ದೀಪಾವಳಿ ಹಬ್ಬದಲ್ಲಿ ಎಲ್ಲೆಲ್ಲೂ ಸಂತಸ, ಸಂಭ್ರಮದ ವಾತಾವರಣವಿರುತ್ತದೆ. ಹೀಗಿರುವಾಗ ಮೇಕಪ್‌ ಸಹ ವಿಶಿಷ್ಟವಾಗಿರಬೇಕು ಅಲ್ಲವೇ ಈ ಸಂದರ್ಭದಲ್ಲಿ ವಯಸ್ಸಿಗಿಂತ ಕಿರಿಯರಾಗಿ ಕಾಣುವ ಅವಶ್ಯಕತೆಯೂ ಇರುತ್ತದೆ. ಅಂದ್ರೆ ಮುಖದಲ್ಲಿನ ಸುಕ್ಕು, ನೆರಿಗೆಗಳನ್ನು ಅವಿತಿರಿಸಿ, ಮುಖ ಕಳೆಕಳೆಯಿಂದ ಹೊಳೆಯುವಂತೆ ಮಾಡುವಂಥ ಉತ್ತಮ ಲುಕ್ಸ್ ಒದಗಿಸುವ ಮೇಕಪ್ ಆಗಿರಬೇಕು. ಸಮರ್ಪಕ ರೀತಿಯಲ್ಲಿ ಮತ್ತು ಸರಿಯಾದ ಪ್ರಾಡಕ್ಟ್ಸ್ ಬಳಸಿ ಮಾಡಿದ ಮೇಕಪ್‌, ಮುಖಕ್ಕೆ ಪುನಃ ಯೌವನ ತಂದುಕೊಡುತ್ತದೆ.

ಮೇಕಪ್‌ ಎಕ್ಸ್ ಪರ್ಟ್ಸ್ ಪ್ರಕಾರ, ಚರ್ಮ ಮತ್ತು ಮುಖಕ್ಕೆ ತಕ್ಕಂತೆ ಮೇಕಪ್‌ ಮಾಡಿದಾಗ ಮಾತ್ರ ಚೆನ್ನಾಗಿ ಮೂಡಿಬರಲು ಸಾಧ್ಯ. ಮೇಕಪ್‌ ಅಂದ್ರೆ ಕೇವಲ ಡಾರ್ಕ್‌ ಲಿಪ್‌ಸ್ಟಿಕ್‌ ತೀಡುವುದು, ಹುಬ್ಬುಗಳನ್ನು ತೆಳ್ಳಗೆ ಮಾಡುವುದು, ದಪ್ಪ ಪದರದ ಫೌಂಡೇಶನ್ ಹಚ್ಚುವುದಷ್ಟೇ ಅಲ್ಲ. ಮುಖದ ಪ್ಲಸ್‌ ಪಾಯಿಂಟ್ಸ್ ನ್ನು ಉಜ್ವಲವಾಗಿ ಎತ್ತಿತೋರಿಸುವುದು, ಕೊರತೆಗಳನ್ನು ಮರೆಮಾಚುವುದೇ ನಿಜವಾದ ಉತ್ತಮ ಮೇಕಪ್‌. ವಯಸ್ಸಾಗಿದೆ ಎಂಬುದು ಎಲ್ಲಕ್ಕಿಂತ ಮುಖ್ಯವಾಗಿ ಮುಖದ ಮೇಲೆ ಎದ್ದು ಕಾಣುತ್ತದೆ. ಇದನ್ನು ಮೇಕಪ್‌ನಿಂದ ಸರಿಪಡಿಸುವುದೇ ಅಸಲಿ ಮೇಕಪ್‌ ಎನಿಸುತ್ತದೆ. ಫೆಸ್ಟಿವಲ್ ‌ಮೇಕಪ್‌ ನಿಮ್ಮನ್ನು ಇತರರಿಗಿಂತ ವಿಭಿನ್ನವಾಗಿ ಎದ್ದು ತೋರಿಸುವಂತಿರಬೇಕು. ಇಂಥ ಮೇಕಪ್‌ಗಾಗಿ ಯಾವ ಟಿಪ್ಸ್ ಅನುಸರಿಸುವುದು ಎಂದು ತಿಳಿಯೋಣವೆ? :

