ಹಬ್ಬಗಳ ಸಂದರ್ಭ ಎಂದರೆ ಬಂಧು ಬಳಗ, ಆಪ್ತೇಷ್ಟರು ಮುಂತಾದವರ ಜೊತೆ ಒಡನಾಟ, ಹೀಗಾಗಿ ಅಂದದ ಅಲಂಕಾರ ಅತ್ಯಗತ್ಯ. ಈ ಸಂದರ್ಭದಲ್ಲಿ ಚಂದದ ಶೃಂಗಾರ ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಶೋಭೆ ನೀಡುವುದು ಮಾತ್ರವಲ್ಲದೆ, ಹಬ್ಬದ ಉತ್ಸಾಹ, ಸಡಗರ ಸಂಭ್ರಮ ಹೆಚ್ಚಿಸುವಲ್ಲಿಯೂ ಪೂರಕ. ಈ ಸಡಗರ ಸಂಭ್ರಮ ನಿಮ್ಮ ಮುಖದಲ್ಲಿಯೂ ಮಿಂಚಲಿದ್ದು, ಎಲ್ಲೆಲ್ಲೂ ನವೋಲ್ಲಾಸ ತರಿಸುತ್ತದೆ.
ವಿಶೇಷವಾಗಿ ಹಬ್ಬದ ಸಂದರ್ಭಗಳಿಗೆ ಯಾವ ರೀತಿಯ ಮೇಕಪ್ ಸೂಕ್ತ ಎಂಬದನ್ನು ಆಧುನಿಕ ಸೌಂದರ್ಯ ತಜ್ಞೆಯರು ಇಲ್ಲಿ ಸಲಹೆ ನೀಡಿದ್ದಾರೆ, ವಿವರವಾಗಿ ಪರಿಶೀಲಿಸೋಣವೇ?
ಫೇಸ್ ಮೇಕಪ್
ಮುಖದ ಮೇಕಪ್‌ಗಾಗಿ ಮೊದಲು ಅದಕ್ಕೆ ಬೇಸ್ ಒದಗಿಸಬೇಕು. ಬೇಸ್‌ಗಾಗಿ ಮುಖಕ್ಕೆ ಫೌಂಡೇಶನ್ ಹಚ್ಚಬೇಕು ಫೌಂಡೇಶನ್ನಿನ ಟೋನ್ ಮುಖದ ಚರ್ಮದ ಬಣ್ಣಕ್ಕಿಂತ 1 ಟೋನ್ ತೆಳು ಇರಬೇಕು. ಆಯ್ಲಿ ತ್ವಚೆಗಾಗಿ ವಾಟರ್ ಬೇಸ್ಡ್ ಫೌಂಡೇಶನ್ ಇರಲಿ, ಆದರೆ ಡ್ರೈ ಸ್ಕಿನ್‌ಗಾಗಿ ಮಾಯಿಶ್ಚರೈಸರ್ ಬೇಸ್ಡ್ ಇರಲಿ. ತರುಣಿಯರು ಪ್ಲೇನ್ ಸ್ಟಿಕ್ ಆರಿಸಬೇಕು, ಪ್ರೌಢ ಹಾಗೂ ಡ್ರೈ ಸ್ಕಿನ್ನಿನ ಮಹಿಳೆಯರು ಆಯಿಲ್ ಬೇಸ್ಡ್ ಫೌಂಡೇಶನ್ ಆರಿಸಬೇಕು. ಮುಖಕ್ಕೆ ಫೌಂಡೇಶನ್ ಹಚ್ಚುವ ಮೊದಲು ಕುತ್ತಿಗೆಯನ್ನು ಕ್ಲೆಂಝರ್‌ನಿಂದ ಚೆನ್ನಾಗಿ ಶುಚಿಗೊಳಿಸಬೇಕು. ನಂತರ ಒದ್ದೆಯಾದ ಮುಖಕ್ಕೆ ಲಘುವಾಗಿ ಬೇಸ್‌ನ್ನು ಏಕರೀತಿಯಲ್ಲಿ ಹರಡಬೇಕು, ಆಮೇಲೆ ಲೂಸ್ ಪೌಡರ್ ಮತ್ತು ಕಾಂಪ್ಯಾಕ್ಟ್ ಬಳಸಬೇಕು.
