- ಟ್ರೆಡಿಶನಲ್ ಲುಕ್
ಈ ವರ್ಷ ಬ್ರೈಡಲ್ ಸೀಸನ್‌ನಲ್ಲಿ ಗೋಲ್ಡನ್ ಶೇಡ್ ಸಾಕಷ್ಟು ಹಿಟ್ ಆಗಿದೆ. ಹೀಗಿರುವಾಗ ಕಣ್ಣುಗಳಿಗೆ ಬ್ರೈಟ್‌ನೆಸ್ ಕೊಡಲು ಗೋಲ್ಡ್ ಐ ಶ್ಯಾಡೋ ಹಚ್ಚಿ. ಐ ಲಿಡ್ ಮೇಲೆ ಸ್ಮಜ್ ಲೈನರ್ ಮತ್ತು ಲೋಯರ್ ಲಿಡ್ ಮೇಲೆ ಬೋಲ್ಡ್ ಕಾಜಲ್ ಹಚ್ಚಿ ಕಣ್ಣುಗಳಿಗೆ ಕಜರಾರಾ ಲುಕ್ ಕೊಡಿ. ಐ ಲ್ಯಾಶಸ್‌ಗಳಿಗೆ ಐ ಲ್ಯಾಶ್ ಕರ್ಲರ್‌ನಿಂದ ಕರ್ಲ್ ಮಾಡಿ ಮಸ್ಕರಾದ ಕೋಟ್ ಹಚ್ಚಿ.
- ಆ್ಯಂಬಿಲಿಶ್ಡ್ ಲುಕ್
ಮೊದಲು ಐಸ್ ಮೇಲೆ ಬ್ರೈಡಲ್ ಟಚ್ ಕೊಡಲು ಕಾಪರ್ ಶೇಡ್‌ನ ಐ ಶ್ಯಾಡೋ ಹಚ್ಚಿ. ನಂತರ ಐ ಬ್ರೋಸ್‌ನ ಲೈಟ್ ಮತ್ತು ಕ್ರೀಂ ಮಿಕ್ಸ್ ಶೇಡ್‌ನಿಂದ ಹೈಲೈಟಿಂಗ್ ಮಾಡಿ. ಐಸ್ ಡಿಫೈನ್ ಮಾಡಲು ಡ್ಯೂಯಲ್ ಕಾಂಟ್ರಾಸ್ಟಿಂಗ್ ಕಲರ್‌ಗಳನ್ನು ಉಪಯೋಗಿಸಬಹುದು. ಐ ಲಿಡ್‌ನ ಇನ್ನರ್ ಕಾರ್ನರ್‌ನಲ್ಲಿ ಸಫೈರ್ ಬ್ಲ್ಯೂ ಮತ್ತು ಔಟರ್ ಕಾರ್ನರ್‌ನಲ್ಲಿ ಎಮರಾಲ್ಡ್ ಗ್ರೀನ್ ಶೇಡ್ ವಿಂಗ್ಡ್ ನಿಂದ ಕನೆಕ್ಟ್ ಮಾಡುತ್ತಾ ಹಚ್ಚಿ. ಜೊತೆಗೆ ವಾಟರ್ ಲೈನ್ ಮೇಲೆ ಕಾಜಲ್ ಹಚ್ಚಿ. ಕಣ್ಣುಗಳಿಗೆ ಕಂಪ್ಲೀಟ್ ಸೆನ್ಶುಯಲ್ ಲುಕ್ ಕೊಡಲು ರೆಪ್ಪೆಗಳ ಮೇಲೆ ಆರ್ಟಿಫಿಶಿಯಲ್ ಲ್ಯಾಶಸ್ ಕರ್ಲರ್‌ನಿಂದ ಕರ್ಲ್ ಮಾಡಿ ಮಸ್ಕರಾದ ಕೋಟ್ ಹಚ್ಚಿ. ಆಗ ಅದು ನ್ಯಾಚುರಲ್ ಲ್ಯಾಶಸ್‌ನೊಂದಿಗೆ ಪರ್ಫೆಕ್ಟ್ ಆಗಿ ಮರ್ಜ್ ಆಗುತ್ತದೆ.
- ಬ್ರಾಂಝ್ ಲುಕ್
ಈ ಮೇಕಪ್‌ನಲ್ಲಿ ಚೀಕ್ಸ್ ಮೇಲೆ ಬ್ಲಶ್ ಆನ್ ಬದಲು ಬ್ರಾಂಝರ್‌ನಿಂದ ಕಾಂಟೂರಿಂಗ್ ಮಾಡಬಹುದು. ಈ ಲುಕ್‌ನಲ್ಲಿ ಡಾರ್ಕ್ ಐ ಬ್ರೋಸ್, ಬೋಲ್ಡ್ ಲೈನರ್, ಕಾಜಲ್ ಮತ್ತು ಮಸ್ಕರಾದ ಹೆವಿ ಕೋಟ್‌ನೊಂದಿಗೆ ಐ ಮೇಕಪ್‌ನ್ನು ಕಂಪ್ಲೀಟ್ ಮಾಡಬಹುದು. ಸೆಂಟರ್‌ನಲ್ಲಿ ರೆಡ್ ಬೋಲ್ಡ್ ಬಿಂದಿ ಮತ್ತು ಲಿಪ್ಸ್ ಮೇಲೆ ಬ್ರೈಟ್ ರೆಡ್ ಕಲರ್ ಹಚ್ಚಿ ಲಿಪ್ಸ್ ನ್ನು ಸೀಲ್ ಮಾಡಲಾಗುತ್ತದೆ.