ಬ್ಲಶರ್‌ ನಿಂದ ಫ್ರೆಶ್‌ ನೆಸ್‌

Blusher

ಯಾರು ತಮ್ಮ ವಯಸ್ಸಿಗಿಂತ ಕಿರಿಯವರಾಗಿ ಕಾಣಬೇಕೆಂದು ಬಯಸುತ್ತಾರೋ ಅಂಥ ಮಹಿಳೆಯರು ಮಾತ್ರ ಬ್ಲಶರ್‌ ಬಳಸಬೇಕು ಎಂದೇನಿಲ್ಲ. ಬದಲಿಗೆ ಕಿರಿಯ ವಯಸ್ಸಿನ ಯುವತಿಯರು ಸಹ ಇದನ್ನು ಬಳಸಬಹುದಾಗಿದೆ. ಬ್ಲಶರ್‌ ಮುಖಕ್ಕೆ ಹೆಚ್ಚಿನ ತಾಜಾತನ ಒದಗಿಸಬಲ್ಲದು. ಇದಕ್ಕಾಗಿ ಬ್ಲಶರ್‌ನ್ನು ಸರಿಯಾಗಿ ಬಳಸಬೇಕಾದುದು ಅತಿ ಅಗತ್ಯ. ಇದನ್ನು ಚೀಕ್‌ ಬೋನ್ಸ್ ಮೇಲೆ ಸರಿಯಾಗಿ ತೀಡಬೇಕು. ಬ್ರಶ್‌ ನೆರವಿನಿಂದ ಗೋಲಾಕಾರಾಗಿ ಹಚ್ಚುತ್ತಾ, ಹೇರ್‌ ಲೈನ್‌ ಕಡೆ ಕೊಂಡೊಯ್ಯುತ್ತಾ ಲೈಟ್‌ ಆಗಿ ಹಚ್ಚಿರಿ. ಇದರಿಂದ ಯಾವುದೇ ತರಹದ ಪದರಗಳು ಮೂಡದು. ಪೀಚ್‌ ಪಿಂಕ್‌ ಈ ನಿಟ್ಟಿನಲ್ಲಿ ಉತ್ತಮ ಆಯ್ಕೆ. ಕೆನ್ನೆಯ ಜೋತು ಬಿದ್ದ ಗುಣ ಸರಿಪಡಿಸಲು ಬಿಳಿಯ ಶಿಮರಿ ಶೇಡ್ಸ್ ನ್ನು ಚೀಕ್‌ ಬೋನ್ಸ್ ಮೇಲೆ ಹಚ್ಚಿರಿ. ಈ ರೀತಿ ಹೊಳೆ ಹೊಳೆಯುವ ಮೇಕಪ್‌ ಬೆಸ್ಟ್ ಎನಿಸುತ್ತದೆ. ಆದರೆ ಇದು ಅಂಟಂಟಾಗಿ ಆಗಿಹೋಗಲೇಬಾರದು, ಎಚ್ಚರ ವಹಿಸಿ.

ಮೇಕಪ್‌ನಿಂದ ತುಟಿಗಳ ಅಂದ

Smile

ಹೆಚ್ಚುತ್ತಿರುವ ವಯಸ್ಸಿನ ಕಾರಣ ತುಟಿಗಳ ಚರ್ಮ ಬದಲಾಗಿರುತ್ತದೆ. ಈ ಕಾರಣದಿಂದ ಯಾವ ಲಿಪ್‌ಸ್ಟಿಕ್‌ನ ಕಲರ್‌ ನಿಮಗೆ ಸಣ್ಣ ಪ್ರಾಯದಲ್ಲಿ ಹೆಚ್ಚು ಗ್ಲಾಮರಸ್‌ ಟಚ್‌ ನೀಡುತ್ತಿತ್ತೋ ಅದೇ ಈಗ ತುಸು ಡಲ್ ಅನ್ನಿಸಬಹುದು. ವಿಂಟರ್‌ ಸೀಸನ್‌ನಲ್ಲಿ ತುಟಿಗಳ ಮೇಲೆ ಜಮೆಗೊಳ್ಳುವ ಒಡೆದ ಚರ್ಮದ ತರಿ, ನಿಮ್ಮ ಲಿಪ್‌ಸ್ಟಿಕ್‌ ಶೈನಿಂಗ್‌ ನೀಡುವಂತೆ ತುಟಿಗಳಿಗೆ ಅಗತ್ಯ ವ್ಯಾಸಲೀನ್ ಹಚ್ಚಿರಿ.

