ಫೆಸ್ಟಿವ್ ಸೀಸನ್‌ ಮತ್ತೆ ಬಂದಿದೆ. ಈ ದಸರಾ ದೀಪಾವಳಿ ಸಂದರ್ಭದಲ್ಲಿ ನೀವು ಗ್ರಾಂಡ್‌ ಆಗಿ ಅಲಂಕರಿಸಿಕೊಂಡು ಅತಿಥಿ ಆತಿಥೇಯರಾಗಿ ಸಂಭ್ರಮಿಸಬೇಕಲ್ಲವೇ? ಆದರೆ ಹಬ್ಬಗಳ ಮಧ್ಯೆ ಮೇಕಪ್‌ಗಾಗಿ ಹೆಚ್ಚಿನ ಸಮಯ ಮೀಸಲಿಡುವುದು ಕಷ್ಟ. ಹಾಗಿರುವಾಗ ಎಂಥ ಬ್ಯೂಟಿ ಪ್ರಾಡಕ್ಟ್ಸ್ ಬಳಸಿ ಕಡಿಮೆ ಸಮಯದಲ್ಲಿ ಬೆಸ್ಟ್ ಮೇಕಪ್‌ ಮಾಡಿಕೊಳ್ಳುವುದು? ಅದಕ್ಕಾಗಿ ಈ ಕೆಳಗಿನ ಪ್ರಾಡಕ್ಟ್ಸ್ ನಿಮ್ಮದಾಗಿಸಿಕೊಳ್ಳಿ :

ಬೀ ಬೀ ಕ್ರೀಂ : ಇದು ಆಲ್ ಪರ್ಪಸ್‌ ಫೌಂಡೇಶನ್‌ ಕ್ರೀಂ. ಇದನ್ನು ಮ್ಯಾಜಿಕ್‌ ಫೌಂಡೇಶನ್‌ ಕ್ರೀಂ ಎಂದೂ ಹೇಳುತ್ತಾರೆ. ಮುಖದ ಮೇಲೆ ಸುಲಭವಾಗಿ ಹರಡು ಈ ಕ್ರೀಂ, ಬಹಳ ಹೊತ್ತು ಉಳಿಯುತ್ತದೆ. ಬಹಳ ಲೈಟ್‌ ಆದಕಾರಣ, ಉತ್ತಮ ಕವರೇಜ್‌ನೀಡುತ್ತದೆ.

ಪೌಡರ್ಫೌಂಡೇಶನ್‌ : ಇದು ಮುಖದ ಚರ್ಮಕ್ಕೆ ಫುಲ್ ಕವರೇಜ್‌ ನೀಡುವುದರೊಂದಿಗೆ, ಒಂದೇ ಲೆವೆಲ್ ‌ಆಗಿಯೂ ಕಾಣಿಸುತ್ತದೆ. ಮುಖದಲ್ಲಿ ಸುಲಭವಾಗಿ ಹರಡುವ ಇದು ಬಲು ಸ್ಮೂಥ್‌ ಎಫೆಕ್ಟ್ ನೀಡುತ್ತದೆ. ಬ್ರಶ್‌ ಅಥವಾ ಪಫ್‌ನಿಂದ ಇದನ್ನು ಸುಲಭವಾಗಿ ಬಳಸಬಹುದು.

ವಾಟರ್ಪ್ರೂಫ್ ಲೈನರ್‌: ಇದು ಬ್ಲ್ಯಾಕ್‌ ಕಲರ್‌ ಅಲ್ಲದೆ ಇನ್ನೂ ಹೆಚ್ಚಿನ ಬಣ್ಣಗಳಲ್ಲಿ ಲಭ್ಯ. ಇದು ಎಷ್ಟು ಸ್ಮೂತ್‌ ಎಂದರೆ ಬಹಳ ಸುಲಭವಾಗಿ ಇದನ್ನು ಒಂದೇ ಸ್ಟ್ರೋಕಿನಲ್ಲಿ ಹಚ್ಚಿಕೊಳ್ಳಬಹುದು. ಕಂಗಳಿಗೆ ಇದು ಬಿಲ್‌ಕುಲ್ ‌ನ್ಯಾಚುರಲ್ ಲುಕ್ಸ್ ನೀಡುತ್ತದೆ, ಕಾಡಿಗೆಯ ಕೆಲಸವನ್ನೂ ಮಾಡುತ್ತದೆ.

