ನವರಾತ್ರಿ ಬಂದಕೂಡಲೇ ಗರ್ಬಾ ಮತ್ತು ಡಾಂಡಿಯಾ ನೈಟ್‌ನ ಸಂಭ್ರಮ ಶುರುವಾಗುತ್ತದೆ. ಡಾಂಡಿಯಾದ ತಾಳಕ್ಕೆ ತಾಳ ಸೇರಿಸುವಾಗ ಎಲ್ಲರ ದೃಷ್ಟಿ ನಿಮ್ಮ ಡ್ಯಾನ್ಸ್ ಜೊತೆ ಜೊತೆಗೆ ಲುಕ್ಸ್ ಮೇಲೂ ಹೋಗುವಂತೆ ನಿಮ್ಮ ಡ್ರೆಸ್ ಜೊತೆ ಜೊತೆಗೆ ನಿಮ್ಮ ಮೇಕಪ್ ಕೂಡ ಕಲರ್ ಫುಲ್ ಆಗಿರಬೇಕು. ಬನ್ನಿ, ಲೇಟೆಸ್ಟ್ ಟ್ರೆಂಡ್‌ನ ಲೇಟೆಸ್ಟ್ ಟಿಪ್ಸ್ ಬಗ್ಗೆ ತಿಳಿಯೋಣ.....
ಫೇಸ್ ಮೇಕಪ್
ಪ್ರೈಮರ್ ಸಿಲಿಕಾನ್ ಬೇಸ್ಡ್ ಆಗಿರುತ್ತದೆ. ಅದನ್ನು ಉಪಯೋಗಿಸುವುದರಿಂದ ಮುಖದ ಫೈನಲ್ ಲೈನ್ಸ್, ಓಪನ್ ಪೋರ್ಸ್ ಮತ್ತು ಪಿಟ್ಸ್ ತುಂಬಿಕೊಳ್ಳುತ್ತದೆ. ಅದರಿಂದ ನಿಮ್ಮ ಮೇಕಪ್‌ಗೆ ಪರ್ಫೆಕ್ಟ್ ಆರಂಭ ಸಿಗುತ್ತದೆ ಮತ್ತು ಅದು ಬಹಳ ಹೊತ್ತು ನಿಲ್ಲುತ್ತದೆ. ಆದ್ದರಿಂದ ಮೇಕಪ್‌ನ ಆರಂಭವನ್ನು ಎಲ್ಲಕ್ಕೂ ಮೊದಲು ಪ್ರೈಮರ್‌ನಿಂದ ಮಾಡಿ. ಪ್ರೈಮರ್ ಹಚ್ಚಿದ ನಂತರ ಸ್ವಲ್ಪ ಹೊತ್ತು ನಿಲ್ಲಿಸಿ. ಏಕೆಂದರೆ ಅದನ್ನು ತ್ವಚೆ ಚೆನ್ನಾಗಿ ಹೀರಿಕೊಳ್ಳಬೇಕು. ಹಾಡಿ, ಕುಣಿಯುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಬೆವರು ಬಂದೇ ಬರುತ್ತದೆ. ಆದ್ದರಿಂದ ವಾಟರ್ ಪ್ರೂಫ್ ಬೇಸ್‌ನ್ನೇ ಉಪಯೋಗಿಸಿ. ಅದಕ್ಕಾಗಿ ನೀವು ಟೂವೇ ಕೇಕ್‌ನ ಸ್ಪಂಜ್‌ನ್ನು ಮಾತ್ರ ಒದ್ದೆ ಮಾಡಿ ಹಚ್ಚಿ. ಅದಲ್ಲದೆ, ಟೂ ವೇ ಕೇಕ್‌ನ್ನು ಅಗತ್ಯವಾಗಿ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಏಕೆಂದರೆ ಮಧ್ಯೆ ಮಧ್ಯೆ ಟಚ್ ಅಪ್ ಮಾಡಿಕೊಳ್ಳಬಹುದು. ಚರ್ಮದ ಮೇಲೆ ಯಾವುದಾದರೂ ಕಲೆಗಳಿದ್ದರೆ, ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವ ಕನ್ಸೀಲರ್‌ನಿಂದ ಅದನ್ನು ಕನ್ಸೀಲ್ ಮಾಡಿ.