ತುಟಿಗಳ ಮೇಲೆ ಪೇಸ್ಟ್‌ ಯಾ ಪಾರದರ್ಶಕ ಮಾಯಿಶ್ಚರೈಸಿಂಗ್‌ ಲಿಪ್‌ಸ್ಟಿಕ್‌ ವಿಭಿನ್ನ ಲುಕ್ಸ್ ನೀಡುತ್ತವೆ. ಇದನ್ನು ಬಹಳ ಡಾರ್ಕ್ ಮಾಡಬೇಡಿ. ಕೇವಲ ಒಂದೇ ಕೋಟ್‌ ಹಚ್ಚಿರಿ. ಇದರಿಂದ ತುಟಿಗಳು ಸಹಜವಾಗಿಯೇ ಹೊಳೆಯುತ್ತವೆ. ನಿಮ್ಮ ತುಟಿಗಳ ಬಣ್ಣ ಗುಲಾಬಿ ಅಲ್ಲದಿದ್ದರೆ, ಅವು ತಾಜಾ ಆಗಿ ಕಂಗೊಳಿಸದಿದ್ದರೆ ಪಾರದರ್ಶಕ ಲಿಪ್‌ಸ್ಟಿಕ್‌ ಯಾ ಲಿಪ್‌ ಗ್ಲಾಸ್‌ ತೀಡಬೇಡಿರಿ. ಗುಲಾಬಿ ಲಿಪ್‌ಸ್ಟಿಕ್‌ಗೆ ಲಿಪ್‌ ಗ್ಲಾಸ್‌ ಬೆರೆಸಿ ಬಳಸಿರಿ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲೆಡೆ ಝಗಮಗಿಸುವ ಬೆಳಕಿನ ಕಾಂತಿ ಚೆಲ್ಲುತ್ತಿರುತ್ತದೆ. ಹೀಗಾಗಿ ಕೆಳ ತುಟಿಯ ಮಧ್ಯ ಭಾಗದಲ್ಲಿ ಲಿಪ್‌ ಗ್ಲಾಸ್‌ನ ಔಟ್‌ ಲೈನ್‌ ಎಳೆಯಿರಿ. ಆಗ ಇದರ ಮೇಲೆ ಬೆಳಕು ಪ್ರತಿಫಲನಗೊಂಡಾಗ, ನಿಮ್ಮ ಮುಗುಳ್ನಗುವಿಗೆ ಹೆಚ್ಚಿನ ಸ್ಟೈಲ್ ಮೂಡುತ್ತದೆ.

ಮಾದಕ ಐ ಮೇಕಪ್

Eye-makeup

ಈ ಐ ಮೇಕಪ್‌ನಲ್ಲಿ ಸ್ಮೋಕಿ ಲುಕ್ಸ್ ಸದಾ ಹಾಟ್‌ ಟ್ರೆಂಡ್‌ ಎನಿಸುತ್ತದೆ. ಮೇಕಪ್‌ನಲ್ಲಿ ತುಸು ಬದಲಾವಣೆ ಮಾಡಿಕೊಂಡು, ಸ್ಮೋಕಿ ಕಂಗಳನ್ನು ಇನ್ನಷ್ಟು ಹೊಳೆಯುವಂತೆ ಮಾಡಬಹುದು. ಸರಿಯಾದ ಐ ಮೇಕಪ್‌ಗಾಗಿ ಕಂಗಳ ಮೇಲ್ಭಾಗದ ರೆಪ್ಪೆಗಳು, ಕೆಳಭಾಗಕ್ಕಿಂತ ಸದಾ ಡಾರ್ಕ್‌ ಆಗಿರಬೇಕು. ಇದಕ್ಕಾಗಿ ತೆಳುವಾದ ತುದಿಯುಳ್ಳ ಐ ಲೈನರ್‌ ಬ್ರಶ್‌ ಬಳಸಬೇಕು. ಸ್ಮೋಕಿ ಕಂಗಳನ್ನು ಹೊಳೆಯುವಂತೆ ಮಾಡಲು ಕೆಳ ಐ ಲ್ಯಾಶೆಸ್‌ ಮೇಲೆ ಪರ್ಪಲ್ ರಂಗಿನ ಬ್ರಾನ್ಝ್ ಲಿಪ್‌ ಗ್ಲಾಸ್‌ನ್ನು ಐ ಲೈನರ್‌ ಬ್ರಶ್‌ನಿಂದ ಹಚ್ಚಿರಿ. ಬೆರಳಿನ ಸಹಾಯದಿಂದ ಲಿಪ್‌ ಗ್ಲಾಸ್‌ನ್ನು ಕೂಡ ಕಂಗಳ ಮೇಲೆ ಹಚ್ಚಬೇಕು. ಇದನ್ನು ಅತಿ ಎಚ್ಚರಿಕೆಯಿಂದ ಮಾಡಬೇಕು. ಎಂದಿಗೂ ಇದು ಕಂಗಳ ಒಳಭಾಗಕ್ಕೆ ತಗುಲಬಾರದು.