ಕಂಗಳ ಮೇಕಪ್
ನಂತರ ಕಂಗಳ ಮೇಕಪ್ ಗಮನಿಸೋಣ. ದೀಪಾವಳಿಯ ಈವ್ನಿಂಗ್ ಪಾರ್ಟಿಗಳಿಗಾಗಿ ಐ ಮೇಕಪ್ ಮಾಡುವ ಮೊದಲು, ಕಣ್ಣಿನ ರೆಪ್ಪೆಗಳ ಮೇಲೆ ತೆಳು ಬ್ರಶ್‌ನಿಂದ ಮೊದಲು ಫೌಂಡೇಶನ್, ನಂತರ ಲೂಸ್ ಪೌಡರ್ ಕ್ರಮದಲ್ಲಿ ಹಚ್ಚಬೇಕು. ಕಾಡಿಗೆ ಪೆನ್ಸಿಲ್ ನಿಂದ ಮೇಲಿನ ರೆಪ್ಪೆ ಮೇಲಿ ತೆಳು ಗೆರೆ ಎಳೆದು, ಅದನ್ನು ಬ್ರಶ್‌ನಿಂದ ಹರಡುವಂತೆ ಮಾಡಿ. ಆಗ ಐ ಲಿಡ್ ದೊಡ್ಡದಾಗಿ ಕಾಣಿಸುತ್ತದೆ. ನೀವು ಮಲ್ಟಿಶೇಡೆಡ್ ಲಹಂಗಾ ಅಥವಾ ಸೀರೆ ಉಡುವಿರಾದರೆ, ಒಂದು ಶೇಡ್‌ನ ಐ ಶ್ಯಾಡೋ ಹಚ್ಚಿರಿ ಹಾಗೂ ಇನ್ನೊಂದು ಬಣ್ಣದ ಲೈನರ್‌ನ್ನು ಕಂಗಳ ಮೇಲೆ ಹಚ್ಚಿರಿ.
ಕಂಗಳನ್ನು ಹೈಲೈಟ್‌ಗೊಳಿಸಲು ಸಿಲ್ವರ್ ಕಲರ್‌ನ ಹೈಲೈಟರ್ ಬಳಸಿರಿ. ರೆಪ್ಪೆಗಳಿಗೆ ಗಾಢ ಲುಕ್ಸ್ ನೀಡಲು ಕೃತಕ ಲ್ಯಾಶೆಸ್ ಬಳಸಿ, ಕರ್ಲರ್‌ನಿಂದ ಕರ್ಲ್ ಮಾಡಿ ಹಾಗೂ ಕೊನೆಯಲ್ಲಿ ಮ್ಯಾಜಿಕ್ ಮಸ್ಕರಾದ ಕೋಟ್ ಹಚ್ಚಿರಿ. ನಿಮ್ಮ ಐ ಲ್ಯಾಶೆಸ್ ಸಹಜವಾಗಿಯೇ ಗಾಢವಾಗಿದ್ದರೆ, ಮಸ್ಕರಾದ ಒಂದು ಕೋಟ್ ಸಾಕು. ಮಸ್ಕರಾ ಐ ಬ್ರೋಸ್‌ನ್ನು ಮೇಲೆ ತೆಗೆದುಕೊಳ್ಳುತ್ತಾ, ಮೇಲು ಭಾಗದಲ್ಲಿ ಹಚ್ಚಬೇಕು. ಇದರಿಂದ ಇದು ಚೆನ್ನಾಗಿ ಹರಡುತ್ತದೆ. ಇದಾದ ಮೇಲೆ, ಕೆಳಗಡೆ ಬೋಲ್ಡ್ ಕಾಡಿಗೆ ಹಚ್ಚಿರಿ ಹಾಗೂ ಮೇಲಿನಿಂದ ಲೈನರ್ ಎಳೆಯಿರಿ. ಇದರಿಂದ ಕಾಡಿಗೆ ಪೂರ್ತಿ ಸೀಲ್ ಆಗುತ್ತದೆ.
ಗ್ಲೋ ಎಫೆಕ್ಟ್ ಗಾಗಿ ಮುಖದ ಮೇಲೆ ಗ್ಲೋ ಎಫೆಕ್ಟ್ ನೀಡಲಿಕ್ಕಾಗಿ ಶಿಮರ್‌ಗ್ಲಿಟರ್ ಬಳಸಿರಿ. ತುಟಿಗಳ ಮೇಲೆ ಲಿಪ್‌ಸ್ಟಿಕ್‌ನ ಡಾರ್ಕ್ ಶೇಡ್ ಹಚ್ಚಬೇಕು ಹಾಗೂ ಲಿಪ್ ಸೀಲರ್‌ನಿಂದ ಸೀಲ್ ಮಾಡಿ. ಹೀಗೆ ಮಾಡುವುದರಿಂದ ಲಿಪ್‌ಸ್ಟಿಕ್ ಬಹಳ ಹೊತ್ತು ಹಾಗೇ ಉಳಿಯುತ್ತದೆ. ಅದರ ಮೇಲೆ ಗ್ಲಾಸ್ ಹಚ್ಚಿರಿ. ಲಿಪ್ ಡಸ್ಟ್ ಸಿಂಪಡಿಸಿ.