- ಕ್ಯಾಟ್ ಐ ಲುಕ್
ಐ ಲಿಡ್ ಮೇಲೆ ಸ್ಮೋಕಿ ಟಚ್ ಕೊಡುವ ಗ್ರೀನ್ ಐ ಶ್ಯಾಡೋ ಹಚ್ಚಿ. ಕಾರ್ನರ್‌ನ್ನು ಟೆಂಪ್ಸ್ ಕಡೆ ಪಾಯಿಂಟ್ ಮಾಡುತ್ತಾ ಇಡಿ. ಹೀಗೆ ಮಾಡುವುದರಿಂದ ಕ್ಯಾಟ್ ಐ ಲುಕ್ ಬರುತ್ತದೆ. ಐಸ್‌ನ ಶೇಪ್ ಡಿಫೈನ್ ಮಾಡಲು ಐ ಶ್ಯಾಡೋನಿಂದ ಕಾಂಟ್ರಾಸ್ಟಿಂಗ್ ಶೇಡ್‌ನಂತಹ ಟವರ್ ಕ್ವಾಯಿಶ್ ಬ್ಲ್ಯೂ ಕಲರ್‌ನ ಲೈನರ್ ಉಪಯೋಗಿಸಿ. ವಾಟರ್ ಲೈನ್ ಮೇಲೂ ಬ್ಲೂ ಕಲರ್‌ಉಪಯೋಗಿಸಿ.
ಐ ಮೇಕಪ್‌ಗೆ ಕಂಪ್ಲೀಟ್ ಬ್ರೈಡ್ ಲುಕ್ ಕೊಡಲು ಲೈನರ್‌ನ ಮೇಲೆ ಸಣ್ಣ ಸಣ್ಣ ಬ್ಲೂ ಸ್ವರೋಸ್ಕಿ ಮತ್ತು ರೆಪ್ಪೆಗಳ ಮೇಲೆ ಆರ್ಟಿಫಿಶಿಯಲ್ ಲ್ಯಾಶಸ್ ಹಚ್ಚಿ ಮಸ್ಕರಾದ ಕೋಟ್ ಹಚ್ಚಿ. ಈಗ ಕಾಂಟ್ರಾಸ್ಟಿಂಗ್ ಶೇಡ್ ಅಂದರೆ ಪಿಂಕ್‌ನ್ನು ಚೀಕ್ಸ್ ಹಾಗೂ ಲಿಪ್ಸ್ ಗಳ ಮೇಲೆ ಉಪಯೋಗಿಸಿ.
- ಗ್ರಾಫಿಕ್ ಲೈನರ್ ವಿಥ್ ರೆಡ್ ಲಿಪ್ಸ್
ಐ ಮೇಕಪ್‌ನ ಈ ಲೇಟೆಸ್ಟ್ ಟ್ರೆಂಡ್ ಅಂದರೆ ಗ್ರಾಫಿಕ್ ಲೈನರ್ ಮುಖದ ಮೇಲೆ ಸಾಕಷ್ಟು ಬೋಲ್ಡ್ ಆಗಿ ಕಂಡುಬರುತ್ತದೆ. ಆದ್ದರಿಂದ ಈ ಲುಕ್‌ನೊಂದಿಗೆ ಐಸ್ ಮೇಲೆ ಕೇವಲ ನ್ಯೂಡ್ ಶೇಡ್‌ನ್ನು ಉಪಯೋಗಿಸಲಾಗುತ್ತದೆ. ಹಣೆಯ ಮೇಲೆ ಬೋಲ್ಡ್ ರೆಡ್ ಬಿಂದಿ ಮತ್ತು ಇಡೀ ಐ ಬ್ರೋಸ್ ಮೇಲೆ ಸ್ಟಿಕರ್ ಬಿಂದಿಗಳು ಈ ಮೇಕಪ್‌ನೊಂದಿಗೆ ಚೆನ್ನಾಗಿ ಒಪ್ಪುತ್ತವೆ. ಮುಖಕ್ಕೆ ಸಾಫ್ಟ್ ಲುಕ್ ಕೊಡಲು ಕಾಂಟೂರಿಂಗ್ ಅಗತ್ಯವಾಗಿ ಮಾಡಿ. ಲಿಪ್ಸ್ ಮೇಲೆ ಬೋಲ್ಡ್ ರೆಡ್ ಶೇಡ್ ಹಚ್ಚಿ.
– ತನುಜಾ