ಸ್ಪೆಷಲ್ ಹೇರ್‌ ಸ್ಟೈಲ್‌

Hairstyle

ಪರ್ಫೆಕ್ಟ್ ಮೇಕಪ್‌ಆದ ಮೇಲೆ ಅತಿ ಅಗತ್ಯವಾದುದು ಎಂದರೆ, ನಿಮ್ಮ ಹೇರ್‌ ಸ್ಟೈಲ್ ಅದು ಗುಂಪಿನ ನಾಲ್ವರಲ್ಲಿ ಎದ್ದು ಕಾಣುವಂತಿರಬೇಕು. ಫೆಸ್ಟಿವಲ್ ‌ದೃಷ್ಟಿಯಲ್ಲಿ ಹೇರ್‌ ಸ್ಟೈಲ್ ‌ರೆಡಿ ಮಾಡುವುದೇ ಸರಿಯಾದ ಆಯ್ಕೆ. ನೀವು ಹಗಲಿನಲ್ಲಿ ಹೊರಗೆಲ್ಲೋ ಹೋಗಬೇಕಿದ್ದರೆ, ಕೂದಲನ್ನು ನೀಟಾಗಿ ಗಂಟು ಹಾಕಿಡಿ ಅಥವಾ ನಿಮ್ಮ ನೆಚ್ಚಿನ ಸುಲಭದ ಹೇರ್‌ ಸ್ಟೈಲ್ ಮಾಡಿಕೊಳ್ಳಿ. ನೀವು ಸಂಜೆಯ ಪಾರ್ಟಿಗೆ ಓಪನ್‌ ಹೇರ್‌ನೊಂದಿಗೆ ಹೋಗಬಯಸಿದರೆ, ಅಗತ್ಯ ಬೆಳಗ್ಗೆ ನಿಮ್ಮ ಕೂದಲಿಗೆ ಕಂಡೀಶನ್‌ ಆಗಿರಬೇಕು. ಇದರಿಂದ ಲೈಟ್‌ ಹೇರ್‌ ಸ್ಟೈಲ್ ಸಹ ಮಾಡಿಕೊಳ್ಳಬಹುದು. ನೀವು ಸ್ಪೆಷಲ್ ಆಗಿ ಕಂಡುಬರಲು ಬಯಸಿದರೆ, ನಿಮ್ಮ ಕೂದಲಿಗೆ ಸ್ವಲ್ಪ ಹೊತ್ತು ರೋಲರ್‌ ಸಿಗಿಸಿಡಿ. ರೋಲರ್‌ ತೆಗೆದ ನಂತರ ಹೇರ್‌ ಸ್ಪ್ರೇಯಿಂದ ಕೂದಲನ್ನು ಸೆಟ್‌ ಮಾಡಿ. ನಿಮ್ಮದು ರಿಚ್‌ ಗ್ರಾಂಡ್‌ ಪಾರ್ಟಿ ಆಗಿದ್ದರೆ, ಕೂದಲನ್ನು ಓಪನ್‌ ಆಗಿ ಬಿಡಬೇಡಿ. ಇದರಿಂದ ನೀವು ಬೇಗ ಸುಸ್ತಾದವರಂತೆ ಕಾಣುವಿರಿ. ಕೂದಲನ್ನು ಹೊಸ ಸ್ಟೈಲ್‌ನಿಂದ ಸೆಟ್‌ ಮಾಡಿ. ಜಡೆ, ಹೆರಳು, ಹೇರ್‌ ಕ್ಲಿಪ್‌ ನೆರವಿನಿಂದ ಕೂದಲನ್ನು ಕಟ್ಟಿರಿ. ಈ ರೀತಿ ಕಟ್ಟಿದ ಕೂದಲು ಮುಖವನ್ನು ಸುಂದರ, ತಾಜಾ ಆಗಿ ಕಂಗೊಳಿಸುವಂತೆ ಮಾಡುತ್ತದೆ.