ಶೀರ್ಲಿಪ್ಸ್ಟಿಕ್‌ : ಇದು ಕ್ರೀಮೀ  ಗ್ಲಾಸಿ ಆಗಿರುತ್ತದೆ. ಹೀಗಾಗಿ ತುಟಿಗಳನ್ನು ಬಲು ಮೃದು, ನಯಗೊಳಿಸುತ್ತದೆ. ಇದರಲ್ಲಿ ಲಿಪ್‌ಲೈನ್‌ ಮಾಡಿಕೊಳ್ಳುವ ಅಗತ್ಯ ಇಲ್ಲ. ಇದು ಲೈಟ್‌ ವೆಯ್ಟ್, ಜೊತೆಗೆ ಮಳೆ ನೀರು ತಗುಲಿದರೂ ಬೇಗ ಹೋಗುವುದಿಲ್ಲ. ಇದರ ಕಲರ್‌ ನ್ಯಾಚುರಲ್.

ಗ್ಲಾಸಿ ಶಿಮರ್ಶ್ಯಾಡೊ : ಇದು ಕ್ರೀಂ ಪೌಡರ್‌ ಬೇಸ್ಡ್ ಎರಡೂ ಆಗಿರುತ್ತದೆ. ಹೆಚ್ಚು ಹೊತ್ತು ಮೇಕಪ್‌ ನಿಲ್ಲಲಿ ಎಂಬುದಕ್ಕಾಗಿ ಕ್ರೀಮೀ ಬೇಸ್ಡ್ ಶ್ಯಾಡೋ ಹಚ್ಚಿ, ಅದರ ಮೇಲೆ ತೆಳು ಪೌಡರ್‌ ಬೇಸ್ಡ್ ಶ್ಯಾಡೋ ಹಚ್ಚಿ, ಮರ್ಜ್‌ ಮಾಡಿ.

ಟಿಂಟೆಡ್‌  ಬ್ಲಶ್‌ : ಇದು ಪೌಡರ್‌, ಕ್ರೀಂ ಹಾಗೂ ಟಿಂಟೆಡ್‌ 3 ರೂಪಗಳಲ್ಲಿ ಲಭ್ಯವಿದ್ದು, ಬಹಳ ಹೊತ್ತು ಮುಖದ ಮೇಲೆ ನಿಲ್ಲುತ್ತದೆ. ಇದನ್ನು ಬೆರಳುಗಳಿಂದ ಸುಲಭವಾಗಿ ತೀಡಿ, ಮರ್ಜ್‌ ಮಾಡಬಹುದು. ಟಿಂಟೆಡ್‌ ಬ್ಲಶ್‌ಗೆ ಮೊದಲು ಅಗತ್ಯ ಬ್ರಾಂಝರ್‌ ಹಚ್ಚಿರಿ. ಇದು ಮುಖಕ್ಕೆ ವಿಭಿನ್ನ ಲುಕ್ಸ್ ಕೊಡುತ್ತದೆ.

ಬ್ರಾಂಝರ್‌ : ಬ್ರಾಂಝರ್‌ ಸಹ 3 ರೂಪಗಳಲ್ಲಿ ಲಭ್ಯ. ಕ್ರೀಮಿ, ಪೌಡರ್‌ಜೆಲ್‌. ಹೆಚ್ಚು ಹೊತ್ತು ಉಳಿಯಲು ಜೆಲ್ ಬ್ರಾಂಝರ್‌ಸೂಕ್ತ. ಬ್ಲಶ್‌ಗೆ ಮೊದಲು ಇದನ್ನು ಹಚ್ಚಬೇಕು. ಇದು ಮುಖದ ಕಾಂಟೂರಿಂಗ್‌ಗೂ ಪೂರಕ. ಇದನ್ನು ಗಲ್ಲ, ಹಣೆ, ಕೆನ್ನೆ, ಮೂಗಿಗೆ ಸರಿ. ಇದರಿಂದ ಮುಖ ಪರ್ಫೆಕ್ಟ್ ಎನಿಸುತ್ತದೆ. ಇದು ಪಿಂಕ್‌ ಬ್ರೌನ್‌ ಕಲರ್‌ಗಳಲ್ಲಿ ಲಭ್ಯ. ನಿಮ್ಮ ಸ್ಕಿನ್‌ ಟೋನ್‌ಗೆ ತಕ್ಕಂತೆ ಇದನ್ನು ಆರಿಸಿ.

ಪ್ರಭಾ ಮಾಧವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