ಬ್ಲಶ್ ಆನ್
ಬಿಳಿಯ ಕೆನ್ನೆಗಳ ಮೇಲೆ ಪಿಂಕ್ ಕಲರ್‌ನ ಬ್ಲಶ್ ಆನ್ ಉಪಯೋಗಿಸಿ. ಒಂದು ವೇಳೆ ನೀವು ಶ್ಯಾಮಲ ವರ್ಣದವರಾಗಿದ್ದರೆ, ನಿಮಗೆ ಪೀಚ್‌ಶೇಡ್‌ನ ಬ್ಲಶರ್ ಬಹಳ ಚೆನ್ನಾಗಿರುತ್ತದೆ. ಮೂಗಿನ ಎರಡೂ ಬದಿ ಚೀಕ್ಸ್ ಬೋನ್ ಮತ್ತು ಡಬಲ್ ಚಿನ್‌ನ್ನು ಅಡಗಿಸಲು ಡಾರ್ಕ್ ಬ್ರೌನ್ ಶೇಡ್‌ನ ಬ್ಲಶ್ ಆನ್‌ನಿಂದ ಕಾಂಟೂರಿಂಗ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣುಗಳು ಶಾರ್ಪ್ ಆಗಿ ಕಂಡುಬರುತ್ತವೆ. ಮುಖ ಚಿಕ್ಕದಾಗಿ ಕಾಣುತ್ತದೆ. ರಾತ್ರಿಯ ಈ ಸಡಗರದಲ್ಲಿ ಬ್ಲಶ್ ಆನ್‌ನ ಜೊತೆ ಜೊತೆಗೆ ಚೀಕ್ಸ್ ಬೋನ್ ಮೇಲೂ ಹೈಲೈಟರ್‌ನ್ನು ಅಗತ್ಯವಾಗಿ ಉಪಯೋಗಿಸಿ.
ಐ ಮೇಕಪ್
ನಿಮ್ಮ ಡ್ರೆಸ್‌ನೊಂದಿಗೆ ಮ್ಯಾಚಿಂಗ್ ಅಥವಾ ಕಾಂಪ್ಲಿಮೆಂಟಿಂಗ್ ಡಬಲ್ ಶೇಡ್ಸ್ ನ್ನು ನಿಮ್ಮ ಕಣ್ಣುಗಳ ಮೇಲೆ ಬ್ಲೆಂಡ್ ಮಾಡಿ ಮತ್ತು ಐ ಲಿಡ್ ಮೇಲೆ ಕಾಂಟ್ರ್ಯಾಸ್ಟಿಂಗ್ ಬ್ಲ್ಯಾಕ್ ಐ ಲೈನರ್‌ನಿಂದ ಕಣ್ಣುಗಳಿಗೆ ಶೇಪ್ ಕೊಡಿ. ಆರ್ಟಿಫಿಶಿಯ್ ಐ ಲ್ಯಾಶೆಸ್‌ಗಳಿಂದ ರೆಪ್ಪೆಗಳನ್ನು ಉದ್ದವಾಗಿ ತೋರಿಸುವುದು ಈಗ ಫ್ಯಾಷನ್.
ಹೀಗಿರುವಾಗ ನೀವು ಸಹ ನಿಮ್ಮ ರೆಪ್ಪೆಗಳ ಮೇಲೆ ಇವನ್ನು ಉಪಯೋಗಿಸಿ. ಈ ರೆಪ್ಪೆಗಳನ್ನು ಕರ್ಲರ್‌ನಿಂದ ಕರ್ಲ್ ಮಾಡಿ ಮತ್ತು ಮಸ್ಕರಾದ ಕೋಟ್ ಹಚ್ಚಿ ಕಣ್ಣುಗಳನ್ನು ದೊಡ್ಡದಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಿ. ಕಣ್ಣುಗಳ ಒಳಗೆ ಅಂದರೆ ವಾಟರ್ ಲೈನ್ ಮೇಲೆ ಜೆಲ್ ಕಾಜಲ್ ಹಚ್ಚಿ.