ಫ್ರೆಂಚ್‌ ಪ್ಲೇಟ್‌ ಯಾ ಫ್ರೆಂಚ್‌ ಬನ್‌ನಿಂದ (ಕೊಂಡೆ) ಫೆಸ್ಟಿವಲ್‌ನಲ್ಲಿ ನೀವು ವಿಭಿನ್ನವಾಗಿ ಮಿಂಚುವಿರಿ.

ನೇಲ್ ‌ಸ್ಟೈಲ್ ‌ಸೊಬಗು

ನೀವು ಪಾರ್ಟಿಯಲ್ಲಿ ಬೇರೆಯವರಿಗಿಂತ ವಿಭಿನ್ನವಾಗಿ ಕಾಣಬಯಸಿದರೆ, ನೇಲ್ ‌ಆರ್ಟ್‌ ಬಳಸಿ, ನಿಮ್ಮ ಕೈಗಳಲ್ಲಿನ ಉದ್ದನೆ ಉಗುರು ಎಷ್ಟು ಅಂದವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡೇ ನೇಲ್ ಆರ್ಟ್‌ ಬಳಸಿಕೊಳ್ಳಿ. ಉಗುರಿಗೆ ಪರ್ಫೆಕ್ಟ್ ಶೇಪ್ ನೀಡಿದ ನಂತರ, ಒಳಭಾಗದಲ್ಲಿ ಫಾಲ್ಸ್ ನೇಲ್‌‌ಗೆ ಅಂಟಿಕೊಳ್ಳುವ ಪದಾರ್ಥವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿರಿ. ಲೈಟ್‌ ನೇಲ್ ಪೇಂಟ್‌ ಹಚ್ಚಿದ ನಂತರ, ಅದನ್ನು ಒಣಗಲು ಬಿಡಿ. ಆಮೇಲೆ ಇದರ ಮೇಲೆ ನಿಮ್ಮ ಮೆಚ್ಚಿನ ನೇಲ್ ಆರ್ಟ್‌ ಡಿಸೈನ್‌ ಮೂಡಿಸಿ.

ಮುಂಭಾಗದಲ್ಲಿ ಅಗಲ ಇರುವ ಉಗುರನ್ನು ಎಲ್ಲರೂ ಮೆಚ್ಚುತ್ತಾರೆ. ಇವು ಬೇಗ ಮುರಿಯುವುದೂ ಇಲ್ಲ. ಇದರ ಸಪಾಟಾದ ಲುಕ್ಸ್ ಬೆಸ್ಟ್ ಎನಿಸುತ್ತದೆ. ಇದಕ್ಕೆ ಶೇಪ್‌ ನೀಡಿ, ಮುಂಭಾಗದಿಂದ ಅಂಡಾಕಾರ ಮಾಡಿರಿ. ನ್ಯೂಡ್‌ ನೇಲ್ಸ್ ನಿಮಗೆ ಫ್ಯಾಷನ್ನಿನ ವಿಭಿನ್ನ ಸ್ಟೈಲ್ ಒದಗಿಸುತ್ತದೆ. ಕೈಗಳಂತೆಯೇ ಕಾಲುಗಳ ಉಗುರಿನ ಸಂರಕ್ಷಣೆಗೆ ಹೆಚ್ಚಿನ ಮಹತ್ವ ಕೊಡಿ.

ಇದಕ್ಕಾಗಿ ಅಗತ್ಯವಾಗಿ ಮೆನಿಕ್ಯೂರ್‌ ಪೆಡಿಕ್ಯೂರ್‌ ಮಾಡಿಸಿ. ಇದಾದ ಮೇಲೆ ಉಗುರಿಗೆ ಪಾರದರ್ಶಕ ನೇಲ್ ‌ಪಾಲಿಶ್‌ ಹಚ್ಚಿರಿ. ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ನೇಲ್ ‌ಪಾಲಿಶ್‌ ಹಚ್ಚಿದಾಗ ಮಾತ್ರ ಬೆಟರ್‌ ಲುಕ್ಸ್ ಸಿಗುತ್ತದೆ. ಲೈಟ್‌ ನೇಲ್ ‌ಪಾಲಿಶ್‌ ಸಹ ಉಗುರಿಗೆ ಉತ್ತಮ ಹೊಳಪು ನೀಡಬಲ್ಲದು.

