಳ್ಳುತ್ತವೆ.
ಹೇರ್ ಎಕ್ಸ್ ಟೆನ್ಶನ್ ಹೇಗೆ ಮಾಡುವುದು?
ಮೊದಲಿಗೆ ಕೂದಲನ್ನು ಶ್ಯಾಂಪೂನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. ಕಂಡೀಶನರ್ ಹಚ್ಚಬೇಡಿ. ನಂತರ ಕೂದಲಿಗೆ ಬ್ಲೋ ಡ್ರೈಯರ್ ಮಾಡಿ. ನಂತರ ಟಾಪ್‌ನ ಕೂದಲನ್ನು ತೆಗೆದುಕೊಂಡು ಸ್ಕ್ವೇರ್ ಶೇಪ್ ಮಾಡಿ ಹಾಗೂ ಪಿನ್‌ನಿಂದ ಮೇಲುಗಡೆಯೇ ಸೆಟ್ ಮಾಡಿ. ಹಿಂದಿನ ಕೂದಲನ್ನು ಹಲವು ಭಾಗಗಳಲ್ಲಿ ವಿಂಗಡಿಸಿ ತೆಳುವಾದ ಸೆಕ್ಷನ್ ಮಾಡಿಕೊಳ್ಳಿ.
1-1 ಇಂಚು ದೂರದಲ್ಲಿ ಹೇರ್ ಎಕ್ಸ್ ಟೆನ್ಶನ್ ಮಾಡಿ. ಕ್ರೌನ್ ಏರಿಯಾದ ಕೆಳಗಿನಿಂದ ಹಾಕಿ. ಕಡಿಮೆ ಗ್ಯಾಪ್ ಇದ್ದಷ್ಟೂ ಒಳ್ಳೆಯದು. ಬುಡದ ಹಿಂದಿನ 8-10 ಕೂದಲನ್ನು ತೆಗೆದುಕೊಂಡು ಅವುಗಳಲ್ಲಿ ಹೇರ್ ಎಕ್ಸ್ ಟೆನ್ಶನ್‌ನ 1-1 ಗಂಟನ್ನು ತೆಗೆದುಕೊಂಡು ಒರಿಜಿನಲ್ ಕೂದಲಿನ ಕೆಳಗೆ ಹಚ್ಚಿ ಮತ್ತು ಎಲೆಕ್ಟ್ರಿಕ್ ಹೇರ್ ಅಟ್ಯಾಚ್‌ಮೆಂಟ್ ಮೆಶಿನ್‌ನಿಂದ ಪ್ರೆಸ್ ಮಾಡಿ. ಪ್ರೆಸ್ ಮಾಡುತ್ತಲೇ ಹೇರ್ ಎಕ್ಸ್ ಟೆನ್ಶನ್‌ನಲ್ಲಿರುವ ಗ್ಲೂ ಮೆಲ್ಟ್ ಆಗುತ್ತದೆ ಮತ್ತು ಒರಿಜಿನಲ್ ಕೂದಲಿನಲ್ಲಿ ಫಿಕ್ಸ್ ಆಗಿಬಿಡುತ್ತದೆ.
ಹೀಗೆಯೇ ಹಿಂದೆ ಉಳಿದ ಸೆಕ್ಷನ್‌ನ್ನು ಮಾಡಿ. ಒಂದು ಲೈನ್‌ನಲ್ಲಿ ಕನಿಷ್ಠ 15 ಸ್ಟ್ಯಾಂಡ್ ಮಾಡಿ ಮತ್ತು ಸುಮಾರು 50 ಎಕ್ಸ್ ಟೆನ್ಶನ್‌ಗಳ ಜುಟ್ಟು ಹಾಕಿ. ಕ್ರೌನ್ ಏರಿಯಾದ ಕೂದಲಿಗೆ ಎಕ್ಸ್ ಟೆನ್ಶನ್ ಮಾಡಬಾರದು. ಹಿಂದಿನ ಕೂದಲಿಗೆ ಮಾತ್ರ ಹೇರ್ ಎಕ್ಸ್ ಟೆನ್ಶನ್ ಮಾಡಿ ಮತ್ತು ದಪ್ಪನೆಯ ಹಲ್ಲುಗಳಿರು ಬಾಚಣಿಗೆಯಿಂದ ಚೆನ್ನಾಗಿ ಬಾಚಿ. ಎಲ್ಲಾ ಹೇರ್ ಎಕ್ಸ್ ಟೆನ್ಶನ್ ಆದ ನಂತರ ಕೊನೆಯಲ್ಲಿ ಒರಿಜಿನಲ್ ಮತ್ತು ಆರ್ಟಿಫಿಶಿಯಲ್ ಹೇರ್‌ಗಳಲ್ಲಿ ವ್ಯತ್ಯಾಸ ಬಂದರೆ ಅದನ್ನು ಸಮನವಾಗಿರುವಂತೆ ಕತ್ತರಿಸಿ.