ಪರವಶಗೊಳಿಸುವ ಫರ್ಫ್ಯೂಮ್

ಫೆಸ್ಟಿವಲ್ ‌ಪಾರ್ಟಿಗಾಗಿ ರೆಡಿಯಾಗುವಾಗ, ಹವಾಮಾನ ಹೇಗೂ ಗುಲಾಬಿ ಆಗಿರುವುದರಿಂದ, ಬೆವರು ಹೆಚ್ಚಿರುವುದಿಲ್ಲ. ಹೀಗಿದ್ದರೂ ಪಾರ್ಟಿಯಲ್ಲಿ ಜನರಿಗೆ ನಿಮ್ಮ ಫರ್ಫ್ಯೂಮ್ ಪರಿಮಳ ಗೊತ್ತಾಗಲೇಬೇಕು. ಇದಕ್ಕಾಗಿ ನಿಮ್ಮ ಮೆಚ್ಚಿನ ಫರ್ಫ್ಯೂಮ್ ಬಳಸಿಕೊಳ್ಳಿ. ದೀಪಾವಳಿ ಪಾರ್ಟಿಗಾಗಿ ಡೀಯೋ ಓರಿಯೆಂಟ್‌, ಸಿಟ್ರಸ್‌, ವ್ಯಾವೆಂಡರ್‌ ಇತ್ಯಾದಿ ಬಳಸಿರಿ. ಇಂಥ ಲೈಟ್‌ ಫರ್ಫ್ಯೂಮ್ ನ ಸುವಾಸನೆ ಬಹಳ ಹೊತ್ತು ಹಾಗೇ ಉಳಿಯುತ್ತದೆ. ಇದರ ಜೊತೆ ಜೊತೆಗೆ ಯೂಡಿ ಟಾಯ್ಲೆಟ್‌ಯೂಡೀ ಕೊಲೋನ್‌ ಸಹ ಬಳಸಬೇಕು.

ಯೂಡೀ ಕೊಲೋನ್‌ನಲ್ಲಿ ಎಸೆನ್ಶಿಯಲ್ ಆಯಿಲ್ 4% ಯೂಡೀ ಟಾಯ್ಲೆಟ್‌ನಲ್ಲಿ 8% ಇರುತ್ತದೆ. ಇವು ಲೈಟ್‌ ಸುವಾಸನೆ ಹೊಂದಿರುತ್ತವೆ, ಇದರ ಕಾರಣದಿಂದ 2 ಗಂಟೆಗಳ ಕಾಲ ಪ್ರಭಾವಶಾಲಿ ಆಗಿರುತ್ತವೆ. ಈ ಫರ್ಫ್ಯೂಮ್ ಸ್ಪ್ರೇ ಬಾಟಲ್ ಎರಡೂ ರೀತಿ ಬರುತ್ತದೆ. ಯೂಡೀ ಫರ್ಫ್ಯೂಮ್ ನಲ್ಲಿ ಎಸೆನ್ಶಿಯಲ್ ಆಯಿಲ್ ‌%ಗಿಂತ ಹೆಚ್ಚಿರುತ್ತದೆ. ಇದರ ಪರಿಮಳ 3-4 ತಾಸು ಉಳಿಯುತ್ತದೆ. ಎಸೆನ್ಶಿಯಲ್ ಆಯಿಲ್ ‌ಹೆಚ್ಚಿರುವುದರಿಂದ ಇದರ ಬೆಲೆಯೂ ಹೆಚ್ಚು. ಬಾಡಿ ಫರ್ಫ್ಯೂಮ್ ನ್ನು ದೇಹದ ವಾರ್ಮ್ ಪಾಯಿಂಟ್ಸ್ ಅಂದ್ರೆ ಕುತ್ತಿಗೆ, ಕೈನ ಮಣಿಕಟ್ಟು ಇತ್ಯಾದಿ ಕಡೆ ಹಚ್ಚಿರಿ.

– ಪ್ರತಿನಿಧಿ

और कहानियां पढ़ने के लिए क्लिक करें...